ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"





"ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ. 




ಯಕ್ಷಗಾನದ ಜೊತೆಗೆ ಇವರ ನಂಟು:
ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ. 

ದೇವರ ಬ್ರಹ್ಮವಾಹಕರಾಗಿ ಇವರ ಸೇವೆ:
ಕಳೆದ ವರ್ಷ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಕಾಸರಗೋಡಿನ ತಲಕ್ಲೈ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆ ಸಲ್ಲಿಸಲು ಆರಂಭಿಸುವ ಇವರು ಶ್ರೀ ಉಪೇಂದ್ರ ಅಗ್ಗಿತ್ತಾಯ ತ್ರಿಕನ್ನಾಡ್ ಅವರ ಬಳಿ ಶ್ರೀ ಕೃಷ್ಣಪ್ರಸಾದ್ ಅಡಿಗ ಮುಟ್ಟತ್ತೋಡಿ ಅವರ ಬೆಂಬಲದೊಂದಿಗೆ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಕಾಸರಗೋಡು,ದಕ್ಷಿಣ ಜಿಲ್ಲೆಗಳ ಹಲವಾರು ದೇವಸ್ಥಾನಗಳ ಉತ್ಸವಗಳಲ್ಲಿ ಇವರು ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ವರ್ಷದ ಮಹಾಶಿವರಾತ್ರಿಯ ಸಂದರ್ಭದಲ್ಲಿ ಸುಪ್ರಸಿದ್ಧ ತ್ರಿಕನ್ನಾಡ್ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ಅಜ್ಜನ ಕಾಲದಿಂದಲೇ ಪಾರಂಪರ್ಯವಾಗಿ ಮಧೂರು ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಇವರ ಕುಟುಂಬಸ್ಥರು ಈಗಲೂ ಅಲ್ಲಿ ಶ್ರೀ ದೇವರ ಸೇವೆಯನ್ನು ಮಾಡುತ್ತಿದ್ದಾರೆ. ಇವರು ತನ್ನ ದೇವರ ಸೇವೆಗೆ ತನ್ನ ಗುರುಗಳನ್ನು ಹಾಗು ಪೋಷಕರನ್ನು ಸದಾ ನೆನಪಿಸುತ್ತಾರೆ.

ಯಕ್ಷಗಾನದ ಜೊತೆಗೆ ವಿಜ್ಞಾನದಲ್ಲೂ ಸಾಧನೆಯನ್ನು ಮಾಡಿರುವ ಇವರು ಭಾರತೀಯ ವಿದ್ಯಾನಿಕೇತನ ಇವರು ರಾಜಸ್ತಾನದಲ್ಲಿ ನಡೆಸಿದ ರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾಗವಹಿಸಿರುತ್ತಾರೆ. ವಾಯುಯಾನದ ಬಗ್ಗೆ ಬಹಳ ಆಸಕ್ತಿಯನ್ನು ಹೊಂದಿರುವ ಇವರು ಪೈಲೆಟ್ ಆಗಬೇಕು ಎಂಬ ಕನಸನ್ನು ಹೊಂದಿದ್ದಾರೆ.



ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಇವರು ಪ್ರಸ್ತುತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನನ್ನ ಆಪ್ತಮಿತ್ರರೂ ಹೌದು.ತನ್ನ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಿರುವ ಇವರು ಇನ್ನಷ್ಟು ಸಾಧನೆ ಮಾಡಿ, ಇವರ ಕನಸು ಈಡೇರಿ ಉತ್ತುಂಗಕ್ಕೆ ಏರಲಿ ಎಂದು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರಲ್ಲಿ,ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ.
ಬರಹ:
ಶ್ರೀಕರ ಬಿ
ದ್ವಿತೀಯ ವರ್ಷದ ಬಿಇ ವಿದ್ಯಾರ್ಥಿ
ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಟ್ ಕಾಲೇಜು,
ಅಡ್ಯಾರ್,ಮಂಗಳೂರು

ಈ ಲೇಖನದ ಆಂಗ್ಲ ಪ್ರತಿ ಓದಲು  ಇಲ್ಲಿ ಕ್ಲಿಕ್ ಮಾಡಿ

Comments

Post a Comment

Popular Posts

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!