ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ"

ಸಾಧನೆಯ ಪಥದಲ್ಲಿ "ಕೀರ್ತಿ"ಯನ್ನು ಪಡೆದ "ಪ್ರಸಾದ" "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ಮಾತು ಬಹುಶಃ ಇದಕ್ಕೆ ಹೇಳುವುದು ಇರಬಹುದು. ಇವರು ಕೀರ್ತಿಪ್ರಸಾದ್ ಕಲ್ಲೂರಾಯ ಮಧೂರು. ಇನ್ನು 19 ವರ್ಷದ ಚಿರ ಯುವಕ. ವಯಸ್ಸು ಸಣ್ಣದಾದರು ಮಾಡಿದ ಸಾಧನೆ ಅದೆಷ್ಟೋ!ನಮ್ಮ ಗಡಿನಾಡಿನ ಕಾಸರಗೋಡಿನ ಮಧೂರು ಇವರ ಹುಟ್ಟೂರು. ಪ್ರಸ್ತುತ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇವರು ದೊಡ್ಡ ಯಕ್ಷಾಭಿಮಾನಿಯು ಹೌದು. ವಿವಿಧೆಡೆ ದೇವರ ಬ್ರಹ್ಮವಾಹಕರಾಗಿಯು ಸೇವೆ ಸಲ್ಲಿಸುವ ಇವರು ಅದೆಷ್ಟೋ ಕಡೆ ದೇವರ ಸೇವೆಯನ್ನು ಮಾಡಿದ್ದಾರೆ. ಯಕ್ಷಗಾನದ ಜೊತೆಗೆ ಇವರ ನಂಟು: ತನ್ನ ಪೂಜ್ಯ ತೀರ್ಥರೂಪರಾದ ಶ್ರೀ ಉದಯ ಕಲ್ಲೂರಾಯರಿಂದ ಬಾಲ್ಯದಲ್ಲೇ ಯಕ್ಷಗಾನ ಕಲಿತ ಇವರು ಕೇವಲ 5ನೇ ವಯಸ್ಸಿನಲ್ಲಿ ಕಿರೀಟ ಬಾಲ ವೇಷ ಹಾಕುತ್ತಾರೆ.ನಂತರ ಪ್ರಸಿದ್ಧ ಯಕ್ಷಗಾನ ಕಲಾವಿದರು,ಯಕ್ಷಗುರುಗಳಾದ ಶ್ರೀ ರಾಕೇಶ್ ರೈ ಅಡ್ಕ ಅವರಿಂದ ಯಕ್ಷಗಾನ ನಾಟ್ಯ ಅಭ್ಯಾಸ ಮಾಡುವ ಇವರು ಯಕ್ಷಗಾನ ಬಯಲಾಟಗಳಲ್ಲಿ ತನ್ನ 11ನೇ ವಯಸ್ಸಿನಲ್ಲಿ ಮಹಿಷಾಸುರ ಸೇರಿ ಹಲವಾರು ಪಾತ್ರಗಳನ್ನು ಮಾಡಿರುತ್ತಾರೆ. ತಮ್ಮ ತಂದೆಯವರಿಂದ ಹಾಗು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀ ರಾಘವ ಬಲ್ಲಾಳ್ ಇವರಿಂದ ಮುಮ್ಮೇಳದ ಜೊತೆಗೆ ಹಿಮ್ಮೇಳದ ಚೆಂಡೆ,ಮದ್ದಳೆಯನ್ನು ಸಹ ಅಭ್ಯಾಸ ಮಾಡಿ ಅದೆಷ್ಟೋ ಕಡೆ ಯಕ್ಷಮಾತೆಯ ಸೇವೆಯನ್ನು ಮಾಡಿದ್ದಾರೆ. ದೇವರ ಬ್ರಹ್ಮವಾಹಕರಾಗಿ ಇವ...