ಕಲ್ಕಿ ಸಿನಿಮಾದ ಬಗ್ಗೆ ನನ್ನದೊಂದು ವಿಮರ್ಶೆ!

 ಕಲ್ಕಿ ಸಿನಿಮಾದ ಬಗ್ಗೆ ನನ್ನದೊಂದು ವಿಮರ್ಶೆ!



ಕಳೆದ ವಾರ ಬಿಡುಗಡೆಗೊಂಡ ಪ್ರಭಾಸ್,ಅಮಿತಾಭ್ ಬಚ್ಚನ್ ಸೇರಿ ಪ್ರಸಿಧ್ಧ ಚಿತ್ರ ತಾರೆಯರು ನಟಿಸಿದ,ನಾಗ ಅಶ್ವಿನ್ ನಿರ್ದೇಶನದ "ಕಲ್ಕಿ 2898 ಎಡಿ" ಸಿನಿಮಾ ನೋಡಿ ಬಂದೆ.



ಸಿನಿಮಾದ ಬಗ್ಗೆ ಹೇಳುವುದುದಾದರೆ ಈ ಸಿನಿಮಾ ಯಾವುದೇ ಕಾರಣಕ್ಕೂ ಆದಿಪುರುಷ್ ಸಿನಿಮಾ ತರಹ ಇರಬಹುದು ಅಂತ ಅಂದುಕೊಳ್ಳುವುದೇ ಬೇಡ! ಮಹಾಭಾರತದಲ್ಲಿ ಅಶ್ವತ್ಥಾಮನ ಕಥೆಯನ್ನು ಒಳಗೊಂಡು ಕಲಿಯುಗದಲ್ಲಿ ಪ್ರಾಜೆಕ್ಟ್-ಕೆ ಎಂಬ ಮಿಷನ್ ಮಾಡುತ್ತಿರುವ ಸುಪ್ರೀಮ್(ಕಲಿಗೆ ಹೋಲಿಸಬಹುದು) ಕಥೆಯನ್ನು ಒಳಗೊಂಡಿದೆ. ಹಾಗು ಕಲ್ಕಿಯನ್ನು ಹೆರುವ ತಾಯಿಯನ್ನು(ಸುಮತಿ ಎಂದು ಹೆಸರು) ಪ್ರಾಜೆಕ್ಟ್ ಕೆ ಮಿಷನ್ ಇಂದ ರಕ್ಷಿಸಿ ಕಲ್ಕಿ ಹುಟ್ಟುವ ಸ್ಥಳ ಎಂದು ಹೇಳಲಾಗಿರುವ ಶಾಂಬಾಲಕ್ಕೆ ಕರೆದುಕೊಂಡು ಹೋಗುವುದು. ನಂತರ ಸುಮತಿಯನ್ನು ಅಪಹರಿಸಲು ಬರುವ ಸುಪ್ರೀಮ್ ಅವನ ಕಮಾಂಡರ್ ಮನಸ್ ಅಶ್ವತ್ಥಾಮ,ಭೈರವನ ಜೊತೆಗೆ ಯುದ್ಧ ಈ ಸಿನಿಮಾದ ಹಲವು ಪ್ರಮುಖ ದೃಶ್ಯಗಳು. 

ಅಭಿನಯದ ಬಗ್ಗೆ ಹೇಳುವುದಾದರೆ ನನಗೆ ನಾಯಕ ಪ್ರಭಾಸ್ ಅವರಿಂದ ಹೆಚ್ಚು ಇಷ್ಟವಾದದ್ದು ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮನ ನಟನೆ! ಆ ಇಳಿ ವಯಸ್ಸಿನಲ್ಲೂ ಆ ಪಾತ್ರಕ್ಕೆ ತಮ್ಮ ದೇಹವನ್ನು ಹೊಂದಿಸಿ,ಯುದ್ಧದ ಸನ್ನಿವೇಶಗಳಲ್ಲಿ ಹೋರಾಡುವುದು,ಸ್ಟಂಟ್ ಮಾಡುವ ದೃಶ್ಯಗಳು ಇದೆಯಲ್ಲ ಅದಕ್ಕೆ ನಿಜವಾಜಿಯೂ ಅವರನ್ನು ಮೆಚ್ಚಲೇಬೇಕು. ಪ್ರಭಾಸ್ ಅವರ ನಟನೆಯೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಂದೆರಡು ಸನ್ನಿವೇಶಗಳಲ್ಲಿ ನಿಮಗೆ ಬಾಹುಬಲಿ ಸಿನಿಮಾ ನೆನಪಾಗಲುಬಹುದು! ಅದನ್ನು ನೋಡಲು ಚಿತ್ರಮಂದಿರಕ್ಕೆ ಹೋಗಿ! ನಾಯಕಿ ದೀಪಿಕಾ ಪಡುಕೋಣೆಯವರದ್ದು ಸ್ವಲ್ಪ ಭಾವನಾತ್ಮಕ ಪಾತ್ರ. ಸಂಭಾಷಣೆಯು ಹೆಚ್ಚಿಲ್ಲ. ಏನಿದ್ದರೂ ಭಾವನೆಯೇ ಜಾಸ್ತಿ. ಭೈರವನ ಗೆಳತಿ ರೋಕ್ಸಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಇವರದ್ದು ಸ್ವಲ್ಪ ಸಣ್ಣ ಪಾತ್ರ. ಸುಪ್ರೀಮ್ ಆಗಿ ನಟಿಸಿದ್ದು ಕಮಲ್ ಹಸನ್. ಸಿನಿಮಾದ ಆರಂಭದಲ್ಲಿನ ದೇಹ ಸಪುರ ಇರುವ ರೀತಿ ಹಾಗು ಕೊನೆಯಲ್ಲಿನ ದೇಹದ ರೂಪಾಂತರ ನೋಡಿದಾಗ ಕಮಲ್ ಹಸನ್ ಅಂತ ಗೊತ್ತಾಗುವುದಿಲ್ಲ. ಅಮಿತಾಭ್ ಬಚ್ಚನ್,ಪ್ರಭಾಸ್ ನಟನೆಯ ನಂತರ ನನಗೆ ಹೆಚ್ಚು ಇಷ್ಟ ಆದದ್ದು ಕಮಾಂಡರ್ ಮನಸ್ ಆಗಿ ಅಭಿನಯಸಿದ ಶಾಶತ್ವ ಚಟರ್ಜಿಯವರದ್ದು. ಆ ಪಾತ್ರದ ಗತ್ತು,ಅಹಂಕಾರ ಎಲ್ಲವೂ ಅವರ ಅಭಿನಯದಲ್ಲಿ ಕಾಣುತ್ತಿತ್ತು.ಉಳಿದ ನಟರು ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ನಾಗ ಅಶ್ವಿನ್ ಅವರು ಸಿನಿಮಾವನ್ನು ಚೆನ್ನಾಗಿ ನಿರ್ದೇಶಿಸಿದ್ದಾರೆ.ಇಲ್ಲದಿದ್ದರೆ ಈ ಸಿನಿಮಾ ಇಷ್ಟು ಚೆನ್ನಾಗಿ ಮೂಡಿಬರಲು ಸಾಧ್ಯವಿಲ್ಲ.

ಸಿನಿಮಾದಲ್ಲಿ ವಿ.ಎಫ್.ಎಕ್ಸ್ ತಂತ್ರಜ್ಞಾನ,ಚಿತ್ರೀಕರಣ ಹಾಗು ಆಕ್ಷನ್ ದೃಶ್ಯಗಳ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅತ್ಯುತ್ತಮ ಚಿತ್ರೀಕರಣ ಹಾಗು ಒಳ್ಳೆಯ ವಿ.ಎಫ್.ಎಕ್ಸ್ ಸಿನಿಮಾ ನೋಡುವವರಿಗೆ ಬೇರೆ ರೀತಿಯ ಅನುಭವ ನೀಡುತ್ತದೆ. ತ್ರಿಡಿಯಲ್ಲಿ ಅಂತೂ ಹೇಳಬೇಕೆಂದಿಲ್ಲ!

 ಮಹಾಭಾರತದ ಅಶ್ವತ್ಥಾಮನನ್ನು,ಕಲ್ಕಿಯ ತಾಯಿಯನ್ನು ತಮ್ಮ ಕಥೆಗೆ ಅನುಗುಣವಾಗಿ ಬೇಕಾಬಿಟ್ಟಿ ಬಳಸಿ ಅವಮಾನ ಮಾಡಿದ್ದಾರೆ ಎಂಬ ವಿವಾದ ಇದ್ದರೂ ಮಹಾಭಾರತದ ನಿಜ ಕಥೆಯನ್ನು ಎಲ್ಲಿಯೂ ತಿರುಚಿ ಹಾಕದೆ ಇರುವುದನ್ನು ನೋಡಬಹುದು. ಹೀಗಾಗಿ ಚಿತ್ರಮಂದಿರದಲ್ಲಿ ನೋಡಬಹುದಾದ ಸಿನಿಮಾ ಎಂಬುದು ನನ್ನ ಅನಿಸಿಕೆ. 

ನಿಮಗೂ ಕಲ್ಕಿ ಸಿನಿಮಾವನ್ನು ನೋಡಬೇಕೆಂದು ಇದ್ದರೆ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ನೋಡಿ ಬನ್ನಿ!

ನನ್ನ ರೇಟಿಂಗ್: 9/10⭐️⭐️⭐️⭐️

ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!