Posts

Featured Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

Image
ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ.  ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ.  ದೇವರ ಬ್ರಹ್ಮವಾಹಕರಾಗಿ ಇವ...

Adoor Shri Mahalingeshwara Temple: The Sacred Abode Where Lord Shiva Blessed Arjuna with the Pashupatastra!

Image
Adoor Shri Mahalingeshwara Temple: The Sacred Abode Where Lord Shiva Blessed Arjuna with the Pashupatastra!   This is a sacred Shiva shrine in South India steeped in Mahabharata-era history. It is deeply connected to Arjuna, one of the Pancha Pandavas and the peerless master archer. This is the holy place where Lord Shiva Himself tested Arjuna in battle and pleased with his devotion, bestowed upon him the divine weapon Pashupatastra! Located on the banks of the Payaswini River in Adoor, Kasaragod district, this temple holds first place among the four principal temples of the historic Kumbla Seeme, a region spanning northern Kasaragod in Kerala and the southern part of Dakshina Kannada in Karnataka. This is the prime venerable shrine of the Kumbla realm: Adoor Shri Mahalingeshwara Mahavishnu Vinayaka Temple.   It was the Dvapara Yuga. Following Lord Shri Krishna's guidance, Arjuna set out to perform rigorous penance to attain the Pashupatastra. He arrived at a dense forest area...

ಅರ್ಜುನನ ಭಕ್ತಿಗೆ ಒಲಿದು ಪಾಶುಪತಾಸ್ತ್ರವನ್ನು ಕರುಣಿಸಿದ ಪರಶಿವನ ಪುಣ್ಯ ಕ್ಷೇತ್ರ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ...!

Image
  ಅರ್ಜುನನ ಭಕ್ತಿಗೆ ಒಲಿದು ಪಾಶುಪತಾಸ್ತ್ರವನ್ನು ಕರುಣಿಸಿದ ಪರಶಿವನ ಪುಣ್ಯ ಕ್ಷೇತ್ರ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ...! ಇದು ಮಹಾಭಾರತ ಕಾಲದ ಇತಿಹಾಸವುಳ್ಳ ದಕ್ಷಿಣ ಭಾರತದ ಪರಮ ಪವಿತ್ರ ಶಿವ ಕ್ಷೇತ್ರ! ಪಂಚ‌ ಪಾಂಡವರಲ್ಲಿ ಒಬ್ಬ, ಧನುರ್ವಿದ್ಯೆ ಪಾರಂಗತ,ಶ್ರೇಷ್ಠ ಬಿಲ್ಲುಗಾರ ಅರ್ಜುನನಿಗೆ ಸಂಬಂಧ ಇರುವ ಪುಣ್ಯ ಕ್ಷೇತ್ರವಿದು! ಸಾಕ್ಷಾತ್ ಭಗವಾನ್ ಶಂಕರನೇ ಅರ್ಜುನನನ್ನು ಪರೀಕ್ಷಿಸಲು ಕಾದಾಡಿ ಅವನ ಭಕ್ತಿಗೆ ಒಲಿದು ಪಾಶುಪತ ಅಸ್ತ್ರ ಕರುಣಿಸಿದ ಪರಮ ಪವಿತ್ರ ಕ್ಷೇತ್ರವಿದು! ಕೇರಳಂ ರಾಜ್ಯದ ಉತ್ತರ ಭಾಗದ ಕಾಸರಗೋಡು‌ ಹಾಗೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದ ವ್ಯಾಪ್ತಿಯನ್ನು ಹೊಂದಿರುವ ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಸ್ಥಾನಗಳಲ್ಲಿ ಪ್ರಥಮ ಸ್ಥಾನದಲ್ಲಿ ಬರುವ ಕ್ಷೇತ್ರವಿದು! ಇದುವೇ ಪಯಸ್ವಿನಿ ನದಿ ತೀರದಲ್ಲಿ,ಕಾಸರಗೋಡು ಜಿಲ್ಲೆಯ ಅಡೂರಿನಲ್ಲಿರುವ, ಕುಂಬಳೆ ಸೀಮೆಯ ಪ್ರಥಮ ವಂದನೀಯ ಕ್ಷೇತ್ರ ಅಡೂರು ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನ! ಅದು ದ್ವಾಪರಾಯುಗ! ಭಗವಾನ್ ಶ್ರೀಕೃಷ್ಣನ ಸಲಹೆಯಂತೆ ಪಾಶುಪತಾಸ್ತ್ರದ ಸಿದ್ಧಿಗಾಗಿ ತಪಸ್ಸಿಗೆ ಹೊರಟು ಬಂದ ಸ್ಥಳ ಈಗಿನ ಅಡೂರು ಕ್ಷೇತ್ರದಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕೌಡಿಂಗಾನವೆಂಬ ದಟ್ಟ ಅರಣ್ಯ ಪ್ರದೇಶ! ಈ ಪ್ರದೇಶದಲ್ಲಿ ಅರ್ಜುನ ಶಿವ ದೇವರನ್ನು ಮೆಚ್ಚಿಸಲು ತಪ್ಪಸ್ಸನ್ನು ಆಚರಿಸುತ್ತಿರುವಾಗ ಅರ್ಜುನನನ್ನು ಪರೀಕ್ಷಿ...

The Special Sacred Shrine of Lord Mahavishnu Situated in the Middle of a Lake!

Image
The Special Sacred Shrine of Lord Mahavishnu Situated in the Middle of a Lake!   You may have heard of the Shri Ananthapadmanabha Temple in Thiruvananthapuram, the capital of Keralam, one of the richest temples in the world. If you are reading this article, you may have visited the temple at least once and had the darshan of Lord Mahavishnu. But do you know where the original abode of Ananthapadmanabha Swamy is? To put it simply, just as the Shri Manjunatha Swamy Temple at Dharmasthala and the Sri Manjunatha Temple at Kadri are connected, there is also a connection between the Shri Ananthapadmanabha Swamy Temple in Thiruvananthapuram and this temple. The famous vegetarian crocodile "Babiya", which was well known across India, lived in the lake surrounding this very temple! By now, you may have guessed which temple I am talking about! This is the Ananthapura Sri Ananthapadmanabha Swamy Temple, located at Naikap in Kumbla, Kasaragod district, near Mangaluru. Many years ago, bef...

ಕೆರೆಯ ಮಧ್ಯದಿ ನೆಲೆನಿಂತ ಮಹಾವಿಷ್ಣುವಿನ ವಿಶೇಷ ಪುಣ್ಯ ಕ್ಷೇತ್ರ!

Image
  ಕೆರೆಯ ಮಧ್ಯದಿ ನೆಲೆನಿಂತ ಮಹಾವಿಷ್ಣುವಿನ ವಿಶೇಷ ಪುಣ್ಯ ಕ್ಷೇತ್ರ!   ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ, ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಶ್ರೀ ಅನಂತಪದ್ಮನಾಭ ದೇವಸ್ಥಾನದ ಬಗ್ಗೆ ನೀವು ಕೇಳಿರುತ್ತೀರಿ, ಈ ಲೇಖನ ಓದುತ್ತಿರುವ ನೀವು ಒಮ್ಮೆಯಾದರೂ ಅಲ್ಲಿಗೆ ಹೋಗಿ ಮಹಾವಿಷ್ಣು ದೇವರ ದರ್ಶನ ಮಾಡಿರಬಹುದು. ಆದರೆ ಅನಂತಪದ್ಮನಾಭ ಸ್ವಾಮಿಯ ಮೂಲಸ್ಥಾನ ಯಾವುದು ಎಂದು ನಿಮಗೆ ಗೊತ್ತಿದೆಯಾ!? ಸುಲಭದಲ್ಲಿ ಹೇಳುವುದಾದರೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೇಗೆ ಸಂಬಂಧ ಇದೆಯೋ ಹಾಗೆಯೇ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೂ ಹಾಗೂ ಈ ದೇವಾಲಯಕ್ಕೆ ಒಂದು ಸಂಬಂಧವಿದೆ. ಭಾರತದಲ್ಲಿ ಪ್ರ‌ಸಿದ್ಧಿ ಪಡೆದಿದ್ದ ಶಾಕಾಹಾರಿ ಮೊಸಳೆ "ಬಬಿಯಾ" ಜೀವಿಸಿದ್ದು ಇದೇ ದೇವಸ್ಥಾನದ ಸುತ್ತ ಇರುವ ಕೆರೆಯಲ್ಲಿ! ಈಗ ನಿಮಗೆ ಗೊತ್ತಾಗಿರಬಹುದು ನಾನು ಯಾವ ದೇವಸ್ಥಾನದ ಬಗ್ಗೆ ಹೇಳುತ್ತಿದ್ದೇನೆ ಎಂದು! ಇದುವೇ ಮಂಗಳೂರು ಸಮೀಪದಲ್ಲಿರುವ ಕಾಸರಗೋಡು ಜಿಲ್ಲೆಯ ಕುಂಬಳೆಯ ನಾಯ್ಕಾಪಿನಲ್ಲಿರುವ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ! ಬಹಳ ವರ್ಷಗಳ ಹಿಂದೆ ತಿರುವನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸ್ಥಾಪನೆಗೊಳ್ಳುವ ಮೊದಲು ಕುಂಬಳೆಯ ಅನಂತಪುರದಲ್ಲಿ ಕೃಷ್ಣಾಕರ್ಣಾಮೃತ ಸೇರಿ ಮೊದಲಾದ ಗ್ರಂಥಗಳನ್ನು ರಚಿಸಿದ ಶ್ರೀಕೃಷ್ಣ ದೇವರ ಭಕ್ತರಾದ ...

The Idol Worshipped by Mother Yashoda: The Divine Legacy of Kanipura Gopalakrishna!

Image
The Idol Worshipped by Mother Yashoda: The Divine Legacy of Kanipura Gopalakrishna! Kanipura Shri Gopalakrishna Temple This is a supremely holy field of Lord Krishna in South India, boasting a history spanning three Yugas! It is a pilgrimage center considered as sacred as Udupi and Guruvayur, often referred to as the Mathura or Dwarka of South India. This temple was established by a great sage who began his penance waiting for Lord Rama in the Treta Yuga , lost track of time and finally received the vision (Darshan) of Lord Krishna in the Dwapara Yuga ! This is one of the four primary temples of the Kumbla region. It is a center of immense divine power; during the British era, authorities tried to remove the temple for a railway line and years ago, the government tried to move it for the National Highway. Yet, the Lord remained immovable, standing firm on this soil! Standing tall in the birthplace of Yakshagana (specifically the Tenkutittu style), this Lord protects all people, rushing...

ಕೃಷ್ಣನ ಊರು ದ್ವಾರಕೆಯಿಂದ ಯಕ್ಷಗಾನದ ತವರೂರಿಗೆ ಬಂದು ನೆಲೆಸಿದ ಯಶೋಧಾಕರಾರ್ಚಿತ ಗೋಪಾಲಕೃಷ್ಣ!

Image
  ಕೃಷ್ಣನ ಊರು ದ್ವಾರಕೆಯಿಂದ ಯಕ್ಷಗಾನದ ತವರೂರಿಗೆ ಬಂದು ನೆಲೆಸಿದ ಯಶೋಧಾಕರಾರ್ಚಿತ ಗೋಪಾಲಕೃಷ್ಣ! ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಇದು ಸುಮಾರು ಮೂರು ಯುಗಗಳ ಇತಿಹಾಸವುಳ್ಳ ದಕ್ಷಿಣ ಭಾರತದ ಪರಮ ಪವಿತ್ರ ಕೃಷ್ಣ ದೇವರ ಕ್ಷೇತ್ರ! ದಕ್ಷಿಣ ಭಾರತದ ಮಥುರೆ,ದಕ್ಷಿಣ ಭಾರತದ ದ್ವಾರಕೆಯೆಂದೇ ಕರೆಸಿಕೊಳ್ಳುವ ಉಡುಪಿ, ಗುರುವಾಯೂರು ಕ್ಷೇತ್ರಗಳಷ್ಟೆ ಪವಿತ್ರವಾಗಿರುವ ಕ್ಷೇತ್ರ! ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನ ದರ್ಶನಕ್ಕೆ ಕಾದು ತಪಸ್ಸನು ಆಚರಿಸುತ್ತಾ ಸಮಯದ ಅರಿವೇ ಇಲ್ಲದೆ ಒಂದು ಯುಗದ ಬಳಿಕ ದ್ವಾಪರಯುಗದಲ್ಲಿ ಶ್ರೀಕೃಷ್ಣನ ದರ್ಶನ ಪಡೆದ ಮಹರ್ಷಿಗಳಿಂದ ಸ್ಥಾಪನೆಗೊಂಡ ಕ್ಷೇತ್ರ! ಕುಂಬಳೆ ಸೀಮೆಯ ನಾಲ್ಕು ಪ್ರಧಾನ ಕ್ಷೇತ್ರಗಳಲ್ಲಿ ಒಂದು ಪ್ರಧಾನ ಕ್ಷೇತ್ರವಿದು! ಬ್ರಿಟಿಷರ ಕಾಲದಲ್ಲಿ ರೈಲ್ವೆ ಹಳಿಗೆ, ಕೆಲವು ವರ್ಷಗಳ ಮೊದಲು ರಾಷ್ಟ್ರೀಯ ಹೆದ್ದಾರಿಗೆ ದೇವಸ್ಥಾನವನ್ನೇ ತೆಗೆಯಬೇಕೆಂದು ಹೊರಟರೂ ಒಂದಿಚ್ಚು ಕದಲದೆ ಗಟ್ಟಿಯಾಗಿ ಅಲ್ಲೇ ನೆಲೆನಿಂತ ಅತ್ಯಂತ ಶಕ್ತಿಶಾಲಿ ದೇವರ ಕ್ಷೇತ್ರವಿದು! ಯಕ್ಷಗಾನ ಅದರಲ್ಲೂ ತೆಂಕುತಿಟ್ಟಿನ ಯಕ್ಷಗಾನದ ಮೂಲಸ್ಥಾನದಲ್ಲಿ ನೆಲೆನಿಂತು ಸಕಲ ಜನರನ್ನು ಪೊರೆಯುತ್ತಾ, "ಕೃಷ್ಣ...!" ಎಂದು ಕರೆದ ಕೂಡಲೆ ಕಷ್ಟದಲ್ಲಿರುವವರ ಬಳಿಗೆ ಓಡೋಡಿ ಬಂದು ಭಕ್ತರನ್ನು ರಕ್ಷಿಸುತ್ತಿರುವ ದೇವರು ಇವರು! ರಾತ್ರಿಯ ಹೊತ್ತು ಪೇಟೆಯಲ್ಲಿ ಬಿಳಿ ಕುದುರೆಯನ್ನು ಏರಿ ಸವಾರಿ ಮಾಡುತ್ತಿದ್ದ ರಹಸ್ಯಗಳು ಸೇರಿ ಹಲವಾರ...

Ayyappa’s Darshan Through Words: An Experience with the Novel "Shauryamale"

Image
  Ayyappa’s Darshan Through Words: An Experience with the Novel "Shauryamale" After a long hiatus, I finally picked up a novel to read. The book was "Shauryamale: Ayyappana Poongavana." We have all heard the story of Sabarimala Ayyappa from various sources and often, these stories tend to vary from one region to another. However, I had a strong desire to understand the authentic history of Sabarimala Ayyappa clearly. Having heard about the glory of Lord Ayyappa for many years, I was finally blessed with the opportunity to visit Sabarimala in 2024. Until then, I had only watched others go with a longing in my heart. But when I finally went, received Ayyappa’s darshan  and spent the night at the Sannidhana (sanctum), the divine experience I received changed the very trajectory of my life. It is impossible to put into words the surge of energy and the spiritual experience I felt there. A while ago, I saw a post on Facebook by my friend, bibliophile and writer, Shri Pr...

ಅಕ್ಷರ ರೂಪದಲ್ಲಿ ಅಯ್ಯಪ್ಪನ ದರ್ಶನ: "ಶೌರ್ಯಮಲೆ" ಕಾದಂಬರಿ ಒಂದು ಅನುಭವ

Image
ಅಕ್ಷರ ರೂಪದಲ್ಲಿ ಅಯ್ಯಪ್ಪನ ದರ್ಶನ: "ಶೌರ್ಯಮಲೆ" ಕಾದಂಬರಿ ಒಂದು ಅನುಭವ ಬಹಳ ಸಮಯದ ನಂತರ ಮತ್ತೆ ಒಂದು ಕಾದಂಬರಿಯನ್ನು ಓದಿದೆ. ಈ ಬಾರಿ ಓದಿದ ಪುಸ್ತಕವೇ "ಶೌರ್ಯಮಲೆ ಅಯ್ಯಪ್ಪನ ಪೂಂಗಾವನ". ಶಬರಿಮಲೆ ಅಯ್ಯಪ್ಪನ ಕಥೆಯನ್ನು ನಾವು ಹಲವಾರು ಮೂಲಗಳಿಂದ ಕೇಳಿ ತಿಳಿದಿದ್ದೇವೆ. ಒಂದೊಂದು ಕಡೆ ವಿಭಿನ್ನ ರೀತಿಯ ಕಥೆಗಳು ಇರುವ ಸಾಧ್ಯತೆ ಇರುತ್ತದೆ. ಆದರೆ ನನಗೆ ಸ್ವಷ್ಟವಾಗಿ ಶಬರಿಮಲೆ ಅಯ್ಯಪ್ಪನ ಚರಿತ್ರೆಯನ್ನು ತಿಳಿದುಕೊಳ್ಳಬೇಕಿತ್ತು. ಬಹಳ ವರ್ಷಗಳಿಂದ ಶಬರಿಮಲೆ ಅಯ್ಯಪ್ಪನ ಮಹಿಮೆಯನ್ನು ಕೇಳಿ ತಿಳಿದಿದ್ದ ನಾನು ನನ್ನ ಪಾಲಿಗೆ ಒಲಿದು ಬಂದ ಅವಕಾಶವನ್ನು ಬಳಸಿ 2024ರಲ್ಲಿ ಶಬರಿಮಲೆಗಿ ಹೋಗಿ ಬಂದೆ. ಅಲ್ಲಿಯ ತನಕ ಉಳಿದವರು ಹೋಗುವುದನ್ನು ಕಂಡು ಆಸೆ ಪಡುತ್ತಿದ್ದ ನಾನು ಸ್ವತಃ ಹೋಗಿ ಅಯ್ಯಪ್ಪನ ದರ್ಶನ ಪಡೆದು ರಾತ್ರಿ ಹೊತ್ತು ಸನ್ನಿಧಾನದಲ್ಲೇ ಕಳೆದಾಗ ನನಗೆ ಸಿಕ್ಕ ದಿವ್ಯಾನುಭೂತಿ ನನ್ನ ಬದುಕಿನ ಪಥವನ್ನೇ ಬದಲಿಸಿತು. ಅಲ್ಲಿ ಸಿಕ್ಕ ಅನುಭವ,ದೇಹದಲ್ಲಾದ ಶಕ್ತಿಯ ಸಂಚಾರದ ಬಗ್ಗೆ ಹೇಳಲು ಸಾಧ್ಯವಿಲ್ಲ.   ಕೆಲವು ಸಮಯದ ಮೊದಲು ಈ ಕಾದಂಬರಿಯ ಬಗ್ಗೆ ಫೇಸ್ಪುಕಿನಲ್ಲಿ ನನ್ನ ಫೇಸ್ಬುಕ್ ಮಿತ್ರರು,ಪುಸ್ತಕ ಪ್ರೇಮಿ ಹಾಗೂ ಬರಹಗಾರರಾದ ಶ್ರೀ ಪ್ರಶಾಂತ್ ಭಟ್ ಅವರು ಬರೆದಿದ್ದನ್ನು ನಾನು ನೋಡಿದೆ. ತಕ್ಷಣ ಈ ಪುಸ್ತಕವನ್ನು ಓದಬೇಕೆಂಬ ಆಸೆ ನನಗೂ ಬಂತು. ಪುಸ್ತಕ ಖರೀದಿಸಿ ಓದಿದೆ.  ಕಾದಂಬರಿಯ ಲೇಖಕರಾದ ರಮೇಶ್ ಶೆಟ್ಟಿಗಾರ್ ಮಂಜೇಶ...