ರಾಮಕೃಷ್ಣ ಶಾಲೆ,ನನ್ನ ಶಾಲೆ...!
ರಾಮಕೃಷ್ಣ ಶಾಲೆ,ನನ್ನ ಶಾಲೆ...! ಅದು ಪುತ್ತೂರಿನ ಹೃದಯ ಭಾಗದಲ್ಲಿರುವ ಎತ್ತರದ ಸ್ಥಳ. ಸುತ್ತಲೂ ನೋಡಿದರೂ ಕಾಣಸಿಗುವ ಗುಡ್ಡಗಾಡು,ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿ. ಸದಾ ಬೀಸುತ್ತಿರುವ ತಂಗಾಳಿ. ಇಂತಹ ಸ್ಥಳ ಸಿಕ್ಕರೆ ವಿದ್ಯಾರ್ಜನೆ ಮಾಡುವುದೇ ಒಂದು ಆನಂದ ಅಲ್ಲವೇ!? ಪುತ್ತೂರಿನ ಇಂತಹ ಸ್ಥಳದಲ್ಲಿರುವುದೇ ನಮ್ಮ ಶ್ರೀ ರಾಮಕೃಷ್ಣ ಪ್ರೌಢ ಶಾಲೆ. ನನ್ನ ಸರ್ವತೋಮುಖ ಬೆಳವಣಿಗೆಗೆ,ನನ್ನ ಒಳಗೆ ಅಡಗಿದ್ದ ಪ್ರತಿಭೆಯನ್ನು ಹೊರತಂದು,ಬೆಳೆಸಿದ ಶಾಲೆ! ಶ್ರೀ ಶ್ರೀಧರ್ ರೈ ಸರ್,ಶ್ರೀ ಮನೋಹರ್ ರೈ ಸರ್,ಶ್ರೀಮತಿ ವಸಂತಿ ಮೇಡಂ,ಶ್ರೀಮತಿ ಮಾಲತಿ ಮೇಡಂ,ಶ್ರೀಮತಿ ರೂಪಕಲಾ ಮೇಡಂ,ವನಿತಾ ಕುಮಾರಿ ಮೇಡಂ ಅವರಂತಹ ಶ್ರೇಷ್ಠ ಗುರುಗಳು ಸೇವೆ ಸಲ್ಲಿಸಿದ ವಿದ್ಯಾ ದೇಗುಲವಿದು! ಅದೆಷ್ಟೋ ವಿದ್ಯಾರ್ಥಿಗಳನ್ನು ಬೇರೆ ಬೇರೆ ಸ್ಪರ್ಧೆಗಳಿಗೆ,ಬೇರೆ ಬೇರೆ ಕ್ಷೇತ್ರಗಳಲ್ಲಿ ಆಯ್ದು ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ ಹೆಮ್ಮೆಯ ಶಾಲೆ! ಶಾಲೆಯಲ್ಲಿ ಈಗ ವಾರ್ಷಿಕೋತ್ಸವ ಹಾಗು ಕನ್ನಡ ರಾಜ್ಯೋತ್ಸವದ ಸಂಭ್ರಮ! ಇದೇ ಸಂದರ್ಭದಲ್ಲಿ ನಾನು ಶಾಲೆಯಲ್ಲಿ ಕಳೆದ ಅದೆಷ್ಟೋ ಸುಂದರ ಕ್ಷಣಗಳು,ನೆನಪುಗಳನ್ನು ಮೆಲುಕು ಹಾಕಲು ಬಯಸುತ್ತೇನೆ. ಅದು 2016ನೇ ಇಸವಿ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದಿನ ಶಿಕ್ಷಣಕ್ಕೆಂದು ನನ್ನನ್ನು ಶ್ರೀ ರಾಮಕೃಷ್ಣ ಪ್ರೌಢ ಶಾಲೆಗೆ ದಾಖಲಿಸುವ ತೀರ್ಮಾನ ನನ್ನ ಅಪ್ಪ-ಅಮ್...