ಸ್ವಾತಂತ್ರ್ಯೋತ್ಸವದ ಅಮೃತ ಘಳಿಗೆಗಳು!
ಇಂದು ನಾವೆಲ್ಲರೂ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಮೊತ್ತಮೊದಲನೆಯದಾಗಿ ತಮ್ಮೆಲರಿಗೆ 76ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ಈ ನನ್ನ ಲೇಖನದಲ್ಲಿ ಸ್ವಾತಂತ್ರ್ಯೋತ್ಸವದ ದಿನದಂದು ನಾನು ಮೊದಲು ಕಲೆತ ಶಾಲೆ,ಕಾಲೇಜಿನಲ್ಲಿ ಕಳೆದ ಸುವರ್ಣ ಕ್ಷಣಗಳನ್ನು ನೆನಪು ಮಾಡಲು ಇಚ್ಛಿಸುತ್ತೇನೆ. ಆಗಸ್ಟ್ ತಿಂಗಳು ಬಂತೆಂದರೆ ಸಾಕು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲೆ,ಕಾಲೇಜಿನಲ್ಲಿ ಸ್ಪರ್ಧೆಗಳು ಶುರುವಾಗಿ ಬಿಡುತ್ತಿತ್ತು. ಆ ಸ್ಪರ್ಧೆಗಳಲ್ಲಿ ಸೇರಲು ಸ್ಪರ್ಧೆ ಏರ್ಪಡುವ ಮಟ್ಟಿಗೆ ವಿದ್ಯಾರ್ಥಿಗಳಲ್ಲಿ ಉತ್ಸಾಹವಿರುತ್ತಿತ್ತು! ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದು ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಅಲ್ಲಿ ಸ್ವಾತಂತ್ರ್ಯೋತ್ಸವ ಬಂತೆಂದರೆ ಸಾಕು ಎಲ್ಲಾ ಮಕ್ಕಳಿಗೂ ಉತ್ಸಹ. ಪುತ್ತೂರಿನಲ್ಲಿ ದೇಶಭಕ್ತರನ್ನು ಸೃಷ್ಟಿಸುವ ಶಾಲೆಗಳಲ್ಲಿ ಈ ಶಾಲೆಯು ಒಂದು. ಯಾವಾಗಲು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು,ಅವರ ಹೆಸರು ಹಾಗು ದೇಶಕ್ಕಾಗಿ ದುಡಿದ ಮಹಾನ್ ಪುರುಷರ ಹೆಸರು,ಹಿಂದಿನ ಕಾಲದ ಋಷಿ,ಮುನಿಗಳ ಹೆಸರನ್ನು ಪ್ರತಿ ತರಗತಿಗೆ ಇಟ್ಟಿರುವುದನ್ನು ನೀವು ನೋಡಬಹುದು. ಸ್ವಾತಂತ್ರ್ಯೋತ್ಸವ ದಿನ,ಗಣರಾಜ್ಯೋತ್ಸವದ ದಿನ ಎಲ್ಲಾ ವಿದ್ಯಾರ್ಥಿಗಳ ಶಾಲೆಗೆ ಬರುವುದು ಕಡ್ಡಾಯವಾಗಿತ್ತು. ಆ ದಿನ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ದೇಶಕ್ಕಾಗಿ ದುಡಿದ ವೀರ ಸೈನಿಕರನ್ನು ಆತಿಥಿಗಳಾಗಿ ಕರೆಯುತ್ತಿದ್ದ...