Posts

Showing posts from November, 2022

"MINDS"-The Association Day!

Image
 "MINDS"-The Association Day!   This is the biggest engineering college in Dakshina Kannada district! This college is in the list of best engineering colleges in Karnataka! While traveling on the Bangalore Mangalore National Highway, if you look to the left at Adyar, you will see a large campus. This college is none other than our Sahyadri Engineering and Management College,which is on the banks of the sacred Netravati River, lifeline river in Dakshina Kannada, amidst the beauty of nature! Sahyadri means Western Ghat! Literally Western Ghats for students!Just as the Western Ghats are the natural resources of our South India, the source of many rivers, Sahyadri College is a knowledge resource, a temple of education that produces thousands of engineers every year in the field of technology and engineering of India and provides education to thousands of students. It is a great place for students to study because it is situated within beauty of nature! In such a great college, to

ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!

Image
  ಕಾಲೇಜಿನಲ್ಲಿ ನಡೆದ ನಮ್ಮ ವಿಭಾಗದ ಹೀಗೊಂದು ಭರ್ಜರಿ ಕಾರ್ಯಕ್ರಮ!   ಇದು ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಇಂಜನಿಯರಿಂಗ್ ಕಾಲೇಜು!ಕರ್ನಾಟಕದ ಅತ್ಯುತ್ತಮ ಇಂಜಿನಿಯರಿಂಗ ಕಾಲೇಜುಗಳ ಪಟ್ಟಿಯಲ್ಲಿ ಬರುವ ಕಾಲೇಜು ಇದು! ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಅಡ್ಯಾರ್ ಎಂಬಲ್ಲಿ ಎಡಕ್ಕೆ ನೋಡಿದರೆ ದೊಡ್ಡ ಕ್ಯಾಂಪಸ್ ಕಾಣಸಿಗುತ್ತದೆ. ದಕ್ಷಿಣ ಕನ್ನಡದ ಜೀವನದಿ,ಪವಿತ್ರವಾದ ನೇತ್ರಾವತಿ ನದಿಯ ಕಿನಾರೆಯಲ್ಲಿ,ಪ್ರಕೃತಿಯ ಸೌಂದರ್ಯದ ಮಧ್ಯೆ ಇರುವ ಈ ಕಾಲೇಜು ಬೇರೆ ಯಾವುದು ಅಲ್ಲ,ಅದುವೇ ನಮ್ಮ ಸಹ್ಯಾದ್ರಿ ಇಂಜನಿಯರಿಂಗ್ ಹಾಗು ಮ್ಯಾನೇಜ್‌ಮೆಂಟ್ ಕಾಲೇಜು! ಸಹ್ಯಾದ್ರಿ ಅರ್ಥಾತ್ ಪಶ್ಚಿಮ ಘಟ್ಟ! ಈ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ಷರಶಃ ಪಶ್ಚಿಮ ಘಟ್ಟವೇ! ಹೇಗೆ ಪಶ್ಚಿಮ ಘಟ್ಟ ನಮ್ಮ ದಕ್ಷಿಣ ಭಾರತದ ನೈಸರ್ಗಿಕ ಸಂಪನ್ಮೂಲವೋ,ಹಲವು ನದಿಗಳ ಉಗಮ ಸ್ಥಾನವೋ ಅದೇ ರೀತಿ ಸಹ್ಯಾದ್ರಿ ಕಾಲೇಜು ಜ್ಞಾನ ಸಂಪನ್ಮೂಲ,ಭಾರತದ ತಂತ್ರಜ್ಞಾನ,ಇಂಜಿನಿಯರಿಂಗ್ ಕ್ಷೇತ್ರಕ್ಕೆ ಪ್ರತಿ ವರ್ಷ ಸಾವಿರಾರು ಇಂಜಿನಿಯರಿಂಗ್ ಗಳನ್ನು ಉತ್ಪಾದಿಸುವ,ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವ ವಿದ್ಯಾದೇಗುಲವಾಗಿದೆ. ಪ್ರಕೃತಿಯ ಸೌಂದರ್ಯವನ್ನು ತನ್ನೊಡನೆ ಇಟ್ಟುಕೊಂಡಿರುವ ಕಾರಣ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಲು ಇದು ಪ್ರಶಸ್ತ ಸ್ಥಳ! ಇಂತಹ ಶ್ರೇಷ್ಠ ಕಾಲೇಜಿನಲ್ಲಿ ಇಂದು ಅದರ ವಿಭಾಗಗಳಲ್ಲಿ ಒಂದಾದ ಮಾಹಿತಿ ತಂತ್ರಜ್ಞಾನ ವಿಜ್ಞಾ

ಸುಬ್ರಹ್ಮಣ್ಯ ಷಷ್ಠಿಯ ಗಮ್ಮತ್ತು!

Image
 ಸುಬ್ರಹ್ಮಣ್ಯ ಷಷ್ಠಿಯ ಗಮ್ಮತ್ತು! ಅದು ನವೆಂಬರ್-ದಶಂಬರ ತಿಂಗಳ ಸಮಯ. ಮಾರ್ಗಶಿರ ಮಾಸದ ಕಾಲ. ಮೈ ಕೊರೆಯುವ ಚಳಿ! ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಜನರು ಮೈಗೆ ಕಂಬಳಿ ಹೊದ್ದು ಮಲಗುತ್ತಿದ್ದರೆ ಆ ಊರಿಗೆ 14 ದಿನಗಳ ಕಾಲ ರಾತ್ರಿಯೆಂಬುದೇ ಮರೆತು ಹೋಗಿರುತ್ತದೆ! ತುಳುನಾಡಿನ ಜನರಿಗೆ ಇದೊಂದು ಹಬ್ಬದ ಸಮಯದಂತೆ ಎಂದೇ ಹೇಳಬಹುದು! ನಾನು ಚಳಿಗಾಲ ಎಂದ ತಕ್ಷಣವೇ ನಿಮಗೆ ನೆನಪಾಗಿರಬಹುದು. ನಿಮ್ಮ ಮನೆಯ ಹಿರಿಯರ ಬಳಿ ಬೇಕಾದರು ಹೋಗಿ ಕೇಳಿ ಅವರ ಬಾಯಿಂದ ಬರುವ ಮಾತು ಒಂದೇ- "ಎಂತ ವಿಪರೀತ ಚಳಿ ಮಾರಾಯ!ಸುಬ್ರಹ್ಮಣ್ಯ ಷಷ್ಠಿ ಹತ್ತಿರ ಬಂತ ಹೇಗೆ!?" ಹೌದು,ಗೆಳೆಯರೇ ಈಗ ಗೊತ್ತಾಯಿತಾ,ನಾನು ಏನು ಹೇಳಲು ಬಂದಿದ್ದೇನೆ ಎಂದು? ಇನ್ನು ಕೆಲವೇ ದಿನಗಳಲ್ಲಿ ಕುಕ್ಕೆಪುರದ ಒಡೆಯ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹೋತ್ಸವ,ಸಾಮಾನ್ಯವಾಗಿ ಜನರು ಕರೆಯುವ ಸುಬ್ರಹ್ಮಣ್ಯ ಷಷ್ಠಿ ಅಥವ ಸುಬ್ರಹ್ಮಣ್ಯ ಜಾತ್ರೆ ಆರಂಭಗೊಳ್ಳಲಿದೆ. ನನಗೆ ನನ್ನೂರಿನ ಜಾತ್ರೆಯಾದ ಕಾರಣ ಇದೊಂದು ಹಬ್ಬದ ಹಾಗೆ! ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರನ ಜಾತ್ರೆ ನನಗೆ ಒಂದೆಡೆ ವಿಶೇಷವಾದರೆ,ಮತ್ತೊಂದೆಡೆ ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯೂ ನನಗೆ ನೆಚ್ಚಿನದ್ದು! ಸಾಮಾನ್ಯವಾಗಿ ಈ ಎರಡು ಉತ್ಸವಗಳನ್ನು ತಪ್ಪಿಸದಂತೆ ಪ್ರತಿ ವರ್ಷವೂ ಹೋಗಲು ಪ್ರಯತ್ನಿಸುತ್ತೇನೆ. ಸುಬ್ರಹ್ಮಣ್ಯ ಜಾತ್ರೆಯು ಕಾರ್ತಿಕ ಬಹುಳ ದ್ವಾದಶಿಯಂದು ಆರಂಭಗೊಂಡು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊನೆಗೊಳ

ನಾನು ಕಂಡ ಕಲ್ಮಡ್ಕದ ಯಕ್ಷಗಾನ ಕಾರ್ಯಕ್ರಮ!

Image
ಆ ಹಳ್ಳಿ ಬಂಟಮಲೆಯ ತಟದಲ್ಲಿರುವ ಹಳ್ಳಿ. ಯಕ್ಷಾಭಿಮಾನಿಗಳ ಊರು ಎಂದೇ ಪ್ರಸಿದ್ಧ ಪಡೆದ ಹಳ್ಳಿ. ಇಂತಹ ಹಳ್ಳಿಯಲ್ಲಿ ಯಕ್ಷಲೋಕದ ಮೇರು ಭಾಗವತರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿದೆ ಎಂದು ಊರಿನಲ್ಲಿ ಒಂದು ಹಬ್ಬದ ವಾತಾವರಣ ಸೃಷ್ಟಿಗೊಂಡಿತ್ತು ಜೊತೆಗೆ ಆ ಮೇರು ಭಾಗವತರನ್ನು ಸ್ಮರಿಸಲು ಊರಿನ ಜನರು ಅಣಿಯಾಗಿದ್ದರು. ನಾನು ಇಷ್ಟೆಲ್ಲ ಹೇಳಿದು ಪರಶುರಾಮ ಸೃಷ್ಟಿಯ ನಾಡಿನ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬಗ್ಗೆ. ಮೊನ್ನೆ ತಾನೆ ಶನಿವಾರದಂದು ಯಕ್ಷಲೋಕದ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಇವರ ಸಂಸ್ಮರಣಾ ಕಾರ್ಯಕ್ರಮ ಹಾಗು ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಇವರ ಜನ್ಮಶತಾಬ್ದಿ ಕಾರ್ಯಕ್ರಮ ಊರಿನ ವಿದ್ಯಾದೇಗುಲದ ವಠಾರದಲ್ಲಿ ನಡೆಯಿತು. ಕಲ್ಮಡ್ಕದಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಡೆಯುತ್ತದೆ ಅಂದರೆ ಊರಿನ ಮಾತ್ರವಲ್ಲದೆ ಹತ್ತಿರದ ಗ್ರಾಮಗಳ ಜನರು ಕೂಡ ಯಕ್ಷಗಾನ ನೋಡಲು ಸೇರುತ್ತಾರೆ. ಅಕ್ಟೋಬರ್ 23ರಂದಷ್ಟೇ ನಾನು ಪುತ್ತೂರಿನಲ್ಲಿ ಪದ್ಯಾಣ ಗಣಪತಿ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅದರ ಮರುದಿನ ನನಗೆ ಕಲ್ಮಡ್ಕದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ವಾಟ್ಸಾಪಿನಲ್ಲಿ ಒಂದು ಗುಂಪಿನಲ್ಲಿ ಸಿಕ್ಕಿತು. ಹೇಗೂ ನನ್ನ ಅಜ್ಜಿ ಮನೆ ಕಲ್ಮಡ್ಕದಲ್ಲೇ ಇರುವುದರಿಂದ ಕೂಡಲೇ ಕಾರ್ಯಕ್ರಮಕ್ಕೆ ಹೋಗುವುದೇ ಎಂದು ನಿರ್ಧರಿಸಿ ಅಮ್ಮನ ಬಳಿ ಹೇಳಿದೆ. ಅಮ್ಮನ ಹೈಕಮಾಂಡಿನಿಂದ ಒಪ್ಪಿ