Posts

Showing posts from July, 2023

Damayana-Tale of Dude Damodara!

Image
 Damayana-Tale of Dude Damodara! For the past several days, the word that has been heard all over coastal Karnataka and even in Dakshina Kannada and Udupi districts is this: "Have you seen Damayana? How is the movie?What's the story? Isn't it the movie made by the people of our hometown?" Yes! Damayana is a movie made by our local talents! This movie tells the story of Dude Damodar. The most parts of the movie was shot in our Puttur. This is the movie which is currently running in the third week after successfully completing its second week despite the popularity of newly released films like "Hostel Boys Bekagiddare, Oppenheimer". The movie Damayana tells about a man who grew up in a village and does not know the life of the city, finds a job and comes to the city, is cheated in the name of work and money and suffers. A good message is conveyed by the director excellently in this movie with comedy. The hero of the story is Damodar. A village boy. He is unemp

ದಾಮಾಯಣ- ಇದು ದಾಮೋದರನ ಕಥಾಯಣ!

Image
  ದಾಮಾಯಣ- ಇದು ದಾಮೋದರನ ಕಥಾಯಣ! ಕಳೆದ ಹಲವು ದಿನಗಳಿಂದ ಕರಾವಳಿ ಕರ್ನಾಟಕದಾದ್ಯಂತ ಅದರಲ್ಲಿಯೂ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ಕೇಳಿ ಬರುತ್ತಿರುವ ಮಾತು ಇದು: "ನೀವು ದಾಮಾಯಣ ನೋಡಿದಿರಾ? ಹೇಗುಂಟು ಸಿನಿಮಾ? ನಮ್ಮ ಊರಿನವರೇ ಮಾಡಿದ ಸಿನಿಮಾ ಅಂತೆ ಅಲ್ಲ?"    ಹೌದು! ದಾಮಾಯಣ ನಮ್ಮೂರಿನ ಪ್ರತಿಭೆಗಳು ನಿರ್ಮಿಸಿದ ಸಿನಿಮಾ! ಡ್ಯೂಡ್ ದಾಮೋದರನ ಕಥೆಯನ್ನು ಹೇಳುವ ಸಿನಿಮಾವಿದು. ನಮ್ಮ ಪುತ್ತೂರಿನಲ್ಲಿ ಬಹುತೇಕ ಚಿತ್ರೀಕರಣಗೊಂಡ ಸಿನಿಮಾವಿದು. ಪ್ರಸ್ತುತ ಚಿತ್ರರಂಗದಲ್ಲಿ ಅಬ್ಬರಿಸುತ್ತಿರುವ "ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ,ಓಪನ್ಹೈಮರ್" ಸಿನಿಮಾಗಳ ನಡುವೆ ಯಶಸ್ವಿಯಾಗಿ ಎರಡನೆಯ ವಾರದ ಪ್ರದರ್ಶನ ಮುಗಿಸಿ ಮೂರನೆಯ ವಾರ ಪ್ರದರ್ಶನಗೊಳ್ಳುತ್ತಿರುವ ಸಿನಿಮಾವಿದು. ದಾಮಾಯಣ ಸಿನಿಮಾ ಒಬ್ಬ ಹಳ್ಳಿಯಲ್ಲಿ ಬೆಳೆದು,ನಗರದ ಜೀವನ ಗೊತ್ತಿಲ್ಲದ ಮನುಷ್ಯ,ನಗರಕ್ಕೆ ಕೆಲಸ ಆರಿಸಿಕೊಂಡು ಬಂದು,ಕೆಲಸ,ಹಣದ ಹೆಸರಿನಲ್ಲಿ ವಂಚನೆಗೊಳಗಾಗಿ ಕಷ್ಟ ಅನುಭವಿಸುತ್ತಾನೆ,ಅಹಂಕಾರಿ ಆಗಿದ್ದವನ ಅಹಂಕಾರ ಹೇಗೆ ಇಳಿಯುತ್ತದೆ,ಯಾವುದೇ ಉದ್ಯೋಗ ಆದರು ಸಹ ಅದು ಎಷ್ಟು ಮಹತ್ವ ಸಾರುತ್ತದೆ,ಹಣಕ್ಕಿಂತಲೂ ನೆಮ್ಮದಿ,ಮಾನವೀಯತೆ ಎಷ್ಟು ಮುಖ್ಯ ಎಂದು ತಿಳಿಸುತ್ತದೆ. ಒಂದು ಉತ್ತಮ ಸಂದೇಶವನ್ನು ಹಾಸ್ಯ ಬರಿತವಾಗಿ ಈ ಸಿನಿಮಾದಲ್ಲಿ ಅತ್ಯುತ್ತಮವಾಗಿ ನಿರ್ದೇಶಕರು ತೋರಿಸಿದ್ದಾರೆ. ಕಥೆಯ ನಾಯಕ ದಾಮೋದರ. ಒಬ್ಬ ಹಳ್ಳಿಯ ಹುಡುಗ. ಅವನು ನಿರುದ್ಯ

"ಜೀವನ" ಎಂಬ ಮಹಾ ಸಾಗರದಲ್ಲಿ ಮುಳುಗುತ್ತಿದ್ದ "ನಾನು" ಎಂಬ ಹಡಗನ್ನು ಎತ್ತಿಹಿಡಿದ ಮಹಾನ್ ಗುರುಗಳು!

Image
  "ಜೀವನ" ಎಂಬ ಮಹಾ ಸಾಗರದಲ್ಲಿ ಮುಳುಗುತ್ತಿದ್ದ "ನಾನು" ಎಂಬ ಹಡಗನ್ನು ಎತ್ತಿಹಿಡಿದ ಮಹಾನ್ ಗುರುಗಳು!   ಇವರು ನಾನು ಜೀವನದುದ್ದಕ್ಕೂ ಎಂದಿಗೂ ಮರೆಯಲಾಗದ ಮಹಾನ್ ವ್ಯಕ್ತಿಗಳು. ಅದು ಕೊರೋನ ಮಹಾಮಾರಿ ಇಡೀ ವಿಶ್ವಕ್ಕೆ ಬಡಿದ ಸಮಯ. ಆಗ ನಾನು ದ್ವಿತೀಯ ಪಿಯುಸಿಗೆ ಕಾಲಿಟ್ಟು ಒಂದು ತಿಂಗಳಾಗಿತ್ತು. ನಮಗೆಲ್ಲ ಆನ್‌ಲೈನ್ ತರಗತಿಗಳು ಆಗ ಆರಂಭಗೊಂಡಿತ್ತು. ಆದರೆ ಆನ್‌ಲೈನ್ ತರಗತಿಯಿಂದ ನನಗೇನೂ ಭೌತಿಕ ತರಗತಿಯಲ್ಲಿ ಪಾಠಗಳು ಅರ್ಥವಾಗುತ್ತಿದ್ದ ಹಾಗೆ ಅರ್ಥವಾಗುತ್ತಿರಲಿಲ್ಲ. ಅದು ಬೇರೆ ನಮಗೆ ಬೋರ್ಡ್ ಪರೀಕ್ಷೆಯ ಜೊತೆಗೆ ಜೆಇಇ,ಸಿಇಟಿ ಪರೀಕ್ಷೆಗಳಿಗೆ ಕೂಡ ತಯಾರಾಗಬೇಕಿತ್ತು. ಪ್ರತಿದಿನ ಬೆಳಗ್ಗೆ ತರಗತಿ ಕೇಳಲು ಕೂತರೇ ಸಂಜೆ ಮುಗಿಸುವುದು,ಮರುದಿನ ಆ ದಿನದ ತರಗತಿ ಕೇಳುವುದು ಇದೇ ಆಗಿತ್ತು. ಆದರೆ ನನ್ನ ಶೈಕ್ಷಣಿಕ ಸಾಧನೆ ಮಾತ್ರ ಶೂನ್ಯ! ಏನು ಆದರೂ ಒಂದು ಸುಲಭದ ಸಿಇಟಿ ಪರೀಕ್ಷೆಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಶಕ್ತನಾಗಿರಲಿಲ್ಲ ನಾನು. ಮಾಡಿದ ಪಾಠ ಒಂದು ತಲೆಗೆ ಹೋಗುತ್ತಿರಲಿಲ್ಲ. ಇದರಿಂದ ಬಹಳ ಕಂಗೆಟ್ಟಿದ್ದ ನಾನು ಎಂಜಿನಿಯರಿಂಗ್ ಕಲಿಯುವ ಆಸೆಯನ್ನು ಬಿಟ್ಟಿದ್ದೆ. ಈ ಸಂದರ್ಭದಲ್ಲಿ ನನಗೆ ಸಮಾಧಾನ ಮಾಡಿ,ಧೈರ್ಯ ತುಂಬಿ,ನನಗೆ ಸರಿಯಾಗಿ ರಸಾಯನಶಾಸ್ತ್ರ ,ಭೌತಶಾಸ್ತ್ರದ ಪಾಠಗಳನ್ನು ಮಾಡಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮಟ್ಟಿಗೆ ಬೆಳೆಸಿದವರು ನನ್ನ ಈ ಮೂವರು ಗುರುಗಳು. ಅಂಬಿಕ ಪದವಿಪೂರ್

Rithesh sir-The mentor who guides and supports me in my achievement!

Image
     Rithesh sir-The mentor who guides and supports me in my achievement!   गुरू ब्रह्मा गुरू विष्णु गुरु देवो महेश्वरा| गुरु साक्षात परब्रह्म, तस्मै श्री गुरुवे नमः|| A Guru is not just someone who teaches in a classroom. Those who have guided for just one moment in life, those who have taught something small are also Gurus. A suitable guide to guide a person in life is Guru for that person.Thus we can give several interpretations of the position Guru. But only Guru's position is the greatest position. Everyone should respect that position. Last year on this auspicious day of Guru Purnima, I started the initiative of introducing and paying respect to my Guru. I would like to introduce you to my mentor who have guided me through my engineering education these year, recognized my hidden talent and encouraged me. The great guru(teacher) whom I want to introduce is Mr. Rithesh Pakkala Sir. After I joined Sahyadri College of Engineering and Management, one day the students of the respe

ನನ್ನ ಕಾಲೇಜು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮಹಾನ್ ಗುರುಗಳು ಇವರು!

Image
 ನನ್ನ ಕಾಲೇಜು ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ನೀಡುವ ಮಹಾನ್ ಗುರುಗಳು ಇವರು! ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ|| ಗುರುಗಳೆಂದರೆ ಕೇವಲ ತರಗತಿಯಲ್ಲಿ ಪಾಠ ಮಾಡುವವರೇ ಆಗಬೇಕಿಲ್ಲ. ಜೀವನದಲ್ಲಿ ಕೇವಲ ಒಂದು ಘಳಿಗೆಗೆ ಮಾರ್ಗದರ್ಶನ ಮಾಡಿದವರು,ಏನಾದರು ಸಣ್ಣಪುಟ್ಟದ್ದನ್ನು ಹೇಳಿಕೊಟ್ಟವರು ಸಹ ಗುರುಗಳೇ. ಜೀವನದಲ್ಲಿ ಒಬ್ಬ ವ್ಯಕ್ತಿಗೆ ಮಾರ್ಗದರ್ಶನ ನೀಡುವ ಸೂಕ್ತ ಮಾರ್ಗದರ್ಶಕರು ಆ ವ್ಯಕ್ತಿಗೆ ಗುರು. ಹೀಗೆ ಗುರು ಎಂಬ ಸ್ಥಾನಕ್ಕೆ ಹಲವಾರು ವ್ಯಾಖ್ಯಾನಗಳನ್ನು ನಾವು ನೀಡಬಹುದು. ಆದರೆ ಗುರುವಿನ ಸ್ಥಾನ ಮಾತ್ರ ಅದು ಶ್ರೇಷ್ಠ ಸ್ಥಾನ. ಆ ಸ್ಥಾನಕ್ಕೆ ಪ್ರತಿಯೊಬ್ಬನು ಗೌರವ ನೀಡಲೇಬೇಕು. ಕಳೆದ ವರ್ಷ ಗುರು ಪೂರ್ಣಿಮೆಯ ಈ ಶುಭ ದಿನದಂದು ನನ್ನ ಗುರುಗಳನ್ನು ಪರಿಚಯಿಸಿ ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಾನು ಆರಂಭಿಸಿದ್ದೆ. ಈ ವರ್ಷ ನನ್ನ ಎಂಜಿನಿಯರಿಂಗ್ ಶಿಕ್ಷಣದ ಹಾದಿಯಲ್ಲಿ ನನ್ನ ಮಾರ್ಗದರ್ಶಕರಾಗಿದ್ದು,ನನ್ನ ಒಳಗೆ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿದ ನನ್ನ ಗುರುಗಳನ್ನು ಸ್ಮರಿಸಿ,ನಿಮಗೆ ಪರಿಚಯ ಮಾಡಲು ನಾನು ಇಚ್ಛಿಸುತ್ತೇನೆ. ಆ ಶ್ರೇಷ್ಠ ಗುರುಗಳೇ ನನ್ನ ಮಾರ್ಗದರ್ಶಕರು ಶ್ರೀ ರಿತೇಶ್ ಪಕ್ಕಳ ಸರ್. ನಾನು ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿಗೆ ಸೇರಿದ ನಂತರ ಒಂದು ದಿನ ಆಯಾಯ ವಿಭಾಗದ ವಿದ್ಯಾರ್

ನನ್ನ ವಾರಾಂತ್ಯದ ಬಿಸ್ಲೆ -ಪಟ್ಲ ಬೆಟ್ಟ ಪ್ರವಾಸ!

Image
ನನ್ನ ವಾರಾಂತ್ಯದ ಬಿಸ್ಲೆ -ಪಟ್ಲ ಬೆಟ್ಟ ಪ್ರವಾಸ!    ಕೆಲವೊಮ್ಮೆ ಈ ಮಾನಸಿಕ ಒತ್ತಡ,ಜಂಜಾಟದ ನಗರ ಜೀವನಕ್ಕಿಂತ ಪ್ರಕೃತಿಯ ನಡುವೆ ನಿಸರ್ಗದ ಸೌಂದರ್ಯ ಸವಿಯುತ್ತಾ ಹಳ್ಳಿಯಲ್ಲಿ ಬೆವರು ಸುರಿಸುತ್ತಾ ಕೆಲಸ ಮಾಡುವ ಜೀವನ ಎಷ್ಟೋ ಒಳ್ಳೆಯದು ಅನ್ನಿಸುವ ದಿನಗಳು ಉಂಟು!   ನನ್ನ  ಮಾನಸಿಕ ಅವಸ್ಥೆ ಕಳೆದ ವಾರ ಹಾಗೆ ಆಗಿತ್ತು. ಬೆಳಗ್ಗೆ ಬೇಗ ಮನೆ ಬಿಟ್ಟರೆ ಸಂಜೆ ಬಸ್ಸಿನಲ್ಲಿ ನೇತುಕೊಂಡು ಬಂದು ರಾತ್ರಿ ಮನೆಗೆ ಹಿಂದಿರುಗುವುದು. ತದನಂತರ ಕೆಲವು ಕೆಲಸಗಳು ಬಾಕಿ ಇದ್ದರೆ ಅದನ್ನು ಮುಗಿಸಿ ತಡರಾತ್ರಿ ಮಲಗುವುದು, ಅದರ ಮಧ್ಯೆ ಕೈಕೊಡುತ್ತಿದ್ದ ಆರೋಗ್ಯ ಹೀಗೆ ಎಲ್ಲಾ ಆದಾಗ ಎಲ್ಲಿಯಾದರು ಒಂದು ಕಡೆ ಹೋಗಿ ಬಿಡೋಣ ಎಂದೆನ್ನಿಸುವ ಮನಸ್ಸು,ಒಟ್ಟಿನಲ್ಲಿ ಮನಸ್ಸಿನಲ್ಲಿ ಅಶಾಂತಿ ಮೂಡಿತ್ತು. ಅದೇ ಹೊತ್ತಿಗೆ ನನ್ನ ತಲೆಗೆ ಹೊಳೆದದ್ದು ಪ್ರಕೃತಿ ಮಾತೆ ಭೂಲೋಕಕ್ಕೆ ಕೊಟ್ಟ ವರವಾದ ಸುಂದರ,ಭೂಲೋಕದ ಸ್ವರ್ಗ ಪಶ್ಚಿಮ ಘಟ್ಟದ ಒಂದು ಸುಂದರ ಸ್ಥಳಕ್ಕೆ ಹೋಗೆ ಸಮಯ ಕಳೆಯಬೇಕು ಎಂದು. ನನ್ನ ಕಾಲೇಜು ಗೆಳೆಯರ ಜೊತೆಗೆ ಕೊಡಚಾದ್ರಿ ಅಥವ ನೇತ್ರಾವತಿ ಶಿಖರಕ್ಕೆ ಚಾರಣ ಹೋಗುವುದು ಎಂಬ ಯೋಜನೆ ಆಗಿತ್ತು ಆದರೆ ಅದು ಕೈಕೊಟ್ಟಿತು. ನಂತರ ನನ್ನ ಹಳೆಯ ಆಪ್ತಮಿತ್ರರು,ಕಾಲೇಜಿನ ಆಪ್ತಮಿತ್ರನ ಜೊತೆಗೆ ಮಾತುಕತೆಯಾಗಿ ಬಿಸ್ಲೆ ಘಾಟ್,ಪಟ್ಲ ಬೆಟ್ಟಕ್ಕೆ ಹೋಗಿ ಸಮಯ ಕಳೆಯುವ ಯೋಜನೆ ಮಾಡಿಯೇ ಬಿಟ್ಟೆವು. ನಿನ್ನೆ(01/07/2023 ಆದಿತ್ಯವಾರ) ಬೆಳಗ್ಗೆ ಬೇಗ ನನ್ನ ಕಾರಿನಲ