Posts

Showing posts from May, 2023

A one day trip to Belur-Halebeedu!

Image
A one day trip to Belur-Halebeedu!   Sometimes the plans we made earlier don't work, but suddenly many plans do. Our trip was one such plan. My mother wanted to visit Belur and Halebeedu with family while she visted when she was working in Hassan before her marriage.Amma, who claimed to go two or three times, did not go through with the plan because the holiday I and my younger brother were getting did not match. But one day suddenly, when Amma was talking to her close friend, the idea of ​​going to Belur-Halebidu flashed. The tour plan which started from there, was completed in talks when we got to Shri Mahalingeshwara temple with two days to spare. Thus preparing for the trip, it was decided to go yesterday i.e. Sunday. On the first morning of the trip, when I told my mother that I was going to see the movie "The Kerala Story", the high command (mother) ordered me to bring all the necessities for tomorrow and go to the cinema again. In the morning, I brought all the nec

ನನ್ನ ಬೇಲೂರು-ಹಳೆಬೀಡು ಪ್ರವಾಸ!

Image
  ನನ್ನ ಬೇಲೂರು-ಹಳೆಬೀಡು ಪ್ರವಾಸ!   ಕೆಲವೊಮ್ಮೆ ನಾವು ಮೊದಲೇ ಮಾಡಿದ ಯೋಜನೆಗಳು ಕೈಗೂಡುವುದಿಲ್ಲ,ಆದರೆ ಇದ್ದಕ್ಕಿದ್ದಂತೆ ಮಾಡಿದ ಅದೆಷ್ಟೋ ಯೋಜನೆಗಳು ಕೈಗೂಡುತ್ತದೆ. ಅಂತಹ ಯೋಜನೆಗಳಲ್ಲಿ ಒಂದಾಗಿತ್ತು ನಮ್ಮ ಪ್ರವಾಸ. ನನ್ನ ಅಮ್ಮನಿಗೆ ಕುಟುಂಬ ಸಮೇತರಾಗಿ ತಾನು ಮದುವೆ ಆಗುವ ಮೊದಲು ಹಾಸನದಲ್ಲಿ ಕೆಲಸ ಮಾಡುತ್ತಿರುವಾಗ ಪ್ರವಾಸಕ್ಕೆ ಹೋದ ಸ್ಥಳಗಳಾದ ಬೇಲೂರು,ಹಳೆಬೀಡಿಗೆ ಹೋಗಬೇಕೆಂಬ ಆಸೆಯಿತ್ತು. ಎರಡು ಮೂರು ಬಾರಿ ಹೋಗಬೇಕೆಂದು ಹೇಳಿಕೊಳ್ಳುತ್ತಿದ್ದ ಅಮ್ಮನಿಗೆ ನನಗೆ ಹಾಗು ತಮ್ಮನಿಗೆ ಸಿಗುತ್ತಿದ್ದ ರಜೆ ಹೊಂದಾಣಿಕೆಯಾಗದ ಕಾರಣ ಯೋಜನೆ ಕೈಗೂಡಲಿಲ್ಲ. ಆದರೆ ಮೊನ್ನೆ ಒಂದು ದಿನ ಇದ್ದಕ್ಕಿದ್ದ ಹಾಗೆ ಅಮ್ಮ ತನ್ನ ಆಪ್ತ ಗಳತಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬೇಲೂರು-ಹಳೆಬೀಡಿಗೆ ಹೋಗುವ ಆಲೋಚನೆ ಹೊಳೆಯಿತು. ಅಲ್ಲಿಂದ ಆರಂಭಗೊಂಡ ಪ್ರವಾಸದ ಯೋಜನೆ, ಎರಡು ದಿನ ಬಿಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಕ್ಕಾಗ ಮಾತುಕತೆಯಲ್ಲಿ ಪೂರ್ಣಗೊಂಡಿತ್ತು. ಹೀಗೆ ಪ್ರವಾಸಕ್ಕೆ ತಯಾರು ಮಾಡುತ್ತಾ ನಿನ್ನೆ ಅಂದರೆ ಆದಿತ್ಯವಾರ ಹೋಗುವುದೆಂದು ನಿರ್ಧಾರವಾಯಿತು. ಪ್ರವಾಸಕ್ಕೆ ಹೋಗುವ ಮೊದಲ ದಿನ ಬೆಳಗ್ಗೆ "ದಿ ಕೇರಳ ಸ್ಟೋರಿ" ಸಿನಿಮಾ ನೋಡಲು ಹೋಗುತ್ತಿದ್ದೇನೆಂದು ಅಮ್ಮನ ಬಳಿ ಹೇಳಿದಾಗ "ನಾಳೆಗೆ ಬೇಕಾದ ಎಲ್ಲಾ ಅಗತ್ಯತೆಗಳನ್ನು ನೀನು ತಂದು ಕೊಟ್ಟು ಮತ್ತೆ ಸಿನಿಮಾಕ್ಕೆ ಹೋಗು" ಎಂದು ಹೈಕಮಾಂಡಿನ(ಅಮ್ಮನ) ಅಪ್ಪಣೆ

"ದಿ ಕೇರಳ ಸ್ಟೋರಿ" ಸಿನಿಮಾ ವೀಕ್ಷಿಸಿದ ನಂತರ...

Image
"ದಿ ಕೇರಳ ಸ್ಟೋರಿ" ಸಿನಿಮಾ ವೀಕ್ಷಿಸಿದ ನಂತರ... ಇದು ಒಂದು ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆ ಆಗಿ 15 ದಿನಗಳು ಕಳೆದರು ಸಹ ಆ ಸಿನಿಮಾದ ಪ್ರದರ್ಶನ ಆರಂಭಗೊಳ್ಳುವ ಸಮಯ ಆಗುವ ಮೊದಲೇ ಹೆಚ್ಚಿನ ಆಸನಗಳು ಭರ್ತಿ! ಆ ಪರದೆಯ ಸಭಾಂಗಣದಲ್ಲಿ ಎಲ್ಲಿ ನೋಡಿದರು ನಿಶ್ಯಬ್ದ! ಸಿನಿಮಾ ನಡುವೆ ಬರುವ ಮಧ್ಯಂತರ ಸಮಯದಲ್ಲೂ ಸಹ ಕೂಡಲೇ ಏಳದ ವೀಕ್ಷಕರು! ಸಿನಿಮಾ ಮುಗಿಯುವ ಸಂದರ್ಭಲ್ಲಿ ಸಭಾಂಗಣದಿಂದ ಹೊರಗೆ ಹೋಗಲು ಬಾಗಿಲು ತೆರೆದಾಗಲೂ ಸಹ ಸಿನಿಮಾ ಮುಗಿದು 5 ನಿಮಿಷ ಆದ ಮೇಲೆ ಎದ್ದು ಹೋದ ವೀಕ್ಷಕರು! ಈ ದೃಶ್ಯಗಳು ಕಂಡಿದ್ದು ಇಂದು ಪುತ್ತೂರಿನ ಭಾರತ್ ಸಿನಿಮಾಸ್ ಥಿಯೇಟರಿನ ಮೂರನೆಯ ಪರದೆಯಲ್ಲಿ! ಸಿನಿಮಾ ಯಾವುದೆಂದು ಗೊತ್ತೇ!? ಅದುವೇ "ದಿ ಕೇರಳ ಸ್ಟೋರಿ"! ಸಿನಿಮಾ ಬಗ್ಗೆ ಗೊತ್ತಾದ ಕೂಡಲೇ ನನಗೆ ಥಿಯೇಟರಿನಲ್ಲಿಯೇ ಹೋಗಿ ನೋಡಬೇಕೆಂದು ಮನಸ್ಸಿದ್ದ ನನಗೆ ಸಮಯ ಸಿಗದ ಕಾರಣ ಇಷ್ಟು ದಿನ ಕಳೆದು ತಡವಾಗಿ ಇಂದು ಥಿಯೇಟರಿನಲ್ಲಿ ಸರಿಯಾಗಿ ಸಿನಿಮಾ ವೀಕ್ಷಿಸಿದೆ. ಸಿನಿಮಾದಲ್ಲಿ ಬರುವ ಒಂದೊಂದು ದೃಶ್ಯ ಇದೆಯಲ್ಲ ಅದನ್ನು ನೋಡಿದರೆ ಯಾರ ಮನಸ್ಸಿನಲ್ಲೂ ಭಯ ಮೂಡದೆ ಇರದು!ರಕ್ತ ಹೆಪ್ಪುಗಟ್ಟಿದಂತಹ ಅನುಭವ! ತಲೆಯೆಲ್ಲ ಸುತ್ತಿದಂತೆ ಆಗುತ್ತದೆ! ಏನು ಮಾತನಾಡಬೇಕೆಂದು ತೋಚುವುದಿಲ್ಲ! ಮಧ್ಯಂತರ ಸಮಯದಲ್ಲಿ ಒಮ್ಮೆ ಹೊರಗೆ ಬಂದು ಮುಖ ತೊಳೆಯುವ ಎಂಬ ಯೋಚನೆಯು ನಿಮಗೆ ಬರುಬಹುದು. ಆ ತರಹದ ಅನುಭವ ಖಂಡಿತವಾಗಿಯೂ

ನಾನು ಓದಿದ ಪುಸ್ತಕ "ಸನ್ಯಾಸಿಯ ಬದುಕು"

Image
 ನಾನು ಓದಿದ ಪುಸ್ತಕ "ಸನ್ಯಾಸಿಯ ಬದುಕು" ಸನ್ಯಾಸಿಯ ಬದುಕು- ಡಾ. ಶಿವರಾಮ ಕಾರಂತ  ಪ್ರಕಾಶನ- ಸಪ್ನ ಬುಕ್ ಹೌಸ್ ಕಾರಂತಜ್ಜ ಬರೆದ ಹಲವು ಕಾದಂಬರಿಗಳಲ್ಲೊಂದು "ಸನ್ಯಾಸಿಯ ಬದುಕು". ಈ ಕಾದಂಬರಿಯಲ್ಲಿ ಲೇಖಕರು ಒರ್ವ ತನ್ನ ದುಶ್ಚಟದ ಈ ಕೆಲಸಗಳಿಂದ ಸಂಸಾರವನ್ನು ಬೀದಿಗೆ ತಂದು ಸಂಸಾರದ ಹೊಣೆಯಿಂದ ತಪ್ಪಿಸಿಕೊಂಡು ಸನ್ಯಾಸಿಯಾದ ಬಗೆ, ಆ ಸಂಸಾರದ ಆಧಾರಸ್ತಂಭವಾದ ಆ ಮನುಷ್ಯನನ್ನು ಕಳೆದುಕೊಂಡು ಬಹಳ ಕಷ್ಟಗಳನ್ನು ಅನುಭವಿಸಿದ ಅವನ ಪತ್ನಿ ಹಾಗು ಮಕ್ಕಳು,ಕೊನೆಗೆ ಆ ಸಂಸಾರಕ್ಕೆ ದೇವತೆಯಾಗಿ ಬಂದು ರಕ್ಷಿಸಿದ ಮತ್ತೊರ್ವ ಸ್ತ್ರೀಯ ಕಥೆಯನ್ನು ಪ್ರಮುಖವಾಗಿ ಓದಬಹುದಾಗಿದೆ.  ಕಾದಂಬರಿಯ ಸಾರಾಂಶ ಹೀಗಿದೆ: ಉಡುಪಿಯಲ್ಲಿ ಶಂಕರರಾಯ ಎನ್ನವು ಒಬ್ಬ ಮನುಷ್ಯ ತನ್ನ ಪತ್ನಿ ಸುಮಿತ್ರ,ಮಕ್ಕಳಾದ ಗೋಪು(ಗೋಪಾಲಕೃಷ್ಣ) ಹಾಗು ರಾಧೆಯರೊಂದಿಗೆ ಜೀವನ ನಡೆಸುತ್ತಿದ್ದ. ನೌಕರಿಯಲ್ಲಿದ ಅವನು ಆರಂಭದಲ್ಲಿ ತನ್ನ ಸಂಸಾರವನ್ನು ಉತ್ತಮ ರೀತಿಯಿಂದ ನಡೆಸಿಕೊಂಡು ಹೋಗುತ್ತಿದ್ದ. ಸುಮಿತ್ರೆ ಬಾಲ್ಯದಲ್ಲಿ ಅಮ್ಮನನ್ನು ಕಳೆದುಕೊಂಡು ತನ್ನ ತಂದೆ ಹಾಗು ಸಹೋದರರೊಂದಿಗೆ ಬೆಳೆದವಳು. ಬಾಲ್ಯದಲ್ಲೆ ಕಷ್ಟದಿಂದ ಬೆಳೆದ ಅವಳಿಗೆ ತನ್ನ ಪತಿ ಸಾಕಿ ಸಲಹುತ್ತಿದ್ದ ರೀತಿಯನ್ನು ಕಂಡು ತಾನು ಉತ್ತಮ ಪತಿಯನ್ನು ಪಡೆದಿದ್ದೇನೆ ಎನ್ನುವ ಭಾವನೆಯಲ್ಲಿದ್ದಳು. ದಿನಗಳು ಉರಿಳಿದಂತೆ ಶಂಕರರಾಯನಿಗೆ ದುಶ್ಚಟಗಳು ಅಂಟಿದವು. ಜೂಜಾಟ ಹೀಗೆ ಇನ್ನಿತರ ಆಟಗಳಲ್ಲಿ ಹಣ ಕಳೆದುಕೊಂಡು,ಸ