ಪುತ್ತೂರಿಗೂ ಬಂತು ಭಾರತ್ ಸಿನಿಮಾಸ್!

ಪುತ್ತೂರಿಗೂ ಬಂತು ಭಾರತ್ ಸಿನಿಮಾಸ್!


ಕಳೆದ ಕೆಲವು ತಿಂಗಳುಗಳಿಂದ ಪುತ್ತೂರಿನಲ್ಲಿ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಕೇಳಿಬರುತ್ತಿರುವುದು ಒಂದೆ "ಪುತ್ತೂರಿಗೂ ಬಂತು ಭಾರತ್ ಸಿನಿಮಾಸ್!" ಹೌದು,ಸ್ನೇಹಿತರೇ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಮಳಿಗೆಯನ್ನು ನಡೆಸುತ್ತಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಇದರ ಮಾಲೀಕರಾದ ಶ್ರೀ ಬಲರಾಮ ಆಚಾರ್ಯ ಅವರ ಒಡೆತನದ ಜಿ.ಎಲ್ ಮಾಲಿನ ಎರಡನೆಯ ಮಹಡಿಯಲ್ಲಿ ಇದೇ ಡಿ.23ರಂದು ನಮ್ಮ ತುಳುನಾಡಿನ ಬ್ರ್ಯಾಂಡ್ "ಭಾರತ್ ಸಿನಿಮಾಸ್" ಅವರ 6ನೇ ಶಾಖೆ ಆರಂಭಗೊಂಡಿದೆ. ಇದು ಪುತ್ತೂರಿನ ಸಿನಿಪ್ರಿಯರ ಸಂತೋಷವನ್ನು ಇಮ್ಮಡಿಗೊಳಿಸಿದೆ. 
ಸುಂದರ ವಿನ್ಯಾಸದೊಂದಿಗಿ ಕಂಗೊಳಿಸುತ್ತಿರುವ ಥಿಯೇಟರಿನ ಮಾಹಿತಿ,ನನ್ನ ಅನಿಸಿಕೆಯನ್ನು ಈ ಲೇಖನದಲ್ಲಿ ನೀವು ಓದಬಹುದಾಗಿದೆ.

ಥಿಯೇಟರಿನ ಮಾಹಿತಿ: "ಭಾರತ್ ಸಿನಿಮಾಸ್ ಪುತ್ತೂರು" ಇದು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಪುತ್ತೂರು-ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದಂತೆ ಪ್ರತಿಷ್ಠಿತ ಮೊಬೈಲ್ ಅಂಗಡಿ "ಸಂಗೀತ ಮೊಬೈಲ್ಸ್" ಇದರ ಮುಂಭಾಗದಲ್ಲಿ ಪಾಂಗಳಾಯಿ ರಸ್ತೆ ಆರಂಭಗೊಳ್ಳುವ ಸ್ಥಳದಲ್ಲ ನೂತನವಾಗಿ ನಿರ್ಮಾಣಗೊಂಡು ಇನ್ನೇನು ಕೆಲವೇ ಸಮಯದಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧಗೊಳ್ಳುತ್ತಿರುವ ಜಿ.ಎಲ್ ಮಾಲಿನ ಎರಡನೆಯ ಮಹಡಿಯಲ್ಲಿ ಇದೆ. ಸುಸಜ್ಜಿತ 3 ಪರೆದೆಗಳನ್ನುಳ್ಳ ಈ ಚಿತ್ರಮಂದಿರದ ಒಟ್ಟು ಆಸನ ಸಂಖ್ಯೆ 473. ಆರಾಮದಾಯಕ,ಫುಶ್ ಬ್ಯಾಕನ್ನು ಒಳಗೊಂಡಿರುವ ಆಸನಗಳನ್ನು ಇಲ್ಲಿ ಅಳವಡಿಸಲಾಗಿದೆ. ಕ್ರಿಸ್ಟಿ ಕಂಪನಿಯ 2K ಡಿಜಿಟಲ್ ಪ್ರೊಜೆಕ್ಷನ್ ಸಿಸ್ಟಮ್, ಪಲ್ಸ್ ಎಲೆಕ್ಟ್ರಾನಿಕ್ಸ್ ಅವರ 7.1 ಹಾಗು 5.1 ಆಡಿಯೋ ಸಿಸ್ಟಮ್, 2ಡಿ ಮತ್ತು 3ಡಿ ಸಿನಿಮಾಗಳನ್ನು ಪ್ರದರ್ಶಸಿಬಹುದಾದ ಪರದೆಗಳು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಈ ಥಿಯೇಟರ್ ಒಳಗೊಂಡಿದೆ. ಸಿನಿಮಾದ ಮಧ್ಯಂತರ ಸಮಯದಲ್ಲಿ ಖಂಡಿತವಾಗಿಯೂ ನೀವು ನೆಚ್ಚಿನ ಪಾಪ್‌ಕಾರ್ನ್,ಬರ್ಗರ್ ಅಥವ ಇತರೆ ತಿನಿಸು,ಜ್ಯೂಸ್ ಅನ್ನು ಖರೀದಿಸಿಯೇ ಖರೀದಿಸುತ್ತೀರಿ. ಅದಕ್ಕೂ ಇಲ್ಲಿ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿನ ಫುಡ್ ಕೋರ್ಟಿನಲ್ಲಿ ಇತರೇ ಮಲ್ಟಿಫ್ಲೆಕ್ಸ ಥಿಯೇಟರಿನಲ್ಲಿರುವಂತೆ ಪಾಪ್‌ಕಾರ್ನ್,ಬರ್ಗರ್,ನಾಚೋಸ್, ತಂಪು ಪಾನೀಯಗಳು(ಮಿರಿಂಡ,ಪೆಪ್ಸಿ,ಸ್ಪ್ರೈಟ್), ಬಿಸಿ ಪಾನೀಯಗಳು(ಹಾಟ್ ಚಾಕೊಲೇಟ್,ಹಾಟ್ ಕಪುಚೀನೋ,ಹಾಟ್ ಮಿಲ್ಕ್,ಬ್ಲಾಕ್ ಕಾಫೀ) ಹಾಗು ಇತರೆ ತಿನಿಸುಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅತ್ಯಾಧುನಿಕ ಸೌಲಭ್ಯ ಮತ್ತು ಸುಂದರ ವಾಸ್ತು ವಿನ್ಯಾಸ,ಕಾಯುವ ಸ್ಥಳದಲ್ಲಿ ಕೊಡುಲಾದ ಸ್ವರ್ಣ ಬಣ್ಣದ ಲೇಪನದೊಂದಿಗೆ ನೂತನ ಮಲ್ಟಿಪ್ಲೆಕ್ಸ್ ಕಂಗೊಳಿಸುತ್ತಿದೆ.ಟಿಕೇಟು ದರದ ಬಗ್ಗೆ ಹೇಳುವುದಾದರೆ 2ಡಿ ಸಿನಿಮಾಗಳಿಗೆ ತಾವು 112ರೂ ಹಾಗು 150ರೂಗಳಿಗೆ ಮೂರು ದರ್ಜೆಗಳ ಸೀಟು ಪಡೆಯಬಹುದು. 3ಡಿ ಸಿನಿಮಾಕ್ಕೆ ಎಲ್ಲಾ ದರ್ಜೆಗಳಿಗೂ 150ರೂ ದರವನ್ನು ನಿಗದಿಪಡಿಸಲಾಗಿದೆ.( ಮುಂದಿ ಟಿಕೇಟು ದರದಲ್ಲಿ ಸ್ವಲ್ಪ ಬದಲಾವಣೆ ಇರಬಹುದು)
ಇಲ್ಲಿ ಸಿನಿಮಾ ನೋಡಲು "ಬುಕ್ ಮೈ ಶೋ" ಮೂಲಕ ಆನೈನ್ ಟಿಕೇಟಿಂಗ್, ಕೌಂಟರ್ ಟಿಕೆಟ್ ಹಾಗೂ ಟೆಲಿ ಬುಕಿಂಗ್ ವ್ಯವಸ್ಥೆ ಯನ್ನು ಗ್ರಾಹಕರ ಅನುಕೂಲಕ್ಕಾಗಿ ಪರಿಚಯಿಸಲಾಗಿದೆ . ಇದರಿಂದಾಗಿ ನಿಮ್ಮ ಆಯ್ಕೆಗೆ ಅನುಸಾರವಾಗಿ ಬುಕ್ ಮಾಡಿ ಸಿನಿಮಾ ವೀಕ್ಷಿಸಬಹುದು.
ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ಚಿತ್ರಗಳ ಬಗ್ಗೆ ತಿಳಿಯಲು 8050253030 ಸಂಪರ್ಕಿಸಬಹುದು.

ಥಿಯೇಟರಿನ ಬಗ್ಗೆ ನನಗೆ ಅನಿಸಿಕೆ: ಥಿಯೇಟರಿನ ವಿನ್ಯಾಸ ನನಗೆ ತುಂಬಾ ಇಷ್ಟವಾಯಿತು. ಗ್ಯಾಲರಿಯ ವಿನ್ಯಾಸ,ಸ್ವರ್ಣ ಬಣ್ಣ,ನೆಲ ಮೇಲೆ ಪ್ರತಿಬಿಂಬಿಸುವ ಮೇಲಿನ ಬೆಳಕು ನೋಡುವಾಗಲೇ ನೆಮ್ಮದಿಯನ್ನು ತರುತ್ತದೆ. ಥಿಯೇಟರಿನ ಸಿಬ್ಬಂದಿಗಳು ಗ್ರಾಹಕ-ಸ್ನೇಹಿಗಳು. ತಮ್ಮ ಬಳಿ ಏನಾದರು ಕೇಳಲು ಇದ್ದರೆ ಅವರ ಬಳಿ ಹೋಗಿ ಕೇಳಿದರೆ ತಕ್ಷಣ ತಮಗೆ ಮಾಹಿತಿಯನ್ನು ನೀಡುತ್ತಾರೆ.ಥಿಯೇಟರಿನ ಸಭಾಂಗಣದ(ಸಿನಿಮಾ ನೋಡುವ ಸ್ಥಳ) ಬಗ್ಗೆ ಹೇಳುವುದಾದರೆ ಸ್ಥಳವನ್ನು ಅತ್ಯುತ್ತಮವಾಗಿ ಉಪಯೋಗಿಸಿ ಅಚ್ಚುಕಟ್ಟಾಗಿ ಆಸನಗಳನ್ನು ಜೋಡಿಸಿದ್ದಾರೆ. ಆಸನಗಳು ಬಹಳ ಆರಾಮದಾಯಕವಾಗಿದೆ. ಮಂಗಳೂರಿನ ಭಾರತ್ ಸಿನಿಮಾಸಿನ ಆಸನಗಳಿಕ್ಕಿಂತಲು ಇಲ್ಲಿನ ಆಸನಗಳು ಆರಾಮದಾಯಕ ಎಂದು ಅನಿಸಬಹುದು. ಈ ಆಸನಗಳು ಫುಶ್ ಬ್ಯಾಕ್ ಆಸನಗಳಾಗಿರುವುದರಿಂದ ಹಿಂಬದಿಗೆ ಒರಗಿ ಸಿನಿಮಾವನ್ನು ವೀಕ್ಷಿಸಬಹುದು. ಥಿಯೇಟರಿನ ಪರದೆಗಳು ದೊಡ್ಡದಾಗಿದೆ. ಆಡಿಯೋ ಸಿಸ್ಟಮ್ ಬಹಳ ಚೆನ್ನಾಗಿದೆ. 3ಡಿ ಅನುಭವವನ್ನು ಬಹಳ ಚೆನ್ನಾಗಿ ಅನುಭವಿಸಬಹುದು.ಆದ್ದರಿಂದ ಅತ್ಯುತ್ತಮವಾದ ಸಿನಿಮಾ ಅನುಭವ ನಿಮಗೆ ಇಲ್ಲಿ ಸಿಗುತ್ತದೆ. ಶೌಚಾಲಯವು ಬಹಳ ಶುಚಿತ್ವದಿಂದ ಕೂಡಿದೆ. ಇನ್ನು ಮಧ್ಯಂತರ ಅವಧಿಯಲ್ಲಿ ಪ್ರೇಕ್ಷಕರು ಹೆಚ್ಚಾಗಿ ಹೋಗುವುದು ಫುಡ್ ಕೋರ್ಟಿಗೆ. ಫುಡ್ ಕೋರ್ಟ್ ಮೂರು ಪರದೆಗಳ ಮಧ್ಯದಲ್ಲಿದೆ. 
ನಿಮಗೆ ಇಲ್ಲಿ ಕಡಿಮೆ ದರದಲ್ಲಿ ಥಿಯೇಟರಿನಲ್ಲಿ ಲಭ್ಯವಿರುವ ಎಲ್ಲಾ ಬಗೆಯ ತಿನಿಸುಗಳು,ಪಾನೀಯಗಳು ದೊರಕುತ್ತದೆ.ರುಚಿಗೂ ಏನು ಕೊರತೆಯಿಲ್ಲ. ಉತ್ತಮ ಗುಣಮಟ್ಟದ ಆಹಾರವನ್ನು ಪಡೆದು ಸಿನಿಮಾವನ್ನು ತಾವು ಇಲ್ಲಿ ಆನಂದಿಸಬಹುದಾಗಿದೆ. ಒಟ್ಟಿನಲ್ಲಿ ಪುತ್ತೂರು ಇಷ್ಟು ಸಮಯ ಯಾವುದಕ್ಕೆ ಕಾದಿತ್ತೋ ಅದು ಈಗ ಪುತ್ತೂರಿಗೆ ಬಂದಿದೆ! ಪುತ್ತೂರಿನಲ್ಲೇ ದೊಡ್ಡ ನಗರಗಳ ಮಲ್ಟಿಫ್ಲೆಕ್ಸ್ ಥಿಯೇಟರಿನಲ್ಲಿ ಸಿನಿಮಾ ನೋಡಿ ಆನಂದಿಸಿದಂತೆ ಇನ್ನು ಮುಂದೆ ನಮ್ಮ ಪುತ್ತೂರಿನಲ್ಲೂ ಅದೇ ರೀತಿಯ ಅನುಭವವನ್ನು ಪಡೆಯಬಹುದು. ಪುತ್ತೂರಿನ ಸಿನಿಪ್ರಿಯರ ಎಲ್ಲಾ ಬೇಡಿಕೆಗಳನ್ನು "ಭಾರತ್ ಸಿನಿಮಾಸ್ ಪುತ್ತೂರು" ಈಡೇರಿಸಲಿದೆ. ಒಮ್ಮೆ ನೀವು ಕೂಡ ಕುಟುಂಬ,ಗೆಳೆಯರ ಜೊತೆಗೆ ಬಂದು ಇಲ್ಲಿ ಸಿನಿಮಾ ನೋಡಿ ಆನಂದಿಸಿ!
ನನ್ನ ಈ ಲೇಖನ ತಮಗೆ ಇಷ್ಟವಾದರೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ,ಉಳಿದವರಿಗಿ ಹಂಚಿ,ಸಿನಿಮಾ ನೋಡಿ ಬಂದ ನಂತರ ನಿಮ್ಮ ಅನುಭವವನ್ನು ತಿಳಿಸಿ ಎಂದು ಹೇಳುತ್ತಾ ಈ ಲೇಖನವನ್ನು ಅಂತ್ಯಗೊಳಿಸುತ್ತೇನೆ.

Comments

  1. 👌🏻👌🏻👌🏻ಅದ್ಭುತವಾದ ವಿಮರ್ಶೆ

    ReplyDelete

Post a Comment

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!