ಪ್ರಕೃತಿಯ ನಡುವೆ ಒಂದು ದಿನ!

 ಪ್ರಕೃತಿಯ ನಡುವೆ ಒಂದು ದಿನ!

ಅದು ಕರ್ನಾಟಕ-ಕೇರಳ ರಾಜ್ಯಗಳ ಗಡಿ ಪ್ರದೇಶ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ನೀವು ಕೇರಳ ರಾಜ್ಯವನ್ನು ಪ್ರವೇಶಿಸುತ್ತೀರಿ. ಆ ಸ್ಥಳದಲ್ಲಿ ಸುತ್ತಲು ಹಚ್ಚಹಸಿರಿನಿಂದ ಕೂಡಿದ ಒಂದು ವಿಶಾಲವಾದ ಪ್ರದೇಶ. ಅಡಿಕೆ,ತೆಂಗು,ಕೊಕ್ಕೊ,ಮಾವು,ಹಲಸು ಇತ್ಯಾದಿ ಕೃಷಿಗೆ ಸಂಬಂಧಿಸಿದ ಗಿಡ-ಮರಗಳು,ಕಾಡಿನಲ್ಲಿರುವ ಮರಗಳಿಂದ ಕೂಡಿದ ಸಮೃದ್ಧ ಪ್ರದೇಶ. ಸದಾ ನಾಲ್ಕು ಗೋಡೆಗಳ ಮಧ್ಯೆ ಕೂತು ಪಾಠ ಕೇಳುವುದು,ಇತ್ಯಾದಿ ಕೆಲಸಗಳನ್ನು ಮಾಡುವ ನಮಗೆ ಆ ಹಚ್ಚಹಸಿರಿನಿಂದ ಕೂಡಿದ ಪ್ರದೇಶದಲ್ಲಿ ಒಂದು ದಿನ ಕಳೆಯುವ ಸದಾವಕಾಶ! ಆ ಪ್ರದೇಶವೇ ಕರ್ನಾಟಕ-ಕೇರಳ ರಾಜ್ಯದ ಗಡಿಯಲ್ಲಿರುವ ಅಡ್ಯನಡ್ಕ ಗ್ರಾಮದ ವಾರಣಾಸಿ ಫಾರ್ಮ್ಸ್!


 
ಕಾಲೇಜಿನಲ್ಲಿ ರಾಷ್ಟೀಯ ಸೇವಾ ಯೋಜನೆ(ಎನ್.ಎಸ್.ಎಸ್) ಘಟಕದ ವತಿಯಿಂದ ನಡೆದ ಒಂದು ವಾರದ ಕ್ಯಾಂಪಿನ ಭಾಗವಾಗಿ ನಮಗೆ ಫಾರ್ಮ್ ಭೇಟಿಯ ಕಾರ್ಯಕ್ರಮವಿತ್ತು. ಒಂದು ಫಾರ್ಮಿಗೆ ಭೇಟಿ ಕೊಟ್ಟು ಅಲ್ಲಿನ ಸಮಗ್ರ ಅಧ್ಯಯನ ಮಾಡಿ,ಪ್ರಕೃತಿಯ ನಡುವೆ ಕಾಲ ಕಳೆಯುವುದು ಈ ಕಾರ್ಯಕ್ರಮದ ಉದ್ದೇಶ. ಇದರ ನಿಮಿತ್ತ ನನ್ನ ಬ್ಯಾಚಿಗೆ ಫಾರ್ಮ್ ಭೇಟಿ ಕಾರ್ಯಕ್ರಮವನ್ನು ನಿನ್ನೆಯ(ಮಾರ್ಚ್ 24) ದಿನದಂದು ನಿಗದಿಪಡಿಸಲಾಗಿತ್ತು. ನಿನ್ನೆ ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ತಲುಪಿದ ನಾನು ಬೆಳಗ್ಗೆ 9 ಗಂಟೆಗೆ ಕಾಲೇಜಿನಿಂದ ಹೊರಟು ಬಿಸಿ ರೋಡ್,ಕಲ್ಲಡ್ಕ,ವಿಟ್ಲ ಮಾರ್ಗವಾಗಿ ಬಸ್ಸಿನಲ್ಲಿ ಮಜಾ ಮಾಡುತ್ತಾ ಅಡ್ಯನಡ್ಕ ತಲುಪಿದೆವು. ಫಾರ್ಮ್ ಹೌಸ್ ತಲುಪಿದ ನಂತರ ಅಲ್ಲಿ ನಮ್ಮನ್ನ ಶ್ರೀ ಪಾರ್ಥ ವಾರಣಾಸಿಯವರು ಸ್ವಾಗತಿಸಿ ಅಲ್ಲಿ ಅವರ ತಂಡ ಮಾಡುವ ಕೆಲಸಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ತಂಪು ಪಾನೀಯವನ್ನು ಸ್ವೀಕರಿಸಿ 100 ಜನರ ನಮ್ಮ ಬ್ಯಾಚಿನ ಸದಸ್ಯರನ್ನು 4 ತಂಡಗಳಾಗಿ ವಿಂಗಡಿಸಿ ಪ್ರತಿ ತಂಡಕ್ಕೆ ಒಂದೊಂದು ಕೆಲಸವನ್ನು ನೀಡಲಾಯಿತು. ಪ್ರತಿ ತಂಡಗಳು ಅವರವರ ಕೆಲಸಗಳನ್ನು ಮಾಡಿದರು.



ಪ್ಲಾಸ್ಟಿಕ್ ತೊಟ್ಟೆಯಲ್ಲಿ ನೆಟ್ಟ ಅಡಿಕೆ ಸಸಿಗಳಲ್ಲಿ ಹಾಳಾದ,ಹುಟ್ಟದ,ಒಣಗಿದ ಸಸಿಗಳನ್ನು ತೊಟ್ಟೆಯಿಂದ ವಿಂಗಡಿಸುವುದು ನಾನು ಇದ್ದ ತಂಡಕ್ಕೆ ನೀಡಲಾದ ಕೆಲಸ. ಸುಮಾರು ಒಂದುವರೆ ತಾಸು ಕೆಲಸ ಮಾಡಿ ನಾನು ಹಾಗು ಗೆಳೆಯರು ಫಾರ್ಮಿನ ವೀಕ್ಷಣೆಗೆ ಹೊರಟೆವು! ಫಾರ್ಮ್ ಸುತ್ತುತ್ತ ನಾವು ಅಲ್ಲಿ ಇರುವ ಎತ್ತರದ ಜಾಗಕ್ಕೆ ಹೋಗಿ ಬಂದೆವು. ಫಾರ್ಮಿನಲ್ಲಿ ಕಟ್ಟಲಾದ ಮಣ್ಣಿನ ಮನೆಗಳು,ಕ್ಯಾಂಪ್ ಸ್ಥಳಗಳನ್ನು ವೀಕ್ಷಿಸಿದೆವು. ಜೊತೆಗೆ ಸ್ವಲ್ಪ ಫೋಟೋಗಳನ್ನು ತೆಗೆದು ನಂತರ ಊಟ ಮಾಡಲು ಕಾಡಿನ ಮಧ್ಯೆ ಫಾರ್ಮಿನ ಒಳಗಿರುವ ಅವರದ್ದೇ ಕ್ಯಾಂಟಿನಿನಲ್ಲಿ ರುಚಿಯಾದ ಕಜೆ ಅಕ್ಕಿಯ ಅನ್ನದ ಜೊತೆಗೆ ಸಾರು,ಪಲ್ಯ,ಸಾಂಬಾರು,ಪಾಯಸದ ಊಟ ಮಾಡಿದೆವು.



ನಂತರ ಸ್ವಲ್ಪ ಹೊತ್ತು ವಿಶ್ರಮಿಸಿ ಮತ್ತೆ ಫಾರ್ಮಿನ ವೀಕ್ಷಣೆ ಮಾಡುತ್ತಾ ಅಲ್ಲಿರುವ ಟ್ರೀ ಹೌಸ್(ಮರದ ಮನೆ) ಅನ್ನು ವೀಕ್ಷಿಸಿ ಸಂತೋಷಪಟ್ಟೆವು. ನಂತರ ತೋಟದ ಮಧ್ಯದಲ್ಲಿ ಸಾಗುತ್ತಾ ತೋಟಕ್ಕೆಂದು ಬಿಟ್ಟ ನೀರಿನಲ್ಲಿ ಒದ್ದೆಯಾಗಿ ಬಸ್ಸಿನ ಬಳಿ ಬಂದೆವು. ನಂತರ ಅಡ್ಯನಡ್ಕದಿಂದ ಕಾಲೇಜಿಗೆ ಹಿಂದಿರುಗಿದೆವು. ಬಸ್ಸಿನಲ್ಲಿ ಬರುತ್ತಿರುವಾಗ ಹಲವು ಪದ್ಯಗಳನ್ನು ಹಾಕುತ್ತಾ ಪದ್ಯಕ್ಕೆ ಕುಣಿದು ಕುಪ್ಪಳಿಸುತ್ತಾ ಇನ್‌ಸ್ಟಾಗ್ರಾಮ್ ರೀಲ್ ಮಾಡಲು ವೀಡಿಯೊ ಚಿತ್ರೀಕರಿಸಿ(ನೋಡಲು ಇಲ್ಲಿ ಕ್ಲಿಕ್ ಮಾಡಿ) ಸಂತೋಷಪಟ್ಟು ಕಾಲೇಜಿಗೆ ಹಿಂದಿರುಗಿದೆವು.
ಒಟ್ಟಿನಲ್ಲಿ ನಿನ್ನೆಯ ದಿನ ಪ್ರಕೃತಿಯ ನಡುವೆ ಕಳೆದು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡು ಶುದ್ಧ ಗಾಳಿಯನ್ನು ಸೇವಿಸುತ್ತಾ ಆನಂದಪಟ್ಟೆವು!
ವಾರಣಾಸಿ ಫಾರ್ಮಿನ ಚಿತ್ರಣದ ವೀಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ 
🖋️ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!