Posts

Showing posts with the label Sapta Sagaradaache Ello-Side B

ಸಿನಿಮಾ ಅಂದ್ರೆ ಇದು ಮಾರ್ರೆ!

Image
ಸಿನಿಮಾ ಅಂದ್ರೆ ಇದು ಮಾರ್ರೆ! ಯಬ್ಬ! ಏನು ಹೇಳುವುದು,ಏನು ಬರೆಯುವುದು ಒಂದೂ ಗೊತ್ತಾಗುತ್ತಿಲ್ಲ! ಸೆಪ್ಟೆಂಬರ್ ಅಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಬಿಡುಗಡೆಗೊಂಡಾಗ ನೋಡಿ ನನ್ನ ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದಿದ್ದ ನನಗೆ ಸೈಡ್ ಬಿ ನೋಡಿ ಏನು ಹೇಳಬೇಕೆಂದೇ ಗೊತ್ತಾಗುತ್ತಿಲ್ಲ! ಸೈಡ್ ಬಿ ಸಿನಿಮಾ ಅಂತೂ ನೈಜ,ಮುಗ್ಧ ಪ್ರೇಮ ಕಥನವನ್ನು ಬಹಳ ಚೆನ್ನಾಗಿ ಹೇಳುತ್ತದೆ. ಸೈಡ್ ಎ ಅಲ್ಲಿ ಪ್ರಿಯಾ "ನನ್ನ ಸಮುದ್ರ ನೀನು" ಎಂದು ಮನುವಿಗೆ ಹೇಳಿದರೆ ಅರ್ಥಾತ್ "ಅವಳ ಸಮುದ್ರ ಅವನು" ಎಂದು ಸೈಡ್ ಎ ಹೇಳಿ ತೋರಿಸಿ ಕೊಟ್ಟರೆ ಅದರ ಉಲ್ಟಾ "ಅವನ ಸಮುದ್ರ ಅವಳು" ಎಂಬುದು ಸೈಡ್ ಬಿ ಅಲ್ಲಿ ನೋಡಬಹುದಾಗಿದೆ. ಮನುವಿನ ಒಂದು ಮುಖವನ್ನು ಸೈಡ್ ಎ ಅಲ್ಲಿ ನಾವು ನೋಡಿ ಆಗಿದೆ. ಅದೆ ಮನುವಿನ ಇನ್ನೊಂದು ಮುಖವನ್ನು ಸೈಡ್ ಬಿ ಸಿನಿಮಾದಲ್ಲಿ ಚೆನ್ನಾಗಿ ನೋಡಬಹುದಾಗಿದೆ. ಮನುವಿನ ಮನಸ್ಸಿನ ಭಾವನೆಗಳು,ಪ್ರಿಯಾಳನ್ನು ಕಾಣಬೇಕೆನ್ನುವ ಹಂಬಲ,ಸುರಭಿಯ ಮುಗ್ಧ ಪ್ರೀತಿ,ಪ್ರಕಾಶನ ಗೆಳೆತನ,ಸೋಮನ ಸೇಡು ತಿರುವಿಕೆ ಜೊತೆಗೆ ಮಧ್ಯದಲ್ಲಿ,ಅಲ್ಲಲ್ಲಿ ಸಿಗುವ ಹಾಸ್ಯ ಸಂಭಾಷಣೆ,ಊಹಿಸಲು ಅಸಾಧ್ಯವಾದ ಕ್ಲೈಮಾಕ್ಸ್ ನೋಡುವವರ ಏಕಾಗ್ರತೆಯನ್ನು ಸಿನಿಮಾದುದ್ದಕ್ಕೂ ಎಳೆದು ಇಟ್ಟಕೊಳ್ಳುತ್ತದೆ! ಸಿನಿಮಾ ಕಥೆಯು ಮನಸ್ಸಿನ ಆಳಕ್ಕೆ ಇಳಿದು ಸಿನಿಮಾದ ಕೊನೆಗೆ ಭಾವನೆಗಳಿಂದ ಕಣ್ಣಿನಲ್ಲಿ ನೀರು ಬರುತ್ತದೆ ಹಾಗು ಅದೇ ಭಾವನೆಗಳ ಜೊತೆಗೆ ನೀವು ಹೊರಗ...