Posts

Showing posts with the label Hanumagiri Mela

ಭಾರತ ಜನನಿ! ನಿಜಕ್ಕೂ ಈ ವರ್ಷದ ಸೂಪರ್ ಹಿಟ್ ಪ್ರಸಂಗ!

Image
ಭಾರತ ಜನನಿ! ನಿಜಕ್ಕೂ ಈ ವರ್ಷದ ಸೂಪರ್ ಹಿಟ್ ಪ್ರಸಂಗ! "ಯಕ್ಷಗಾನ" ಇದು ದೇವರ ಸೇವೆ ಮಾಡುವ ಒಂದು ವಿಧಿ! ಕೇವಲ ಒಂದು ಪದವಲ್ಲ ಇದು. ಇದು ಒಂದು ಭಾವನೆ! ಎಷ್ಟೋ ಜನರ ಬದುಕನ್ನು ಕಟ್ಟಿಕೊಟ್ಟ ಕ್ಷೇತ್ರವಿದು! ಇಂತಹ ಪವಿತ್ರ ಕ್ಷೇತ್ರದಲ್ಲಿ ದುಡಿಯುವುದು,ಸೇವೆ ಮಾಡುವುದು ಎಂದರೆ ಸೌಭಾಗ್ಯ! ಯಕ್ಷಗಾನವನ್ನು ನೋಡಲು ಪುಣ್ಯ ಮಾಡಿರಬೇಕು ಎಂಬುದು ನನ್ನ ಅಭಿಪ್ರಾಯ! ಇಂತಹ ಶ್ರೇಷ್ಠ ಕ್ಷೇತ್ರದ ತೆಂಕುತಿಟ್ಟಿನಲ್ಲಿ ಬಹಳ ಹೆಸರುವಾಸಿಯಾಗಿರುವ ಮೇಳಗಳಲ್ಲಿ ಹನುಮಗಿರಿ ಮೇಳವು ಒಂದು!  ಯಕ್ಷಗಾನ ರಂಗದಲ್ಲಿ ಬಹಳ ಹೆಸರು ಮಾಡಿದ,ದಿಗ್ಗಜ,ಅನುಭವಸ್ಥ,ಹಿರಿಯ,ಯುವ ಕಲಾವಿದರನ್ನು ಒಳಗೊಂಡ ಗಜ ಮೇಳ ಹನುಮಗಿರಿ ಮೇಳ! ನಾನು ಅತಿ ಹೆಚ್ಚು ಇಷ್ಟಪಡುವ ಮೇಳವು ಹೌದು! ಪ್ರತಿವರ್ಷವು ಮೇಳಗಳು ತಿರುಗಾಟಕ್ಕೆ ಅಣಿಯಾದಾಗ ನಾನು ಮೊದಲು ಹುಡುಕುವುದು ಹನುಮಗಿರಿ ಮೇಳದ ತಿರುಗಾಟ ಯಾವಾಗ ಆರಂಭ? ಪುತ್ತೂರು ಯಕ್ಷೋತ್ಸವ ಯಾವಾಗ? ನಾನು ಯಾವಾಗ ಆಟಕ್ಕೆ ಹೋಗಬಹುದು? ಎಂದು. ಈ ಗಜಮೇಳದ ಈ ವರ್ಷದ ನೂತನ ಪ್ರಸಂಗ "ಭಾರತ ಜನನಿ".  ಭಾರತ ಜನನಿ! ಪ್ರಸಂಗದ ಹೆಸರು ಕೇಳುವಾಗಲೇ ಬಹಳ ಕುತೂಹಲ ನನಗೆ ಇತ್ತು. ಯಾವ ಕಥೆಯಾಗಿರಬಹುದು ಇದು? ಯಾವುದು ಈ ಕಥೆಯ ಪ್ರಮುಖ ಪಾತ್ರ? ಹೀಗೆಲ್ಲ ಹಲವು ಪ್ರಶ್ನೆಗಳು ನನ್ನಲ್ಲಿ ಮೂಡಿತ್ತು. ಮೇಳ ತಿರುಗಾಟಕ್ಕೆ ಹೊರಟು ಒಂದು ತಿಂಗಳಿನಲ್ಲಿ ಪುತ್ತೂರಿನಲ್ಲಿ ಯಕ್ಷೋತ್ಸವ ಆಯೋಜನೆಗೊಂಡಿತ್ತು. ಆದರೆ ಹಲವು ಕಾರಣಗಳಿಂದ ನಾನು ಯಕ್ಷಗಾ...