ರಾಕೆಟ್ರಿ-ದಿ ನಂಬಿ ಎಫೆಕ್ಟ್!
ರಾಕೆಟ್ರಿ-ದಿ ನಂಬಿ ಎಫೆಕ್ಟ್! ಇತ್ತೀಚಿಗೆ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ ಇದು! ಭಾರತ ಬಾಹ್ಯಾಕಾಶ ಮತ್ತು ಸಂಶೋಧನ ಸಂಸ್ಥೆ ಇಸ್ರೋನ ಆರಂಭಿಕ ದಿನಗಳಲ್ಲಿ ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಡಾ.ವಿಕ್ರಮ್ ಸಾರಾಭಾಯಿ,ಡಾ.ಸತೀಶ್ ಧವನ್,ಡಾ.ಉಡುಪಿ ರಾಮಚಂದ್ರ ರಾವ್,"ಭಾರತ ರತ್ನ"ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೊತೆ ಇಸ್ರೋವನ್ನ ಬೆಳೆಸಿದ ಶ್ರೇಷ್ಠ ವಿಜ್ಞಾನಿ "ಪದ್ಮಭೂಷಣ" ಡಾ. ನಂಬಿ ನಾರಾಯಣ್ ಅವರ ಜೀವನದ ಆಧರಿತ ಸಿನಿಮಾ ಇದು. ಮೊತ್ತಮೊದಲು ನಂಬಿ ನಾರಾಯಣ್ ಅವರ ಬಳಿ ನಾನು ಕ್ಷಮೆ ಕೇಳುತ್ತೇನೆ. ಒಬ್ಬ ಅಪ್ಪಟ ದೇಶಭಕ್ತ,ದೇಶಕ್ಕಾಗಿ ದುಡಿಯುತ್ತಿದ್ದು ಮೋಸದಿಂದ,ಸುಮ್ಮನೆ ಎಷ್ಟೋ ದಿನಗಳ ಕಾಲ ಚಿತ್ರಹಿಂಸೆ,ಶಿಕ್ಷೆ ಅನುಭವಿಸಿದವರು ನಂಬಿ ನಾರಾಯಣ್. ನಾವೆಲ್ಲರೂ ಅವರ ಬಳಿ ಕ್ಷಮೆ ಕೇಳಬೇಕಿದೆ. ಜೊತೆಗೆ ಸಿನಿಮಾ ನಿರ್ಮಿಸಿದ ಶ್ರೀ ಆರ್.ಮಾಧವನ್ ಅವರಿಗೆ ಒಂದು ಸೆಲ್ಯೂಟ್ ಮಾಡಬೇಕಿದೆ. ನಂಬಿ ನಾರಾಯಣ್ ಅವರಂತಹ ಶ್ರೇಷ್ಠ ವಿಜ್ಞಾನಿಯ ಬಗ್ಗೆ ತಿಳಿದುಕೊಂಡಿರದ ಈಗಿನ ಯುವ ಜನತೆಗೆ ಹಾಗು ಅವರ ಬಗ್ಗೆ ಆದ ಅಪಪ್ರಚಾರವೇ ಸತ್ಯ ಎಂದು ತಿಳಿದುಕೊಂಡಿರುವ ಜನರಿಗೆ ಸತ್ಯ ತಿಳಿಸಿದ್ದು ಈ ಸಿನಿಮಾ. ಸಿನಿಮಾ ಆರಂಭಗೊಳ್ಳುವಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಸಿನಿಮಾದ ಇಂಟ್ರೋ ಪದ್ಯ ಏನು ಇದೆಯೋ ಅದು ಆರಂಭಗೊಳ್ಳುವುದೇ "ಶ್ರೀ ವೆಂಕಟೇಶ್ವರ ಸುಪ್ರಭಾತ"ದಿಂದ! ಹೌದು, ಈಗಿನ ಹಿಂದು ದೇವರು,ಧರ್ಮವನ್ನ...