ನಾನು ಓದಿದ ಪುಸ್ತಕ "ಕಾರ್ಗಿಲ್ ಕದನ-ಕಥನ"


 ಕಾರ್ಗಿಲ್ ಕದನ-ಕಥನ

ಲೇಖಕರು: ಚಕ್ರವರ್ತಿ ಸುಲಿಬೆಲೆ


1999ರ ಇಸವಿಯಲ್ಲಿ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆದ ಯುದ್ಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಪುಸ್ತಕದಲ್ಲಿ ಲೇಖಕರಾದ ಸುಲಿಬೆಲೆಯವರು ಬರೆದಿರುತ್ತಾರೆ.

ಲೇಖಕರು ಬಿ.ಎಸ್ಸಿ ಓದುತ್ತಿದ್ದಾಗ ಕಾಲೇಜಿಗೆ ಭೌತಶಾಸ್ತ್ರ ವಿಷಯದ ಪಾಠ ಮಾಡಲು ಬರುವ ಹೊಸ ಉಪನ್ಯಾಸಕರು ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕಥೆ ಹೇಳುತ್ತಾರೆ. ಇದನ್ನು ಕೇಳಿ ಕುತೂಹಲಗೊಂಡ ವಿದ್ಯಾರ್ಥಿಗಳ ಆಸಕ್ತಿಯನ್ನು ಕಂಡ ಉಪನ್ಯಾಸಕರು ಮುಂದೆ ನಡೆದ ಘಟನೆಗಳ ಬಗ್ಗೆ ಇಂಚಿಂಚಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಾ ನಮ್ಮ ದೇಶದ ಅಂದಿನ ಪ್ರಧಾನಿ ಶ್ರೀ ವಾಜಪೇಯಿಯವರು ಪಾಕಿಸ್ತಾನಕ್ಕೆ ಹೋಗಿ ಸ್ನೇಹದ ಪ್ರಸ್ತಾವವನ್ನು ಅಲ್ಲಿನ ಪ್ರಧಾನಿಯಾಗಿದ್ದ ನವಾಜ್ ಶರೀಫರ ಮುಂದಿಟ್ಟು ಭಾರತದಿಂದ ಲಾಹೋರಿಗೆ ಬಸ್ ಮತ್ತು ರೈಲ ಸೇವೆ ಆರಂಭವಾದ ಬಗ್ಗೆ ಹೇಳುತ್ತಾರೆ.ಈ ಪ್ರಸ್ತಾಪದ ಬಗ್ಗೆ ಸ್ವಲ್ಪವು ಇಷ್ಟವಿಲ್ಲದ ಅಲ್ಲಿನ ಸೇನಾ ಮುಖ್ಯಸ್ಥನಾಗಿದ್ದ ಪರ್ವೇಜ್ ಮುಷಾರಫ್ ಅದೇ ಸಮಯದಲ್ಲಿ ಭಾರತದ ಮೇಲೆ ಆಕ್ರಮಣ ಮಾಡುವ ಬಗ್ಗೆ ಹುನ್ನಾರ ಹೂಡುತ್ತಾನೆ. ಮುಂದಿನ ಕಥೆ ಎಲ್ಲರಿಗೆ ತಿಳಿದಿರುವಂತೆ ಭಯೋತ್ಪಾದಕರ ವೇಷದಲ್ಲಿ ಭಾರತ ನುಸುಳವ ಪಾಕಿಸ್ತಾನದ ಸೈನಿಕರ(ಆರಂಭಲ್ಲಿ ಉಗ್ರಗಾಮಿಗಳು ಎಂದೇ ಊಹಿಸಲಾಗಿತ್ತು) ಚಲನವಲನಗಳನ್ನು ಗಮನಿಸಿದ ಕುರಿಗಾಹಿಗಳು ತಕ್ಷಣವೇ ಭಾರತೀಯ ಸೇನೆಗೆ ಮಾಹಿತಿ ನೀಡುತ್ತಾರೆ.ತಕ್ಷಣವೇ ಕಾರ್ಯ ಪ್ರವೃತ್ತರಾದ ಸೇನಾಧಿಕಾರಿಗಳು ಕ್ಯಾ.ಸೌರಭ್ ಕಾಲಿಯಾ ನೇತೃತ್ವದಲ್ಲಿ ಐದು ಯೋಧರನ್ನು ಗಸ್ತು ತಿರುಗಲೆಂದು ಕಳುಹಿಸಿಕೊಟ್ಟರು.

ಅವರನ್ನು ಜೀವಂತವಾಗಿ ಸೆರೆಹಿಡಿಯುವ ಕ್ರೂರಿ ಪಾಕಿಸ್ತಾನ ಸೇನೆ, ಅವರಿಗೆ ಚಿತ್ರಹಿಂಸೆ ನೀಡಿ ಕೊಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ, ತಕ್ಷಣವೇ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ನಿರ್ಧರಿಸಿತು. ಇದಕ್ಕಾಗಿ ಸೇನೆಯನ್ನು ಸಿದ್ಧಗೊಳಿಸಿತು. ಭಾರತ ಸರ್ಕಾರ ಇಪ್ಪತ್ತು ಸಾವಿರ ಭಾರತೀಯ ಸೈನಿಕರನ್ನ ಸಜ್ಜುಗೊಳಿಸಿ ಮೇ 3 ರಿಂದ ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಚರಣೆ ಆರಂಭ ಮಾಡಿತು.

ಭಾರತದ ಭೂಸೇನೆ,ವಾಯುಸೇನೆ,ನೌಕಾಪಡೆಯು ಈ ಆಪರೇಷನಲ್ಲಿ ಪಾಲ್ಗೊಂಡು ಸೇನೆಯ ಬೋಫೋರ್ಸ್‌ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು,ನೌಕಾಪಡೆಯ ಸಮರನೌಕೆಗಳು ಯದ್ಧದಲ್ಲಿ ಪಾಲ್ಗೊಂಡು ಭಾರತಕ್ಕೆ ಬಲ ನೀಡಿದವು. 

ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ 'ಆಪರೇಷನ್ ತಲ್ವಾರ್' ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು.

ಈ ಯುದ್ಧದಲ್ಲಿ ಭಾರತದ ಸೈನಿಕರ ಬಲ 30,000 ಆಗಿದ್ದರೆ,ಪಾಕಿಸ್ತಾನದ್ದು 5000 ಆಗಿತ್ತು. ಭಾರತದ 527 ವೀರ ಯೋಧರು ಹುತಾತ್ಮರಾದರು,1363 ಯೋಧರು ಗಾಯಗೊಂಡರು. ಮತ್ತೊಂದೆಡೆ ಪಾಕಿಸ್ತಾನದ ಸಾವಿರಕ್ಕೂ ಅಧಿಕ ಸೈನಿಕರು,ಭಯೋತ್ಪಾದಕರು ಭಾರತದ ವೀರ ಯೋಧರ ಗುಂಡಿಗೆ ಬಲಿಯಾದರೆ,600ಕ್ಕೂ ಅಧಿಕ ಸೈನಿಕರು ಗಾಯಗೊಂಡಿದ್ದರು. 1999ರ ಮೇ ತಿಂಗಳಿನಿಂದ ಜುಲೈವರೆಗೆ ನಡೆದ ಈ ಯುದ್ಧದಲ್ಲಿ ಕೊನೆಗೆ ಜಯ ನಮ್ಮ ಪಾಲಿಗೆ ದೊರಕಿ ಬಂತು. ಈ ಯುದ್ಧದ ವಿಜಯದ ಪ್ರತೀಕವಾಗಿ ಜುಲೈ 26ರಂದು "ಕಾರ್ಗಿಲ್ ವಿಜಯ್ ದಿವಸ್" ಎಂದು ಪ್ರತಿ ವರ್ಷವು ನಾವು ವಿಜಯೋತ್ಸವವನ್ನು ಆಚರಿಸುತ್ತೇವೆ

ಉಪನ್ಯಾಸಕರು ಹೇಳಿದ ಸಂಪೂರ್ಣ ಕಥೆಯನ್ನು ಏಕಾಗ್ರಚಿತ್ತದಿಂದ ಕೇಳುವ ಲೇಖಕರು ನಂತರ ಯುದ್ಧದ ನಂತರದ ದಿನಗಳ ಬಗ್ಗೆ ಉಪನ್ಯಾಸಕರು ಹೇಳಿರುವುದನ್ನು ದಾಖಲಿಸುತ್ತಾರೆ. ಯುದ್ಧಕ್ಕೆ ಭಾರತೀಯರ ಸ್ಪಂದನೆ,ಸಹಕಾರ,ಬೆಂಬಲ,ಯುದ್ಧದಲ್ಲಿ ಮಡಿದ ವೀರ ಯೋಧರ ಕುಟುಂಬಸ್ಥರ ಭಾವನೆಗಳು,ಆಕ್ರಂದನದ ಬಗ್ಗೆ ಕೂಡ ದಾಖಲಿಸುತ್ತಾರೆ.

ಒಮ್ಮೆ ಓದುವಾಗ ನನ್ನ ದೇಹದ ರಕ್ತವು ಬಿಸಿಗೊಂಡದ್ದು ಸುಳ್ಳಲ್ಲ. ಪ್ರತಿಯೊಬ್ಬ ಭಾರತೀಯನು ಈ ಯುದ್ಧದ ಬಗ್ಗೆ ತಿಳಿದುಕೊಂಡು ನಮ್ಮ ವೀರ ಯೋಧರ ಸಾಹಸಗೀತಿಯನ್ನು ಗುಣಗಾನ ಮಾಡಬೇಕಾದದ್ದು ಕರ್ತವ್ಯ. ಇದಕ್ಕೆ ಪೂರಕವಾಗಿ ಈ ಪುಸ್ತಕವಿದೆ. 

ತಮಗೆ ಅವಕಾಶ ಸಿಕ್ಕಿದರೆ ಈ ಪುಸ್ತಕವನ್ನು ಓದಿ.

ಪುಸ್ತಕದ ಮಾಹಿತಿ:.

ಹೆಸರು: ಕಾರ್ಗಿಲ್ ಕದನ-ಕಥನ

ಲೇಖಕರು: ಚಕ್ರವರ್ತಿ ಸುಲಿಬೆಲೆ

ಪ್ರಕಾಶಕರು: ವಿಕ್ರಂ ಪ್ರಕಾಶನ,ಬೆಂಗಳೂರು

ಪುಸ್ತಕದ ಬೆಲೆ: ₹150

Comments

Popular Posts

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

"MINDS"-The Association Day!

ನೆಚ್ಚಿನ ಗುರುಗಳ ಹುಟ್ಟುಹಬ್ಬ! ಮಕ್ಕಳ ಪಾಲಿನ ರಾಜ ಈ "ಭರತ"

ಮಂಗಳೂರು-ವಾರಣಾಸಿ ರೈಲು ಆರಂಭಿಸಲು ರೈಲು ಬಳಕೆದಾರರಿಂದ ಮನವಿ,ವ್ಯಕ್ತವಾದ ಉತ್ತಮ ಸ್ಪಂದನೆ! ರೈಲಿನ ಅಗತ್ಯತೆಯ ಬಗ್ಗೆ ಮಾಹಿತಿ

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!