"ಕಾಂತಾರ" ಇದು ನಿಜಕ್ಕೂ ಒಂದು ದಂತ ಕಥೆ!
"ಕಾಂತಾರ" ಇದು ನಿಜಕ್ಕೂ ಒಂದು ದಂತ ಕಥೆ! ಕರ್ನಾಟಕದ ಉದ್ದಗಲಕ್ಕೂ ಎಲ್ಲಿ ನೋಡಿದರು ಸದ್ಯ ಕೇಳಿಬರುತ್ತಿರುವ ಪದ ಕಾಂತಾರ! ಸೆಪ್ಟೆಂಬರ್ 30ಕ್ಕೆ ಬಿಡುಗಡೆಗೊಂಡ ಈ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿದೆ. ತುಳುನಾಡು ಪರಶುರಾಮನ ಸೃಷ್ಟಿ. ಈ ಪವಿತ್ರ ಭೂಮಿಯ ಸಂಸ್ಕೃತಿ,ಪ್ರಸಿದ್ಧ ಕ್ರೀಡೆ ಕಂಬಳ,ದೈವಾರಾಧನೆ ವಿಷಯಗಳನ್ನು ಈ ಸಿನಿಮಾದಲ್ಲಿ ಕಾಣಬಹುದು. ಸಿನಿಮಾದ ಮುಖ್ಯ ಪಾತ್ರ/ನಾಯಕನಾದ ಶಿವನ ರೌದ್ರಾವತಾರ, ಅವನ ಗುಂಪಿನೊಂದಿಗೆ ಅವನು ಮಾಡುವ ಕೆಲಸಗಳು,ಕಾಡನ್ನು ರಕ್ಷಿತಾರಣ್ಯ ಎಂದು ಘೋಷಿಸಲು ಪ್ರಯತ್ನ ಪಡುವ ಅರಣ್ಯ ಅಧಿಕಾರಿ ಮುರಳಿ,ಮೋಸದಿಂದ ಇಡೀ ಊರಿನ ಜಾಗವನ್ನು ಕಬಳಿಸಲು ನೋಡುವ ಊರಿನ ಮುಖ್ಯಸ್ಥ ಹೀಗೆ ಹಲವಾರು ಸನ್ನಿವೇಶಗಳು ಈ ಸಿನಿಮಾದಲ್ಲಿ ಕಾಣಬಹುದು. ಪ್ರತಿ ಬಾರಿ ರಿಷಭ್ ಶೆಟ್ಟಿಯವರು ನಿರ್ದೇಶನ ಮಾಡಿ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರೆ, ಈ ಬಾರಿ ತಾನು ಒಬ್ಬ ಒಳ್ಳೆಯ ನಿರ್ದೇಶಕ ಮಾತ್ರವಲ್ಲದೆ ಒಳ್ಳೆಯ ನಟನು ಕೂಡ ಎಂದು ತೋರಿಸಿದ್ದಾರೆ. ಅವರ ನಟನೆ ನಾನು ತುಂಬಾ ನೆಚ್ಚಿಕೊಂಡೆ. ಅದರಲ್ಲೂ ಸಿನಿಮಾದ ಕೊನೆಯ ಭಾಗವನ್ನು ನೋಡಿ ಮೈ ಜುಮ್! ಎನಿಸಿತು. ಚಿತ್ರದ ನಾಯಕಿ ಸಪ್ತಮಿ ಗೌಡ ಅವರ ನಟನೆ ಕೂಡ ತುಂಬಾ ಚೆನ್ನಾಗಿತ್ತು. ರಿಷಭ್ ಶೆಟ್ಟಿಯವರ ನಟನೆ ಬಿಟ್ಟರೆ ನನಗೆ ಅತಿ ಹೆಚ್ಚು ಇಷ್ಟವಾದದ್ದು ದೀಪಕ್ ರೈ ಪಾಣಾಜೆ ಮತ್ತು ಪ್ರಕಾಶ್ ತುಮಿನಾಡು ಅವರ ನಟನೆ. ಆ ಸನ್ನಿವೇಶಕ್ಕೆ ತಕ್ಕದಾದ ಅವರ ಹಾಸ್ಯ ಸಂಭಾಷ...