ಏರ್ಟೆಲ್ ಏರ್ ಫೈಬರ್ ಸೇವೆಯ ಮಾಹಿತಿ ಹಾಗು ಒಂದು ವಿಮರ್ಶೆ!

 ಏರ್ಟೆಲ್ ಏರ್ ಫೈಬರ್ ಸೇವೆಯ ಮಾಹಿತಿ ಹಾಗು ಒಂದು ವಿಮರ್ಶೆ!

 

ಹಲವು ತಿಂಗಳ ಮೊದಲು ಜಿಯೋ ಏರ್ ಫೈಬರ್ ಬಳಸುತ್ತಿದ್ದ ನಾನು ಅದರ ಕಳಪೆ ಸೇವೆಯಿಂದ ಬೇಸೆತ್ತು ಏರ್ಟೆಲ್ ಏರ್ ಫೈಬರ್ ಬಳಸಲು ಆರಂಭಿಸಿದೆ. ಸೆಪ್ಟೆಂಬರ್ ತಿಂಗಳಿನಿಂದ ಏರ್ಟೆಲ್ ಏರ್ ಫೈಬರ್ ಬಳಸಲು ಆರಂಭಿಸಿದೆ. ಇದರ ಮಾಹಿತಿ,ನನ್ನ ಅನುಭವ ಹೇಳುವ ಮೊದಲು ಈ ಏರ್ ಫೈಬರ್ ಎಂದರೇನು ಅಂತ ತಿಳಿದುಕೊಳ್ಳುವ.
ಏರ್ ಫೈಬರ್ ಎನ್ನುವುದು ಒಂದು ಕ್ರಾಂತಿಕಾರಿ ತಂತ್ರಜ್ಞಾನವಾಗಿದ್ದು, ಇದು ರೇಡಿಯೊ ತರಂಗಗಳ ಮೂಲಕ ತ್ವರಿತ ಮತ್ತು ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ. ಫೈಬರ್ ಆಪ್ಟಿಕ್ ಕೇಬಲ್‌ಗಳ ಅಗತ್ಯವಿಲ್ಲದೆ, ಏರ್ ಫೈಬರ್ ಸಾಂಪ್ರದಾಯಿಕ ಇಂಟರ್ನೆಟ್ ಸೇವೆಗಳಿಗೆ ಉತ್ತಮ ಪರ್ಯಾಯವಾಗಿದೆ.

ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಮತ್ತು ದೂರದ ಸಮುದಾಯಗಳಿಗೆ ತ್ವರಿತ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಏರ್ ಫೈಬರ್ ಅತ್ಯುತ್ತಮ ಪರಿಹಾರವಾಗಿದೆ. ಫೈಬರ್ ಕೇಬಲ್‌ಗಳನ್ನು ಎಳೆದು ಸಂಪರ್ಕ ಕೊಡುವ ಅಗತ್ಯವಿಲ್ಲದ ಕಾರಣ, ಏರ್ ಫೈಬರ್ ಕಡಿಮೆ ವೆಚ್ಚದಲ್ಲಿ ಸಂಪರ್ಕ ಪಡೆಯಬಹುದು.
ತಾತ್ಕಾಲಿಕ ಈವೆಂಟ್‌ಗಳು, ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ತುರ್ತು ಪರಿಸ್ಥಿತಿಗಳಿಗೆ ತ್ವರಿತ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಏರ್ ಫೈಬರ್ ಅನ್ನು ಸುಲಭವಾಗಿ ಸ್ಥಾಪಿಸಬಹುದು ಮತ್ತು ಅಳವಡಿಸಬಹುದು.
ಸೆಲ್ ಟವರ್‌ಗಳು ಮತ್ತು ವೈರ್‌ಲೆಸ್ ನೆಟ್‌ವರ್ಕ್‌ಗಳಿಗೆ ಹೆಚ್ಚಿನ ಬ್ಯಾಂಡ್‌ವಿಡ್ತ್ ಸಂಪರ್ಕವನ್ನು ಒದಗಿಸಲು ಏರ್ ಫೈಬರ್ ಅನ್ನು ಬಳಸಬಹುದು. ಈ ಬ್ಯಾಕ್‌ಹಾಲ್ ಸಂಪರ್ಕಗಳು ಉತ್ತಮ ಡೇಟಾ ವೇಗ ಮತ್ತು ಕಡಿಮೆ ಲೇಟೆನ್ಸಿಯನ್ನು ಖಚಿತಪಡಿಸುತ್ತವೆ.

ಏರ್ ಫೈಬರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಆಂಟೇನಾ


ಏರ್ ಫೈಬರ್ ಅಲ್ಲಿ ಎರಡು ಮುಖ್ಯ ಭಾಗಗಳು ಇದೆ.
ಟ್ರಾನ್ಸ್ಮಿಟರ್‌ಗಳು: ಟ್ರಾನ್ಸ್ಮಿಟರ್‌ಗಳು ಡೇಟಾವನ್ನು ಮೊಬೈಲ್ ಟವರಿನಿಂದ ರೇಡಿಯೊ ತರಂಗಗಳಾಗಿ ಪ್ರಸಾರ ಮಾಡುತ್ತವೆ.
ರಿಸೀವರ್‌ಗಳು: ರಿಸೀವರ್‌ಗಳು ರೇಡಿಯೊ ತರಂಗಗಳನ್ನು ಸ್ವೀಕರಿಸಿ ಡಿಜಿಟಲ್ ಡೇಟಾವಾಗಿ ಪರಿವರ್ತಿಸುತ್ತವೆ.
ಟ್ರಾನ್ಸ್ಮಿಟರ್‌ಗಳು ಮತ್ತು ರಿಸೀವರ್‌ಗಳು ಉನ್ನತ-ಫ್ರೀಕ್ವೆನ್ಸಿ ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ಹೆಚ್ಚಿನ ಡೇಟಾ ಸಾಮರ್ಥ್ಯ ಮತ್ತು ಕಡಿಮೆ ಲೇಟೆನ್ಸಿಯನ್ನು ಒದಗಿಸುತ್ತದೆ. ಉತ್ತಮ ಕಾರ್ಯಕ್ಷಮತೆಗಾಗಿ, ಟ್ರಾನ್ಸ್ಮಿಟರ್ ಮತ್ತು ರಿಸೀವರ್ ನಡುವೆ ನೇರ ದೃಷ್ಟಿ ಸಂಪರ್ಕ (ಲೈನ್ ಆಫ್ ಸೈಟ್) ಅಗತ್ಯವಿರುತ್ತದೆ.
ಗುಡ್ಡಗಾಡುಗಳ ಮಧ್ಯೆ ಇರುವ ನಮ್ಮ ಹಳ್ಳಿಗಳಿಗೆ ವೇಗದ ಇಂಟರ್‌ನೆಟ್ ಸೇವೆ ಪಡೆಯಲು ಏರ್ ಫೈಬರ್ ಒಂದು ಉತ್ತಮ ಸೇವೆ.

ಭಾರತದಲ್ಲಿ ಮೊದಲ ಬಾರಿಗೆ ಯಾರು ಏರ್ ಫೈಬರ್ ಸೇವೆ ಆರಂಭಿಸಿದರು?

ಭಾರತದಲ್ಲಿ ಮೊದಲ ಏರ್ ಫೈಬರ್ ಸೇವೆಯನ್ನು 2010 ರಲ್ಲಿ ಬಿಎಸ್‌ಎನ್‌ಎಲ್ ಪ್ರಾರಂಭಿಸಿತು. ಬಿಎಸ್‌ಎನ್‌ಎಲ್ ಏರ್ ಫೈಬರ್(ಈಗ ಭಾರತ್ ಏರ್ ಫೈಬರ್) ಸೇವೆ ಈಗ ದೇಶದ ಎಲ್ಲಾ ಭಾಗಗಳಲ್ಲಿ ಲಭ್ಯವಿದೆ. ಬಿಎಸ್‌ಎನ್‌ಎಲ್ ಬಳಿಕ ಪ್ರಸ್ತುತ ಜಿಯೋ,ಏರ್ಟೆಲ್ ಏರ್ ಫೈಬರ್ ಸೇವೆ ಆರಂಭಿಸಿದೆ.

ಏರ್ಟೆಲ್ ಏರ್ ಫೈಬರಿನ ಬಗ್ಗೆ ಮಾಹಿತಿ:
ಭಾರ್ತಿ ಏರ್‌ಟೆಲ್ ಸಂಸ್ಥೆಯು 2023 ರ ಆಗಸ್ಟ್‌ನಲ್ಲಿ ಭಾರತದಲ್ಲಿ ತನ್ನ ಏರ್‌ಫೈಬರ್ ಸೇವೆಯನ್ನು ಪ್ರಾರಂಭಿಸಿತು. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್‌ವು ಫಿಕ್ಸ್ಡ್ ವೈರ್‌ಲೆಸ್ ಆಕ್ಸೆಸ್ (FWA) ತಂತ್ರಜ್ಞಾನವನ್ನು ಬಳಸುತ್ತದೆ. ಇದು ಏರ್‌ಟೆಲ್‌ನ 5ಜಿ ಪ್ಲಸ್ ನೆಟ್‌ವರ್ಕ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಸೇವೆಯು ಫೈಬರ್ ಸಂಪರ್ಕ ಲಭ್ಯವಿಲ್ಲದ ಪ್ರದೇಶಗಳಲ್ಲಿ, ವಿಶೇಷವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ, ಹೈ-ಸ್ಪೀಡ್ ಇಂಟರ್ನೆಟ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ.





ಏರ್‌ಫೈಬರ್ ಕಾರ್ಯನಿರ್ವಹಿಸುವ ವಿಧಾನ:
ಸಮೀಪದ ಮೊಬೈಲ್ ಟವರ್‌ನಿಂದ ಡೇಟಾವನ್ನು ಟ್ರಾನ್ಸ್ಮಿಟರ್ ಮೂಲಕ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಬೇಕಾದ ಸ್ಥಳದಲ್ಲಿ ಅಳವಡಿಸಿರುವ ರಿಸೀವರ್‌ಗೆ (ಆಂಟೇನಾ) ಕಳುಹಿಸಲಾಗುತ್ತದೆ. ಈ ರಿಸೀವರ್ ಅನ್ನು ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಬೇಕಾದ ಸ್ಥಳದಲ್ಲಿ ಸಿಗ್ನಲ್ ಉತ್ತಮವಾಗಿ ಸಿಗುವ ಸ್ಥಳದಲ್ಲಿ ಮೊಬೈಲ್ ಟವರ್‌ನ ದಿಕ್ಕಿಗೆ ಮುಖ ಮಾಡಿ ಅಳವಡಿಸುತ್ತಾರೆ. ರಿಸೀವರ್‌ನಿಂದ ಸಿಗ್ನಲ್ ಕೇಬಲಿನ ಮೂಲಕ ರೂಟರ್‌ಗೆ ಬಂದು, ಅದರಿಂದ ಇಂಟರ್ನೆಟ್ ಆ ಸ್ಥಳದಲ್ಲಿ ಪ್ರಸರಣಗೊಳ್ಳುತ್ತದೆ. ಈ ಸೇವೆ ಬಳಸಲು 5ಜಿ ಇಂಟರ್ನೆಟ್ ಲಭ್ಯತೆ ಅಗತ್ಯವಿದೆ. 5ಜಿ ಇಲ್ಲದ ಜಾಗದಲ್ಲಿ 4ಜಿ ಇಂಟರ್ನೆಟ್ ಇದ್ದರೂ ಕಾರ್ಯನಿರ್ವಹಿಸುತ್ತದೆ.

ರೂಟರ್

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಸೇವೆಯನ್ನು ಪಡೆಯುವುದು ಹೇಗೆ?

1. ಏರ್‌ಟೆಲ್ ವೆಬ್‌ಸೈಟ್‌ಗೆ ಭೇಟಿ ನೀಡಿ:
https://www.airtel.in/plans/airfiber ಗೆ ಭೇಟಿ ನೀಡಿ.
ನಿಮ್ಮ ಸ್ಥಳದಲ್ಲಿ ಲಭ್ಯತೆಯನ್ನು ಪರಿಶೀಲಿಸಿ.
ಲಭ್ಯವಿದ್ದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಯೋಜನೆಯನ್ನು ಆಯ್ಕೆಮಾಡಿ.
ಪಾವತಿಸಿ ಮತ್ತು ಏರ್ ಫೈಬರ್ ಅಳವಡಿಸಲು ಸೂಕ್ತ ಸಮಯವನ್ನು ಆಯ್ಕೆ ಮಾಡಿ.

2. ಹತ್ತಿರದ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡಿ:
ನಿಮ್ಮ ಹತ್ತಿರದ ಏರ್‌ಟೆಲ್ ಸ್ಟೋರ್‌ಗೆ ಭೇಟಿ ನೀಡಿ.
ಸಿಬ್ಬಂದಿ ನಿಮ್ಮ ಅರ್ಜಿಯನ್ನು ಸಲ್ಲಿಸಲು ಮತ್ತು ನಿಮ್ಮ ಸ್ಥಳದಲ್ಲಿ ಏರ್‌ಫೈಬರ್ ಅಳವಡಿಸಲು ಸಹಾಯ ಮಾಡುತ್ತಾರೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಏರ್‌ಫೈಬರ್ ಪ್ಲಾನ್‌ಗಳು:

1.699 ರೂ: 40 Mbps ವೇಗ, 3.3 TB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ (20+ OTT), 350+ ಟಿವಿ ಚಾನೆಲ್‌ಗಳು.

2.799 ರೂ: 100 Mbps ವೇಗ, 3.3 TB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ (20+ OTT), 350+ ಟಿವಿ ಚಾನೆಲ್‌ಗಳು.

3.899 ರೂ: 100 Mbps ವೇಗ, 3.3 TB ಡೇಟಾ, ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ಲೇ (20+ OTT), 350+ ಟಿವಿ ಚಾನೆಲ್‌ಗಳು.

ನನ್ನ ಅನುಭವ:

ಏರ್ಟೆಲ್ ಏರ್ ಫೈಬರ್ ಸೇವೆ ಪುತ್ತೂರಿನಲ್ಲಿ ತಡವಾಗಿ ಆರಂಭಗೊಂಡದ್ದು. ನನಗೆ ಇಂಟರ್ನೆಟ್ ಸೇವೆ ತುರ್ತಾಗಿ ಬೇಕಾದ ಕಾರಣ ಜಿಯೋ ಏರ್ ಫೈಬರ್ ಸೇವೆ ಬಳಸಲು ಆರಂಭಿಸಿದ್ದೆ. ಆದರೆ ಜಿಯೋದವರ ಸೇವೆ ತೀರಾ ಕಳಪೆ ಮಟ್ಟಕ್ಕೆ ಇಳಿದ ಬಳಿಕ ಬೇಸೆತ್ತ ನಾನು ನನ್ನ ಮಾವನ ಬಳಿ ಈ ವಿಷಯ ಹೇಳಿದಾಗ ಏರ್ಟೆಲ್ ಸೇವೆ ಆರಂಭಗೊಂಡ ಬಗ್ಗೆ ಹೇಳಿದರು. ನಾನು ತಕ್ಷಣ ಪೋಷಕರ ಬಳಿ ಚರ್ಚಿಸಿ ಏರ್ಟೆಲ್ ಏರ್ ಫೈಬರ್ ಸೇವೆ ಬಳಸುವ ಬಗ್ಗೆ ನಿರ್ಧರಿಸಿ ಜಿಯೋ ಏರ್ ಫೈಬರ್ ಸಂಪರ್ಕ ಕಡಿತಗೊಳಿಸಿ ಏರ್ಟೆಲಿಗೆ ಅರ್ಜಿ ಸಲ್ಲಿಸಿದೆ. ಆ ಸಮಯದಲ್ಲಿ ಏರ್ಟೆಲ್ ಏರ್ ಫೈಬರ್ ಸೇವೆಗೆ ಬಹಳ ಬೇಡಿಕೆಯಿದ್ದ ಕಾರಣ ಬುಕ್ ಮಾಡಿದ ನಾನು 7 ದಿನಗಳ ಕಾಲ ಕಾದು 7ನೇ ದಿನ ಖ್ಯಾತ ಯಕ್ಷಗಾನ ಕಲಾವಿದ, ಏರ್ಟೆಲ್ ಏರ್ ಫೈಬರ್,ಡಿಶ್ ವಿತರಕರಾದ ಶ್ರೀ ಶಶಿಕಿರಣ್ ಕಾವು ಅವರು ಬಂದು ಏರ್ ಫೈಬರ್ ಅನ್ನು ಅಳವಡಿಸಿಕೊಟ್ಟರು. ವೇಗದ ಲೆಕ್ಕ ನೋಡುತ್ತಿದ್ದರೆ ಈ ಲೇಖನ ಬರೆಯುವ ಮೊದಲು ವೇಗದ ಪರೀಕ್ಷೆ ಮಾಡಿದ್ದೆ. ನನ್ನದು 40mbps ವೇಗದ ಪ್ಲಾನ್. ನಿರಂತರವಾಗಿ 40mbps ತನಕ ಅಥವ ಅದಕ್ಕಿಂತಲೂ ಜಾಸ್ತಿಯೇ ಇಂಟರ್‌ನೆಟ್ ವೇಗ ಸಿಗುತ್ತದೆ. ಸಾಮಾನ್ಯ ಕೆಲಸಗಳಿಗೆ ಈ ವೇಗ ಸಾಕಾಗುತ್ತದೆ. ಕಚೇರಿ ಕೆಲಸಗಳಿಗೆ,ಕಂಪ್ಯೂಟರ್ ಮೂಲಕ ಹೆಚ್ಚು ಕೆಲಸಗಳು ಮಾಡಲು ಜಾಸ್ತಿ ವೇಗ ಬೇಕಾದರೆ 100mbps ಪ್ಲಾನ್ ಆಯ್ದುಕೊಳ್ಳಬಹುದು. ಏರ್ಟೆಲ್ ನೀಡುವ ರೂಟರ್ ವೈಪೈ 6 ರೂಟರ್. ಈ ರೂಟರ್ ಬಳಸುವುದರಿಂದ ವೇಗದ ಇಂಟರ್‌ನೆಟ್ ಪಡೆಯಬಹುದು ಹಾಗು ಹೆಚ್ಚು ಸಾಧನಗಳ ಮೂಲಕ ಇಂಟರ್‌ನೆಟ್ ಬಳಸಬಹುದು.ಈ ರೂಟರಿಗೆ ಹೆಚ್ಚು ಸಾಧನಗಳನ್ನು(ಮೊಬೈಲ್,ಲ್ಯಾಪ್‌ಟಾಪ್,ಕಂಪ್ಯೂಟರ್) ನಿಭಾಯಿಸುವ ಸಾಮರ್ಥ್ಯವಿದೆ.

ಸೆಟ್ಅಪ್ ಬಾಕ್ಸ್

ನನ್ನದು ಏರ್ಟೆಲ್ ಬ್ಲಾಕ್ ಪ್ಲಾನ್ ಆದ ಕಾರಣ ಈ ಏರ್ ಫೈಬರ್ ರೂಟರ್,ಆಂಟೇನ ಜೊತೆಗೆ ಸೆಟ್ ಅಪ್ ಬಾಕ್ಸ್,ಡಿಶ್ ಕೂಡ ಸಿಕ್ಕಿತು. ಇದನ್ನು ಬಳಸಿ ಪ್ಲಾನಿಗೆ ಅನುಗುಣವಾಗಿ ಏರ್ಟೆಲ್ ಡಿ2ಎಚ್ ಅಲ್ಲಿ ಸಿಗುವ ಎಲ್ಲಾ ಚ್ಯಾನಲ್,ಏರ್ಟೆಲ್ ಎಕ್ಸ್‌ಸ್ಟ್ರೀಮ್, ಜಿಯೋ ಸಿನಿಮಾ ಹಾಗು ಎಲ್ಲಾ ಒಟಿಟಿಗಳ ಸೇವೆ ಪಡೆಯಬಹುದು. ನಾನು ಹೆಚ್ಚು ನೋಡುವುದು ಸ್ಪೋರ್ಟ್ ಚ್ಯಾನಲ್,ಯೂಟ್ಯೂಬ್ ವೀಡಿಯೊಗಳನ್ನು.ಏರ್ಟೆಲ್ ಡಿ2ಎಚ್ ಒಟ್ಟಿಗೆ ಇರುವ ಕಾರಣ ಸ್ಟಾರ್ ಸ್ಪೋರ್ಟ್ಸ್ ಚ್ಯಾನಲ್ಗಳು ಕೂಡ ಲಭ್ಯವಿದೆ. ಇದು ಜಿಯೋ ಫೈಬರ್ ಅಲ್ಲಿ ಸಿಗುವ ಜಿಯೋ ಟಿವಿ+ಕ್ಕಿಂತ ಒಂದು ಉತ್ತಮ ಸೇವೆ.ಆಂಟೇನ ಮೂಲಕ ಇಂಟರ್‌ನೆಟ್ ನೀಡುವ ಕಾರಣ ಇಂಟರ್‌ನೆಟ್ ವೇಗ ಮೋಡ ಕವಿದ ವಾತಾವರಣ,ಜೋರು ಮಳೆ,ಗುಡುಗು-ಸಿಡಿಲು ಇರುವಾಗ ವ್ಯತ್ಯಯವಾದರೂ ಆಗಬಹುದು. ಡಿಶ್ ಆದರೂ ಅಷ್ಪೇ. ಅದರ ಬಗ್ಗೆ ನಾನು ಹೇಳಬೇಕಿಂದಿಲ್ಲ. ಒಂದೆರಡು ದಿನಗಳಲ್ಲಿ ನನಗೆ ಇಂಟರ್ನೆಟ್ ವೇಗದಲ್ಲಿ ವ್ಯತ್ಯಾಸ ಕಂಡು ಬಂದಿದ್ದೂ ಇದೆ. ಹೀಗಾಗಿ ಎಲ್ಲಾ ದಿನಗಳಲ್ಲಿಯೂ ಜಾಸ್ತಿ ವೇಗ ಸಿಗಬಹುದು ಎಂದು ಹೇಳಲು ಸಾಧ್ಯವಿಲ್ಲ.ಏನಿದ್ದರೂ ಹತ್ತಿರದ ಟವರಿನಿಂದ ಸಿಗುವ ಇಂಟರ್ನೆಟ್ ವೇಗದ ಮೇಲೆ ಇದು ಅವಲಂಬಿತವಾಗಿರುತ್ತದೆ.ಪುತ್ತೂರಿನಲ್ಲಿ ನಾನು ಗಮನಿಸಿದ ಹಾಗೆ ಏರ್ಟೆಲ್ 5ಜಿಯ ಗರಿಷ್ಠ ವೇಗ ಸಿಗುವ ಟವರ್‌ನಲ್ಲಿ ಕೃಷ್ಣನಗರದ ಟವರ್ ಕೂಡ ಒಂದು. ಪುತ್ತೂರಿನಲ್ಲಿ ಏರ್ಟೆಲ್ 5ಜಿ ಆರಂಭಗೊಂಡಾಗ ಮೊದಲ ಹಂತದಲ್ಲಿ ಕೃಷ್ಣನಗರ ಟವರ್‌ಗೆ ಕೂಡ 5ಜಿ ಸಾಧನಗಳನ್ನು ಅಳವಡಿಸಿ 5ಜಿ ಸೇವೆ ಆರಂಭಿಸಿದ್ದರು ಅಂತ ಮಾಹಿತಿಯಿತ್ತು.ಹೀಗಾಗಿ ಮೊಬೈಲಿನಲ್ಲೂ ಏರ್ಟೆಲ್ 5ಜಿ ವೇಗ ಉತ್ತಮವಾಗಿ ಸಿಗುತ್ತದೆ. ಆದರೂ ಲ್ಯಾಪ್ಟಾಪ್,ಹೆಚ್ಚು ಮೊಬೈಲ್ ಬಳಸುವಾಗ ವೈಫೈ ಅಗತ್ಯ. ಒಟ್ಟಿನಲ್ಲಿ ನೋಡುವುದಾದರೆ ಏರ್ಟೆಲ್ ಏರ್ ಫೈಬರ್ ಸೇವೆ ನನಗೆ ಬಹಳ ಇಷ್ಟವಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇಬಲ್ ಫೈಬರ್ ಹಾಗು ಏರ್ ಫೈಬರ್ ಮಧ್ಯೆ ಹೋಲಿಸಿದರೆ ಅಳವಡಿಸುವ ವೆಚ್ಚ ಕೇಬಲ್ ಫೈಬರಿಗೆ ಜಾಸ್ತಿ ಆದರೂ ಯಾವಾಗಲೂ ಒಂದೇ ವೇಗವನ್ನು ಪಡೆಯಬಹುದು. ಏರ್ ಫೈಬರ್ ಅಲ್ಲಿ ವೇಗ ಕೆಲವೊಮ್ಮೆ ವ್ಯತ್ಯಯ ಆಗುತ್ತದೆ. ಹೀಗಾಗಿ ಹೆಚ್ಚಿನವರು ಕೇಬಲ್ ಫೈಬರ್ ಅನ್ನು ಇಷ್ಟಪಡುತ್ತಾರೆ. ಆದರೆ ನೀವು ಏರ್ ಫೈಬರ್ ಅಳವಡಿಸುವ ಯೋಚನೆಯಲ್ಲಿದ್ದರೆ ಖಂಡಿತ ನೋಡಬಹುದು.

ಡಿಶ್

ಈಗಾಗಲೇ ಬಿಎಸ್‌ಎನ್‌ಎಲ್ ಫೈಬರ್/ಏರ್ ಫೈಬರ್ ದ.ಕ ಜಿಲ್ಲೆಯ ಬಹುತೇಕ ಕಡೆ ಲಭ್ಯವಿದೆ. ಜಿಯೋ,ಏರ್ಟೆಲ್ ಈಗಾಗಲೇ ತನ್ನ ಫೈಬರ್ ಸೇವೆಯನ್ನು ಮಂಗಳೂರು,ಪುತ್ತೂರು ಸೇರಿ ಹಲವು ಕಡೆ ಆರಂಭಿಸಿದೆ. ಏರ್ಟೆಲ್ ಏರ್ ಫೈಬರ್ ಪ್ರಸ್ತುತ ಮಂಗಳೂರು,ಪುತ್ತೂರು,ಉಪ್ಪಿನಂಗಡಿ,ಮಿತ್ತೂರು,ಬಿ.ಸಿ ರೋಡು,ಮಾಣಿ,ಕಡಬ,ಸುಳ್ಯ ತಾಲೂಕಿನ ಹಲವಾರು ಕಡೆಗಳಲ್ಲಿ,ಜಿಲ್ಲೆಯಲ್ಲಿ 5ಜಿ ಇಂಟರ್‌ನೆಟ್ ಲಭ್ಯವಿರುವ ಕಡೆಗಳಲ್ಲಿ ಈಗಾಗಲೇ ಆರಂಭಿಸಿದೆ ಹಾಗು ಹಂತಹಂತವಾಗಿ 4ಜಿ,5ಜಿ ನೆಟ್‌ವರ್ಕ್ ಲಭ್ಯವಿರುವ ಎಲ್ಲಾ ನಗರಗಳು,ಹಳ್ಳಿಗಳಿಗೆ ಫೈಬರ್/ಏರ್ ಫೈಬರ್ ಸೇವೆಯನ್ನು ವಿಸ್ತರಿಸುತ್ತಿದೆ. ಏರ್ಟೆಲ್ ಏರ್ ಫೈಬರ್ ಅನ್ನು 4ಜಿ ಸೇವೆ ಲಭ್ಯವಿರುವ ಕಡೆಯೂ ಖಂಡಿತವಾಗಿ ಅಳವಡಿಸಬಹುದು. ಆದರೆ ಇಂಟರ್ನೆಟ್ ವೇಗ ಮಾತ್ರ 4ಜಿಯಲ್ಲಿ ಸಿಗುವ ಗರಿಷ್ಠ ವೇಗದಷ್ಟು ಮಾತ್ರ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಥವ ಏರ್ಟೆಲ್ ಫೈಬರ್/ಏರ್ ಫೈಬರ್/ಡಿಶ್ ಸೇವೆ ಪಡೆಯಲು ಶ್ರೀ ಶಶಿಕಿರಣ್ ಕಾವು ಅವರನ್ನು ಸಂಪರ್ಕಿಸಬಹುದು(ಮೊಬೈಲ್ ಸಂಖ್ಯೆ:-8660492279,9972673035).
ಈ ಲೇಖನದ ಮೂಲಕ ನಿಮಗೆ ಬೇಕಾದ ಮಾಹಿತಿ,ನಿಮ್ಮ ಸಂದೇಹಗಳಿಗೆ ನಾನು ಉತ್ತರ ನೀಡಿದ್ದೇನೆ ಎಂದು ಭಾವಿಸುತ್ತೇನೆ.ಏರ್‌ಟೆಲ್‌ ಫೈಬರ್/ಏರ್ ಫೈಬರ್ ಸೇವೆ ಪಡೆಯುವ ಆಲೋಚನೆಯಿದ್ದರೆ ಖಂಡಿತವಾಗಿಯೂ ಪಡೆಯಿರಿ!
ಧನ್ಯವಾದಗಳು
🖊ಶ್ರೀಕರ ಬಿ





Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!