ಬೊಂಡ ಪ್ರಿಯರು ಭೇಟಿ ಕೊಡಲೇ ಬೇಕಾದ ಸ್ಥಳ ಈ ಬೊಂಡ ಫ್ಯಾಕ್ಟರಿ!

 ಬೊಂಡ ಪ್ರಿಯರು ಭೇಟಿ ಕೊಡಲೇ ಬೇಕಾದ ಸ್ಥಳ ಈ ಬೊಂಡ ಫ್ಯಾಕ್ಟರಿ!




 
ಇದು ಮಂಗಳೂರು-ತುಮಕೂರು ರಾ.ಹೆ 73ರ ದಕ್ಷಿಣ ಕನ್ನಡ ಜಿಲ್ಲೆಯ ಜೀವಾನದಿ ನೇತ್ರಾವತಿಯ ದಂಡೆಯಲ್ಲಿರುವ ಮಂಗಳೂರಿನ ಹೊರವಲಯದ ರಮಣೀಯವಾದ ಸ್ಥಳ. ಇಲ್ಲಿ ದಿನದ 24 ತಾಸುಗಳಲ್ಲಿಯೂ ಸಹ ನಿರಂತರ ಗಾಳಿ ಬೀಸುತ್ತಾ ಇರುತ್ತದೆ. ಈ ಸ್ಥಳ ಬೇರೆ ಯಾವುದು ಅಲ್ಲ,ಅದುವೇ ಮಂಗಳೂರಿನ ಹೊರವಲಯದಲ್ಲಿರುವ ಆಡ್ಯಾರ್. ಇಲ್ಲಿಗೆ ಬಂದಾಗ ನಿಮಗೆ ಬೊಂಡ(ಎಳನೀರು) ನೆನಪಾಗದೆ ಇರಲು ಸಾಧ್ಯವಿಲ್ಲ. ಕಾರಣ ಇಲ್ಲೆ ಇರುವ ಪ್ರಸಿದ್ಧ ಐಸ್ಕ್ರೀಂ ಕಂಪೆನಿಯಾದ ನ್ಯಾಚುರಲ್ಸ್ ಅವರ ಬೊಂಡ ಫ್ಯಾಕ್ಟರಿ! ಹೌದು ಗೆಳೆಯರೇ, ನ್ಯಾಚುರಲ್ಸ್ ಅವರ ಐಸ್ಕ್ರೀಂ ತಯಾರಿಕಾ ಘಟಕ ನಮ್ಮ ಮಂಗಳೂರಿನ ಅಡ್ಯಾರಿನಲ್ಲೇ ಇದೆ. ಇದು ನನ್ನ ಕಾಲೇಜಿನಿಂದ ಕೇವಲ 1 ಕಿ.ಮಿ ದೂರದಲ್ಲಿದ್ದುರಿಂದ ನನ್ನ ಗೆಳೆಯರು ಆಗಾಗಾ ಅಲ್ಲಿಗೆ ಭೇಟಿ ಕೊಡುತ್ತಾ ಇದ್ದರು. ಕಾರಣ ಅಲ್ಲಿ ಬಹಳ ಕಡಿಮೆ ಬೆಲಿಗೆ ಸಿಗುವ ಬೊಂಡ ನೀರು ಹಾಗು ರುಚಿಯಾದ ಬೊಂಡ ಐಸ್ಕ್ರೀಂ. ಸ್ನೇಹಿತರಿಂದ ಈ ಫ್ಯಾಕ್ಟರಿಯ ಬಗ್ಗೆ ಕೇವಲ ಕೇಳಿ ಗೊತ್ತಿದ್ದ ನನಗೆ ಕಾಲೇಜು ಸೇರಿ ಒಂದು ವರ್ಷ ಕಳೆದರು ಹೋಗುವ ಅವಕಾಶ ಸಿಕ್ಕಿರಲಿಲ್ಲ. ಹೋಗಲು ನನಗೆ ಜೊತೆಯಾಗಿ ಯಾರು ಇರಲಿಲ್ಲ ಹಾಗು ನನಗೆ ಸಮಯ ಸಿಕ್ಕಿರಲಿಲ್ಲ. ಒಮ್ಮೆ ಫ್ಯಾಕ್ಟರಿಗೆ ಭೇಟಿ ಕೊಡಬೇಕು ಎಂಬ ಆಸೆ ನನಗೂ ಇತ್ತು. ಇಂದು ಅಚಾನಕ್ ಆಗಿ ನನ್ನ ಗೆಳೆಯನ ಬಳಿ "ಬೊಂಡ ಫ್ಯಾಕ್ಟರಿಗೆ ಹೋಗುವನಾ?" ಎಂದು ಕೇಳಿದೆ. ಕೂಡಲೇ ಒಪ್ಪಿದ ಅವನು ತರಗತಿ ಮುಗಿದೊಡನೆ ಒಟ್ಟಿಗೆ ಹೋಗುವುದು ಎಂದು ನಿರ್ಧರಿಸಿ ಹೋಗಿಯೇ ಬಿಟ್ಟೆವು. ಅಡ್ಯಾರಿನಲ್ಲಿ ಸಿಗುವ ಅಡ್ಯಾರ್ ಕಟ್ಟೆ ಎಂಬಲ್ಲಿ ವಳಚ್ಚಿಲ್ ಕಡೆಯಿಂದ ಬರುವಾಗ ಎಡ ಕಡೆಗೆ ದಿ ಕ್ಯಾಂಬ್ರಿಡ್ಜ್ ಶಾಲೆಗೆ ಹೋಗುವ ದಾರಿಯಲ್ಲೇ ಸಾಗಿದರೆ ನಿಮಗೆ ಬೊಂಡ ಫ್ಯಾಕ್ಟರಿ ಸಿಗುತ್ತದೆ. ಹೀಗೆ ಮಧ್ಯಾಹ್ನದ ಸುಡಬಿಸಿಲಿನ ಸಮಯಕ್ಕೆ ಹೋದೆವು. ಮುಂಭಾಗದಲ್ಲಿ ಸಾಂಪ್ರದಾಯಿಕ ಶೈಲಿಯ ಕಟ್ಟಡದಂತೆ ಕಾಣುವ ಈ ಕಟ್ಟಡ ಒಳ ಹೋದಂತೆ ಬಹಳ ದೊಡ್ಡದಿದೆ. ಆದರೆ ಒಳಗೆ ಹೋಗುವ ಅವಕಾಶ ನಮಗೆ ಸಿಗಲಿಲ್ಲ. ಅಲ್ಲಿಗೆ ಹೋದ ನಾವು ಕೌಂಟರ್ ಬಳಿ ಹೋಗಿ ಮೆನು ನೋಡಿದೆವು. ಒಮ್ಮೆ ನೋಡಿ ನಾನು ಆಶ್ಚರ್ಯಕ್ಕೆ ಒಳಗಾದೆ. ಇಲ್ಲಿ ನಿಮಗೆ ಕೇವಲ 7 ರೂಪಾಯಿಗೆ 250 ಮಿ.ಲಿ(ಒಂದು ಬಾಟಲಿ) ಬೊಂಡ ನೀರು ಸಿಗುತ್ತದೆ! ಸರಿ ಎಂದು ಗೆಳೆಯನೊಂದಿಗೆ ನಿರ್ಧರಿಸಿ ಒಂದು ಐಸ್ಕ್ರೀಂ ಹಾಗು ಒಂದು ಬಾಟಲಿ ಬೊಂಡ ನೀರು ತೆಗೆದುಕೊಂಡು. ನೀರಿನ ರುಚಿ ಬಗ್ಗೆ ಹೇಳಬೇಕೆಂದಿಲ್ಲ. ಇಲ್ಲಿ ಫ್ಯಾಕ್ಟರಿಯವರು ಬೊಂಡವನ್ನು ಪ್ರಮುಖವಾಗಿ ಬಳಸುವುದು ಐಸ್ಕ್ರೀಂ ತಯಾರಿಸಲು. ಅದರಲ್ಲಿರುವ ಗಂಜಿಯನ್ನು ಇಲ್ಲಿ ಐಸ್ಕ್ರೀಂ ತಯಾರಿಸಲು ಉಪಯೋಗಿಸುತ್ತಾರೆ. ಅದರಲ್ಲಿರುವ ನೀರನ್ನು ಇಲ್ಲಿ ಗ್ರಾಹಕರಿಗೆ ಮಾರಲಾಗುತ್ತದೆ. ಹೀಗೆ ಬಂದ ಗ್ರಾಹಕರಿಗೆ ಇಲ್ಲಿ 7ರೂ ಕೊಟ್ಟು ಒಂದು ಬಾಟಲಿ ಬೊಂಡ ನೀರು ಕುಡಿಯಬಹುದು. ಒಂದು ಬಾಟಲಿಯಲ್ಲಿ ನಿಮಗೆ ಸರಾಸರಿ ಒಂದು ಬೊಂಡದಲ್ಲಿ ಸಿಗುವಷ್ಟು ನೀರು ಸಿಗುತ್ತದೆ. ಅಷ್ಟೇ ಅಲ್ಲದೆ ಗ್ರಾಹಕರು ತಮ್ಮ ಬಾಟಲಿ ತಂದು ಒಂದು ಲೀಟರಿಗೆ 26 ರೂಪಾಯಿಯಂತೆ ಬೊಂಡ ನೀರು(ಪಾರ್ಸೆಲ್ ಆಗಿ) ತೆಗೆದುಕೊಂಡು ಹೋಗಬಹುದಾಗಿದೆ! ನೀರಿನ ಬೆಲೆಯಲ್ಲಿ ನೀವು ಇಲ್ಲಿ ಬೊಂಡ ನೀರು ಪಡೆಯಬಹುದಾಗಿದೆ!

 
ಸರಿ ಬೊಂಡ ನೀರು ಕುಡಿದ ನಾವು ನಂತರ ಐಸ್ಕ್ರೀಂನ ರುಚಿಯನ್ನು ಆಸ್ವಾದಿಸಿದೆವು. ಅನನಾಸ್ ಹಣ್ಣಿನೊಂದಿಗೆ ಬೊಂಡ ಐಸ್ಕ್ರೀಂ! ಆಹಾ! ಉತ್ತಮ ಜುಗಲ್ಬಂದಿ! ಇದಕ್ಕೆ ಇಲ್ಲಿ ಹೆಸರು "ಪಿನ ಕೊಲೋಡ".ನೆನೆಸಿದರೆ ಬಾಯಿಯಲ್ಲಿ ನೀರು ಬರುತ್ತದೆ! 85 ರೂಪಾಯಿಗೆ "ಪಿನ ಕೊಲೋಡ" ಇಲ್ಲಿ ನೀವು ತಿನ್ನಬಹುದಾಗಿದೆ.

 

 
 ಹೀಗೆ ಇಲ್ಲಿ ಸಿಗುವ ಉತ್ಪನ್ನಗಳಲ್ಲಿ ಎರಡರ ರುಚಿ ನೋಡಿ ಬಹಳ ಆನಂದಪಟ್ಟೆ. ಮಂಗಳೂರಿಗೆ ಹೋದಾಗ ಮತ್ತೆ ಇಲ್ಲಿಗೆ ಹೋಗುವ ಎಂದು ನಿಮಗೆ ಅನಿಸಿಯೇ ಅನಿಸುತ್ತದೆ. ಗ್ರಾಹಕರು ಉತ್ಪನ್ನ ಖರೀದಿಸಿ ತಿನ್ನುವ ಸ್ಥಳದಲ್ಲಿ ಬಹಳ ಶುಚಿತ್ವವನ್ನು ಕಾಪಾಡಲಾಗಿದೆ. ನೀರು ಕುಡಿದು ಬಾಟಲಿಯನ್ನು ನೀವು ಅಲ್ಲಿನ ಒಂದು ಬದಿಗೆ ಹೋಗಿ(ನಿರ್ಗಮನ ಕಡೆ) ಮೆಶೀನಿನಲ್ಲಿ ಇಟ್ಟರೆ ಆಯಿತು. ಅದು ತನ್ನಷ್ಟಕ್ಕೆ ಒಳಗೆ ಹೋಗುತ್ತದೆ. ಇಲ್ಲಿ ಹೆಚ್ಚಿನ ಕೆಲಸವನ್ನು ಯಾಂತ್ರಿಕೃತವಾಗಿ ಮಾಡಲಾಗುತ್ತದೆ. ಒಟ್ಟಿನಲ್ಲಿ ನಾನ ಉತ್ತಮ ಸಮಯವನ್ನು ಇಲ್ಲಿ ಕಳೆದೆ. ಮಂಗಳೂರು ಕಡೆಗೆ ಹೋಗುವಾಗ ಅಥವ ಮಂಗಳೂರಿನಲ್ಲೇ ನೀವು ಇದ್ದರೆ ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟು ನೀಡಿ. ನೀವು ಎಳನೀರು ಪ್ರಿಯರಾಗಿದ್ದರು ಇದು ನಿಮಗೆ ಹೇಳಿ ಮಾಡಿಸಿದ ಸ್ಥಳ. ಆರೋಗ್ಯಕ್ಕೆ ಒಳ್ಳೆಯದಾದ ಭೂಲೋಕದಲ್ಲಿರುವ ಅಮೃತವೆಂದೇ ಪರಿಗಣಿಸಲಾದ ಈ ಕಲ್ಪವೃಕ್ಷದ ನೀರನ್ನು ಕಡಿಮೆ ಬೆಲೆಗೆ ಒಮ್ಮೆ ಕುಡಿದು ಅದರ ಉತ್ಪನ್ನಗಳನ್ನು ಸವಿದು ಆನಂದಿಸಿ! 

 
ನನ್ನ ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತಾ,ನೀವು ಸಹ "ಬೊಂಡ ಫ್ಯಾಕ್ಟರಿ"ಗೆ ಭೇಟಿ ಕೊಟ್ಟಿದ್ದರೆ ನಿಮ್ಮ ಅನುಭವ,ಅಭಿಪ್ರಾಯವನ್ನು ಹಂಚಿ ಹಾಗು ನನ್ನ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಿರೀಕ್ಷಿಸುತ್ತಾ ಈ ಲೇಖನವನ್ನು ಅಂತ್ಯಗೊಳಿಸುತ್ತಾ ಇದ್ದೇನೆ.
ಬರಹ: ಶ್ರೀಕರ ಬಿ
B Shreekara Blogs

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!