ನಾನು ಓದಿದ ಪುಸ್ತಕ "ಸನ್ಯಾಸಿಯ ಬದುಕು"

 ನಾನು ಓದಿದ ಪುಸ್ತಕ "ಸನ್ಯಾಸಿಯ ಬದುಕು"



ಸನ್ಯಾಸಿಯ ಬದುಕು- ಡಾ. ಶಿವರಾಮ ಕಾರಂತ 

ಪ್ರಕಾಶನ- ಸಪ್ನ ಬುಕ್ ಹೌಸ್

ಕಾರಂತಜ್ಜ ಬರೆದ ಹಲವು ಕಾದಂಬರಿಗಳಲ್ಲೊಂದು "ಸನ್ಯಾಸಿಯ ಬದುಕು". ಈ ಕಾದಂಬರಿಯಲ್ಲಿ ಲೇಖಕರು ಒರ್ವ ತನ್ನ ದುಶ್ಚಟದ ಈ ಕೆಲಸಗಳಿಂದ ಸಂಸಾರವನ್ನು ಬೀದಿಗೆ ತಂದು ಸಂಸಾರದ ಹೊಣೆಯಿಂದ ತಪ್ಪಿಸಿಕೊಂಡು ಸನ್ಯಾಸಿಯಾದ ಬಗೆ, ಆ ಸಂಸಾರದ ಆಧಾರಸ್ತಂಭವಾದ ಆ ಮನುಷ್ಯನನ್ನು ಕಳೆದುಕೊಂಡು ಬಹಳ ಕಷ್ಟಗಳನ್ನು ಅನುಭವಿಸಿದ ಅವನ ಪತ್ನಿ ಹಾಗು ಮಕ್ಕಳು,ಕೊನೆಗೆ ಆ ಸಂಸಾರಕ್ಕೆ ದೇವತೆಯಾಗಿ ಬಂದು ರಕ್ಷಿಸಿದ ಮತ್ತೊರ್ವ ಸ್ತ್ರೀಯ ಕಥೆಯನ್ನು ಪ್ರಮುಖವಾಗಿ ಓದಬಹುದಾಗಿದೆ. 


ಕಾದಂಬರಿಯ ಸಾರಾಂಶ ಹೀಗಿದೆ: ಉಡುಪಿಯಲ್ಲಿ ಶಂಕರರಾಯ ಎನ್ನವು ಒಬ್ಬ ಮನುಷ್ಯ ತನ್ನ ಪತ್ನಿ ಸುಮಿತ್ರ,ಮಕ್ಕಳಾದ ಗೋಪು(ಗೋಪಾಲಕೃಷ್ಣ) ಹಾಗು ರಾಧೆಯರೊಂದಿಗೆ ಜೀವನ ನಡೆಸುತ್ತಿದ್ದ. ನೌಕರಿಯಲ್ಲಿದ ಅವನು ಆರಂಭದಲ್ಲಿ ತನ್ನ ಸಂಸಾರವನ್ನು ಉತ್ತಮ ರೀತಿಯಿಂದ ನಡೆಸಿಕೊಂಡು ಹೋಗುತ್ತಿದ್ದ. ಸುಮಿತ್ರೆ ಬಾಲ್ಯದಲ್ಲಿ ಅಮ್ಮನನ್ನು ಕಳೆದುಕೊಂಡು ತನ್ನ ತಂದೆ ಹಾಗು ಸಹೋದರರೊಂದಿಗೆ ಬೆಳೆದವಳು. ಬಾಲ್ಯದಲ್ಲೆ ಕಷ್ಟದಿಂದ ಬೆಳೆದ ಅವಳಿಗೆ ತನ್ನ ಪತಿ ಸಾಕಿ ಸಲಹುತ್ತಿದ್ದ ರೀತಿಯನ್ನು ಕಂಡು ತಾನು ಉತ್ತಮ ಪತಿಯನ್ನು ಪಡೆದಿದ್ದೇನೆ ಎನ್ನುವ ಭಾವನೆಯಲ್ಲಿದ್ದಳು. ದಿನಗಳು ಉರಿಳಿದಂತೆ ಶಂಕರರಾಯನಿಗೆ ದುಶ್ಚಟಗಳು ಅಂಟಿದವು. ಜೂಜಾಟ ಹೀಗೆ ಇನ್ನಿತರ ಆಟಗಳಲ್ಲಿ ಹಣ ಕಳೆದುಕೊಂಡು,ಸಾಲವನ್ನು ಮಾಡಿ,ತನ್ನ ಪತ್ನಿಯ ಮಾಂಗಲ್ಯವನ್ನು ಸೇರಿ ಚಿನ್ನವನ್ನೆಲ್ಲ ಅಡವಿಟ್ಟು ಕೊನೆಗೆ ತನ್ನ ಸಂಸಾರವನ್ನು ಬಿಟ್ಟು ನಡುರಾತ್ರಿ ಊರು ಬಿಡುತ್ತಾನೆ. ಗೊತ್ತು ಗುರಿಯಿಲ್ಲದೆ ಅಲೆಯುತ್ತಾ ಉತ್ತರ ಭಾರತ ಕಡೆಗೆ ಸಂಚರಿಸುತ್ತಾನೆ. ಅಲ್ಲಿ ಒರ್ವ ಉತ್ತಮ ಸನ್ಯಾಸಿಯನ್ನು ಭೇಟಿಯಾಗಿ ಅವರ ಜೊತೆಗೆ ಇದ್ದು ಒಂದು ದಿನ ಧ್ಯಾನ ಮಾಡುತ್ತಿರುವಾಗ ದೇವರನ್ನು ಕಂಡೆನೆಂದು ಭ್ರಮಿತನಾಗಿ ಅಲ್ಲಿ ತನ್ನ ಹೆಸರನ್ನು ಸ್ವಾಮಿ ಶಿವಾನಂದ ಎಂದು ಬದಲಾಯಿಸಿಕೊಳ್ಳುತ್ತಾನೆ. ಅಲ್ಲಿಂದ ಹೊರಟು ವೃಂದಾವನಕ್ಕೆ ಹೋದಾಗ ಅಲ್ಲಿ ಭಾರತೀಯ ಉಡುಗೆಯಲ್ಲಿದ್ದ ಅಮೆರಿಕನ್ ಮಹಿಳೆಯನ್ನು(ಎನ್ನಾಬ್ರೈಟ್) ಭೇಟಿಯಾಗುತ್ತಾನೆ. ಆಕೆಗೆ ತನ್ನ ಸಂಸಾರದಲ್ಲುಂಟಾದ ತೊಂದರೆಗಳಿಂದ ಅಮೇರಿಕಾ ತೊರೆದು ಭಾರತಕ್ಕೆ ಬಂದಾಗ ಇಲ್ಲಿಯ ಸಂಸ್ಕೃತಿಗೆ ಮಾರುಹೋಗಿ ಅವಳ ಸಂಸ್ಕೃತಿಯನ್ನು ಬಿಟ್ಟು ಭಾರತದಲ್ಲಿ ಇರಲು ನಿರ್ಧರಿಸುತ್ತಾಳೆ. ಅದೇ ಸಂದರ್ಭಕ್ಕೆ ವೃಂದಾವನದಲ್ಲಿ ಸ್ವಾಮಿ ಶಿವಾನಂದರನ್ನು ಭೇಟಿಯಾಗಿ ಈತನಿಗೆ ಕೃಷ್ಣಾನಂದ ಎಂದು ಹೆಸರಿಸಿ ಆತನ ಬಗ್ಗೆ ಲೇಖನಗಳನ್ನು ಬರೆಯುತ್ತಾಳೆ.ಶಿವಾನಂದರು ವೃಂದಾವನದಿಂದ ಅಹಮದಾಬಾದ್,ದ್ವಾರಕೆಗೆ ಸಂಚರಿಸಿ ಮುಂಬೈಗೆ ಬಂದು ಅಲ್ಲಿ ಸ್ವಲ್ಪ ಸಮಯ ನೆಲೆಸುತ್ತಾರೆ. ಇತ್ತ ಸುಮಿತ್ರೆಗೆ ರುಕ್ಮಾಯಿಯ ಪರಿಚಯವಾಗುತ್ತದೆ. ಬೀದಿಗೆ ಬಿದ್ದ ಸಂಸಾರವನ್ನು ರುಕ್ಮಾಯಿ ರಕ್ಷಿಸಿ ಸುಮಿತ್ರೆಯ ಗರ್ಭದಲ್ಲಿರುವ ಗಂಡು ಮಗು ಜನನವಾಗಿ ಆ ಮಗುವಿಗೆ ದೇವು ಎಂದು ಹೆಸರಿರಿಸಿ ಅವಳ ಸಂಸಾರವನ್ನು ರುಕ್ಮಾಯಿ ಸಲಹುತ್ತಾಳೆ. ಅದೇ ಸಂದರ್ಭಕ್ಕೆ ಅನಾರೋಗ್ಯದಿಂದ ಮೃತಪಡುವ ಗೋಪುವಿನ ಅಗಲುವಿಕೆಯ ಸಂದರ್ಭಲ್ಲಿ ಸುಮಿತ್ರೆಯ ಜೊತೆಯಾಗಿ ನಿಂತು ತದನಂತರ ಅವಳ ಜೊತೆಗೆ ಜೀವನ ನಡೆಸಲು ನಿರ್ಧರಿಸಿ ರಾಧೆಯ ಮದುವೆ,ದೇವುವನ್ನು ಬೆಳೆಸಿ ದೊಡ್ಡವನಾಗಿ ಸ್ವಂತ ಕಾಲಿನಲ್ಲಿ ನಿಲ್ಲುವವರೆಗೆ ಅವರ ಜವಾಬ್ದಾರಿಯನ್ನು ಹೊರುತ್ತಾಳೆ.ಮುಂಬೈಯಿಂದ ಕಾರವಾರಕ್ಕೆ ಬರುವ ಶಿವಾನಂದರು ಆಗಲೇ ಕೃಷ್ಣಾನಂದರೆಂದು ಪ್ರಸಿದ್ಧರಾಗಿ ಅಲ್ಲಿ ಆಶ್ರಮವನ್ನು ಸ್ಥಾಪಿಸುತ್ತಾರೆ. ಎನ್ನಾ ತನ್ನ ಹೆಸರನ್ನು ಅನನ್ಯ ರಾಧಿಕೆ ಎಂದು ಬದಲಾಯಿಸಿಕೊಳ್ಳುತ್ತಾಳೆ. ಅದೇ ಸಂದರ್ಭಕ್ಕೆ ಆಶ್ರಮಕ್ಕೆ ಬರುವ ತನ್ನಂತೆಯೇ ಜೀವನದಲ್ಲಿ ಉಂಟಾದ ಏರುಪೇರುಗಳಿಂದ ಬೇಸೆತ್ತು ಊರೂರು ಅಲೆದಾಡುತ್ತಿದ್ದ ಕೃಷ್ಣಾನಂದರ ಭಾವಮೈದುನ ಮಂಜುನಾಥರಾಯ ತನ್ನ ಹೆಸರನ್ನು ಸ್ವಾಮಿ ಮಂಜುಳಾನಂದ ಎಂದು ಬದಲಿಸಿ ಆಶ್ರಮದ ನಿರ್ವಹಣೆಯ ಜವಬ್ದಾರಿ ಹೊತ್ತುಕೊಳ್ಳುತ್ತಾರೆ. ಕೃಷ್ಣಾನಂದರ ಹೆಸರು ಜನಪ್ರಿಯಗೊಂಡು ಅವರನ್ನು ದೇವರ ರೂಪವೆಂದು ತಿಳಿದು ಜನರು ಆಶ್ರಮಕ್ಕೆ ದೌಡಾಯಿಸುತ್ತಾರೆ. ಕೃಷ್ಣಾನಂದರು ಕುಂದಾಪುರದ ಶಂಕರರಾಯ ಎಂಬುದು ಜನರಿಗೆ ತಿಳಿದು ಹೋಗುತ್ತದೆ. ಸುಮಿತ್ರೆಯ ಕಷ್ಟಕ್ಕೆ ರುಕ್ಮಾಯಿ ಸಹಾಯ ಮಾಡುತ್ತಾಳೆ. ಇಳಿ ವಯಸ್ಸಿನ ರುಕ್ಮಾಯಿಗೆ ಕೊನೆಯದಾಗಿ ದೇವುವಿಗೆ ಮದುವೆ ಮಾಡಿಸಿಯಾದ ಮೇಲೆಯೇ ತಾನು ಇಹಲೋಕವನ್ನು ತ್ಯಜಿಸಬೇಕೆಂದು ಆಸೆ ಇರುತ್ತದೆ. ಪ್ರೇಮ ವಿರಹದಿಂದ ದುಃಖಗೊಳ್ಳುವ ದೇವು ಕಾರವಾರದ ಕೃಷ್ಣಾಶ್ರಮಕ್ಕೆ ಹೋಗುತ್ತಾನೆ. ದೇವು ಬಹಳ ದಿನಗಳಿಂದ ಮನೆಗೆ ಬಾರದಿರುವುದರಿಂದ ಗಾಬರಿಗೊಳ್ಳುವ ಸುಮಿತ್ರೆ ಹಾಗು ರುಕ್ಮಾಯಿಗೆ ದೇವು ಕೃಷ್ಣಾಶ್ರಮದಲ್ಲಿ ಇರುವುದು ತಿಳಿದು ತಂತಿಯನ್ನು ಕಳುಹಿಸುತ್ತಾರೆ. ಕೂಡಲೇ ಅಲ್ಲಿಂದ ಉಡುಪಿಗೆ ಬರುವ ದೇವುವಿಗೆ ಕೃಷ್ಣಾನಂದರ ಕಥೆ ತಿಳಿದು ಕೃಷ್ಣಾನಂದರು ತನ್ನ ತಂದೆ ಎಂದು ತಿಳಿದು ಅಲ್ಲಿಗೆ ಹೋದೆನಲ್ಲ ಎಂದು ಬೇಸರಗೊಂಡು ಇಡೀ ಸಂಸಾರವನ್ನು ತ್ಯಜಿಸಿ ಸಂಕಷ್ಟಕ್ಕೆ ನೂಕಿದ ತಂದೆಯ ಮೇಲೆ ಆಕ್ರೋಶಗೊಂಡು ಪತ್ರ ಬರೆಯುತ್ತಾನೆ. ಕೊನೆಗೆ ದೇವುವಿಗೆ ಲಘ್ನ ನಿಶ್ಚಯವಾಗಿ ಉಡುಪಿಯಲ್ಲಿ ಮದುವೆ ನಡೆಯುತ್ತದೆ. ಎಲ್ಲವನ್ನ ಕಂಡು ಜೀವನದ ಸಾರ್ಥಕತೆಯನ್ನು ಅನುಭವಿಸುವ ರುಕ್ಮಾಯಿ ಇಹಲೋಕ ತ್ಯಜಿಸಿ ಭಗವಂತನ ಪಾದ ಸೇರುತ್ತಾಳೆ. ಅವಳ ಫೋಟೋ ಸುಮಿತ್ರೆಯ ಸಂಸಾರದ ಬಳಿ ಇಲ್ಲದೆ ಮನೆಯ ಗೋಡೆಯಲ್ಲಿ ಇಲ್ಲದಿದ್ದರೂ ಅವರ ಮನಸ್ಸಿನಲ್ಲಿ,ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರುತ್ತದೆ.

ಸೋಗಿನ ಸನ್ಯಾಸತ್ವಕ್ಕಿಂತ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮಾನವೀಯ ಅಂತಃಕರಣದ ಸಂಸಾರಿಕ ಬದುಕು ಸಾರ್ಥಕ ಎಂಬ ಸಂದೇಶ ಈ ಕಾದಂಬರಿಯಲ್ಲಿದೆ. 

ಕಾರಂತಜ್ಜರು 1948ನೇ ಇಸವಿಯಲ್ಲಿ ಬರೆದ ಹಳೆಯ ಕಾದಂಬರಿಗಳಲ್ಲೊಂದಾದ ಈ ಕಾದಂಬರಿಯು ಪ್ರಸ್ತುತ "ಸಪ್ನ ಬುಕ್ ಹೌಸ್" ಇದರ ಪ್ರಕಾಶನದಲ್ಲಿ 125 ರೂ. ಬೆಲೆಗೆ ಸಿಗುತ್ತದೆ.

🖊ಶ್ರೀಕರ ಬಿ

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!