ಡಾ.ಕೆ.ಶಿವರಾಮ ಕಾರಂತರ "ಬೆಟ್ಟದ ಜೀವ" ಪುಸ್ತಕದ ಬಗ್ಗೆ ನನ್ನ ಅನಿಸಿಕೆಗಳು!

 


ಬೆಟ್ಟದ ಜೀವ- ಡಾ. ಕೆ. ಶಿವರಾಮ ಕಾರಂತ

ಪುಸ್ತಕ ಪ್ರಕಾಶಕರು- ಸಪ್ನ ಪ್ರಕಾಶನ

ಕಾರಂತಜ್ಜ  ಬರೆದ ಕಾದಂಬರಿಗಳಲ್ಲಿ ನಾನು ಓದುತ್ತಿರುವ ಮೊದಲ ಕಾದಂಬರಿ "ಬೆಟ್ಟದ ಜೀವ". ಈ ಕಾದಂಬರಿಯ ಬಗ್ಗೆ ನನ್ನ ಪ್ರೌಢಶಾಲಾ ದಿನಗಳಲ್ಲಿ ನನ್ನ ಕನ್ನಡ ಗುರುಗಳು ಹೇಳುವುದನ್ನು ಕೇಳಿದ್ದೆ. ಹೀಗೆ ಪುಸ್ತಕ ತರಿಸಿ ಓದಿಯೇ ಬಿಟ್ಟೆ.

ಶಿವರಾಮರು ಕಳೆದು ಹೋದ ತನ್ನ ಎಮ್ಮೆಯನ್ನು ಹುಡುಕುತ್ತ ಸುಬ್ರಹ್ಮಣ್ಯಕ್ಕೆ ಹೋದವರು ಮರಳಿ ಬರುವಾಗ ದಾರಿ ತಪ್ಪಿ ಸುಳ್ಯ ರಸ್ತೆಯಲ್ಲಿ ಗುತ್ತಿಗಾರು ಸಮೀಪ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾದಂಬರಿಯಲ್ಲಿ ಬರುವ ಮೊದಲ ವ್ಯಕ್ತಿ ದೇರಣ್ಣನನ್ನು ಕಂಡು,ಅವನ ಮೂಲಕ ತಾನು ಹೋಗುತ್ತಿರುವ ದಾರಿ ತಪ್ಪಿದ್ದು ಗೊತ್ತಾಗಿ ಮೊದಲೇ ದಣಿವಾಗಿದ್ದ ಅವರು ದೇರಣ್ಣನ ಬಳಿ ವಿಶ್ರಾಂತಿಗೆ ಎಲ್ಲಿಯಾದರೂ ಸ್ಥಳ ಸಿಗಬಹುದೇ ಎಂದು ಕೇಳುತ್ತಾರೆ. ನಂತರ ದೇರಣ್ಣ ಅವರ ಊರಿನ ದೊಡ್ಡ ವ್ಯಕ್ತಿ ಎಂದು ಹೇಳಬಹುದಾದ ಗೋಪಾಲಯ್ಯನವರ ಬಳಿ ಕರೆದುಕೊಂಡು ಹೋಗುತ್ತಾರೆ. ದಣಿವಾಗಿದ್ದ,ಯಾವುದೋ ಒಂದು ಊರಿನಿಂದ ಬಂದ ವ್ಯಕ್ತಿಗೆ ಆಶ್ರಯ ನೀಡುವ ಮನಸ್ಸಾಗಿ ಶಿವರಾಮರನ್ನು ಉಪಚರಿಸಿ,ಆಶ್ರಯ ನೀಡುತ್ತಾರೆ. ಇಲ್ಲಿಂದ ಕಾರಂತರ ಹಾಗು ಗೋಪಾಲಯ್ಯನವರ ನಡುವೆ ಆರಂಭಗೊಳ್ಳುವ ಒಡನಾಟ,ಪ್ರೀತಿ ಕಾದಂಬರಿಯ ಕೊನೆತನಕ ಗಮನಿಸಬಹುದು.
ಗೋಪಾಲಯ್ಯನವರ ಬಗ್ಗೆ ಹೇಳುವುದಾದರೆ ಗೋಪಾಲಯ್ಯನವರು ಅರುವತ್ತು ವಸಂತವನ್ನು ಪೂರೈಸಿದ ಹಿರಿಯರು. ತಮ್ಮ ಪತ್ನಿ ಶಂಕರಿಯೊಡನೆ ಕುಮಾರ ಪರ್ವತ ಬಳಿಯ ಕಾಡಿನಲ್ಲಿ ವಾಸವಾಗಿರುತ್ತಾರೆ. ಅವರಿಗೆ ಇಬ್ಬರು ಮಕ್ಕಳು. ಮಗಳಾದ ವಾಗ್ದೇವಿ ಬಾಣಂತನದ ಸಮಯದಲ್ಲಿ ತೀರಿ ಹೋದರೆ, ವಿದ್ಯಾಭ್ಯಾಸಕ್ಕೆ ಎಂದು ಹಳ್ಳಿ ಬಿಟ್ಚು ನಗರಕ್ಕೆ ಹೋದ ಮಗ ಶಂಭು ಪೇಟೆಯ ವ್ಯಾಮೋಹಕ್ಕೆ ಮರುಳಾಗಿ ಮತ್ತೆ ಮನೆಗೆ ಬರಲೇ ಇಲ್ಲ. ಇದೇ ಸಮಯಕ್ಕೆ ಬೇರೆ ಊರಿನಿಂದ ನಾರಾಯಣಯ್ಯ ಎಂಬುವವರನ್ನು ಕರೆದು ತಾವು ಕಾಟುಮೂಲೆಯಲ್ಲಿ ಮಾಡಿದ್ದ ಜಾಗೆಯಲ್ಲಿ ಅವರಿಗೆ ನೆಲೆ ಕಲ್ಪಿಸುವ ಗೋಪಾಲಯ್ಯನವರು ಅವರನ್ನು ತನ್ನ ಮಗನಂತೆ ಸಾಕಿ ಲಕ್ಷ್ಮೀ ಎಂಬುವವಳ ಜೊತೆ ವಿವಾಹವನ್ನು ಮಾಡಿಸುತ್ತಾರೆ. ಆ ದಂಪತಿ ಸಾವಿತ್ರಿ,ಸುಬ್ರಾಯ ಎಂಬ ಮಕ್ಕಳೊಡನೆ ಕಾಟುಮೂಲೆಯಲ್ಲಿ ಸುಖವಾಗಿರುತ್ತಾರೆ. ಗೋಪಾಲಯ್ಯನವರ ಮನೆಗೆ ಬಂದ ಶಿವರಾಮರಿಗೆ ಆ ದಿನ ರಾತ್ರಿ ಊಟೋಪಚಾರವನ್ನು ಮಾಡುವ ವೃದ್ಧ ದಂಪತಿಗಳು, ಶಿವರಾಮರ ಗುಣವನ್ನು ಕಂಡ ಅವರ ಬಳಿ ತಮ್ಮ ದುಃಖ,ಕಷ್ಟಗಳನ್ನೆಲ್ಲ ಹಂಚಿಕೊಳ್ಳುತ್ತಾರೆ. ಜೊತೆಗೆ ಮನೆ ಬಿಟ್ಟು ಹೋದ ಮಗನನ್ನು ಮತ್ತೆ ಕಾಣುವ ಹಂಬಲವನ್ನು ಅವರ ಬಳಿ ವ್ಯಕ್ತಪಡಿಸುತ್ತಾರೆ.ಮರುದಿನ ಶಿವರಾಮರು ಅಲ್ಲಿಂದ ಹಿಂದುರಿಗೆ ಬರಲು ಹೊರಟಾಗ ಅವರನ್ನು ಹೋಗಲು ಬಿಡದೆ ಮತ್ತೂ ಸ್ವಲ್ಪ ದಿನಗಳ ಕಾಲ ಅವರನ್ನು ಆದಾರ,ಸತ್ಕಾರದೊಂದಿಗೆ ಉಪಚರಿಸುವ ಬಗ್ಗೆ ದಂಪತಿಗಳು ಅವರ ಬಳಿ ಹೇಳಿಕೊಳ್ಳುತ್ತಾರೆ. ಇದಕ್ಕೆ ಒಪ್ಪಿದ ಕಾರಂತರಿಗೆ ನಂತರ ಗೋಪಾಲಯ್ಯನವರು ಹತ್ತಿರದ ವನ,ನದಿ,ಗುಡ್ಡಗಳಿಗೆಲ್ಲಾ ಕರೆದುಕೊಂಡು ಹೋಗುತ್ತಾರೆ. ನಿಸರ್ಗದ ಸೌಂದರ್ಯವನ್ನು ಆನಂದಿಸುವ ಕಾರಂತರಿಗೆ ಗೋಪಾಲಯ್ಯನವರು ಹಲವು ವಿಚಾರಗಳನ್ನು ತಿಳಿಸುತ್ತಾರೆ. ಕಾಟುಮೂಲೆಗೆ ಅವರನ್ನು ಕರೆದುಕೊಂಡು ಹೋಗುವ ಗೋಪಾಲಯ್ಯ, ಶಿವರಾಮರನ್ನು ನಾರಾಯಣಯ್ಯನವರಿಗೆ ಪರಿಚಯಿಸುತ್ತಾರೆ. ಅಲ್ಲಿಯೂ ಕಾರಂತರನ್ನು ಆದಾರ,ಸತ್ಕಾರದಿಂದ ಉಪಚರಿಸುವ ನಾರಾಯಣ್ಣಯ್ಯ-ಲಕ್ಷ್ಮೀ ದಂಪತಿಗಳ ಉಪಚಾರವನ್ನು ಕಂಡು ತುಂಬಾ ಸಂತೋಷರಾಗುತ್ತಾರೆ. ನಾರಾಯಣಯ್ಯ ತೋಟಕ್ಕೆ ಹೋಗಿರುವಾಗ ಲಕ್ಷ್ಮೀ ಶಂಭು ತನಗೆ ಕೊಟ್ಟ ಉಪದ್ರವನ್ನು ಶಿವರಾಮರ ಬಳಿ ಹೇಳಿ, ಆದ್ದರಿಂದ ಮಗ ಮನೆ ಬಿಟ್ಟು ಹೋಗಿರಬಹುದೇ ಎಂದು ಊಹಿಸುತ್ತಾಳೆ. ಗೋಪಾಲಯ್ಯನವರು ಆ ಮುದಿ ವಯಸ್ಸಿನಲ್ಲೂ ಶಿಕಾರಿ ಮಾಡುವ ಬಗೆ,ದೇರಣ್ಣ,ಬಟ್ಯನ ಜೊತೆ ಹಿಂದೆ ಮಾಡಿದ ಶಿಕಾರಿಯ ಬಗ್ಗೆ ನೆನಪುಗಳನ್ನು ಹೇಳುತ್ತಾರೆ. ಆ ಮುದಿ ವಯಸ್ಸಿನಲ್ಲೂ ಗೋಪಾಲಯ್ಯ ಮಾಡುವ ಚೇಷ್ಠೆ,ಹಾಸ್ಯವನ್ನು ಕಂಡು ಓದುಗಾರರ ಮುಖದಲ್ಲಿ ನಗುಮೂಡದೇ ಇರುವುದಿಲ್ಲ. ಕೊನೆಗೆ ಆ ಪರಿಸರದಲ್ಲಿ ಕಾಟ ನೀಡುತ್ತಿದ್ದ ಹುಲಿಯನ್ನು ಹಿಡಿಯಲು ಬೋನಿಡುವ ಗೋಪಾಲಯ್ಯ,ದೇರಣ್ಣ,ಬಟ್ಯನ ಜೊತೆ ಶಿವರಾಮರು ಶಿಕಾರಿ ಮಾಡುವ ಬಗ್ಗೆ ತಿಳಿದುಕೊಳ್ಳುಲು ಅಣಿಯಾಗಿ ಅವರ ಜೊತೆ ಹೋಗುತ್ತಾರೆ. ಬೋನಿಗೆ ಬಿದ್ದ ಹುಲಿಯನ್ನು ಕೊಂದ ನಂತರ ಕೊನೆಗೆ ಮತ್ತೆ ಮರಳಿ ಪುತ್ತೂರಿಗೆ ಹೊರಡುವ ಮುಂಚಿನ ದಿನ ಶಿವರಾಮರು ಗೋಪಾಲಯ್ಯನವರ ಬಳಿ ಅವರ ಮಗ ಶಂಭುವಿನ ಪೋಟೋ ತೋರಿಸಲು ಕೇಳಿ ಫೋಟೋ ನೋಡಿದಾಗ ತಮ್ಮ ಸ್ಮೃತಿ ಪುಟಗಳಲ್ಲಿ ಅದೇ ಮುಖವನ್ನು ಮುಂಚೆ ಎಲ್ಲೋ ನೋಡಿರುವ ಬಗ್ಗೆ ಕಲ್ಪಿಸಿ,ಅವನನ್ನು ಪುಣೆಯಲ್ಲಿ ಭೇಟಿಯಾಗಿರುವ ಬಗ್ಗೆ ನೆನಪಾಗಿ ಗೋಪಾಲಯ್ಯನವರ ಬಳಿ ಹೇಳಿದಾಗ ಹೇಗಾದರೂ ಮಾಡಿ ಒಮ್ಮೆಯಾದರು ಅವನನ್ನು ಭೇಟಿ ಮಾಡಿ ಒಂದು ಬಾರಿಯಾದರೂ ಮನೆಗೆ ಬಂದು ಅಪ್ಪ-ಅಮ್ಮನನ್ನು ಭೇಟಿಯಾಗಲೂ ಮನವೋಲಿಸುವಂತೆ ವಿನಂತಿಸಿಕೊಳ್ಳುತ್ತಾರೆ. ಕೊನೆಗೆ ಶಿವರಾಮರು ಗೋಪಾಲಯ್ಯನವರ ಜೊತೆ ಪುತ್ತೂರಿಗೆ ಗಾಡಿಯಲ್ಲಿ ಹೊರಡುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.
ನಾನು ಈ ಕಾದಂಬರಿಯನ್ನು ಓದಿ ಅದರಲ್ಲಿ ನನಗೆ ಕಂಡ ಕೆಲವು ಅಂಶಗಳನ್ನು ಇಲ್ಲಿ ಹೇಳಿದ್ದೇನೆ. ಓದುವಾಗ ನಾನು ಲೋಕದ ಪರಿಜ್ಞಾನವೇ ಇಲ್ಲದೇ ಪರಲೋಕಕ್ಕೆ ಹೋದಂತೆ ಭಾಸವಾಗಿತ್ತು.
ಯಾರಾದರೂ ಈ ಕಾದಂಬರಿ ಓದಲು ಬಾಕಿಯಿದ್ದರೆ ಅವಕಾಶ ದೊರಕಿದರೆ ಒಮ್ಮೆ ಓದಿ
ಧನ್ಯವಾದಗಳು
🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!