Posts

Featured Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

Image
ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ.  ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ.  ದೇವರ ಬ್ರಹ್ಮವಾಹಕರಾಗಿ ಇವ

ಅಜ್ಜಿ ಎಂಬ ಯುಗದ ಅಂತ್ಯ!

Image
 ಅಜ್ಜಿ ಎಂಬ ಯುಗದ ಅಂತ್ಯ! ಅದೊಂದು ಕಾಲವಿತ್ತು. ದೇಶದಲ್ಲಿ ಕಿತ್ತು ತಿನ್ನುವ ಬಡತನದ ಕಾಲ! ಒಂದು ಸಾಮಾನ್ಯ ಕುಟುಂಬ ಹಳ್ಳಿಗಳಲ್ಲಿ ಸೋಗೆ ಮನೆಯಲ್ಲಿ ಜೀವಿಸುವ ಕಾಲ! ಹೆಚ್ಚಾಗಿ ಕೃಷಿ ಅಥವ ಸ್ವಂತ ವ್ಯಾಪಾರವನ್ನು ಅವಲಂಬಿಸಿ ಬದುಕನ್ನು ಸಾಗಿಸುತ್ತಿದ್ದ ಕಾಲವದು! ಆ ಕಾಲದಲ್ಲಿ ಸರ್ಕಾರಿ ಕೆಲಸ,ಜೀಪು,ಅಂಬಾಸಿಡರ್ ಕಾರು ಇರುವ ವ್ಯಕ್ತಿ ಬಹಳ ದೊಡ್ಡ ವ್ಯಕ್ತಿ! ಆ ವ್ಯಕ್ತಿಗೆ ಊರಿನಲ್ಲಿ ಸಿಗುತ್ತಿದ್ದ ಗೌರವ,ಸ್ಥಾನವೇ ಬೇರೆ! ಇಂತಹ ಕಾಲದಲ್ಲಿ ತನ್ನ ಗಂಡನ ನಿಧನದ ನಂತರ ಕುಟುಂಬದ ಹೊಣೆಹೊತ್ತು,ಒಂಬತ್ತು ಮಕ್ಕಳನ್ನು ಕಷ್ಟಪಟ್ಟು ಸಾಕಿ ಸಲುಹಿ,ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದ ಧೀಮಂತ ಮಹಿಳೆ ಇವರು. ನಾನು ಹೋಗಿ ಬರುತ್ತೇನೆ ಎಂದು ಹೇಳಿದರೆ ಹುಷಾರು ಆಗಿ ಬಾ! ಎಂದು ಪ್ರೀತಿಯಿಂದ ಆಶೀರ್ವಾದ ನೀಡುತ್ತಿದ್ದ ದೇವರು ಇವರು! ಇವರೇ ನನ್ನ ಪ್ರೀತಿಯ ಅಜ್ಜಿ! ಅದು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಭಾರತ ದೇಶದಾದ್ಯಂತ ಆವರಿಸಿದ ಕಾಲ! ಇಂತಹ ಸಮಯದಲ್ಲಿ ಜೂನ್ 17,1941ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಳಂಬಳ ಮನೆಯಲ್ಲಿ ಅರ್ನಾಡಿ ಕುಟುಂಬದ ಗಣಪತಿ ಭಟ್ ಅರ್ನಾಡಿ ಹಾಗು ಲಕ್ಷ್ಮಿ ಅವರ 11 ಜನ ಮಕ್ಕಳಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಪರಮೇಶ್ವರಿ ಅವರು ಬೆಳ್ಳಾರೆಯಲ್ಲಿ ಏಳನೆಯ ತರಗತಿ ತನಕ ಶಿಕ್ಷಣ ಮುಗಿಸಿ ನಂತರ ಮನೆಯಲ್ಲಿ ಮನೆ ಕೆಲಸಕ್ಕೆ ಸಹಾಯ ಮಾಡುತ್ತಾ ಇದ್ದರು. ತದನಂತರ 18ನೇ ವಯಸ್ಸಿನಲ್ಲಿ ಮಂಜನಕಾನ ಶಂಕರನಾರಾಯಣಯ್ಯ ಅ

My Review of the Movie Kalki!

Image
 My Review of the Movie Kalki! . Today I watched the movie "Kalki 2898 AD," directed by Nag Ashwin, starring Prabhas and Amitabh Bachchan, among other renowned actors. To describe the movie, one shouldn’t expect it to be like the movie "Adipurush." The film initially presents the story of Ashwatthama from the Mahabharata, and then it transitions to the Kaliyuga era with a project called "Project K." The movie follows the mission to save Sumati (the mother who is to give birth to Kalki) and take her to Shambhala, which is said to be Kalki's birthplace. The major scenes include battles with Supreme’s (who can be likened to Kali) commander Manas, Ashwatthama and Bhairava. Regarding the acting, although Prabhas’ performance was commendable, Amitabh Bachchan's portrayal of Ashwatthama was particularly impressive! Even at his age, he fit the role perfectly, performing action sequences and stunts that truly deserve admiration. Prabhas also did a fantastic

ಕಲ್ಕಿ ಸಿನಿಮಾದ ಬಗ್ಗೆ ನನ್ನದೊಂದು ವಿಮರ್ಶೆ!

Image
 ಕಲ್ಕಿ ಸಿನಿಮಾದ ಬಗ್ಗೆ ನನ್ನದೊಂದು ವಿಮರ್ಶೆ! ಕಳೆದ ವಾರ ಬಿಡುಗಡೆಗೊಂಡ ಪ್ರಭಾಸ್,ಅಮಿತಾಭ್ ಬಚ್ಚನ್ ಸೇರಿ ಪ್ರಸಿಧ್ಧ ಚಿತ್ರ ತಾರೆಯರು ನಟಿಸಿದ,ನಾಗ ಅಶ್ವಿನ್ ನಿರ್ದೇಶನದ "ಕಲ್ಕಿ 2898 ಎಡಿ" ಸಿನಿಮಾ ನೋಡಿ ಬಂದೆ. ಸಿನಿಮಾದ ಬಗ್ಗೆ ಹೇಳುವುದುದಾದರೆ ಈ ಸಿನಿಮಾ ಯಾವುದೇ ಕಾರಣಕ್ಕೂ ಆದಿಪುರುಷ್ ಸಿನಿಮಾ ತರಹ ಇರಬಹುದು ಅಂತ ಅಂದುಕೊಳ್ಳುವುದೇ ಬೇಡ! ಮಹಾಭಾರತದಲ್ಲಿ ಅಶ್ವತ್ಥಾಮನ ಕಥೆಯನ್ನು ಒಳಗೊಂಡು ಕಲಿಯುಗದಲ್ಲಿ ಪ್ರಾಜೆಕ್ಟ್-ಕೆ ಎಂಬ ಮಿಷನ್ ಮಾಡುತ್ತಿರುವ ಸುಪ್ರೀಮ್(ಕಲಿಗೆ ಹೋಲಿಸಬಹುದು) ಕಥೆಯನ್ನು ಒಳಗೊಂಡಿದೆ. ಹಾಗು ಕಲ್ಕಿಯನ್ನು ಹೆರುವ ತಾಯಿಯನ್ನು(ಸುಮತಿ ಎಂದು ಹೆಸರು) ಪ್ರಾಜೆಕ್ಟ್ ಕೆ ಮಿಷನ್ ಇಂದ ರಕ್ಷಿಸಿ ಕಲ್ಕಿ ಹುಟ್ಟುವ ಸ್ಥಳ ಎಂದು ಹೇಳಲಾಗಿರುವ ಶಾಂಬಾಲಕ್ಕೆ ಕರೆದುಕೊಂಡು ಹೋಗುವುದು. ನಂತರ ಸುಮತಿಯನ್ನು ಅಪಹರಿಸಲು ಬರುವ ಸುಪ್ರೀಮ್ ಅವನ ಕಮಾಂಡರ್ ಮನಸ್ ಅಶ್ವತ್ಥಾಮ,ಭೈರವನ ಜೊತೆಗೆ ಯುದ್ಧ ಈ ಸಿನಿಮಾದ ಹಲವು ಪ್ರಮುಖ ದೃಶ್ಯಗಳು.  ಅಭಿನಯದ ಬಗ್ಗೆ ಹೇಳುವುದಾದರೆ ನನಗೆ ನಾಯಕ ಪ್ರಭಾಸ್ ಅವರಿಂದ ಹೆಚ್ಚು ಇಷ್ಟವಾದದ್ದು ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮನ ನಟನೆ! ಆ ಇಳಿ ವಯಸ್ಸಿನಲ್ಲೂ ಆ ಪಾತ್ರಕ್ಕೆ ತಮ್ಮ ದೇಹವನ್ನು ಹೊಂದಿಸಿ,ಯುದ್ಧದ ಸನ್ನಿವೇಶಗಳಲ್ಲಿ ಹೋರಾಡುವುದು,ಸ್ಟಂಟ್ ಮಾಡುವ ದೃಶ್ಯಗಳು ಇದೆಯಲ್ಲ ಅದಕ್ಕೆ ನಿಜವಾಜಿಯೂ ಅವರನ್ನು ಮೆಚ್ಚಲೇಬೇಕು. ಪ್ರಭಾಸ್ ಅವರ ನಟನೆಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒ

ಪುತ್ತೂರು ಜಾತ್ರೆ ಸಂಪನ್ನ!

Image
 ಪುತ್ತೂರು ಜಾತ್ರೆ ಸಂಪನ್ನ! ಮಹಾಲಿಂಗೇಶ್ವರ...! ಈ ಹೆಸರು ಪುತ್ತೂರಿಗೆ ಕೇವಲ ದೇವರ ಹೆಸರು ಮಾತ್ರವಲ್ಲ,ಅದು ಒಂದು ಶಕ್ತಿ!  ತಮ್ಮ ಕಷ್ಟ,ಸುಖಗಳನ್ನು ಪುತ್ತೂರಿನ ಜನರು ಪ್ರಥಮವಾಗಿ ಹಂಚುವುದು ತಮ್ಮ ಒಡೆಯನ ಬಳಿಯೇ!  ಎಪ್ರಿಲ್ ಬಂತೆಂದರೆ ಅದು ಪುತ್ತೂರಿಗೆ ಹಬ್ಬದ ತಿಂಗಳು ಅಂತ ನಾನು ಈ ಮೊದಲು ಒಮ್ಮೆ ಹೇಳಿದ್ದೆ. ಕಾರಣ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ವಾರ್ಷಿಕ ಜಾತ್ರೋತ್ಸವ! ಎಪ್ರಿಲ್ 1ಕ್ಕೆ ಗೊನೆ ಮುಹೂರ್ತದೊಂದಿಗೆ ಜಾತ್ರೋತ್ಸವದ ಕ್ಷಣಗಣನೆ ಆರಂಭಗೊಂಡು ಎಪ್ರಿಲ್ 10ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ಸಿಗುತ್ತದೆ. ನಂತರ 6 ದಿನಗಳ ಕಾಲ ತನ್ನ ಭಕ್ತರನ್ನು ಕಾಣಲು ಪ್ರತಿದಿನ ಪುತ್ತೂರು ನಗರದ ವಿವಿಧ ದಿಕ್ಕಿನ ಕಡೆಗೆ ಹೋಗುವ ಮಹಾಲಿಂಗೇಶ್ವರ ದೇವರು ಜಾತ್ರೋತ್ಸವದ 7 ದಿನ ಅಂದರೆ ಎ.16ರಂದು ಬಲ್ನಾಡಿನಿಂದ ಬರುವ ಶ್ರೀ ದಂಡನಾಯಕ-ಉಳ್ಳಾಲ್ತಿ ಅಮ್ಮನವರನ್ನು ಭೇಟಿ ಮಾಡಿ,ಪಲ್ಲಕ್ಕಿಯಲ್ಲಿ ಸಂಗೀತವನ್ನು ಆಲಿಸುತ್ತಾ,ನಂತರ ವೇದಘೋಷ,ಭಜನೆಗಳಿಂದ ಪ್ರಸನ್ನಗೊಂಡು,ಶಂಖ,ಬ್ಯಾಂಡ್ ಸುತ್ತಿನಲ್ಲಿ ಉತ್ಸವವನ್ನು ಸ್ವೀಕರಿಸಿ,ಹೂತೇರಿನಲ್ಲಿ ಆರೂಢರಾಗಿ ರಥೋತ್ಸವವನ್ನು ಸ್ವೀಕರಿಸಿ,ತೆಪ್ಪದಲ್ಲಿ ಕೆರೆ ಆಯನ ನಡೆಸುವ ಮಹಾಲಿಂಗೇಶ್ವರ ದೇವರು,ಮರುದಿನ ಅಂದರೆ ಎ.17ಕ್ಕೆ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ನಡೆದು ರಾತ್ರಿ ದೇವರು ಬ್ರಹರಥದಲ್ಲಿ ಆರೂಢರಾಗಿ, ಬೆಡಿ ಸೇವೆಯನ್ನು ಸ್ವೀಕರಿಸಿ ದೇವರ ವೈಭವದ ಬ್ರಹ್ಮರಥೋತ್ಸವದಿಂದ ಪ್ರಸನ್ನಗೊ

ಐಪಿಎಲ್ ಪಂದ್ಯ ನೋಡುತ್ತಾ ಬಾಲ್ಯದ ಸುಂದರ ದಿನಗಳು ನೆನಪಾದಾಗ!

Image
ಐಪಿಎಲ್ ಪಂದ್ಯ ನೋಡುತ್ತಾ ಬಾಲ್ಯದ ಸುಂದರ ದಿನಗಳು ನೆನಪಾದಾಗ! ಇಂದು ಐಪಿಎಲ್ ಪಂದ್ಯ ನೋಡುವಾಗ ಬಾಲ್ಯದ ದಿನಗಳು ನೆನಪು ಆಯಿತು.  ಕಳೆದ ವಾರ ಐಪಿಎಲ್ ಆರಂಭ ಆಗುವಾಗಲೆ ಹಳೆಯ ದಿನಗಳು ನೆನಪಾಗ ರಜೆಯ ಆ ಸುಂದರ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತೆ! ಈ ಐಪಿಎಲ್ ಮತ್ತು ಶಾಲೆಯ ದಿನಗಳ ರಜಾ ದಿನಗಳು ದೋಸ್ತಿಗಳ ಹಾಗೆ! ಪರೀಕ್ಷೆ ಮುಗಿಯುವ ಹೊತ್ತಿಗೆ ಐಪಿಎಲ್ ಆರಂಭಗೊಳ್ಳುವ ದಿನಗಳು ಅಂದು ಇತ್ತು. ಈಗ ಪಂದ್ಯಗಳು ಜಾಸ್ತಿಯಾಗಿ ಮಾರ್ಚ್ 20-25ರ ಒಳಗೆ ಆರಂಭಿಸಲು ಶುರು ಮಾಡಿದರೆ ಅಂದು ಎಪ್ರಿಲ್ ಮೊದಲ ವಾರದಲ್ಲಿ ಆರಂಭಗೊಳ್ಳುವ ದಿನಗಳು ಇದ್ದವು. ಎಪ್ರಿಲ್ ಎಂದರೆ ಬಿಡಿ! ಮಕ್ಕಳಿಗೆ ಸ್ವರ್ಗ ಸುಖ ಸಿಗುವ ತಿಂಗಳು ಅದು! ಪರೀಕ್ಷೆ ಮುಗಿದು ತಮ್ಮ ಊರಿಗೆ,ಅಜ್ಜಿ ಮನೆಗೆ ಹೋಗುವುದೋ ಅಥವ ಪ್ರವಾಸಕ್ಕೆ ಹೋಗುವುದೊ ಅಥವ ತಮ್ಮ ಊರಿನ ಜಾತ್ರೆಯಲ್ಲಿ ಭಾಗವಹಿಸುವುದೋ ಅಥವ ತಮ್ಮ ಕುಟುಂಬದ ಶುಭ ಸಮಾರಂಭಗಳಲ್ಲಿ ಭಾಗಿಯಾಗಿ ರಜೆಯ ಮಜಾ ಪಡೆಯುವ ಕಾಲವದು. ನಮಗೆ ಪುತ್ತೂರಿನಲ್ಲಿ ಆದರೆ ಎಪ್ರಿಲ್ ಬರಲು ಪುರ್ಸೋತ್ತಿಲ್ಲ,ಹಬ್ಬದ ವಾತಾವರಣ ಎಲ್ಲೆಡೆ ಇರುತ್ತದೆ!  ಎಪ್ರಿಲ್ 1ಕ್ಕೆ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ನಡೆದು ಜಾತ್ರೆಯ ಸಂಭ್ರಮ ಆರಂಭಗೊಂಡರೆ ಎಪ್ರಿಲ್ 10ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿ ದೇವರ ಉತ್ಸವಗಳು 9 ದಿನಗಳ ಕಾಲ ನಡೆಯುತ್ತದೆ. ಆ ದಿನಗಳು ಪುತ್ತೂರಿಗೆ ಹಬ್ಬದ ದಿನ

ಕುದುರೆಮುಖ ಶಿಖರ ಹತ್ತಿದಾಗ...

Image
  ಕುದುರೆಮುಖ ಶಿಖರ ಹತ್ತಿದಾಗ... ಸದಾ ಪೇಟೆಯ ಜಂಜಾಟದ ಮಧ್ಯೆ ಬದುಕುವಾಗ ಅದರಿಂದ ಮುಕ್ತಿ ಪಡೆಯಲು ಸ್ವಲ್ಪ ಸಮಯ ಪ್ರಕೃತಿಯ ಮಧ್ಯೆ ಕಳೆಯಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದೇ ಇಚ್ಛೆಯಿಂದ ಕಳೆದ ವರ್ಷ ಗೆಳೆಯರೊಂದಿಗೆ ಬಿಸಿಲೆ,ಚಾರ್ಮಾಡಿ,ದೇವರಮನೆ ಕಡೆಗೆ ಪ್ರವಾಸ ಹೋದ ನನಗೆ ನಂತರ ಅದೇನೋ ಚಾರಣ ಮಾಡಬೇಕೆಂಬ ಆಸೆ ಹುಟ್ಟಿತು. ನನ್ನ ಊರು ಪಶ್ಚಿಮ ಘಟ್ಟದ ತಪ್ಪನಲ್ಲಿದ್ದರೂ ಗೆಳೆಯರೊಂದಿಗೆ ಪ್ರವಾಸ,ಚಾರಣಕ್ಕೆ ಹೋಗುವಾಗ ಸಿಗುವ ಅನುಭವವೇ ಬೇರೆ. ಬಹಳ ವರ್ಷಗಳಿಂದ ಕುಮಾರ ಪರ್ವತಕ್ಕೆ ಚಾರಣ ಹೋಗಬೇಕೆಂದು ಇದ್ದ ನನ್ನ ಆಸೆ ನವೆಬರ್ ತಿಂಗಳಲ್ಲಿ ಈಡೇರಿದ ನಂತರ ಮುಂದೆ ಮತ್ತೊಂದು ಶಿಖರಕ್ಕೆ ಚಾರಣ ಮಾಡಬೇಕೆಂಬ ಆಸೆ ಚಿಗುರಿತು. ಈ ಚಾರಣದ ಹುಚ್ಚು ಎಂದರೆ ಹಾಗೆ. ಒಮ್ಮೆ ಒಂದು ಕಡೆಗೆ ಚಾರಣ ಮಾಡಿದರೆ ಮತ್ತೆ ಇನ್ನೊಂದು ಶಿಖರ ಹತ್ತಬೇಕೆಂಬ ಹಂಬಲ ಹುಟ್ಟುತ್ತದೆ. ಕುಮಾರ ಪರ್ವತ ಚಾರಣ ಮುಗಿಸಿದ ಮೇಲೆ ಗೆಳೆಯರೊಂದಿಗೆ ಮಾತನಾಡುವಾಗ ನೇತ್ರಾವತಿ ಶಿಖರಕ್ಕೆ ಚಾರಣ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ನಂತರ ಕಳೆದ ತಿಂಗಳು ಚಾರಣದ ಯೋಜನೆ ರೂಪಿಸುತ್ತಿರುವಾಗ ನನ್ನ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ನೇತ್ರಾವತಿ ಶಿಖರದ ಬದಲು ಕುದುರೆಮುಖ ಶಿಖರ ಹತ್ತಿದರೆ ಹೇಗೆ ಎಂದು ನಾನು ನನ್ನಷ್ಟಕ್ಕೆ ಪ್ರಶ್ನಿಸಿಕೊಂಡೆ. ನಂತರ ಗೆಳೆಯರ ಅಭಿಪ್ರಾಯ ಪಡೆದೆ. ಎಲ್ಲರೂ ಕುದುರೆಮುಖ ಶಿಖರ ಹತ್ತುವ ಎಂದು ಹೇಳಿದರು. ಕುದುರೆಮುಖ ನಮ್ಮ ಕರ್ನಾಟಕದ ಎರಡನೆಯ ಎತ

Frosty Gala-Association Day 2k23!

Image
 Frosty Gala-Association Day 2k23!  Our undivided Dakshina Kannada district is home to several educational institutions that are at the top of our Karnataka state! Students come from faraway places to study in these prestigious and premier educational institutions. Sahyadri College of Engineering and Management is one of such great, prestigious and top-ranking institutes.Sahyadri College on the banks of the Nethravathi River in Adyar, outside Mangalore, is a temple of education providing education to thousands of students. One department of this college is the Department of Information Science & Engineering & CSE (Data Science). Today is the day of our mInDS association of this department! A confluence of several events throughout the day! Like every year this year the process of appointment of office bearers of the association was held a week earlier. I was a new student in our department last year and didn't know much about the department then. Everything was new, but not

ವಿಭಾಗೀಯ ಸಂಘದ ಸಂಭ್ರಮದ ದಿನ! ಕಿರಿಯರನ್ನು ವಿಭಾಗಕ್ಕೆ ಬರಮಾಡಿಕೊಂಡ ಕ್ಷಣ!

Image
  ವಿಭಾಗೀಯ ಸಂಘದ ಸಂಭ್ರಮದ ದಿನ! ಕಿರಿಯರನ್ನು ವಿಭಾಗಕ್ಕೆ ಬರಮಾಡಿಕೊಂಡ ಕ್ಷಣ! ವಿಭಾಗೀಯ ಸಂಘದ ಸಂಭ್ರಮದ ದಿನ! ಕಿರಿಯರನ್ನು ವಿಭಾಗಕ್ಕೆ ಬರಮಾಡಿಕೊಂಡ ಕ್ಷಣ! ನಮ್ಮ ಕರ್ನಾಟಕ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿರುವ ಹಲವಾರು ವಿದ್ಯಾಸಂಸ್ಥೆಗಳ ಊರು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ! ಈ ಪ್ರತಿಷ್ಠಿತ,ಅಗ್ರಗಣ್ಯ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ದೂರದೂರದ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಶ್ರೇಷ್ಠ,ಪ್ರತಿಷ್ಠಿತ,ಅಗ್ರಸ್ಥಾನದಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ಒಂದು ಸಂಸ್ಥೆ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು. ಮಂಗಳೂರಿನ ಹೊರಭಾಗದ ಅಡ್ಯಾರಿನಲ್ಲಿ ನೇತ್ರಾವತಿ ನದಿ ತಟದಲ್ಲಿರುವ ಸಹ್ಯಾದ್ರಿ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಿದ್ಯಾದೇಗುಲ. ಈ ವಿದ್ಯಾದೇಗುಲದ ಒಂದು ವಿಭಾಗ ಮಾಹಿತಿ ತಂತ್ರಜ್ಞಾನ ವಿಜ್ಞಾನ ಮತ್ತು ಡೇಟಾ ವಿಜ್ಞಾನ ವಿಭಾಗ. ಇಂದು ನಮ್ಮ ಈ ವಿಭಾಗದ ಮೈಂಡ್ಸ್ ಸಂಘ ಸುದಿನ! ಸಂಪೂರ್ಣ ದಿನ ಹಲವಾರು ಕಾರ್ಯಕ್ರಮಗಳ ಸಂಗಮ!    ಪ್ರತಿ ವರ್ಷದಂತೆ ಈ ವರ್ಷವು ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಒಂದು ವಾರದ ಮೊದಲು ನಡೆದಿತ್ತು. ಕಳೆದ ವರ್ಷ ನಮ್ಮ ವಿಭಾಗಕ್ಕೆ ಹೊಸ ವಿದ್ಯಾರ್ಥಿಯಾಗಿದ್ದ ನನಗೆ ಆಗ ವಿಭಾಗದ ಬಗ್ಗೆ ಅಷ್ಟು ಮಾಹಿತಿ ಇರಲಿಲ್ಲ. ಎಲ್ಲವು ಹೊಸತೇ ಆಗಿತ್ತು.ಆದರೆ ಈ ವರ್ಷ ಹಾಗಲ್ಲ! ಈ ವರ್ಷ ವಿಭಾಗದ ವಿದ್ಯಾರ್ಥಿ ಮಾತ್ರವಲ್ಲದೆ

ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! | ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ!

Image
ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ! ಶೇಷ ಪರ್ವತದ ಒಂದು ಶಿಖರ! Pc: Sudheesh Patwardhan   ಕುಮಾರ ಪರ್ವತ! ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು! ಅಷ್ಟೇ ಅಲ್ಲ! ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಜೊತೆಗೆ ಹಿಂಬದಿಯಲ್ಲಿ ಕಾಣಸಿಗುವ ಬೆಟ್ಟ ಯಾವುದು ಎಂದು ಕೇಳಿದ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು! ಹಾಗಾಗಿ ಸುಬ್ರಹ್ಮಣ್ಯಕ್ಕೆ ಬಂದು ಹೋದವರಿಗೆ ಕುಮಾರ ಪರ್ವತ ಚಿರಪರಿಚಿತ ಹೆಸರು. ಜೊತೆಗೆ ಚಾರಣಪ್ರಿಯರಿಗೆ ಅಂತು ಇದು ಸ್ವರ್ಗ!  ಕುಮಾರಧಾರದ ಕುಮಾರಧಾರ ನದಿಯ ಸೇತುವೆಯಿಂದ ಕಾಣುವ ಶೇಷ ಪರ್ವತದ ಒಂದು ಸುಂದರ ನೋಟ! Pc:Shreekara B ನಾನು ಮೊದಲೇ ಹೇಳಿದ ಹಾಗೆ ನನ್ನ ಊರು ಸುಳ್ಯ ತಾಲೂಕಿನ ಪಶ್ಚಿಮ ಘಟ್ಟದ ತಪ್ಪನಲ್ಲಿರುವ ಹರಿಹರಪಲ್ಲತ್ತಡ್ಕ ಗ್ರಾಮ! ಈ ಗ್ರಾಮದ ಎದುರೇ ಕಾಣುವುದು ಕುಮಾರ ಪರ್ವತದ ಒಂದು ಬದಿಯಲ್ಲಿರುವ ಶೇಷ ಪರ್ವತ! ಬಾಲ್ಯದಿಂದ ಈ ಪರ್ವತ ಸಾಲನ್ನು ನೋಡುತ್ತಾ ಬೆಳೆದ ನನಗೆ ಒಂದು ದಿನ ಕುತೂಹಲದಿಂದ ಅಪ್ಪನ ಬಳಿ ಆ ಪರ್ವತವನ್ನು ಹತ್ತಲು ಆಗುತ್ತದೆಯೇ ಎಂದು ಕೇಳಿದ್ದೆ. ಆಗ ಅಪ್ಪ "ನೀನು ದೊಡ್ಡವನಾದ ಮೇಲೆ ಕುಮಾರ ಪರ್ವತ ಹತ್ತು" ಎಂದು ಹೇಳಿದ್ದರು. ಪ್ರತಿ ಬಾರಿಯೂ ಸುಬ್ರಹ್ಮಣ್ಯಕ್ಕೆ ಅಥವ ಹರಿಹರಪಲ್ಲತ್ತಡ್ಕಕ್ಕೆ ಹೋದಾಗಲೆಲ್ಲ ಈ ಪರ್ವತ ಶ್ರೇಣಿಯನ್ನು ಕನಿಷ್ಠಪಕ್ಷ ಒಂದು ಬಾರಿಯಾದರೂ ಸರಿಯಾ