ವಿಭಾಗೀಯ ಸಂಘದ ಸಂಭ್ರಮದ ದಿನ! ಕಿರಿಯರನ್ನು ವಿಭಾಗಕ್ಕೆ ಬರಮಾಡಿಕೊಂಡ ಕ್ಷಣ!

 ವಿಭಾಗೀಯ ಸಂಘದ ಸಂಭ್ರಮದ ದಿನ! ಕಿರಿಯರನ್ನು ವಿಭಾಗಕ್ಕೆ ಬರಮಾಡಿಕೊಂಡ ಕ್ಷಣ!


ವಿಭಾಗೀಯ ಸಂಘದ ಸಂಭ್ರಮದ ದಿನ! ಕಿರಿಯರನ್ನು ವಿಭಾಗಕ್ಕೆ ಬರಮಾಡಿಕೊಂಡ ಕ್ಷಣ!
ನಮ್ಮ ಕರ್ನಾಟಕ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿರುವ ಹಲವಾರು ವಿದ್ಯಾಸಂಸ್ಥೆಗಳ ಊರು ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ! ಈ ಪ್ರತಿಷ್ಠಿತ,ಅಗ್ರಗಣ್ಯ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಲು ದೂರದೂರದ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಶ್ರೇಷ್ಠ,ಪ್ರತಿಷ್ಠಿತ,ಅಗ್ರಸ್ಥಾನದಲ್ಲಿ ಬರುವ ವಿದ್ಯಾಸಂಸ್ಥೆಗಳಲ್ಲಿ ಒಂದು ಸಂಸ್ಥೆ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು. ಮಂಗಳೂರಿನ ಹೊರಭಾಗದ ಅಡ್ಯಾರಿನಲ್ಲಿ ನೇತ್ರಾವತಿ ನದಿ ತಟದಲ್ಲಿರುವ ಸಹ್ಯಾದ್ರಿ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ವಿದ್ಯಾದೇಗುಲ. ಈ ವಿದ್ಯಾದೇಗುಲದ ಒಂದು ವಿಭಾಗ ಮಾಹಿತಿ ತಂತ್ರಜ್ಞಾನ ವಿಜ್ಞಾನ ಮತ್ತು ಡೇಟಾ ವಿಜ್ಞಾನ ವಿಭಾಗ. ಇಂದು ನಮ್ಮ ಈ ವಿಭಾಗದ ಮೈಂಡ್ಸ್ ಸಂಘ ಸುದಿನ! ಸಂಪೂರ್ಣ ದಿನ ಹಲವಾರು ಕಾರ್ಯಕ್ರಮಗಳ ಸಂಗಮ! 

 
ಪ್ರತಿ ವರ್ಷದಂತೆ ಈ ವರ್ಷವು ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಒಂದು ವಾರದ ಮೊದಲು ನಡೆದಿತ್ತು. ಕಳೆದ ವರ್ಷ ನಮ್ಮ ವಿಭಾಗಕ್ಕೆ ಹೊಸ ವಿದ್ಯಾರ್ಥಿಯಾಗಿದ್ದ ನನಗೆ ಆಗ ವಿಭಾಗದ ಬಗ್ಗೆ ಅಷ್ಟು ಮಾಹಿತಿ ಇರಲಿಲ್ಲ. ಎಲ್ಲವು ಹೊಸತೇ ಆಗಿತ್ತು.ಆದರೆ ಈ ವರ್ಷ ಹಾಗಲ್ಲ! ಈ ವರ್ಷ ವಿಭಾಗದ ವಿದ್ಯಾರ್ಥಿ ಮಾತ್ರವಲ್ಲದೆ ವಿಭಾಗೀಯ ಸಂಘದ ಪದಾಧಿಕಾರಿಯಾಗಿ ನೇಮಕಗೊಂಡೆ!ಹಾಗಾಗಿ ಜವಾಬ್ದಾರಿ ನನ್ನ ಮೇಲೆ ಸ್ವಲ್ಪ ಹೆಚ್ಚಿತ್ತು.ಇಂದಿನ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯು ಕೆಲವು ದಿನಗಳ ಮೊದಲು ವಿಭಾಗದ ಮುಖ್ಯಸ್ಥರು,ಸಂಘದ ಮಾರ್ಗದರ್ಶಕರು,ಪದಾಧಿಕಾರಿಗಳು ಹಾಗು ವಿಭಾಗದ ಉಪನ್ಯಾಸಕರ ಸಮ್ಮುಖದಲ್ಲಿ ನಡೆದು ಕಾರ್ಯಕ್ರಮದ ತಯಾರಿಗಳ ಭರದಿಂದ ಸಾಗ ತೊಡಗಿತು. ಅಂತೂ ಇಂದಿನ ದಿನ ಬಂದೇ ಬಿಟ್ಟಿತು!  
ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಂದವರು ನಮ್ಮ ವಿಭಾಗದ ಹಳೆಯ ವಿದ್ಯಾರ್ಥಿಗಳು,ಯುನೈಟೆಡ್ ರಬ್ಬರ್ ಇಂಡಸ್ಟ್ರೀಸ್ ಸಂಸ್ಥೆಯ ಉಪಾಧ್ಯಕ್ಷರಾದ ಅಭಿಶ್ರೀ ರೈ ಅವರು. ಜೊತೆಗೆ ಕಾಲೇಜಿನ ಆಧಾರ ಸ್ತಂಭ,ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಸ್ ಇಂಜಗನೇರಿ ಸರ್,ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್,ಸಂಘದ ಸಂಯೋಜಕರು,ವಿಭಾಗದ ಉಪನ್ಯಾಸಕರು ಹಾಗು ನನ್ನ ಮಾರ್ಗದರ್ಶಕರಾದ ಡಾ. ರಿತೇಶ್ ಪಕ್ಕಳ ಸರ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆದಿತು.ಸಂಘದ ನೂತನ ಪದಾಧಿಕಾರಿಗಳಿಗೆ ವಿಭಾಗದ ಮುಖ್ಯಸ್ಥರು,ಸಂಘದ ಅಧ್ಯಕ್ಷರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್ ಬೋಧಿಸಿದರು. ನಂತರ ಪ್ರಾಂಶುಪಾಲರು ಎಲ್ಲರನ್ನು ಶುಭ ಹಾರೈಸಿದರು. ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅಭಿಶ್ರೀ ರೈ ಅವರು ಮಾತನಾಡುತ್ತ ತಮ್ಮ ಜ್ಞಾನವನ್ನು ಹಂಚಿಕೊಂಡರು. ಜೊತೆಗೆ ಯಶಸ್ಸನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕಿವಿಮಾತುಗಳನ್ನು ಹೇಳಿದರು.  

 
ಸಭಾ ಕಾರ್ಯಕ್ರಮದ ನಂತರ ಸ್ವಲ್ಪ ಹೊತ್ತು ಮನೋರಂಜನೆ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಭೋಜನದ ನಂತರ ಮಂಗಳೂರಿನ ಹೆಸರಾಂತ ಮ್ಯೂಸಿಕ್ ಬ್ಯಾಂಡ್ ಫಿಷನ್(ಆರ್ಕೆಸ್ಟ್ರಾ) ತಂಡವಾದ ಮಾರ್ಷ್ಯನ್ಸ್ ಮ್ಯೂಸಿಕ್ ತಂಡದವರಿಂದ ಸಂಗೀತ ಮನೋರಂಜನ ಕಾರ್ಯಕ್ರಮ ನಡೆಯಿತು. ನಂತರ ವಿಭಾಗದ ಪ್ರತಿ ತರಗತಿಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ಎಂದರೆ ಅದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮ ಆಗಿರದೆ ಅದು ತರಗತಿಗಳ ಮಧ್ಯೆ ಸ್ಪರ್ಧೆಯಾಗಿತ್ತು. ನನ್ನ ತರಗತಿಯಿಂದ ನೃತ್ಯದ ಜೊತೆಗೆ ಗೆಳೆಯ ಸಮರ್ಥ್ ಶೆಣೈ ಅವನ ಚಿತ್ರ ಕಲೆಯು ಜೊತೆಗೆ ಇತ್ತು. ಕೇವಲ 10 ನಿಮಿಷದಲ್ಲಿ ತನ್ನ ಕೈ ಚಳಕದಿಂದ ತನ್ನ ಕಲ್ಪನೆಯ ಕಾಲೇಜು ಜೀವನವನ್ನು ಸುಂದರವಾಗಿ ಬಿಡಿಸಿದ! ಕೊನೆಗೆ ಉಪನ್ಯಾಸರ ನೃತ್ಯ ಕಾರ್ಯಕ್ರಮ ನಡೆದು ಈ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೆದ್ದ ತರಗತಿಯ ಹೆಸರು ಘೋಷಿಸುವ ಸಮಯ ಬಂದೇ ಬಿಟ್ಟಿತು! ವಿಜೇತ ತರಗತಿಯ ಹೆಸರನ್ನು ನಮ್ಮ ಮೈಂಡ್ಸ್ ಸಂಘದ ಕೋಶಾಧಿಕಾರಿ ಅಂಕುಶ್ ಅಣ್ಣ ಘೋಷಿಸಿದರು. ವಿಜೇತ ತರಗತಿ ಬೇರೆ ಯಾವುದು ಅಲ್ಲ! ನನ್ನ ತರಗತಿಯೇ ಆಗಿತ್ತು! ನಮಗೆಲ್ಲರಿಗೆ ಆಶ್ಚರ್ಯದ ಜೊತೆಗೆ ಸಂತೋಷವೇ ಸಂತೋಷ! ಬಹುಮಾನವನ್ನು ಡಾ. ರಿತೇಶ್ ಪಕ್ಕಳ ಸರ್ ವಿತರಿಸಿದರು. ನಂತರ ಬಹುಮಾನ,ನಮ್ಮ ತರಗತಿ ಶಿಕ್ಷಕರಾದ ಶ್ರೀಮತಿ ಹರಿಣಾಕ್ಷಿ ಮೇಡಂ ಅವರ ಜೊತೆಗೆ ತರಗತಿ ವಿದ್ಯಾರ್ಥಿಗಳು ಫೋಟೋ ತೆಗದು ಸಂಭ್ರಮಪಟ್ಟೆವು. 

 
ಕೊನೆಗೆ ಇದ್ದದ್ದೇ ವಿದ್ಯಾರ್ಥಿಗಳು ಕಾಯುತ್ತಿದ್ದ ಈಗಿನ ಟ್ರೆಂಡಿಂಗ್ ಆಗಿರುವ "ಬೈಲಾ" ಕಾರ್ಯಕ್ರಮ! ಹಲವು ಹಾಡುಗಳಿಗೆ ನೆರೆದ ಎಲ್ಲಾ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು! ಹೊತ್ತು ಹೋದದ್ದೇ ಗೊತ್ತಾಗಲಿಲ್ಲ! ಈ ಬೈಲಾ ಇದೆಯಲ್ಲ ಅದು ಒಂತರ ವಿದ್ಯಾರ್ಥಿಗಳಿಗೆ ಟ್ರೀಟ್ ಕೊಟ್ಟ ಹಾಗೆ. ಇದಕ್ಕಾಗಿಯೇ ಎಲ್ಲರು ಕೊನೆಯ ತನಕ ಕಾಯುತ್ತಾರೆ. ಹಾಗಾಗಿ ಇಂದು ಹೆಚ್ಚಿನ ವಿದ್ಯಾರ್ಥಿಗಳು ಕೊನೆಯ ತನಕ ಕಾದು ಕುಣಿದು ಕುಪ್ಪಳಿಸಿದರು! ಒಟ್ಟಾಗಿ ಹೇಳುವುದಾದರೆ ಎಂದಿನಂತೆ ಕಾರ್ಯ ಬಹಳ ಯಶಸ್ವಿಯಾಗಿ ನಡೆದು ಅದಕ್ಕಾಗಿ ದುಡಿದ ತಂಡ ಹಾಗು ವಿಭಾಗವು ಮೆಚ್ಚುಗೆಗೆ ಪಾತ್ರವಾಯಿತು.
ವರದಿ ಬರವಣಿಗೆ ಹಾಗು ಸಾಮಾಜಿಕ ಜಾಲತಾಣದ ಸಹ ಸಂಯೋಜಕನಾಗಿ ದೊರತ ಹೊಸ ಜವಾಬ್ದಾರಿ ನನಗೆ ಸಿಕ್ಕ ಸೌಭಾಗ್ಯ ಎಂದು ಸಂತೋಷಪಟ್ಟೆ! ಗೆಳೆಯರ ಜೊತೆಗೆ ಕುಣಿದು ಕುಪ್ಪಳಿಸಿದೆ! ಪ್ರತಿ ದಿನವು ಸೂರ್ಯೋದಯದಿಂದ ಆರಂಭಗೊಂಡು ಸೂರ್ಯಾಸ್ತದೊಂದಿಗೆ ಕೊನೆಗೊಳ್ಳಲೇ ಬೇಕು. ಹಾಗೆಯೇ ಪ್ರತಿ ಕಾರ್ಯಕ್ರಮವು ಆರಂಭಗೊಂಡು ಮುಗಿಯಲೇಬೇಕು. ನಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಿ ಆರಂಭಗೊಂಡು ಯಶಸ್ವಿಯಾಗಿ ಮುಗಿಯಿತು.
ಈ ಕಾರ್ಯಕ್ರಮಕ್ಕೆ ಕಾರಣರಾದ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ವಿಶೇಷವಾಗಿ ನಾನು ನನ್ನ ಮಾರ್ಗದರ್ಶಕರಾದ ಡಾ. ರಿತೇಶ್ ಪಕ್ಕಳ ಸರ್ ಹಾಗು ವಿಭಾಗದ ಉಪನ್ಯಾಸಕರು ಹಾಗು ವಿಭಾಗದ ಸಾಮಾಜಿಕ ಜಾಲತಾಣದ ಖಾತೆಯನ್ನು ನಿರ್ವಹಿಸಲು ಮಾರ್ಗದರ್ಶನ ನೀಡುತ್ತಿರುವ ಡಾ. ನವನೀತ್ ಭಾಸ್ಕರ್ ಸರ್ ಅವರಿಗೆ ಧನ್ಯವಾದ ಸಲ್ಲಿಸಲೇಬೇಕು! ಎಂದಿನಂತೆ ನನ್ನನ್ನು ಪ್ರೋತ್ಸಾಹಿಸುತ್ತಾ ಇಂದು ಕೂಡ ಲೇಖನ,ವರದಿಗಳು ನಿಮ್ಮಿಂದ ಬರಬೇಕು ಎಂದು ನನಗೆ ಮಾರ್ಗದರ್ಶನ ನೀಡುತ್ತಾ ಈ ಲೇಖನ ಬರೆಯಲು ಪ್ರೋತ್ಸಾಹ ನೀಡಿದವರು ಅವರು. ಆದ್ದರಿಂದ ಅವರಿಗೆ ನಾಅಂಉ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಸದಾ ತರಗತಿ,ಪರೀಕ್ಷೆ,ಲ್ಯಾಬ್ ಎಂದು ಬೇಸರಪಡುವ ವಿದ್ಯಾರ್ಥಿಗಳಿಗೆ ರಿಫ್ರೆಶ್ ಆಗಲು ಸಹಾಯಕವಾಗಿರುವ ಇಂತಹ ಕಾರ್ಯಕ್ರಮಗಳು ಕಾಲೇಜಿನಲ್ಲಿ ನಡೆಯುತ್ತಾ ಇರಲಿ ಎಂದು ಆಶಿಸುತ್ತಾ ಸದಾ ನನಗೆ ಪ್ರೋತ್ಸಾಹಿಸುತ್ತಿರುಲ ನಿಮಗೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
🖊ಶ್ರೀಕರ ಬಿ


Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!