ಏಳನೆಯ ಅಧ್ಯಾಯ ಮುಕ್ತಾಯ...!

 ಏಳನೆಯ ಅಧ್ಯಾಯ ಮುಕ್ತಾಯ...!


ಜೀವನ ಎಂಬುದು ಒಂದು ಪಯಣ. ದಿನ ಆರಂಭಗೊಂಡಂತೆ ಅಂತ್ಯ ಕಾಣಲೇಬೇಕು. ಇಂದು ಅನುಭವಿಸಿದು ನಾಳೆ ಸಿಗದು. ನದಿಯ ನೀರಿನಂತೆ ಒಂದು ಪ್ರಾಣಿಯ ಜೀವ ಸಾಗುತ್ತಾ ಇರುತ್ತದೆ. 

ಮನುಷ್ಯನ ಬದುಕಿನ ಪಯಣದಲ್ಲಿ ಬರುವ ಒಂದು ಮುಖ್ಯ ಕಾಲಘಟ್ಟವೆಂದರೆ ಅದು ವಿದ್ಯಾಭ್ಯಾಸ! ಇದು ಬಹಳ ಮಹತ್ವದ ಕಾಲವು ಹೌದು. ಈ ಕಾಲಘಟ್ಟ ಮನುಷ್ಯನ ಮುಂದಿನ ಜೀವನವನ್ನು ರೂಪಿಸುತ್ತದೆ. ಇಂತಹ ಕಾಲಘಟ್ಟದಲ್ಲಿ ಸಿಗುವ ಪ್ರಮುಖವಾದ ಹಂತ ಎಂದರೆ ಉನ್ನತ ಶಿಕ್ಷಣ. ಕಳೆದ ಬಾರಿ ಒಂದೆರಡು ವರ್ಷಗಳ ಮೊದಲು ನನ್ನ ಎರಡನೆಯ ವರ್ಷದ ಉನ್ನತ ಶಿಕ್ಷಣ ಮುಗಿದ ಬಳಿಕ ಎರಡು ವರ್ಷಗಳ ಅನುಭವದ ಬಗ್ಗೆ ಬರೆದಿದ್ದೆ. ಹೀಗೆ ದಿನಗಳು ಕಳೆದಂತೆ ಇಂದು ನನ್ನ ಕೊನೆಯ ವರ್ಷದ ವಿದ್ಯಾಭ್ಯಾಸದ ಒಂದು ಸೆಮಿಸ್ಟರ್ ಅಂತ್ಯಗೊಂಡಿದೆ. ಇದರ ಜೊತೆಗೆ ಕಾಲೇಜಿನ ತರಗತಿಗಳು ಅಂತ್ಯಗೊಂಡಿದೆ. ಈಗಿನ ಇಂಜನಿಯರಿಂಗ್ ವ್ಯಾಸಂಗದ ನಿಯಮಗಳ ಪ್ರಕಾರ ಎಲ್ಲಾ ವಿಷಯಗಳ ತರಗತಿಗಳು,ಪ್ರಾಜೆಕ್ಟ್ ಕೆಲಸಗಳು,ಪರೀಕ್ಷೆಗಳು ಏಳನೆಯ ಸೆಮಿಸ್ಟರಿಗೆ ಮುಗಿದು ಎಂಟನೆಯ ಸೆಮಿಸ್ಟರಿನಲ್ಲಿ ಇಂಟರ್ನ್ ಶಿಪ್ ಮಾತ್ರ ಮಾಡಲು ಇರುತ್ತದೆ. ಇದರಂತೆ ನನ್ನ ವ್ಯಾಸಂಗದ ತರಗತಿಗಳು ಇಂದು ಏಳನೆಯ ಸೆಮಿಸ್ಟರಿನ ಕೊನೆಯ ಪರೀಕ್ಷೆಯೊಂದಿಗೆ ಅಂತ್ಯಗೊಂಡಿದೆ. 


ಇಲ್ಲಿಯ ತನಕ ಆದ ಎಲ್ಲಾ ಸೆಮಿಸ್ಟರಿಗೆ ಹೋಲಿಸಿದರೆ ಈ ಸೆಮಿಸ್ಟರ್ ನನಗೆ ಬಹಳ ಇಷ್ಟವಾದದ್ದು. ಈ ಸೆಮಿಸ್ಟರಿನ ಅವಧಿಯಲ್ಲಿ ನನ್ನನ್ನು ನಾನು ಕಂಡುಕೊಳ್ಳಲು ಬಹಳ ಸಹಕಾರಿಯಾಯಿತು. ಈ ಸೆಮಿಸ್ಟರಿನಲ್ಲಿ ನಾನು ಹಲವಾರು ಯಶಸ್ಸುಗಳನ್ನು ಕಂಡೆ. ಆರಂಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ಅಧಿಕೃತ ಜಾಲತಾಣ ಮಾಡಿಕೊಡುವ ಸೇವೆ ದೊರಕಿತು. ಇದರಲ್ಲಿ ನಾನು ನನ್ನ ತಂಡದ ಜೊತೆಗೆ ಬಹಳಷ್ಟು ಕೆಲಸ ಮಾಡಿದೆ. ನಾನು ಹಲವಾರು ತಂತ್ರಜ್ಞಾನಗಳನ್ನು ಕಲಿತು ಅದನ್ನು ನಮ್ಮ ಜಾಲತಾಣದ ಪ್ರಾಜೆಕ್ಟಿನಲ್ಲಿ ಅಳವಡಿಸಿದೆ. ತಪ್ಪುಗಳನ್ನು ತಿದ್ದಿಕೊಂಡೆ. ಕೊನೆಗೆ ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಜಾಲತಾಣವನ್ನು ಅನಾವರಣ ಮಾಡುವ ಸೌಭಾಗ್ಯ ದೊರಕಿತು. ನಂತರದ ದಿನಗಳಲ್ಲಿ ಕಾಲೇಜಿನಲ್ಲಿ ನಮ್ಮ ವಿಭಾಗದ ವಿದ್ಯಾರ್ಥಿಗಳ ಉನ್ನತಕ್ಕೆ,ಕನ್ಸಲ್ಟೆನ್ಸಿ ಸೇವೆಗಳನ್ನು ನೀಡಲು,ಪ್ರಾಜೆಕ್ಟ ಅನ್ನು ಮಾಡಲು ನಿರ್ಮಿಸಿದ ವಿದ್ಯಾರ್ಥಿಗಳ ಸಂಘದ ಮುಖ್ಯಸ್ಥನಾದೆ. ವಿಭಾಗದ ವಿದ್ಯಾರ್ಥಿಗ ಸಂಘದಲ್ಲಿ ವರದಿ,ಲೇಖನ,ವರದಿ ಬರವಣಿಗೆಯ ಸಂಯೋಜಕನಾಗಿ ನೇಮಕಗೊಂಡೆ. ಶೈಕ್ಷಣಿಕವಾಗಿಯೂ ಪರೀಕ್ಷೆಗಳಿಗೆ ಗೆಳೆಯರೊಂದಿಗೆ ಚೆನ್ನಾಗಿ ಓದಿ ಉತ್ತಮ ಫಲಿತಾಂಶವನ್ನು ಪಡೆದೆ(ಇಂದು ಮುಗಿದ ಸೆಮಿಸ್ಟರ್ ಅಂತಿಮ ಪರೀಕ್ಷೆ ಹೊರತುಪಡಿಸಿ). ಜೀವನದಲ್ಲಿ ನನಗೆ ಇದ್ದ ದೊಡ್ಡ ಆಸೆಗಳಲ್ಲಿ ಒಂದು ಶಬರಿಮಲೆ ಯಾತ್ರೆ ಮಾಡಬೇಕೆಂಬ ಆಸೆ. ಅದು ಇದೇ ಅವಧಿಯಲ್ಲಿ ನೆರವೇರಿತು. ಶಬರಿಮಲೆಗೆ ಮೂರು ಬಾರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವ ಸೌಭಾಗ್ಯ ದೊರಕಿತು. ಹೀಗೆಲ್ಲ ನೋಡಿದಾಗ ಈ ಸೆಮಿಸ್ಟರ್ ನನ್ನ ಉನ್ನತೀಕರಣಕ್ಕೆ ಬಹಳ ಸಹಾಯ ಮಾಡಿತು. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಯುದ್ಧದ ಹಾಗೆ. ಪರೀಕ್ಷೆ ಮುಗಿದ ಬಳಿಕ ಯುದ್ಧ ಗೆದ್ದ ಹಾಗೆ ವಿದ್ಯಾರ್ಥಿಗಳು ಸಂಭ್ರಮಿಸುತ್ತಾರೆ. ಇಂತಹ ಅನುಭವಗಳು ನನಗೂ ಆದರೂ ಇಂದು ಪರೀಕ್ಷೆ ಮುಗಿದ ಬಳಿಕ ಯುದ್ಧದ ನಂತರ ರಣಾಂಗದಲ್ಲಿರುವ ನೀರವ ಮೌನದಂತೆ ನನ್ನ ಮನಸ್ಸು ಮೌನವಾಗಿತ್ತು. ಏನೋ ಒಂದು ಕಳೆದುಕೊಂಡ ಹಾಗೆಯ ಭಾವನೆ. ಕಾಲೇಜು ತರಗತಿಗಳು ಮುಗಿದ ಸಂತೋಷ ಒಂದು ಕಡೆ ಆದರೆ ಮತ್ತೊಂದು ಕಡೆ ಕಾಲೇಜು ದಿನಗಳು ಸಿಗುವುದಿಲ್ಲ ಎಂಬ ಬೇಸರ. ಒಟ್ಟಿನಲ್ಲಿ ಈ ಸೆಮಿಸ್ಟರ್ ನನಗೆ ಬಹಳ ಪಾಠಗಳನ್ನು ಕಲಿಸಿಕೊಟ್ಟಿದೆ,ಯಶಸ್ಸನ್ನು ಗಳಿಸುವಂತೆ ಮಾಡಿದೆ. 


ಕಾಲೇಜಿನಲ್ಲಿ ನಾನು ನನ್ನ ಸಹಪಾಠಿಗಳ ಜೊತೆಗೆ ಕಳೆದ ಪ್ರತಿಯೊಂದು ಕ್ಷಣಗಳು ಸುಂದರ ನೆನಪುಗಳನ್ನು ನೀಡಿತು. ತರಗತಿಯಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಆಪ್ತಮಿತ್ರರಾದ ಹೇಮಂತ್,ಯೋಗೀಶ್, ಕೀರ್ತಿ ಪ್ರಸಾದ್,ವಿಜಯೇಂದ್ರ,ಚಂದನ್, ಕುಳಿತುಕೊಳ್ಳುವ ಕೃಷ್ಣಚೇತನ್,ಸೂಚಕ್,ಶಮನ್ ಇವರ ಜೊತೆಗೆ ತರಗತಿಯಲ್ಲಿ ಚೇಷ್ಠೆಗಳನ್ನು ಮಾಡುತ್ತಾ ಮಜಾ ಮಾಡುತ್ತಿದ್ದೆವು. ಪ್ರತಿ ತರಗತಿಯಲ್ಲಿ ಸಂತೋಷದ ಕ್ಷಣಗಳನ್ನು ಕಳೆದದ್ದೂ ಇದೆ. ಬಸ್ಸಿನಲ್ಲಿ ಒಟ್ಟಾಗುತ್ತಿದ್ದ ನನ್ನ ಬಹುಕಾಲದ ಆಪ್ತಮಿತ್ರರು,ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳೇ ಆಗಿರುವ ರೋಹನ್,ಸೃಜನ್,ಆದಿತ್ಯ,ಸಹ್ಯಾದ್ರಿ ಕಾಲೇಜಿನಲ್ಲಿ ಪರಿಚಯ ಆಗಿ ಆಪ್ತರಾದ ಮಿತ್ರರಾದ ದೇವೀಶ್,ಅಭಿಷೇಕ್ ಇವರ ಜೊತೆಗೆ ಬಸ್,ರೈಲಿನಲ್ಲಿ ಪ್ರಯಾಣ ಬೆಳೆಸುತ್ತ ಜೊತೆಯಾಗಿ ಕಾಲೇಜಿಗೆ ಹೋಗಿ ಬರುತ್ತಿದ್ದ ದಿನಗಳು ಎಷ್ಟೋ! ಆಪ್ತಮಿತ್ರನಾದ ಪ್ರದ್ಯುಮ್ನನ ಜೊತೆಗೆ ಪರೀಕ್ಷೆಗೆ ತಯಾರಾಗುವುದು,ಕಾಲೇಜಿನ ಬಳಿ ಇರುವ 'ಪೋಗೋ' ಎಂಬ ಫಾಸ್ಟ್ ಫುಡ್ ಅಂಗಡಿಗೆ ಹೋಗಿ ಪಾನಿಪುರಿ,ಮಸಾಲಪುರಿ ತಿನ್ನುವುದು,ಐಡಿಯಲ್ಸ್ ಪಾರ್ಲರಿಗೆ ಹೋಗಿ ಐಸ್ಕ್ರೀಂ ತಿನ್ನುವುದು, ಆಪ್ತಮಿತ್ರರಾದ ಅಭಿಷೇಕ್ ಗದಾರ್,ಬಾಲಮುರಳಿ,ಹೇಮಂತ್,ಯೋಗೀಶ್ ಜೊತೆಗೆ ಮಧ್ಯಾಹ್ನ ಮಾಡುತ್ತಿದ್ದ ಊಟ,ಇವರ ಮೂಲಕ ಸಿಗುತ್ತಿದ್ದ ಕ್ಯಾಂಟಿನಿನ ಪಲ್ಯ,ಚಪಾತಿಯನ್ನು ತಿನ್ನುತ್ತಾ, ಊಟ ಮುಗಿಸಿ ತರಗತಿಗೆ ಓಡುತ್ತಾ, ಆಪ್ತಮಿತ್ರರಾದ ದರ್ಶಿತ್,ಸುಧೀಶ್, ಪ್ರಜ್ವಲ್,ಸುಜಿತ್ ಜೊತೆಗೆ ಕಾಲ ಕಳೆಯುತ್ತಿದ ದಿನಗಳು ಹೀಗೆ ಹೇಳುತ್ತಾ ಹೋದರೆ ಉದ್ದಾ ಪಟ್ಟಿಯೇ ಬರಬಹುದು. ಇವರೆಲ್ಲರ ಜೊತೆಗೆ ಈ ಮೂರು ವರ್ಷಗಳ ವ್ಯಾಸಂಗದಲ್ಲಿ ಕಳೆದ ಸುಂದರ,ಮರೆಯಲಾಗದ ಕ್ಷಣಗಳು ಅದೆಷ್ಟೋ!ದ್ವಿತೀಯ ವರ್ಷದಿಂದ ಇಲ್ಲಿಯ ತನಕ ನಾನುಎಷ್ಟೋ ಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಂಡೆ. ಇದಕ್ಕೆ ಕಾರಣರಾದವರು ನನ್ನ ಆಪ್ತಮಿತ್ರರು. ಅವರಿಗೆಲ್ಲ ನಾನು ಧನ್ಯವಾದಗಳನ್ನು ಹೇಳಲೇಬೇಕು.


ಎಂದಿನಂತೆ ಈ ಸೆಮಿಸ್ಟರಿನಲ್ಲಿಯೂ,ಈಗಲೂ ನನಗೆ ಬೆನ್ನೆಲುಬಾಗಿ ನಿಂತು,ಸದಾ ನನ್ನ ಒಳಿತನ್ನು,ಯಶಸ್ಸನ್ನು ಬಯಸುವ ನನ್ನ ಮಾರ್ಗದರ್ಶಕರು,ಮಾಹಿತಿ ತಂತ್ರಜ್ಞಾನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ರಿತೇಶ್ ಪಕ್ಕಳ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇವರ ಜೊತೆಗೆ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳ ಹಾಗೆ ನೋಡಿ,ತಮ್ಮ ವಿದ್ಯೆಯನ್ನು ನಮಗೆ ಧಾರೆ ಎರೆದು, ನಿರಂತರವಾಗಿ ಸೂಕ್ತ ಮಾರ್ಗದರ್ಶನವನ್ನು ನೀಡಿದ ನನ್ನ ಎಲ್ಲಾ ಗುರುಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ ಈ ಸಂದರ್ಭದಲ್ಲಿ ನನ್ನ ಅಪ್ಪ-ಅಮ್ಮನನ್ನು ಸ್ಮರಿಸದಿದ್ದರೆ ತಪ್ಪು. ತಾವು ಎಷ್ಟು ಕಷ್ಟ ಅನುಭವಿಸಿದರೂ ಸರಿ ತಮ್ಮ ಮಕ್ಕಳು ಆ ಕಷ್ಟಗಳನ್ನು ಅನುಭವಿಸಬಾರದು ಎಂದು,ಸದಾ ನನ್ನ ಪಾಲನೆ,ಪೋಷಣೆ ಮಾಡುತ್ತಾ,ಜೀವನ ನಡೆಸಲು ಸರಿಯಾದ ದಾರಿಯನ್ನು ತೋರಿಸುವ ನನ್ನ ಅಪ್ಪ-ಅಮ್ಮನಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಏಳನೆಯ ಸೆಮಿಸ್ಟರ್ ಮುಗಿಯಿತು. ಇನ್ನು ಇರುವುದು ಆರು ತಿಂಗಳ ಅವಧಿಯ ಒಂದು ಸೆಮಿಸ್ಟರ್. ಅದರಲ್ಲಿ ಕಾಲೇಜಿಗೆ ಹೋಗಲು ಇರುವುದು ಕೆಲವು ದಿನಗಳು ಮಾತ್ರ. ಉಳಿದ ದಿನಗಳಲ್ಲಿ ವಿದ್ಯಾರ್ಥಿಗಳು ಇಂಟರ್ನ್ ಶಿಪ್ ಅಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಆರು ತಿಂಗಳು ಇನ್ನು ಕಣ್ಣು ಮುಚ್ಚಿ ಬಿಡುವುದರ ಒಳಗೆ ಮುಗಿದು ಬಿಡಲಿದೆ. ಅಲ್ಲಿಗೆ ಕಾಲೇಜು ದಿನಗಳ ಅಧ್ಯಾಯ ಮುಗಿಯಲಿದೆ. ವಿದ್ಯಾರ್ಥಿ ಜೀವನದ ದಿನಗಳು ಅತ್ಯುತ್ತಮ ದಿನಗಳು ಎಂದು ಹೇಳಿದರೆ ತಪ್ಪಾಗಲು ಸಾಧವಿಲ್ಲ. ಅದಕ್ಕೆ ಕಾರಣ ಇದೆ. ಈ ನಾಲ್ಕು ವರ್ಷಗಳ ಅನುಭವ ಜೀವನದುದ್ದಕ್ಕೂ ನನಗೆ ನೆನಪು ಇರಲಿದೆ!

🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!