ಕಾಲೇಜಿನಲ್ಲಿ ನಡೆದ ಬ್ಲಾಕ್‌ಚೈನ್‌ ತಂತ್ರಜ್ಞಾನ ಕಾರ್ಯಗಾರ!

ಕಾಲೇಜಿನಲ್ಲಿ ನಡೆದ ಬ್ಲಾಕ್‌ಚೈನ್‌ ತಂತ್ರಜ್ಞಾನ ಕಾರ್ಯಗಾರ!

ಜೀವನದಲ್ಲಿ ಕಲಿಕೆ ಎಂಬುದು ಒಂದು ನಿರಂತರ ಪ್ರಕ್ರಿಯೆ! ವಿದ್ಯಾರ್ಥಿ ಜೀವನದಲ್ಲಿ ಶಾಲ-ಕಾಲೇಜುಗಳಲ್ಲಿ ಪಾಠಗಳನ್ನು ಕಲಿತರೆ,ಅದರ ಹೊರಗೆ ಕೂಡ ಪ್ರತಿದಿನ ಮನುಷ್ಯ ಏನಾದರು ಕಲಿಯುತ್ತಲೇ ಇರುತ್ತಾನೆ.  

ಪ್ರಸ್ತುತ ನನ್ನ ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ನನ್ನ ಕೋರ್ಸಿಗೆ ಅನುಗುಣವಾಗಿ ಕಾಲೇಜಿನ ಉಪನ್ಯಾಸಕರು ಪ್ರತಿದಿನ ಮಾಡುತ್ತಿದ್ದರೆ,ಆ ಕೋರ್ಸಿನಲ್ಲಿ ಇರುವುದು ಹೊರತುಪಡಿಸಿ ಉಳಿದ ವಿಷಯಗಳನ್ನು ಒಬ್ಬ ವಿದ್ಯಾರ್ಥಿ ಬೇರೆ ಸಂಪನ್ಮೂಲಗಳ ಮುಖಾಂತರ ಕಲಿಯುತ್ತಾನೆ. ಅದೇ ಕಾಲೇಜಿನಲ್ಲಿ ಕಾರ್ಯಾಗಾರಗಳನ್ನು ನಡೆಸಿ ಅಲ್ಲಿ ಸಿಗುವ ಜ್ಞಾನದ ಮಹತ್ವವು ಬೇರೆಯದೇ ಆಗಿರುತ್ತದೆ. ಕಳೆದ ವಾರ ನನ್ನ ಕಾಲೇಜನಲ್ಲಿ ನಾನು ಕಲಿಯುತ್ತಿರುವ ಮಾಹಿತಿ ತಂತ್ರಜ್ಞಾನ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ, ದಿ ಫಿಯೋನಿಕ್ಸ್ ಗಿಲ್ಡ್ ಇದರ ಸಹಭಾಗಿತ್ವದಲ್ಲಿ "ಬ್ಲಾಕ್ ಚೈನ್ ತಂತ್ರಜ್ಞಾನ ಮತ್ತು ಅದರ ಅನ್ವಯಗಳು" ಈ ವಿಷಯದಲ್ಲಿ ನಡೆದ ಎರಡು ದಿನದ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ನನಗೆ ಲಭಿಸಿತು.


  ಕಳೆದ ವಾರ ದಿನಾಂಕ ಆ.11 ಹಾಗು ಆ.12ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ತಂತ್ರಜ್ಞಾನ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಬ್ಲಾಕ್ ಚೈನ್ ತಂತ್ರಜ್ಞಾನದ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು,ಬ್ಲಾಕ್ ಚೈನ್ ವಿಷಯದಲ್ಲಿ ಇನ್ನು ಹೆಚ್ಚು ಕಲಿಯಲು ಪ್ರೋತ್ಸಾಹಿಸಲು ಕಾರ್ಯಾಗಾರ ನಡೆಸಲಾಗಿತ್ತು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸ್ತುತ ಇನ್‌ಸ್ಟಾಕ್ರಿಪ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮತ್ತು ಧಿವೇ ನೆಟ್‌ವರ್ಕ್‌ಗಳೊಂದಿಗೆ ಸಂಯೋಜಿತರಾಗಿರುವ ಶ್ರೀ ಆದಿ ಭಗವತ್,ಡಿಲೋಯ್ಟ್, ಹಾಷ್ಡ್ಇನ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ,ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಶ್ರೀ ಶಾಮ್ ಪ್ರಕಾಶ್ ಕೆ ಮತ್ತು ಸೆಕ್ಯೂರ್ಡ್ ಆಪ್ ನಿಂದ ಶ್ರೀ ಎಸ್ ತಿರುಮುರುಗನ್ ಕಾರ್ಯಗಾರವನ್ನು ನಡೆಸಿಕೊಟ್ಟರು. ಇವರೆಲ್ಲ ದಿ ಫೀನಿಕ್ಸ್ ಗಿಲ್ಡ್ ಇದರ ಸದಸ್ಯರು. ಆದಿ ಭಗವತ್ ದಿ ಫೀನಿಕ್ಸ್ ಗಿಲ್ಡ್ ಇದರ ಬೆಂಗಳೂರು ವಿಭಾಗದ ಮುಖ್ಯಸ್ಥರಾಗಿದ್ದರೆ, ಎಸ್ ತಿರುಮುರುಗನ್ ಚೈನ್ನೈ ವಿಭಾಗದ ಮುಖ್ಯಸ್ಥರು.


 

 ಎಸ್. ತಿರುಮುರುಗನ್ ಇವರ ವಿಶೇಷತೆ ಏನೆಂದರೆ ಇವರು 20 ವರ್ಷದ ತರುಣ. ತಮಿಳುನಾಡಿನಲ್ಲಿ ಮೂರನೆಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ಈಗಾಗಲೇ ಒಂದು ಕಂಪೆನಿಯಲ್ಲಿ ಇಂಟರ್ನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಜೊತೆಗೆ ತಮ್ಮದೆ ಸ್ಟಾರ್ಟ್ಅಪ್ ಅನ್ನು ತೆರೆಯುತ್ತಿದ್ದಾರೆ. ಹಲವಾರು ಹಾಕೊತಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ತಮ್ಮ ಜ್ಞಾನ ಭಂಡಾರದ ಮೂಲಕ ಇವರು ಈ ಕಾರ್ಯಗಾರದಲ್ಲಿ ಗಮನ ಸೆಳೆದರು.


 ಮೊದಲ ದಿನದ ಚಟುವಟಿಕೆಗಳಲ್ಲಿ ಶ್ರೀ ಎಸ್ ತಿರುಮುರುಗನ್ ಅವರು ದಿ ಫೀನಿಕ್ಸ್ ಗಿಲ್ಡ್ (TPG) ಇದರ ಪರಿಚಯ ಮಾಡಿದರು ಮತ್ತು ಬ್ಲಾಕ್‌ಚೈನ್‌ನ ಮೂಲಭೂತ ವಿಷಯಗಳ ಬಗ್ಗೆ ವಿವರಿಸಿದರು. ಅವರು ಬ್ಲಾಕ್‌ಚೈನ್ ಮತ್ತು ಅದರ ವಿಕಾಸದ ಹಂತಗಳ ಅವಲೋಕನ (ವೆಬ್ 1.0, ವೆಬ್ 2.0, ವೆಬ್ 3.0),ವೆಬ್ 2 ಮತ್ತು ವೆಬ್ 3 ನಡುವಿನ ವ್ಯತ್ಯಾಸಗಳು,ವಿತರಿಸಲಾದ ಲೆಡ್ಜರ್ ತಂತ್ರಜ್ಞಾನದ ಒಳನೋಟಗಳು ಮತ್ತು ಕೇಂದ್ರೀಕೃತ ಮತ್ತು ವಿತರಿಸಿದ ಲೆಡ್ಜರ್‌ಗಳ ನಡುವಿನ ಹೋಲಿಕೆಯ ಬಗ್ಗೆ ಚೆನ್ನಾಗಿ ವಿವರಿಸಿದರು.


 ಶ್ರೀ ಆದಿ ಭಗವತ್ ಅವರು ವಿತರಿಸಿದ ಲೆಡ್ಜರ್‌ಗಳ ಕಾರ್ಯನಿರ್ವಹಣೆಯನ್ನು ವಿವರಿಸಿದರು ಮತ್ತು ಬ್ಲಾಕ್‌ಚೈನ್‌ನ ಐತಿಹಾಸಿಕ ಪ್ರಗತಿಯನ್ನು ಪತ್ತೆಹಚ್ಚುವ ಬಿಟ್‌ಕಾಯಿನ್‌ನಂತಹ ಅಪ್ಲಿಕೇಶನ್‌ಗಳನ್ನು ಹೈಲೈಟ್ ಮಾಡಿದರು. ನೈಜ-ಪ್ರಪಂಚದ ಸನ್ನಿವೇಶದ ಮೂಲಕ ಸ್ಮಾರ್ಟ್ ಒಪ್ಪಂದಗಳಲ್ಲಿ ಬ್ಲಾಕ್‌ಚೈನ್‌ನ ಪಾತ್ರವನ್ನು ಅವರು ವಿವರಿಸಿದರು. ಶ್ರೀ ಶಾಮ್ ಪ್ರಕಾಶ್ ಅವರು ಮಧ್ಯವರ್ತಿಗಳನ್ನು ತೊಡೆದುಹಾಕಲು ಬ್ಲಾಕ್‌ಚೈನ್ ಅನ್ನು ಬಳಸಿಕೊಳ್ಳುವ ಪ್ರಯೋಜನಗಳನ್ನು ಚರ್ಚಿಸಿದರು ಮತ್ತು ಪ್ರಮುಖ ಪರಿಕಲ್ಪನೆಗಳನ್ನು ಒತ್ತಿಹೇಳಿದರು. ಜೊತೆಗೆ ಮೂಲಭೂತ ಬ್ಲಾಕ್ಚೈನ್ ತತ್ವಗಳು ಮತ್ತು ವಿತರಣೆ ಮತ್ತು ವಿಕೇಂದ್ರೀಕೃತ ವ್ಯವಸ್ಥೆಗಳ ನಡುವಿನ ವ್ಯತ್ಯಾಸಗಳು,ಹ್ಯಾಶಿಂಗ್‌ನ ವಿವರಣೆ, ಅಡಿಪಾಯದ ಬ್ಲಾಕ್‌ಚೈನ್ ಪರಿಕಲ್ಪನೆ, ವಿವಿಧ ಕ್ರಿಪ್ಟೋಗ್ರಫಿ ಪ್ರಕಾರಗಳ ಅವಲೋಕನ, ಅಗತ್ಯ ಬ್ಲಾಕ್ಚೈನ್ ಘಟಕಗಳ ಬಗ್ಗೆ ವಿವರಿಸಿದರು. ಶ್ರೀ ಆದಿ ಭಗವತ್ ಪೂರ್ಣ ನೋಡ್‌ಗಳು, ಭಾಗಶಃ ನೋಡ್‌ಗಳು ಮತ್ತು ನಾನ್ಸ್‌ನ ಪರಿಕಲ್ಪನೆಯನ್ನು ವಿವರಿಸಿದರು. ನಂತರ ಶ್ರೀ ಶಾಮ್ ಪ್ರಕಾಶ್ ಅವರು ಬ್ಲಾಕ್‌ಚೈನ್‌ನ ಪ್ರಾಯೋಗಿಕ ಯಂತ್ರಶಾಸ್ತ್ರವನ್ನು ಪ್ರದರ್ಶಿಸಿದರು. ಸಂಪನ್ಮೂಲ ವ್ಯಕ್ತಿಗಳು ಹೆಚ್ಚುವರಿ ಬ್ಲಾಕ್‌ಚೈನ್ ಅಪ್ಲಿಕೇಶನ್‌ಗಳು, ವ್ಯಾಲೆಟ್ ಬಳಕೆ ಮತ್ತು ಮುಂಬರುವ ಚಟುವಟಿಕೆಗಳಿಗೆ ಅಗತ್ಯವಾದ ಲ್ಯಾಪ್‌ಟಾಪ್ ಪೂರ್ವಾಪೇಕ್ಷಿತಗಳ ಮೇಲೆ ಬೆಳಕು ಚೆಲ್ಲಿದರು.

ಕಾರ್ಯಕ್ರಮದ ಎರಡನೇ ದಿನವು ಪ್ರಾಯೋಗಿಕ ಕಲಿಕೆಯ ಮೇಲೆ ಕೇಂದ್ರೀಕರಿಸಿತು, ಅಗತ್ಯ ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿತು. ವಿದ್ಯಾರ್ಥಿಗಳು ರೀಮಿಕ್ಸ್ ಐಡಿಇ ಅನ್ನು ಬಳಸಿಕೊಂಡು ಸಾಲಿಡಿಟಿ ಪ್ರೋಗ್ರಾಮಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರಲ್ಲದೇ, ಕಾಂಟ್ರಾಕ್ಟ್ ರಚನೆ ಮತ್ತು ಕಾರ್ಯಗಳನ್ನು ಪರಿಶೀಲಿಸಿದರು. ನುರಿತ ಬ್ಲಾಕ್‌ಚೈನ್ ಡೆವಲಪರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುವ ಬ್ಲಾಕ್‌ಚೈನ್ ಕ್ಷೇತ್ರದೊಳಗಿನ ವೃತ್ತಿ ಭವಿಷ್ಯಗಳ ಒಳನೋಟಗಳನ್ನು ಸಹ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳ ಬಳಿ ಹಂಚಿಕೊಂಡರು.


 
 
ಒಟ್ಟಿನಲ್ಲಿ ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಬ್ಲಾಕ್‌ಚೈನ್ ಬಗ್ಗೆ ಏನು ಗೊತ್ತಿಲ್ಲದೆ ನನಗಂತೂ ಅದರ ಬಗ್ಗೆ ಸ್ವಲ್ಪವಾದರು ಕಲಿಯುವ ಅವಕಾಶ ಲಭಿಸಿತು. ಅಷ್ಟೇ ಅಲ್ಲ ಈ ಕಾರ್ಯಾಗಾರದ ವರದಿಯನ್ನು ಬರೆದು,ಅದನ್ನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವಾಚಿಸುವ ಅವಕಾಶವೂ ನನಗೆ ಲಭಿಸಿತು. ಈ ಅವಕಾಶವನ್ನು ನನಗೆ ಕೊಟ್ಟ ಕಾರ್ಯಾಗಾರದ ಉಪನ್ಯಾಸ ಸಂಯೋಜಕರಾದ ಡಾ. ನವನೀತ್ ಭಾಸ್ಕರ್ ಸರ್, ಶ್ರೀಮತಿ ಅಖಿಲ ತೇಜಸ್ವಿ ಮೇಡಂ, ವಿಭಾಗದ ಮುಖ್ಯಸ್ಥರಾದ ಡಾ. ಮುಸ್ತಾಫ ಬಸ್ತಿಕೋಡಿ ಸರ್ ಇವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಅಷ್ಟೇ ಅಲ್ಲದೇ ನನ್ನ ಬರೆಯುವ ಹವ್ಯಾಸವನ್ನು ಮುಂದುವರಿಸಲು ಸದಾ ನನ್ನನ್ನು ಬೆಂಬಲಿಸುವ ಶ್ರೀ ರಿತೇಶ್ ಪಕ್ಕಳ ಸರ್ ಇವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಎರಡು ದಿನಗಳ ಕಾರ್ಯಾಗಾರದಲ್ಲಿ ಕಲಿತ ವಿಷಯಗಳು ಅಪಾರ,ಮೊದಲೇ ಹೇಳಿದಂತೆ ಈ ಕಲಿಯುವ ಪ್ರಕ್ರಿಯೆ ಇಲ್ಲಿಗೆ ಮುಗಿಯದೇ ನಿರಂತರ ಸಾಗುತ್ತಲೆ ಇರುತ್ತದೆ. ಬ್ಲಾಕ್‌ಚೈನ್‌ ಬಗ್ಗೆ ಇನ್ನು ಹೆಚ್ಚು ಕಲಿಯಲು ಇದೆ. ಆ ಅವಕಾಶವು ನನಗೆ ಲಭಿಸಲಿ ಎಂದು ನಾನು ಆಶಿಸುತ್ತೇನೆ.
ಧನ್ಯವಾದಗಳು
ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!