"ದಿ ಕೇರಳ ಸ್ಟೋರಿ" ಸಿನಿಮಾ ವೀಕ್ಷಿಸಿದ ನಂತರ...

"ದಿ ಕೇರಳ ಸ್ಟೋರಿ" ಸಿನಿಮಾ ವೀಕ್ಷಿಸಿದ ನಂತರ...

ಇದು ಒಂದು ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿ 15 ದಿನಗಳು ಕಳೆದರು ಸಹ ಆ ಸಿನಿಮಾದ ಪ್ರದರ್ಶನ ಆರಂಭಗೊಳ್ಳುವ ಸಮಯ ಆಗುವ ಮೊದಲೇ ಹೆಚ್ಚಿನ ಆಸನಗಳು ಭರ್ತಿ! ಆ ಪರದೆಯ ಸಭಾಂಗಣದಲ್ಲಿ ಎಲ್ಲಿ ನೋಡಿದರು ನಿಶ್ಯಬ್ದ! ಸಿನಿಮಾ ನಡುವೆ ಬರುವ ಮಧ್ಯಂತರ ಸಮಯದಲ್ಲೂ ಸಹ ಕೂಡಲೇ ಏಳದ ವೀಕ್ಷಕರು! ಸಿನಿಮಾ ಮುಗಿಯುವ ಸಂದರ್ಭಲ್ಲಿ ಸಭಾಂಗಣದಿಂದ ಹೊರಗೆ ಹೋಗಲು ಬಾಗಿಲು ತೆರೆದಾಗಲೂ ಸಹ ಸಿನಿಮಾ ಮುಗಿದು 5 ನಿಮಿಷ ಆದ ಮೇಲೆ ಎದ್ದು ಹೋದ ವೀಕ್ಷಕರು! ಈ ದೃಶ್ಯಗಳು ಕಂಡಿದ್ದು ಇಂದು ಪುತ್ತೂರಿನ ಭಾರತ್ ಸಿನಿಮಾಸ್ ಥಿಯೇಟರಿನ ಮೂರನೆಯ ಪರದೆಯಲ್ಲಿ! ಸಿನಿಮಾ ಯಾವುದೆಂದು ಗೊತ್ತೇ!? ಅದುವೇ "ದಿ ಕೇರಳ ಸ್ಟೋರಿ"!

ಸಿನಿಮಾ ಬಗ್ಗೆ ಗೊತ್ತಾದ ಕೂಡಲೇ ನನಗೆ ಥಿಯೇಟರಿನಲ್ಲಿಯೇ ಹೋಗಿ ನೋಡಬೇಕೆಂದು ಮನಸ್ಸಿದ್ದ ನನಗೆ ಸಮಯ ಸಿಗದ ಕಾರಣ ಇಷ್ಟು ದಿನ ಕಳೆದು ತಡವಾಗಿ ಇಂದು ಥಿಯೇಟರಿನಲ್ಲಿ ಸರಿಯಾಗಿ ಸಿನಿಮಾ ವೀಕ್ಷಿಸಿದೆ. ಸಿನಿಮಾದಲ್ಲಿ ಬರುವ ಒಂದೊಂದು ದೃಶ್ಯ ಇದೆಯಲ್ಲ ಅದನ್ನು ನೋಡಿದರೆ ಯಾರ ಮನಸ್ಸಿನಲ್ಲೂ ಭಯ ಮೂಡದೆ ಇರದು!ರಕ್ತ ಹೆಪ್ಪುಗಟ್ಟಿದಂತಹ ಅನುಭವ! ತಲೆಯೆಲ್ಲ ಸುತ್ತಿದಂತೆ ಆಗುತ್ತದೆ! ಏನು ಮಾತನಾಡಬೇಕೆಂದು ತೋಚುವುದಿಲ್ಲ! ಮಧ್ಯಂತರ ಸಮಯದಲ್ಲಿ ಒಮ್ಮೆ ಹೊರಗೆ ಬಂದು ಮುಖ ತೊಳೆಯುವ ಎಂಬ ಯೋಚನೆಯು ನಿಮಗೆ ಬರುಬಹುದು. ಆ ತರಹದ ಅನುಭವ ಖಂಡಿತವಾಗಿಯೂ ಅಗುತ್ತದೆ. ಮುಸಲ್ಮಾನೇತರ ಧರ್ಮಗಳ ಯುವತಿಯರನ್ನು ಅದರಲ್ಲೂ ಮುಖ್ಯವಾಗಿ ಹಿಂದು ಧರ್ಮದ ಯುವತಿಯರನ್ನು ಹೇಗೆ ಒಂದು ಜಾಲಕ್ಕೆ ಉರುಳಿಸಿ ಅವರನ್ನು ಯಾವ ತರಹ ಬ್ರೈನ್ ವಾಶ್ ಮಾಡಿ ಮುಸಲ್ಮಾನ ಧರ್ಮವನ್ನು ಒಪ್ಪುವಂತೆ ಮಾಡಿ ಉಗ್ರರ ಜೊತೆಗೆ ಮದುವೆ ಮಾಡಿಸಿ ಐಸಿಸ್ ಸೇರುವಂತೆ ಮಾಡಿ ಉಗ್ರ ಚಟುವಟಿಕೆಗಳಲ್ಲಿ ಹಾಗು ಉಗ್ರರ ಲೈಂಗಿಕ ಗುಲಾಮರಂತೆ ಮಾಡುತ್ತಾರೆ ಈ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸಲಾಗಿದೆ. ಟ್ರೈಲರಿನಲ್ಲಿ ತೋರಿಸಿದಂತೆ ಆ ಎಲ್ಲ ಸನ್ನಿವೇಶಗಳನ್ನು ಹೇಳುವುದು ಅದೇ ಜಾಲಕ್ಕೆ ಬಿದ್ದು ನರಕಯಾತನೆ ಅನುಭವಿಸಿ ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಬಂಧಿಯಾಗಿರುವ ಕೇರಳದ ಒರ್ವ ಯುವತಿ. ಅವಳು ಹಾಗು ಅವಳ ಹಾಗೆ ಇನ್ನಿತರು ಹೇಗೆ ಆ ಬಲಗೆ ಬಿದ್ದರು,ಅವಳು ಹೇಗೆ ಅಮೇರಿಕದ ಸೇನಾಪಡೆಗೆ ಸಿಕ್ಕಳು? ಅವಳು ಏನೆಲ್ಲಾ ಸೇನೆಯ ಅಧಿಕಾರಿಗಳ ಮುಂದೆ ಹೇಳಿದಳು ಎಂಬುದು ಸಿನಿಮಾದಲ್ಲೇ ನೋಡಿ. ಸಿನಿಮಾದಲ್ಲಿ ಬರುವ ಒಂದು ಪಾತ್ರ ಗೀತಾಂಜಲಿ ಎಂಬ ಯುವತಿಯದ್ದು. ಎಲ್ಲಾ ಯಾತನೆಗಳನ್ನು ಅನುಭವಿಸಿದ ನಂತರ ಅದರಿಂದ ಹೊರಗೆ ಬರುವ ಸಂದರ್ಭದಲ್ಲಿ ಅವಳು ತನ್ನ ತಂದೆಗೆ ಹೇಳುವ ಒಂದು ಮಾತು "ಅಪ್ಪ ನೀನು ಕಮ್ಯುನಿಸ್ಟ್ ತತ್ವವನ್ನು ಪಾಲಿಸಿದೆ. ನನ್ನ ಧರ್ಮದ ಪುರಾಣ,ಪವಿತ್ರ ಗ್ರಂಥಗಳನ್ನು ನನಗೆ ಪರಿಚಯವೇ ಮಾಡಲಿಲ್ಲ. ಏಕೇ ಹೀಗೆ ಮಾಡಿದೆ? ಮೊದಲೇ ನನಗೆ ತಿಳಿದಿದ್ದರೆ ನಾನು ಹೀಗೆ ಮಾಡುತ್ತಿದ್ದೇನೆಯೇ?" ಎಂದು ಹೇಳುವ ಮಾತು ಇದೆಯಲ್ಲ ಅದನ್ನು ಪ್ರತಿ ಹಿಂದು ಪೋಷಕರು ಕೇಳಲೇಬೇಕೆಂದು ಅನಿಸಿತು.
ನಟರ ಬಗ್ಗೆ ಹೇಳುವುದಿದ್ದರೆ ನನಗೆ ಪ್ರಮುಖ ಪಾತ್ರವಾದ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ನಟಿಸಿದ ಆದಾ ಶರ್ಮ ಅವರ ಅಭಿನಯ ಬಹಳ ಇಷ್ಟವಾಯಿತು.ತಾವು ಅದನ್ನು ನಿಜವಾಗಿಯೂ ಅನುಭವಿಸುತ್ತಿರಬೇಕೋ ಎಂದು ಅನಿಸುವಂತೆ ಅಭಿನಯ ಮಾಡಿದ್ದಾರೆ. ಮತ್ತೊಂದು ಪಾತ್ರವಾದ ಮತಾಂತರ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುವ ಆಸೀಫ ಎನ್ನುವ ಪಾತ್ರದಲ್ಲಿ ನಟಿಸಿದ ಸೋನಿಯಾ ಬಾಲಾನಿ ಅವರ ನಟನೆ ನನಗೆ ಇಷ್ಟವಾಯಿತು.
ಒಟ್ಟಿನಲ್ಲಿ ದೇಶಕ್ಕೆ ಅಪಾಯ ತಂದೊಡ್ಡುತ್ತಿರುವ ಉಗ್ರ ಜಾಲದ ಬಗ್ಗೆ ಜಾಗೃತರಾಗಿರುವಂತೆ ಈ ಸಿನಿಮಾ ಎಚ್ಚರಿಸುತ್ತಿದೆ. ಪ್ರತಿಯೊಬ್ಬರು ಈ ಸಿನಿಮಾವನ್ನು ನೋಡಲೇಬೇಕು.ಥಿಯೇಟರಿನಲ್ಲಿ ಆಗದಿದ್ದರೆ ಒಟಿಟಿಗೆ ಬಂದ ಮೇಲೆಯಾದರು ನೋಡಿ.
ನನ್ನ ರೇಟಿಂಗ್:10/10 ⭐️⭐️⭐️⭐️⭐️
🖊ಬರಹ: ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!