ಕಳಚಿದೆ ದಕ್ಷಿಣ ಭಾರತ,ಉತ್ತರ ಭಾರತ ನಡುವಿನ ಒಂದು ಸಂಪರ್ಕ ಕೊಂಡಿ! ಮತ್ತೆ ಕೇಳಿ ಬರುತ್ತಿದೆ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು!

ಕಳಚಿದೆ ದಕ್ಷಿಣ ಭಾರತ,ಉತ್ತರ ಭಾರತ ನಡುವಿನ ಒಂದು ಸಂಪರ್ಕ ಕೊಂಡಿ! ಮತ್ತೆ ಕೇಳಿ ಬರುತ್ತಿದೆ ನವಯುಗ ಎಕ್ಸ್‌ಪ್ರೆಸ್ ರೈಲಿನ ಪುನರಾರಂಭದ ಕೂಗು! ಭಾರತೀಯ ರೈಲ್ವೆ ಜಾಲ ಇದು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳ ಪಟ್ಟಿಯಲ್ಲಿ ಅಗ್ರ 5 ಸ್ಥಾನಗಳಲ್ಲಿ ಬರುವ ರೈಲ್ವೆ ಜಾಲವಾಗಿದೆ. ರೈಲು ಕೇವಲ ಪ್ರಯಾಣಿಕರನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಕರೆದುಕೊಂಡು ಹೋಗುವುದಲ್ಲದೇ,ಒಬ್ಬನ ಮುಂದಿನ ಬದುಕಿನ ಆಶಯ,ಕನಸುಗಳನ್ನು ಸಹ ಕಟ್ಟಿಕೊಂಡು ಹೋಗುತ್ತದೆ. ಇಂತಹ ರೈಲ್ವೆ ಜಾಲದಲ್ಲಿ ದಕ್ಷಿಣ ಭಾರತ,ಉತ್ತರ ಭಾರತ ನಡುವಿನ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಸುತ್ತಿದ್ದ ಒಂದು ರೈಲು ಮಂಗಳೂರು ಸೆಂಟ್ರಲ್-ಶ್ರೀ ಮಾತಾ ವೈಷ್ಣೋ ದೇವಿ ಕತ್ರ ನವಯುಗ ಎಕ್ಸ್‌ಪ್ರೆಸ್. 1990ರಲ್ಲಿ ಮಂಗಳೂರಿನಿಂದ ಜಮ್ಮು ತಾವಿ ತನಕ ಆರಂಭಗೊಂಡ ಈ ರೈಲು ಸೇವೆ 2015ರಲ್ಲಿ ಕತ್ರ ತನಕ ವಿಸ್ತರಣೆಗೊಂಡಿತು. ಈ ರೈಲು ದಕ್ಷಿಣ ಭಾರತ ಹಾಗು ಉತ್ತರ ಭಾರತ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು. ಈ ರೈಲು ಕರ್ನಾಟಕದ ಮಂಗಳೂರಿನಿಂದ ಸಂಜೆ 5 ಗಂಟೆಗೆ ಹೊರಟು ಕೇರಳ,ತಮಿಳುನಾಡು,ಆಂಧ್ರಪ್ರದೇಶ,ತೆಲಂಗಾಣ,,ಮಹಾರಾಷ್ಟ್ರ,ಮಧ್ಯಪ್ರದೇಶ,ಉತ್ತರ ಪ್ರದೇಶ,ದೆಹಲಿ,ಹರಿಯಾಣ,ಪಂಜಾಬ್ ಹಾಗು ಜಮ್ಮು ಮತ್ತು ಕಾಶ್ಮೀರದ ಕತ್ರಕ್ಕೆ ಸುಮಾರು 12 ರಾಜ್ಯಗಳ ಮೂಲಕ ಸಂಚರಿಸುತ್ತಿತ್ತು. ಈ ರೈಲು ತನ್ನ ಪ್ರಯಾಣದಲ್ಲಿ 3686 ಕಿ.ಮಿ ಕ್ರಮಿಸಿ, 70 ಗಂಟೆ 5 ನಿಮಿಷ ಅವಧಿಯನ್ನು ತೆಗೆದುಕೊಂಡು ಪ್ರಯಾಣದ ದೂರದ ಲೆಕ್...