ರಾಕೆಟ್ರಿ-ದಿ ನಂಬಿ ಎಫೆಕ್ಟ್!

 


ರಾಕೆಟ್ರಿ-ದಿ ನಂಬಿ ಎಫೆಕ್ಟ್!


ಇತ್ತೀಚಿಗೆ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ ಇದು!


ಭಾರತ ಬಾಹ್ಯಾಕಾಶ ಮತ್ತು ಸಂಶೋಧನ ಸಂಸ್ಥೆ ಇಸ್ರೋನ ಆರಂಭಿಕ ದಿನಗಳಲ್ಲಿ ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಡಾ.ವಿಕ್ರಮ್ ಸಾರಾಭಾಯಿ,ಡಾ.ಸತೀಶ್ ಧವನ್,ಡಾ.ಉಡುಪಿ ರಾಮಚಂದ್ರ ರಾವ್,"ಭಾರತ ರತ್ನ"ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೊತೆ ಇಸ್ರೋವನ್ನ ಬೆಳೆಸಿದ ಶ್ರೇಷ್ಠ ವಿಜ್ಞಾನಿ "ಪದ್ಮಭೂಷಣ" ಡಾ. ನಂಬಿ ನಾರಾಯಣ್ ಅವರ ಜೀವನದ ಆಧರಿತ ಸಿನಿಮಾ ಇದು. 

ಮೊತ್ತಮೊದಲು ನಂಬಿ ನಾರಾಯಣ್ ಅವರ ಬಳಿ ನಾನು ಕ್ಷಮೆ ಕೇಳುತ್ತೇನೆ. ಒಬ್ಬ ಅಪ್ಪಟ ದೇಶಭಕ್ತ,ದೇಶಕ್ಕಾಗಿ ದುಡಿಯುತ್ತಿದ್ದು ಮೋಸದಿಂದ,ಸುಮ್ಮನೆ ಎಷ್ಟೋ ದಿನಗಳ ಕಾಲ ಚಿತ್ರಹಿಂಸೆ,ಶಿಕ್ಷೆ ಅನುಭವಿಸಿದವರು ನಂಬಿ ನಾರಾಯಣ್. ನಾವೆಲ್ಲರೂ ಅವರ ಬಳಿ ಕ್ಷಮೆ ಕೇಳಬೇಕಿದೆ.

ಜೊತೆಗೆ ಸಿನಿಮಾ ನಿರ್ಮಿಸಿದ ಶ್ರೀ ಆರ್.ಮಾಧವನ್ ಅವರಿಗೆ ಒಂದು ಸೆಲ್ಯೂಟ್ ಮಾಡಬೇಕಿದೆ. ನಂಬಿ ನಾರಾಯಣ್ ಅವರಂತಹ ಶ್ರೇಷ್ಠ ವಿಜ್ಞಾನಿಯ ಬಗ್ಗೆ ತಿಳಿದುಕೊಂಡಿರದ ಈಗಿನ ಯುವ ಜನತೆಗೆ ಹಾಗು ಅವರ ಬಗ್ಗೆ ಆದ ಅಪಪ್ರಚಾರವೇ ಸತ್ಯ ಎಂದು ತಿಳಿದುಕೊಂಡಿರುವ ಜನರಿಗೆ ಸತ್ಯ ತಿಳಿಸಿದ್ದು ಈ ಸಿನಿಮಾ. 



ಸಿನಿಮಾ ಆರಂಭಗೊಳ್ಳುವಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಸಿನಿಮಾದ ಇಂಟ್ರೋ ಪದ್ಯ ಏನು ಇದೆಯೋ ಅದು ಆರಂಭಗೊಳ್ಳುವುದೇ "ಶ್ರೀ ವೆಂಕಟೇಶ್ವರ ಸುಪ್ರಭಾತ"ದಿಂದ! ಹೌದು, ಈಗಿನ ಹಿಂದು ದೇವರು,ಧರ್ಮವನ್ನು ಅವಮಾನಿಸುವಂತಹ ಸಿನಿಮಾಗಳ ನಡುವೆ ಸಿನಿಮಾದಲ್ಲಿ ನಾನು ಹಿಂದು ದೇವರ ಶ್ಲೋಕ,ಮಂತ್ರ,ಸ್ತೋತ್ರವನ್ನು ಆರಂಭದಲ್ಲೇ ಉಪಯೋಗಿಸಿ ದೇವರ ಸ್ಮರಣೆ ಮಾಡುವುದನ್ನು ನೋಡುವುದು ನನಗೆ ವಿಶೇಷವೆನಿಸಿತು ಹಾಗು ಮೈ ರೋಮಾಂಚನವಾಯಿತು. ನಾನು ಈ ಸಿನಿಮಾ ನೋಡಿದ್ದು ವೂಟ್ನಲ್ಲಿ, ಥಿಯೇಟರಿಗೆ ಹೋಗಿ ಅದನ್ನು ಅನುಭವಿಸಬೇಕಿತ್ತು ಎಂದು ಪಶ್ಚಾತಾಪ ಪಟ್ಟುಕೊಂಡೆ! ನಂತರ ನಂಬಿ ನಾರಾಯಣ್ ಅವರು ತಮ್ಮ ಮನೆಯ ದೇವರ ಕೋಣೆಯಲ್ಲಿ ದೇವರ ಪೂಜೆ,ಧ್ಯಾನ ಮಾಡುವುದನ್ನು ನೋಡಬಹುದು. 

ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೊತೆ ನಂಬಿ ನಾರಾಯಣ್(ಅವರ ಪಾತ್ರದಲ್ಲಿ ಆರ್.ಮಾಧವನ್) ಅವರು ನ್ಯೂಸ್ ವಾಹಿನಿಯಲ್ಲಿ ಸಂದರ್ಶನ ನೀಡುತ್ತಾರೆ. ಆರಂಭದಲ್ಲಿ ಅವರು ತುಂಬಾ ರಾಕೆಟ್ ಉಡಾವಣಾ ಕೇಂದ್ರದಲ್ಲಿ ತಾವು ಮಾಡುತ್ತಿದ್ದ ಕೆಲಸ,ಸಂಶೋಧನೆಯ ಅನುಭವವನ್ನು ಹಂಚಿಕೊಳ್ಳುತ್ತಾ ಡಾ. ಎ.ಪೆ.ಜೆ ಅಬ್ದುಲ್ ಕಲಾಂ ಅವರನ್ನು ದೊಡ್ಡ ಅಪಘಾತದಿಂದ ಪಾರು ಮಾಡಿದ ಘಟನೆಯನ್ನು ಹೇಳುತ್ತಾರೆ. ನಂತರ ಅವರು ಅಮೇರಿಕದಲ್ಲಿ ರಾಸಾಯನಿಕ ರಾಕೆಟ್ ಪ್ರೊಪಲ್ಷನ್ ವಿಷಯದಲ್ಲಿ ಪ್ರೋ. ಲೂಗಿ ಕ್ರೋಕೋ ಅವರ ಮಾರ್ಗದರ್ಶನದಲ್ಲಿ ಎಂ.ಎಸ್.ಇ ಡಿಗ್ರಿ ಪಡೆಯುತ್ತಾರೆ. 

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಿಂದ ಅವರಿಗೆ ಕೆಲಸಕ್ಕೆ ಸೇರಿ ಉತ್ತಮ ವೇತನ,ಇತರೇ ಉತ್ತಮ ಸೌಲಭ್ಯದ ಆಮಿಷ ಒಡ್ಡಿ ಅವರಿಗೆ ಆಮಂತ್ರಣ ನೀಡಿದರು,ಅದನ್ನು ತಿರಸ್ಕರಿಸುತ್ತಾರೆ! ಯೋಚಿಸಿ ನೋಡಿ ನಾಸಾದಂತಹ ಸಂಸ್ಥೆಯಿಂದ ಆಮಂತ್ರಣ ಬಂದರೂ ಅದನ್ನು ತಿರಸ್ಕರಿಸಿ ತಾಯ್ನಾಡಿಗಾಗಿ ದುಡಿಯಲು ಹೊರಟ ಧೀರ ಇವರು. ನಂತರ ಅವರು ಫ್ರಾನ್ಸ್‌ಗೆ ಹೋಗಿ ತಮ್ಮದೆ ಸ್ವಂತ ಎಂಜಿನ್ ನಿರ್ಮಿಸಲು ನೋಡುತ್ತಾರೆ.

ಇನ್ನು ಬರುವ ಕಥೆ ತುಂಬಾ ರೋಚಕವಾಗಿರುವಂತದ್ದು. ಫ್ರಾನ್ಸ್‌ನಿಂದ ಭಾರತಕ್ಕೆ ಮರಳುವ ನಂಬಿ ನಂತರ ರಷ್ಯಕ್ಕೆ ಹೋಗುತ್ತಾರೆ. ಅಲ್ಲಿ ಅಲ್ಲಿನ ಕ್ರಯೋಜನಿಕ್ ಮಿಸೈಲ್ಗಳ ಬಗ್ಗೆ ತಿಳಿದುಕೊಂಡು ತಮ್ಮ ರಷ್ಯ ಮೂಲದ ಗೆಳೆಯನ ಮೂಲಕ ಭಾರತಕ್ಕೆ ಆಮದು ಮಾಡಿ ತಮ್ಮ ದೇಶದ ಉಪಯೋಗಕ್ಕೆ ಬರುವಂತೆ ಮಾಡಲು ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಅವರ ಪಾತ್ರ ನೋಡುವಾಗ ಜೇಮ್ಸ್ ಬಾಂಡ್ ತರ ಇತ್ತು! ಅಮೇರಿಕದ ವಿರೋಧ,ಜೀವ ಬೆದರಿಕೆಯ ನಡುವೆ ತನ್ನ ದೇಶದ ಏಳಿಗೆಗೆ,ದೇಶ ಸೇವೆ ಮೂಲಕ ಅವರು ಪಟ್ಟ ಶ್ರಮವನ್ನು ಅಲ್ಲಿ ನಮಗೆ ಸರಿಯಾಗಿ ಕಾಣಬಹುದಾಗಿದೆ.

ಹೇಗೋ ಭಾರತಕ್ಕೆ ತರಲು ವ್ಯವಸ್ಥೆಯೆಲ್ಲ ಆದಾಗ ಅವರಿಗೆ ಆಘಾತ ಎದುರಾಗುತ್ತದೆ.

ಮುಂದೆ ಸಿನಿಮಾದಲ್ಲಿ ಬರುವ ಸನ್ನಿವೇಶಗಳು ತುಂಬಾ ಭಾವನಾತ್ಮಕವಾದದ್ದು. 

ಭಾರತದಲ್ಲಿ ಒಂದು ದಿನ ಅವರು ದೇವಸ್ಥಾನಕ್ಕೆ ಹೋಗಿರುವಾಗ ಅಲ್ಲಿ ಅವರನ್ನು ಒಂದು ಕೇಸಿನಲ್ಲಿ ಬಂಧಿಸುವ ಪೋಲಿಸರು,ಅವರನ್ನು ಎಳೆದುಕೊಂಡು ಹೋಗಿ,ಅವರ ಜೊತೆಗೆ ತನಿಖೆ ಮಾಡಲು ಎಂದು ಬರುವ ಅಧಿಕಾರಿಗಳು ಅವರಿಗೆ ಹಿಂಸೆ ಕೊಡುವ ದೃಶ್ಯ ನೋಡುವಾಗ ಕಣ್ಣಲ್ಲಿ ನೀರು ಬಂತು. ನಂತರ ಹೇಗೋ ಆ ಕೇಸಿನಲ್ಲಿ ಗೆದ್ದು ಬರುವ ನಂಬಿ ನಂತರ ಬರುವ ಕಷ್ಟ,ಇಸ್ರೋದಲ್ಲಿ ಅವರ ಜೊತೆಗೆ ದುಡಿದ ಉದ್ಯೋಗಿಗಳ(ವಿಜ್ಞಾನಿಗಳ) ಬಳಿ ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡಾಗ ಬಹಳ ದುಃಖಿಸುತ್ತಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಅವರು ಬರುವ ಕಷ್ಟವನ್ನು ನೋಡಿದಾಗ ಹೃದಯ ಮಿಡಿಯದೇ ಇರಲು ಸಾಧ್ಯವಿಲ್ಲ. ಸರ್ಕಾರದಿಂದ ಅವರಿಗೆ ಕೋರ್ಟ್ ಆದೇಶ ಅನುಸಾರ ಪರಿಹಾರ ಧನ ಸಿಗದೆ ಇದ್ದಾಗ ಮತ್ತೆ ಕೋರ್ಟಿಗೆ ಹೋಗುವ ಅವರು ಅಲ್ಲಿ ಕೇಸ್ ಜಯಿಸುತ್ತಾರೆ. ಇದರ ಜೊತೆಗೆ ಕೊನೆಗೆ ಸಂದರ್ಶನ ಮುಗಿಯುವಾಗ ಸ್ವತಃ ನಂಬಿ ನಾರಾಯಣ್ ಸಂದರ್ಶನದಲ್ಲಿ ಕಾಣುತ್ತಾರೆ. ಅವರ ಕಥೆ ಕೇಳಿ ಬಹಳ ದುಃಖಪಡುವ ಶಾರುಖ್ ಖಾನ್ ದೇಶದ ಸಮಸ್ತ ನಾಗರಿಕರ ಪರವಾಗಿ ಅವರ ಬಳಿ ಕ್ಷಮೆ ಕೇಳುವುದರೊಂದಿಗೆ ಸಿನಿಮಾ ಮುಗಿಯುತ್ತದೆ.

ನಾನು ಈ ಸಿನಿಮಾದ ಬಗ್ಗೆ ಕೇಳುವ ಮೊದಲು ನಂಬಿ ನಾರಾಯಣ್ ಅವರ ಬಗ್ಗೆ ನನಗೆ ಅಷ್ಟು ಗೊತ್ತಿರಲಿಲ್ಲ,ನಾನು ಕೂಡ ಅವರು ಒಬ್ಬ ದೇಶದ್ರೋಹಿಯೆಂದೆ ಅಂದುಕೊಂಡಿದ್ದೆ.ಈ ಸಿನಿಮಾ ಬಗ್ಗೆ ಕೇಳಿದ ನಂತರ ಅವರ ಬಗ್ಗೆ ಮಾಹಿತಿ ಹುಡುಕಲು ಶುರು ಮಾಡಿದೆ,ಆಗ ನನಗೆ ಗೊತ್ತಾಯಿತು ನಾನು ಎಷ್ಟು ದಡ್ಡ,ಅವರ ವ್ಯಕ್ತಿತ್ವ ಎಂತದ್ದು ಎಂದು.

ಈ ಸಿನಿಮಾ ನೋಡಿದ ನಂತರವಂತು ನನ್ನ ಕಣ್ಣಲ್ಲಿ ನೀರು ಬರದೆ ಇರಲಿಲ್ಲ. ಛೇ! ಇಂತಹ ಮಹಾನ್ ವ್ಯಕ್ತಿಗೆ ಅನ್ಯಾಯ ಆಯಿತಲ್ಲ! ಅವರ ಮೇಲೆ ಷಡ್ಯಂತ್ರ ರಚನೆ ಆಗಿರದಿದಲ್ಲಿ ಇಸ್ರೋ ಅಂದೇ ಯಾವ ಮಟ್ಟಕ್ಕೆ ಬೆಳೆದಿರುತಿತ್ತೋ!

ನಿಮಗೆ ಅವಕಾಶ ಸಿಕ್ಕರೆ ಒಮ್ಮೆ ಈ ಸಿನಿಮಾ ನೋಡಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!