ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! | ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ!

ಬಾಲ್ಯದಿಂದ ಕಂಡ ಕನಸು ಪೂರ್ಣಗೊಂಡಾಗ! ಕುಮಾರ ಪರ್ವತ ಚಾರಣದ ಸಂಪೂರ್ಣ ಮಾಹಿತಿ! ಶೇಷ ಪರ್ವತದ ಒಂದು ಶಿಖರ! Pc: Sudheesh Patwardhan ಕುಮಾರ ಪರ್ವತ! ಇದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಚಿರಪರಿಚಿತ ಹೆಸರು! ಅಷ್ಟೇ ಅಲ್ಲ! ಸುಬ್ರಹ್ಮಣ್ಯಕ್ಕೆ ಬರುವವರಿಗೆ ದೇವಸ್ಥಾನದ ಜೊತೆಗೆ ಹಿಂಬದಿಯಲ್ಲಿ ಕಾಣಸಿಗುವ ಬೆಟ್ಟ ಯಾವುದು ಎಂದು ಕೇಳಿದ ತಕ್ಷಣ ಹೇಳುವುದು ಕುಮಾರ ಪರ್ವತ(ಆದರೆ ನಿಜವಾಗಿ ಅದು ಶೇಷ ಪರ್ವತ) ಎಂದು! ಹಾಗಾಗಿ ಸುಬ್ರಹ್ಮಣ್ಯಕ್ಕೆ ಬಂದು ಹೋದವರಿಗೆ ಕುಮಾರ ಪರ್ವತ ಚಿರಪರಿಚಿತ ಹೆಸರು. ಜೊತೆಗೆ ಚಾರಣಪ್ರಿಯರಿಗೆ ಅಂತು ಇದು ಸ್ವರ್ಗ! ಕುಮಾರಧಾರದ ಕುಮಾರಧಾರ ನದಿಯ ಸೇತುವೆಯಿಂದ ಕಾಣುವ ಶೇಷ ಪರ್ವತದ ಒಂದು ಸುಂದರ ನೋಟ! Pc:Shreekara B ನಾನು ಮೊದಲೇ ಹೇಳಿದ ಹಾಗೆ ನನ್ನ ಊರು ಸುಳ್ಯ ತಾಲೂಕಿನ ಪಶ್ಚಿಮ ಘಟ್ಟದ ತಪ್ಪನಲ್ಲಿರುವ ಹರಿಹರಪಲ್ಲತ್ತಡ್ಕ ಗ್ರಾಮ! ಈ ಗ್ರಾಮದ ಎದುರೇ ಕಾಣುವುದು ಕುಮಾರ ಪರ್ವತದ ಒಂದು ಬದಿಯಲ್ಲಿರುವ ಶೇಷ ಪರ್ವತ! ಬಾಲ್ಯದಿಂದ ಈ ಪರ್ವತ ಸಾಲನ್ನು ನೋಡುತ್ತಾ ಬೆಳೆದ ನನಗೆ ಒಂದು ದಿನ ಕುತೂಹಲದಿಂದ ಅಪ್ಪನ ಬಳಿ ಆ ಪರ್ವತವನ್ನು ಹತ್ತಲು ಆಗುತ್ತದೆಯೇ ಎಂದು ಕೇಳಿದ್ದೆ. ಆಗ ಅಪ್ಪ "ನೀನು ದೊಡ್ಡವನಾದ ಮೇಲೆ ಕುಮಾರ ಪರ್ವತ ಹತ್ತು" ಎಂದು ಹೇಳಿದ್ದರು. ಪ್ರತಿ ಬಾರಿಯೂ ಸುಬ್ರಹ್ಮಣ್ಯಕ್ಕೆ ಅಥವ ಹರಿಹರಪಲ್ಲತ್ತಡ್ಕಕ್ಕೆ ಹೋದಾಗಲೆಲ್ಲ ಈ ಪರ್ವತ ಶ್ರೇಣಿಯನ್ನು ಕನಿಷ್ಠಪಕ್ಷ ಒಂದು ಬಾರಿಯಾದರೂ ಸರಿಯಾ...