Posts

Showing posts with the label Books

My review on famous novel "Swami and Friends" written by "R.K Narayan"

Image
  Swami and Friends- R.K Narayan From many days I used to read Kannada books, now I started my new reading journey with the English novel written by my favourite English novelist R.K Narayan. The famous novel "Swami and Friends" is written by R.K Narayan which is the story of tumultuous friendship of a young boy Swaminathan and his four friends and a new boy Rajam. This novel relates to our childhood days,playing with friends,getting punished for doing mischievous things, studying for exams for few days, finishing exam before time and thinking of other friend's performance, waiting for results,enjoying vacation etc. If I say about story,the story begins with introduction of young boys Swami,Mani,Somu,Shankar and Samuel(who is also called Pea) who are attending Albert Mission School,Malgudi.They four are close friends. One day in school, a new boy Rajam arrives, who is the son of Deputy Police Superintendent. Mani, who is believed to be strongest of all hates him. Afte...

ಡಾ.ಕೆ.ಶಿವರಾಮ ಕಾರಂತರ "ಬೆಟ್ಟದ ಜೀವ" ಪುಸ್ತಕದ ಬಗ್ಗೆ ನನ್ನ ಅನಿಸಿಕೆಗಳು!

Image
  ಬೆಟ್ಟದ ಜೀವ- ಡಾ. ಕೆ. ಶಿವರಾಮ ಕಾರಂತ ಪುಸ್ತಕ ಪ್ರಕಾಶಕರು- ಸಪ್ನ ಪ್ರಕಾಶನ ಕಾರಂತಜ್ಜ  ಬರೆದ ಕಾದಂಬರಿಗಳಲ್ಲಿ ನಾನು ಓದುತ್ತಿರುವ ಮೊದಲ ಕಾದಂಬರಿ "ಬೆಟ್ಟದ ಜೀವ". ಈ ಕಾದಂಬರಿಯ ಬಗ್ಗೆ ನನ್ನ ಪ್ರೌಢಶಾಲಾ ದಿನಗಳಲ್ಲಿ ನನ್ನ ಕನ್ನಡ ಗುರುಗಳು ಹೇಳುವುದನ್ನು ಕೇಳಿದ್ದೆ. ಹೀಗೆ ಪುಸ್ತಕ ತರಿಸಿ ಓದಿಯೇ ಬಿಟ್ಟೆ. ಶಿವರಾಮರು ಕಳೆದು ಹೋದ ತನ್ನ ಎಮ್ಮೆಯನ್ನು ಹುಡುಕುತ್ತ ಸುಬ್ರಹ್ಮಣ್ಯಕ್ಕೆ ಹೋದವರು ಮರಳಿ ಬರುವಾಗ ದಾರಿ ತಪ್ಪಿ ಸುಳ್ಯ ರಸ್ತೆಯಲ್ಲಿ ಗುತ್ತಿಗಾರು ಸಮೀಪ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾದಂಬರಿಯಲ್ಲಿ ಬರುವ ಮೊದಲ ವ್ಯಕ್ತಿ ದೇರಣ್ಣನನ್ನು ಕಂಡು,ಅವನ ಮೂಲಕ ತಾನು ಹೋಗುತ್ತಿರುವ ದಾರಿ ತಪ್ಪಿದ್ದು ಗೊತ್ತಾಗಿ ಮೊದಲೇ ದಣಿವಾಗಿದ್ದ ಅವರು ದೇರಣ್ಣನ ಬಳಿ ವಿಶ್ರಾಂತಿಗೆ ಎಲ್ಲಿಯಾದರೂ ಸ್ಥಳ ಸಿಗಬಹುದೇ ಎಂದು ಕೇಳುತ್ತಾರೆ. ನಂತರ ದೇರಣ್ಣ ಅವರ ಊರಿನ ದೊಡ್ಡ ವ್ಯಕ್ತಿ ಎಂದು ಹೇಳಬಹುದಾದ ಗೋಪಾಲಯ್ಯನವರ ಬಳಿ ಕರೆದುಕೊಂಡು ಹೋಗುತ್ತಾರೆ. ದಣಿವಾಗಿದ್ದ,ಯಾವುದೋ ಒಂದು ಊರಿನಿಂದ ಬಂದ ವ್ಯಕ್ತಿಗೆ ಆಶ್ರಯ ನೀಡುವ ಮನಸ್ಸಾಗಿ ಶಿವರಾಮರನ್ನು ಉಪಚರಿಸಿ,ಆಶ್ರಯ ನೀಡುತ್ತಾರೆ. ಇಲ್ಲಿಂದ ಕಾರಂತರ ಹಾಗು ಗೋಪಾಲಯ್ಯನವರ ನಡುವೆ ಆರಂಭಗೊಳ್ಳುವ ಒಡನಾಟ,ಪ್ರೀತಿ ಕಾದಂಬರಿಯ ಕೊನೆತನಕ ಗಮನಿಸಬಹುದು. ಗೋಪಾಲಯ್ಯನವರ ಬಗ್ಗೆ ಹೇಳುವುದಾದರೆ ಗೋಪಾಲಯ್ಯನವರು ಅರುವತ್ತು ವಸಂತವನ್ನು ಪೂರೈಸಿದ ಹಿರಿಯರು. ತಮ್ಮ ಪತ್ನಿ ಶಂಕರಿಯೊ...

ಅಮರಾವತಿ ಪುಸ್ತಕದ ಅವಲೋಕನ,ನನ್ನ ಅನಿಸಿಕೆಗಳು

Image
ಅಮರಾವತಿ- ನಾ ಕಾರಂತ ಪೆರಾಜೆ ಪುಸ್ತಕದ ಲೇಖಕಾರದ ನಾ ಕಾರಂತ ಪೆರಾಜೆ ಅವರನ್ನು ನಾನು ಮದ್ದಳೆ ಅಭ್ಯಾಸಕ್ಕೆಂದು ತರಗತಿಗೆ ಹೋಗುತ್ತಿರುವಾಗ ಅಲ್ಲಿ ನಡೆಯುತ್ತಿದ್ದ ತಿಂಗಳ ತಾಳಮದ್ದಳೆಗೆ ಅರ್ಥಧಾರಿಯಾಗಿ ಬರುತ್ತಿದ್ದರು ಹಾಗು ಎಷ್ಟೋ ಸಲ ಅವರ ಅರ್ಥವನ್ನು ಕೇಳಿ ಆನಂದಪಟ್ಟಿದ್ದೇನೆ. ಹೀಗೆ ಕಳೆದ ವಾರ ಮರಿಕೆ ಸಾವಯವ ಮಳಿಗೆಗೆ ಹೋದಾಗ ಅಮರಾವತಿ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ತಕ್ಷಣ ಅಮ್ಮನ ಬಳಿ ಬೇಡಿ ಪುಸ್ತಕ ತೆಗೆದುಕೊಂಡೆ.  ಅಮರಾವತಿ ಪುಸ್ತಕದಲ್ಲಿ ಯಕ್ಷರಂಗದಲ್ಲಿ ವಿಜೃಂಭಿಸಿ,ಕಲಾಮಾತೆಯ ಸೇವೆಗೈದು,ಈಗ ದೇವರ ಪಾದ ಸೇರಿರುವ ಮಹಾನ್ ಕಲಾವಿದರ ಬಗ್ಗೆ ಪರಿಚಯ,ವಿವರ,ಅವರ ಸಂದರ್ಶನಗಳನ್ನು ಕೂಡಿದೆ. ಪ್ರಥಮದಲ್ಲಿ ಸ್ವತ ಭಾಗವತರಾಗಿದ್ದು,ಹಲವಾರು ಕಲಾವಿದರನ್ನು ಬೆಳೆಸಿ,ಮೇಳವನ್ನು ಕಟ್ಟಿ,ಜೊತೆಗೆ ಗೋಪಾಲಕೃಷ್ಣನ ಸೇವೆ ಮಾಡಿದ ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳ ಬಗ್ಗೆ ಪುಸ್ತಕದಲ್ಲಿ ತಿಳಿದುಕೊಳ್ಳಬಹುದು. ಯಾರೇ ಎಡನೀರು ಮಠಕ್ಕೆ ಬರಲಿ,ಅವರನ್ನು ಉಪಚರಿಸಿ,ತಿಂಡಿ-ಊಟ ಉಪಚಾರ ಮಾಡಿಯೇ ಕಳುಹಿಸುತ್ತಿದ್ದವರು ಎಡನೀರು ಶ್ರೀಗಳು. ಅವರ ಭಾಗವತಿಕೆಯನ್ನು ಮುಖತಃ ನೋಡಿ ಕೇಳುವ ಭಾಗ್ಯ ನನಗಿಲ್ಲದಿದ್ದರೂ ಈಗಿನ ಕಾಲದ ತಂತ್ರಜ್ಞಾನದ ಸಹಾಯದಿಂದ ಯೂಟ್ಯೂಬಿನಲ್ಲಿ ಕೇಳಿ ಆನಂದಿಸಿದ್ದೇನೆ. ಬ್ರಹ್ಮೈಕ್ಯರಾದ ಗುರುಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ತದನಂತರ ಯಕ್ಷರಂಗದಲ್ಲಿ ಅದರಲ್ಲಿಯೂ ತಾಳಮದ್ದಳೆ ಕ್ಷೇತ್ರದಲ್ಲಿ ಹೆಸರು...