ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ!

ಹಳಿ ಏರಲಿಲ್ಲ ನವಯುಗ ಎಕ್ಸ್‌ಪ್ರೆಸ್! ಮತ್ತೆ ಕೇಳಿ ಬಂದ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ರೈಲು ಪ್ರಯಾಣಿಕರಿಗೆ ಭರವಸೆ ತಂದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಪ್ರಯತ್ನ! ಅದು ದಿನಾಂಕ 24 ಎಪ್ರಿಲ್,1990. ನಮ್ಮ ಕರಾವಳಿಯಲ್ಲಿ ಬೇಸಗೆಯ ಕಾಲ. ಆ ದಿನ ದೇಶದ ರೈಲ್ವೆ ಇತಿಹಾಸದ ದಾಖಲೆ ಪುಟಗಳಲ್ಲಿ ಸೇರಿದ ದಿನ. ಅಂದುಮಂಗಳೂರಿನಿಂದ ಜಮ್ಮು ತಾವಿ ತನಕ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾವಿರಾರು ಜನರನ್ನು ಹೊತ್ತುಕೊಂಡು ಹೋದ ರೈಲೊಂದು ಆರಂಭಗೊಂಡಿತು. ಅಷ್ಟು ಮಾತ್ರವಲ್ಲದೆ ದೇಶದ ನಾಲ್ಕನೆಯ ಉದ್ದದ ರೈಲು ಎಂಬ ಕೀರ್ತಿಯನ್ನು ಪಡೆಯಿತು. ಭಾರತೀಯ ರೈಲ್ವೆ ಜಾಲದಲ್ಲಿ ಒಂದು ಹೊಸ ಯುಗವನ್ನೇ ಆರಂಭಿಸಿತು. ಇದು ಬೇರೆ ಯಾವ ರೈಲು ಅಲ್ಲ ಇದುವೇ ಹೊಸ ಯುಗಕ್ಕೆ ನಾಂದಿ ಹಾಡಿದ ನಮ್ಮ ಹೆಮ್ಮೆಯ ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋದೇವಿ ಕತ್ರ "ನವಯುಗ ಎಕ್ಸ್‌ಪ್ರೆಸ್" ರೈಲು. ಸೋಮವಾರ ಬಂತೆಂದರೆ ಸಂಜೆ ಸೂರ್ಯ ಕಡಲಿನಲ್ಲಿ ಅಸ್ತಮಗೊಳ್ಳುವ ಸಮಯಕ್ಕೆ ಮಂಗಳೂರು ಸೆಂಟ್ರಲ್‌ನಲ್ಲಿ ಒಂದು ರೈಲಿನ ಉಗಿಬಂಡಿಯ ಅಬ್ಬರದ ಸದ್ದು ಕೇಳುತ್ತಿತ್ತು. ತಾನು ಹೋಗಿ ಬರುತ್ತೇನೆ, ಎಷ್ಟೋ ಜನರನ್ನು ತನ್ನೊಡಲಿನಲ್ಲಿ ಕುಳ್ಳಿರಿಸಿ ಸುರಕ್ಷಿತವಾಗಿ ಅವರ ಸ್ಥಾನಕ್ಕೆ ಬಿಟ್ಟು ಮರಳಿ ಬರುವಾಗ ಮತ್ತೆ ಸಾವಿರಾರು ಜನರನ್ನು ಕರೆದುಕೊಂಡು ಬರುತ್ತೇನೆ ಎನ್ನುತ್ತಾ ಮಂಗಳೂರು ಸೆಂಟ್ರಲಿನಿಂದ ಸಂಜೆ 5 ಗಂಟೆಗೆ ಹೊರಡುತ್ತಿದ್ದ ಈ ರೈಲು ಮಂಗಳೂರಿನಿಂ...