ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

 ನನ್ನ ನೆಚ್ಚಿನ ಗುರುವಿಗೆ ಹುಟ್ಟುಹಬ್ಬದ ಶುಭಾಶಯಗಳು!


ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಚಿರಪರಿಚಿತರು, ಸಾವಿರಾರು ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ರಾಷ್ಟ್ರಪತಿ ಪುರಸ್ಕಾರ(ರಾಷ್ಟ್ರಮಟ್ಟದ)ವರೆಗೆ ತರಬೇತಿ ನೀಡಿದ ಗುರುಗಳು, ಸಾಗರದ ಮಧ್ಯದಿ ಮುಳುಗುವ ಹಡಗಿನಂತಾಗಿದ್ದ ನನ್ನ ಸ್ಕೌಟ್ಸ್ ಪಯಣವನ್ನು ದಡ ಸೇರಿಸಿದ ಮಹಾನ್ ವ್ಯಕ್ತಿ ಇವರು. ಇವರು ಯಾರೆಂದರೆ ವಿದ್ಯಾರ್ಥಿಗಳ ನೆಚ್ಚಿನ "ಭರತ್ ಸರ್"
ಭರತ್ ಸರ್ ಬಗ್ಗೆ ಪರಿಚಯ: ಇವರ ಪೂರ್ಣ ಹೆಸರು ಭರತ್ ರಾಜ್ ಕೆ. ಜುಲೈ 7, 1991ರಂದು ಗೋದಾವರಿ ಹಾಗು ಅಚ್ಯುತ ದಂಪತಿಯ ಎರಡನೇ ಪುತ್ರನಾಗಿ ಜನಿಸಿದರು. ಇವರು ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿರುವ 777 ಚಾರ್ಲಿ ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಇವರ ಪ್ರೀತಿಯ ತಮ್ಮ.
ಬಾಲ್ಯದಲ್ಲೇ ಆರ್ಥಿಕ ಸಮಸ್ಯೆಗಳ ನಡುವೆ ವಿದ್ಯಾಭ್ಯಾಸವನ್ನು ಪಡೆದ ಇವರು ಪಾತಿಮಾ ALP ಹಿರಿಯ ಪ್ರಾಥಮಿಕ ಶಾಲೆ ನಾರಂಪಾಡಿ ಹಾಗೂ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆ ಮಾನ್ಯದಲ್ಲಿ ಪ್ರೈಮರಿ ಶಿಕ್ಷಣವನ್ನು ಮುಗಿಸಿ, ಶ್ರೀ ಅನ್ನಪೂರ್ಣೇಶ್ವರಿ ಪ್ರೌಢಶಾಲೆ ಬಳಿಕ ಜನತಾ ಪದವಿ ಪೂರ್ವ ಕಾಲೇಜು ಅಡ್ಯನಡ್ಕದಲ್ಲಿ ಕಲಾವಿಭಾಗದಲ್ಲಿ ಶಿಕ್ಷಣ ಪಡೆದು, ಡಿ. ಎಡ್. ತರಬೇತಿಯನ್ನು ಸೈಯದ್ ಮದನಿ ಉಳ್ಳಾಲ ಮಂಗಳೂರಿನಲ್ಲಿ ಪೂರೈಸಿದರು. ನಂತರ 5 ವರ್ಷಗಳ ಕಾಲ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದಲ್ಲಿರುವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಓಡಿಲ್ನಾಳ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದಾಗಲು ಭರತ್ ಸಾರ್ ಎಂದರೆ ಶಾಲೆಯ ಅಧ್ಯಾಪಕರಿಗಾಗಲಿ,ವಿದ್ಯಾರ್ಥಿಗಳಿಗೆ,ಪೋಷಕರಿಗೆ ಅಚ್ಚುಮೆಚ್ಚು. ಇವರು ಪ್ರಸ್ತುತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.



ನನ್ನ ಹಾಗು ಭರತ್ ಸರ್ ಅವರ ಒಡನಾಟ: ಭರತ್ ಅವರ ಪರಿಚಯ ನನಗೆ ಆದದ್ದು ನಾನು ಪ್ರೌಢ ಶಾಲೆಯಲ್ಲಿ ಸ್ಕೌಟ್ಸ್ ತೃತೀಯ ಸೋಪಾನ ಪರೀಕ್ಷೆಗೆ ಎಂದು ಹೋದಾಗ. ನಾನು ಕಲಿಯುತ್ತಿದ್ದ ಶ್ರೀ ರಾಮಕೃಷ್ಣ ಪ್ರೌಢ ಶಾಲೆ,ಪುತ್ತೂರಿನಲ್ಲಿ ನಾನು ಎಂಟನೆಯ ತರಗತಿಯಲ್ಲಿ ಕಲಿಯುತ್ತಿದ್ದಾಗ ತೃತೀಯ ಸೋಪಾನ ಪರೀಕ್ಷಾ ಶಿಬಿರ ನಡೆದಿತ್ತು. ಅಂದು ನಾನು ಹಾಗು ನನ್ನ ಗೆಳೆಯರು ಸೇರಿ ಪರೀಕ್ಷೆಯ ಪ್ರವೇಶ ಕೌಂಟರ್ ಅಲ್ಲಿ ಪರೀಕ್ಷಾರ್ಥಿಯಾಗಿದ್ದ ನಾನು ನನ್ನ ವಿವರನ್ನು ನೀಡುತ್ತಿದಾಗ ಅವರು ನಮ್ಮನ್ನು ಮಾತನಾಡಿಸಿದರು. ಅಂದು ಸಂಜೆ ಬರೆಯುವ ಪರೀಕ್ಷೆ ಇತ್ತು. ಸಂಜೆ ಕರೆಂಟು ಕೈಕೊಟ್ಟು ಕತ್ತಲಾಗಿದ್ದ ಸಮಯದಲ್ಲಿ ನಾನು ಗೆಳೆಯರೆಲ್ಲ ಸೇರಿ ಉತ್ತರವನ್ನು ಹಂಚುತ್ತಾ ಬರೆಯುತ್ತಿದ್ದಾಗ ಭರತ್ ಸರ್ ಎಲ್ಲಾ ವಿದ್ಯಾರ್ಥಿಗಳಿಗೆ ಬೈದು ತನ್ನ ಮೊಬೈಲಿನ ಟಾರ್ಚ್ ಬೆಳಕಿನ ಸಹಾಯದಿಂದ ಪ್ರತಿ ವಿದ್ಯಾರ್ಥಿಯ ಬಳಿ ಬಂದು ಪರಿಶೀಲಿಸುತ್ತಿದ್ದರು. ಭರತ್ ಸರ್ ಅವರಿಗೆ ವಿದ್ಯಾರ್ಥಿಗಳು ಎಂದರೆ ಬಹಳ ಪ್ರೀತಿ. ಅಂದು ರಾತ್ರಿ ನಾನು,ಗೆಳೆಯರೆಲ್ಲ ಹೀಗೆ ಶಾಲೆಯ ಆವರಣದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಲ್ಲೇ ಇದ್ದ ಸರ್ ನನ್ನ ಒಬ್ಬ ಗೆಳೆಯನಿಗೆ ತಮಾಷೆಗೆ ಬೈದು,ಹೆದರಿಸಿದರು. ಅವನು ಕೂಡಲೆ ಕೂಗಿ ಬಿಟ್ಟ! ನಂತರ ಸರ್ ಅವನಿಗೆ ಸಾಂತ್ವನ ಹೇಳಿ,ಅವನನ್ನು ಸಮಾಧಾನಪಡಿಸಿದರು. ಈಗಲು ಅವರ ಬಳಿ ಹೋದರೆ ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಆ ಶಿಬಿರದಿಂದ ಅವರ ಜೊತೆ ಆತ್ಮೀಯರಾದ ನಾವು ನಂತರ ನಮಗೆ ಮುಂದಿನ ಸ್ಕೌಟ್ಸ್ ಪಯಣದಲ್ಲಿ ದಾರಿ ತೋಚದೆ ಇದ್ದಾಗ ಅವರ ಬಳಿ ಸಲಹೆ,ಮಾಹಿತಿ,ಸಹಾಯವನ್ನು ಕೇಳುತ್ತಿದ್ದೆವು. ಅವರು ಕೂಡಲೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿ,ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರು. ನಂತರ ರಾಜ್ಯ ಪುರಸ್ಕಾರದ ಸಮಯದಲ್ಲೂ ನನಗೆ ಒಂದು ಘಟನೆ ಈಗಲು ನೆನಪಿದೆ,ಅಂದು ಶಾಲೆಯಿಂದ ನಾನು ಎಲ್ಲಾ ರಾಜ್ಯ ಪುರಸ್ಕಾರ ವಿದ್ಯಾರ್ಥಿಗಳ ಪತ್ರಗಳನ್ನು ತೆಗೆದುಕೊಂಡು ನನ್ನ ಗೆಳೆಯನ ಜೊತೆ ಮಂಗಳೂರು ಸ್ಕೌಟ್ಸ್ ಭವನಕ್ಕೆ ಹೋಗಬೇಕಿತ್ತು. ನನ್ನ ಜೊತೆ ಬರಬೇಕಾದ ಗೆಳೆಯ ಕಡೆ ಕ್ಷಣ ಕೈಕೊಟ್ಟ ಕಾರಣ ನಾನು ಒಬ್ಬನೇ ಹೋಗಬೇಕಾದ ಪರಿಸ್ಥಿತಿ ಬಂದಾಗ ನಾನು ಕೂಡಲೆ ನನ್ನ ಶಾಲೆಯ ಗೈಡ್ಸ್ ಶಿಕ್ಷಕಿ(ಎರಡು ವರ್ಷ ಅಲ್ಲಿ ಸ್ಕೌಟ್ಸ್ ಮಾಸ್ಟರ್ ಇರಲಿಲ್ಲ),ದೈಹಿಕ ಶಿಕ್ಷಣ ಶಿಕ್ಷಕಿಯ ಬಳಿ ಹಾಗು ನಮ್ಮ ತಂಡದ ನಾಯಕನ ಬಳಿ ತಿಳಿಸಿದೆ. ನಮ್ಮ ತಂಡದ ನಾಯಕನಿಗೆ ಬೇರೆ ಅನಿವಾರ್ಯ ಕೆಲಸವಿದ್ದ ಕಾರಣ ಅವನಿಗೆ ಬರಲು ಸಾಧ್ಯವಾಗದೆ ಕೊನೆಗೆ ಭರತ್ ಸರ್ ಅವರಿಗೆ ವಿಷಯ ತಿಳಿಸಿದಾಗ ಅವರು ನನ್ನನ್ನು ಬರಲು ಹೇಳಿ ನಾನು ಬಂದು ಹೋಗುವವರೆಗೆ ಸ್ಕೌಟ್ಸ್ ಭವನದ ಕಚೇರಿಯಲ್ಲೇ ಇದ್ದು ಎಲ್ಲಾ ದಾಖಲೆಗಳನ್ನು ಅವರ ಬಳಿ ನಾನು ಕೊಟ್ಟು ಹೋಗುವವರೆಗೆ ಮುತುವರ್ಜಿ ವಹಿಸಿದರು. ನಾನು ಅಂದು ಒಂದೇ ಒಂದು ಸಮಸ್ಯೆಯಾಗದೆ ಆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದೆ. ಮತ್ತೆ ಕೆಲವು ಶಿಬಿರಗಳಲ್ಲಿ ನಮ್ಮ ಭೇಟಿಯಾಗಿತ್ತು. ನನಗೆ ಈಗಲು ನೆನಪಿಗೆ ಘಟನೆ ಅಂದರೆ ರಾಜ್ಯ ಪುರಸ್ಕಾರ ಉತ್ತೀರ್ಣನಾಗಿ ರಾಷ್ಟ್ರಪತಿ ಪುರಸ್ಕಾರದ ಪರೀಕ್ಷೆಗೆ ಅರ್ಜಿ ಹಾಕಲು ಎಂದು ಹೊರಟಾಗ ನಮ್ಮ ತಂಡದ ನಾಯಕನ ಹೊರತು ಬೇರೆ ಎಲ್ಲರೂ ಹಿಂದೆ ಮುಂದೆ ನೋಡಿದಾಗ. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯ ಅರ್ಜಿ ಭರ್ತಿ ಮಾಡಲು ಕಷ್ಟವಾಗುತ್ತದೆ. ನಮ್ಮ ಅರ್ಜಿಗಳನ್ನು ಹಲವು ಬಾರಿ ಸ್ಕೌಟ್ಸ್ ಭವನದಲ್ಲಿ ಮಾರ್ಗದರ್ಶಕರು ತಿರಸ್ಕರಿಸಿದ್ದರು. ಆದ್ದರಿಂದ ಬೇಸತ್ತು ಎಲ್ಲರೂ ಇನ್ನು ಪರೀಕ್ಷೆ ಬರೆಯುವುದೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಾಗ ನಾನು ಮತ್ತೆ ನಮ್ಮ ತಂಡದ ನಾಯಕ ಏನಾದರು ಆಗಲಿ ಪರೀಕ್ಷೆ ಎದುರಿಸುವ ಎಂದು ನಿರ್ಧಾರ ತೆಗೆದುಕೊಂಡು ಕೊನೆಯ ಬಾರಿ ಅರ್ಜಿ ಭರ್ತಿ ಮಾಡಿ ಗೊತ್ತಿಲ್ಲದ ಕಡೆ ಎಲ್ಲಾ ಬಿಟ್ಟು ಸ್ಕೌಟ್ಸ್ ಭವನದಲ್ಲಿ ಭರತ್ ಸರ್ ಅವರನ್ನು ಭೇಟಿ ಮಾಡಿ ಅವರ ಬಳಿ ಮಾರ್ಗದರ್ಶನ ಪಡೆಯಬೇಕೆಂದು ಹೋದಾಗ ಅವರು ನಮಗೆ ಏನೆಲ್ಲಾ ಮಾಡಬೇಕು, ತಪ್ಪು ಇದ್ದ ಕಡೆ ಸರಿ ಮಾಡಲು ಹೇಳಿ ನಮ್ಮ ಅರ್ಜಿ ಸ್ವೀಕಾರ ಆಗುವಂತೆ ಮಾಡಿದರು. ಅಂದು ನಮ್ಮ ಪರಿಸ್ಥಿತಿ ಮುಳುಗುತ್ತಿರುವ ಹಡಗಿನಂತೆ ಆಗಿತ್ತು,ಭರತ್ ಸರ್ ಅಂದು ನಮಗೆ ಸೂಕ್ತ ಮಾರ್ಗದರ್ಶನ ನೀಡಿ,ಸಹಾಯ ಮಾಡದಿದ್ದರೆ ನಾವು ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಖಂಡಿತವಾಗಿಯೂ ಅರ್ಜಿ ಹಾಕುತ್ತಿರಲಿಲ್ಲ, ನಮ್ಮ ಬ್ಯಾಚಿನ ಅದೃಷ್ಟ ಸರಿಯಿರಲಿಲ್ಲವೇನೋ ನಮ್ಮ ಬ್ಯಾಚಿನಿಂದ ಹಿಡಿದು ನಂತರ ಬಂದ ಎಲ್ಲಾ ಬ್ಯಾಚಿಗೂ ಪರೀಕ್ಷೆ ನಡೆಯಲಿಲ್ಲ. ಅದು ಇರಲಿ, ಏನೇ ಆದರು ಅಂದು ಭರತ್ ಸರ್ ನಮ್ಮನ್ನು ಕಾಪಾಡಿದರು. ಅದೇ ಅಭಿಮಾನ ನನಗೆ ಇಂದು ಅವರ ಮೇಲೆ ಇದೆ. ಸುಮಾರು ನಾಲ್ಕು ವರ್ಷಗಳ ಸ್ಕೌಟ್ಸ್ ಪಯಣದಲ್ಲಿ ಮಾರ್ಗದರ್ಶನ ನೀಡಿ,ಒಂದು ಕಲ್ಲನ್ನು ಶಿಲ್ಪಿ ಮೂರ್ತಿಯಾಗಿ ಪರಿವರ್ತಿಸುವಂತೆ ನಮ್ಮನ್ನು ತಯಾರು ಮಾಡಿದವರು ಭರತ್ ಸರ್.
ಫೋಟೋ ಕೃಪೆ: ಭರತ್ ಸರ್



ಭರತ್ ಸರ್ ಅವರಿಗೆ ಮಕ್ಕಳು ಎಂದರೆ ಎಷ್ಟು ಪ್ರೀತಿಯೋ ಅಷ್ಟೇ ಪ್ರಾಣಿಗಳ ಮೇಲೆ ಕೂಡ,ಅದರಲ್ಲೂ ನಾಯಿಗಳೆಂದರೆ ಆಯಿತು. ಆವಾಗಾವಾಗ ನಾಯಿ ಜೊತೆ ಆಡುತ್ತಿರುವ ಫೋಟೋಗಳನ್ನು ಹಂಚುತ್ತಾ ಇರುತ್ತಾರೆ ಭರತ್ ಸರ್.
ಇಂದು ಅವರ 31ನೇ ಹುಟ್ಟುಹಬ್ಬ.
ಆದ್ದರಿಂದ ಅವರನ್ನು ಸ್ಮರಿಸಿ ಅವರಿಗೆ ಶುಭಕೋರುವುದು ನನ್ನ ಕರ್ತವ್ಯ. ಹಾಗಾಗಿ ಈ ಲೇಖನವನ್ನು ಬರೆದೆ.
ಹುಟ್ಟುಹಬ್ಬದ ಶುಭಾಶಯಗಳು ಭರತ್ ಸರ್😍🥳🎉
🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!