Posts

Showing posts with the label The Kerala Story

"ದಿ ಕೇರಳ ಸ್ಟೋರಿ" ಸಿನಿಮಾ ವೀಕ್ಷಿಸಿದ ನಂತರ...

Image
"ದಿ ಕೇರಳ ಸ್ಟೋರಿ" ಸಿನಿಮಾ ವೀಕ್ಷಿಸಿದ ನಂತರ... ಇದು ಒಂದು ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿ 15 ದಿನಗಳು ಕಳೆದರು ಸಹ ಆ ಸಿನಿಮಾದ ಪ್ರದರ್ಶನ ಆರಂಭಗೊಳ್ಳುವ ಸಮಯ ಆಗುವ ಮೊದಲೇ ಹೆಚ್ಚಿನ ಆಸನಗಳು ಭರ್ತಿ! ಆ ಪರದೆಯ ಸಭಾಂಗಣದಲ್ಲಿ ಎಲ್ಲಿ ನೋಡಿದರು ನಿಶ್ಯಬ್ದ! ಸಿನಿಮಾ ನಡುವೆ ಬರುವ ಮಧ್ಯಂತರ ಸಮಯದಲ್ಲೂ ಸಹ ಕೂಡಲೇ ಏಳದ ವೀಕ್ಷಕರು! ಸಿನಿಮಾ ಮುಗಿಯುವ ಸಂದರ್ಭಲ್ಲಿ ಸಭಾಂಗಣದಿಂದ ಹೊರಗೆ ಹೋಗಲು ಬಾಗಿಲು ತೆರೆದಾಗಲೂ ಸಹ ಸಿನಿಮಾ ಮುಗಿದು 5 ನಿಮಿಷ ಆದ ಮೇಲೆ ಎದ್ದು ಹೋದ ವೀಕ್ಷಕರು! ಈ ದೃಶ್ಯಗಳು ಕಂಡಿದ್ದು ಇಂದು ಪುತ್ತೂರಿನ ಭಾರತ್ ಸಿನಿಮಾಸ್ ಥಿಯೇಟರಿನ ಮೂರನೆಯ ಪರದೆಯಲ್ಲಿ! ಸಿನಿಮಾ ಯಾವುದೆಂದು ಗೊತ್ತೇ!? ಅದುವೇ "ದಿ ಕೇರಳ ಸ್ಟೋರಿ"! ಸಿನಿಮಾ ಬಗ್ಗೆ ಗೊತ್ತಾದ ಕೂಡಲೇ ನನಗೆ ಥಿಯೇಟರಿನಲ್ಲಿಯೇ ಹೋಗಿ ನೋಡಬೇಕೆಂದು ಮನಸ್ಸಿದ್ದ ನನಗೆ ಸಮಯ ಸಿಗದ ಕಾರಣ ಇಷ್ಟು ದಿನ ಕಳೆದು ತಡವಾಗಿ ಇಂದು ಥಿಯೇಟರಿನಲ್ಲಿ ಸರಿಯಾಗಿ ಸಿನಿಮಾ ವೀಕ್ಷಿಸಿದೆ. ಸಿನಿಮಾದಲ್ಲಿ ಬರುವ ಒಂದೊಂದು ದೃಶ್ಯ ಇದೆಯಲ್ಲ ಅದನ್ನು ನೋಡಿದರೆ ಯಾರ ಮನಸ್ಸಿನಲ್ಲೂ ಭಯ ಮೂಡದೆ ಇರದು!ರಕ್ತ ಹೆಪ್ಪುಗಟ್ಟಿದಂತಹ ಅನುಭವ! ತಲೆಯೆಲ್ಲ ಸುತ್ತಿದಂತೆ ಆಗುತ್ತದೆ! ಏನು ಮಾತನಾಡಬೇಕೆಂದು ತೋಚುವುದಿಲ್ಲ! ಮಧ್ಯಂತರ ಸಮಯದಲ್ಲಿ ಒಮ್ಮೆ ಹೊರಗೆ ಬಂದು ಮುಖ ತೊಳೆಯುವ ಎಂಬ ಯೋಚನೆಯು ನಿಮಗೆ ಬರುಬಹುದು. ಆ ತರಹದ ಅನುಭವ ಖಂಡಿತವಾಗಿಯೂ ...