Posts

Showing posts with the label Bolle falls

ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಅಡಗಿರುವ ಮಾಣಿಕ್ಯ: ಬೊಳ್ಳೆ ಜಲಪಾತದ ಚಾರಣ ಅನುಭವ!

Image
    ನೇತ್ರಾವತಿ ಶಿಖರದ ತಪ್ಪಲಿನಲ್ಲಿ ಅಡಗಿರುವ ಮಾಣಿಕ್ಯ: ಬೊಳ್ಳೆ ಜಲಪಾತದ ಚಾರಣ ಅನುಭವ!   ಆದಿತ್ಯವಾರ! ವಾರದ ಆರು ದಿನ ಕೆಲಸ ಮಾಡಿ ವಾರದ ರಜಾದಿನದಂದು ಸ್ವಲ್ಪ ಬಿಡುವು ಪಡೆದು ನೆಮ್ಮದಿ ಪಡೆಯಬೇಕೆಂಬ ಆಲೋಚನೆ ಎಲ್ಲರಿಗೆ ಇರುತ್ತದೆ! ತಮ್ಮ ಕುಟುಂಬದ ಜೊತೆಗೆ ಮನೆಯಲ್ಲಿ ಅಥವ ಹೊರಗೆ ಎಲ್ಲಿಗಾದರೂ ಹೋಗಿ ಸಮಯ ಕರೆಯಬೇಕೆಂಬ ಆಲೋಚನೆಗಳು ಇರುತ್ತದೆ. ಇಂತಹ ಸಮಯದಲ್ಲಿ ನನ್ನ ಪಯಣ ಸಾಗಿದ್ದು ಬೊಳ್ಳೆ ಜಲಪಾತದ ಕಡೆಗೆ! ಸೋಮವಾರದಿಂದ ಶನಿವಾರ ತನಕ ಬಿಡುವು ಇಲ್ಲದೆ ನನ್ನ ಉದ್ಯೋಗ, ಇತರೇ ಕೆಲಸಗಳನ್ನು ಮಾಡಿ ಬಸವಳಿದ್ದ ನನ್ನ ಮನಸ್ಸು ಸ್ವಲ್ಪ ನೆಮ್ಮದಿಗೆ ಕಾಯುತ್ತಿತ್ತು. ಇಂತಹ ಸಮಯದಲ್ಲಿ ಮೊದಲು ನೆನಪಾಗುವುದು ಪ್ರಕೃತಿ ಮಾತೆಯನ್ನು! ನಾವು ನೆಮ್ಮದಿಯನ್ನು ಹುಡುಕಿಕೊಂಡು ಏನೇನೋ ಮಾಡಲು ಹೊರಡುತ್ತೇವೆ. ಕೊನೆಗೆ ಅದು ದುಶ್ಚಟಕ್ಕೆ ಬಿದ್ದರೂ ತೊಂದರೆಯಿಲ್ಲ ಎನ್ನುವ ಮಟ್ಟಕ್ಕೆ! ಆದರೆ ಪ್ರಕೃತಿ ಮಾತೆಯೇ ಎಲ್ಲವನ್ನು ಒದಗಿಸುತ್ತಿರುವುದು ಮನುಷ್ಯರಿಗೆ ತಿಳಿದಿರಬೇಕಲ್ಲ! ಇರಲಿ,ಹೀಗೆ ಪ್ರಕೃತಿ ಮಾತೆಯನ್ನು ನೆನಪಾದಾಗ ಒಂದೋ ನನ್ನ ಊರಾದ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಹರಿಹರಪಲ್ಲತ್ತಡ್ಕಕ್ಕೆ ಹೋಗಿ ಹಳ್ಳಿಯಲ್ಲಿ ಒಂದೆರಡು ದಿನಗಳನ್ನು ಕಳೆದೋ ಅಥವ ಅವಕಾಶ ಸಿಕ್ಕರೆ ವರ್ಷಕ್ಕೆ ಒಂದೆರಡು ಚಾರಣಕ್ಕೆ ಹೋಗಿ ಬರುತ್ತಿದ್ದೆ. ಇಂದು ಅಂತಹ ಒಂದು ಉತ್ತಮ ಅವಕಾಶ ನನ್ನ ಪಾಲಿಗೆ ಒದಗಿ ಬಂತು! ಬೊಳ್ಳೆ ಜಲಪಾತ ಇದು ಹೆಚ್ಚಿನ ಜನರಿಗೆ ಅಪರಿಚಿತ ಸ್...