ಪುತ್ತೂರೂ-ಮಂಗಳೂರು ನಡುವೆ ಮಧ್ಯಾಹ್ನದ ವೇಳೆ ಇಲ್ಲ ರೈಲು ಸಂಪರ್ಕ! ಕೇಳಿ ಬಂತು ಮಡಗಾಂವ್-ಮಂಗಳೂರು ಮೆಮು ರೈಲಿನ ಪುತ್ತೂರು ತನಕ ವಿಸ್ತರಣೆಯ ಕೂಗು!
ಪುತ್ತೂರೂ-ಮಂಗಳೂರು ನಡುವೆ ಮಧ್ಯಾಹ್ನದ ವೇಳೆ ಇಲ್ಲ ರೈಲು ಸಂಪರ್ಕ! ಕೇಳಿ ಬಂತು ಮಡಗಾಂವ್-ಮಂಗಳೂರು ಮೆಮು ರೈಲಿನ ಪುತ್ತೂರು ತನಕ ವಿಸ್ತರಣೆಯ ಕೂಗು! ಚಿತ್ರ ಕೃಪೆ: ದಿ ಹಿಂದು ಪತ್ರಿಕೆ ಮಂಗಳೂರು,ಪುತ್ತೂರು ಇವು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಪ್ರಮುಖ ನಗರಗಳು. ವಿವಿಧ ಕೆಲಸಗಳಿಗೆ, ವಿದ್ಯಾಭ್ಯಾಸಕ್ಕೆ, ಪ್ರವಾಸಕ್ಕೆ ಸೇರಿ ಪ್ರತಿದಿನ ಸಾವಿರಾರು ಜನರು ಈ ಎರಡು ನಗರಗಳ ನಡುವೆ ಸಂಚರಿಸುತ್ತಾರೆ. ಜೊತೆಗೆ ಈ ಎರಡು ನಗರಗಳಲ್ಲಿರುವ ರೈಲು ನಿಲ್ದಾಣಗಳು(ಮಂಗಳೂರು ಸೆಂಟ್ರಲ್,ಮಂಗಳೂರು ಜಂಕ್ಷನ್, ಕಬಕ ಪುತ್ತೂರು) ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳು ಹೌದು ಹಾಗು ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುವ ರೈಲು ನಿಲ್ದಾಣಗಳೂ ಹೌದು. ಹೀಗೆ ಹಲವಾರು ಮಹತ್ವಗಳನ್ನು ಪಡೆದಿರುವ ಈ ಎರಡು ನಗರಗಳ ನಡುವೆ ಸಾರಿಗೆ ಸೇವೆ ಅತಿ ಮುಖ್ಯ. ಸದ್ಯ ಪುತ್ತೂರು-ಮಂಗಳೂರು ನಡುವೆ ಸಾಕಷ್ಟು ಸರ್ಕಾರಿ,ಖಾಸಗಿ ಬಸ್ ಸೇವೆಗಳೂ ಇದ್ದರೂ ಕೆಲವೊಮ್ಮೆ ವಿವಿಧ ಕಾರಣಗಳಿಂದ ಬಸ್ ಸೇವೆಗಳಲ್ಲಿ ವ್ಯತ್ಯಯಗೊಂಡಾಗ ರೈಲು ಸೇವೆಗಳು ಮಹತ್ವ ಪಡೆಯುತ್ತದೆ. ಇನ್ನು ಸಾರಿಗೆಯಲ್ಲಿ ರೈಲು ಸೇವೆಯ ಬಗ್ಗೆ ಹೇಳುವುದಾದರೆ ಪುತ್ತೂರು-ಮಂಗಳೂರು ನಡುವೆ(ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್) ಸದ್ಯ ಪ್ರತಿದಿನ 6 ರೈಲುಗಳ ಸಂಚಾರವಿದೆ. ಇಷ್ಟು ಮಹತ್ವ ಪಡೆದಿರುವ ನಗರಗಳ ನಡುವೆ ಕೇವಲ 6 ರೈಲುಗಳು ಮಾತ್ರ ಓಡುತ್ತದೆ ಎಂದು ಕೇಳುವಾಗ ಆಶ್ಚರ್ಯ ಆಗಬಹುದು. ಈಗ ಇರುವ ಈ 6 ರೈಲುಗಳಲ್ಲಿಯೂ...