ಡಾ.ಕೆ.ಶಿವರಾಮ ಕಾರಂತರ "ಬೆಟ್ಟದ ಜೀವ" ಪುಸ್ತಕದ ಬಗ್ಗೆ ನನ್ನ ಅನಿಸಿಕೆಗಳು!

ಬೆಟ್ಟದ ಜೀವ- ಡಾ. ಕೆ. ಶಿವರಾಮ ಕಾರಂತ ಪುಸ್ತಕ ಪ್ರಕಾಶಕರು- ಸಪ್ನ ಪ್ರಕಾಶನ ಕಾರಂತಜ್ಜ ಬರೆದ ಕಾದಂಬರಿಗಳಲ್ಲಿ ನಾನು ಓದುತ್ತಿರುವ ಮೊದಲ ಕಾದಂಬರಿ "ಬೆಟ್ಟದ ಜೀವ". ಈ ಕಾದಂಬರಿಯ ಬಗ್ಗೆ ನನ್ನ ಪ್ರೌಢಶಾಲಾ ದಿನಗಳಲ್ಲಿ ನನ್ನ ಕನ್ನಡ ಗುರುಗಳು ಹೇಳುವುದನ್ನು ಕೇಳಿದ್ದೆ. ಹೀಗೆ ಪುಸ್ತಕ ತರಿಸಿ ಓದಿಯೇ ಬಿಟ್ಟೆ. ಶಿವರಾಮರು ಕಳೆದು ಹೋದ ತನ್ನ ಎಮ್ಮೆಯನ್ನು ಹುಡುಕುತ್ತ ಸುಬ್ರಹ್ಮಣ್ಯಕ್ಕೆ ಹೋದವರು ಮರಳಿ ಬರುವಾಗ ದಾರಿ ತಪ್ಪಿ ಸುಳ್ಯ ರಸ್ತೆಯಲ್ಲಿ ಗುತ್ತಿಗಾರು ಸಮೀಪ ರಾತ್ರಿ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾದಂಬರಿಯಲ್ಲಿ ಬರುವ ಮೊದಲ ವ್ಯಕ್ತಿ ದೇರಣ್ಣನನ್ನು ಕಂಡು,ಅವನ ಮೂಲಕ ತಾನು ಹೋಗುತ್ತಿರುವ ದಾರಿ ತಪ್ಪಿದ್ದು ಗೊತ್ತಾಗಿ ಮೊದಲೇ ದಣಿವಾಗಿದ್ದ ಅವರು ದೇರಣ್ಣನ ಬಳಿ ವಿಶ್ರಾಂತಿಗೆ ಎಲ್ಲಿಯಾದರೂ ಸ್ಥಳ ಸಿಗಬಹುದೇ ಎಂದು ಕೇಳುತ್ತಾರೆ. ನಂತರ ದೇರಣ್ಣ ಅವರ ಊರಿನ ದೊಡ್ಡ ವ್ಯಕ್ತಿ ಎಂದು ಹೇಳಬಹುದಾದ ಗೋಪಾಲಯ್ಯನವರ ಬಳಿ ಕರೆದುಕೊಂಡು ಹೋಗುತ್ತಾರೆ. ದಣಿವಾಗಿದ್ದ,ಯಾವುದೋ ಒಂದು ಊರಿನಿಂದ ಬಂದ ವ್ಯಕ್ತಿಗೆ ಆಶ್ರಯ ನೀಡುವ ಮನಸ್ಸಾಗಿ ಶಿವರಾಮರನ್ನು ಉಪಚರಿಸಿ,ಆಶ್ರಯ ನೀಡುತ್ತಾರೆ. ಇಲ್ಲಿಂದ ಕಾರಂತರ ಹಾಗು ಗೋಪಾಲಯ್ಯನವರ ನಡುವೆ ಆರಂಭಗೊಳ್ಳುವ ಒಡನಾಟ,ಪ್ರೀತಿ ಕಾದಂಬರಿಯ ಕೊನೆತನಕ ಗಮನಿಸಬಹುದು. ಗೋಪಾಲಯ್ಯನವರ ಬಗ್ಗೆ ಹೇಳುವುದಾದರೆ ಗೋಪಾಲಯ್ಯನವರು ಅರುವತ್ತು ವಸಂತವನ್ನು ಪೂರೈಸಿದ ಹಿರಿಯರು. ತಮ್ಮ ಪತ್ನಿ ಶಂಕರಿಯೊ...