ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ...!

ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ...! ಸದಾ ಪೇಟೆಯ ಜಂಜಾಟದ ಮಧ್ಯೆ ಬದುಕುವಾಗ ಅದರಿಂದ ಮುಕ್ತಿ ಪಡೆಯಲು ಸ್ವಲ್ಪ ಸಮಯ ಪ್ರಕೃತಿಯ ಮಧ್ಯೆ ಕಳೆಯಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದೇ ಆಸೆಯೊಂದಿಗೆ ಗೆಳೆಯರೊಂದಿಗೆ ವರ್ಷದಲ್ಲಿ ಒಂದೆರಡು ಬಾರಿ ಪ್ರವಾಸ,ಚಾರಣಕ್ಕೆ ಹೋಗುವ ನಾನು ಈ ಮೊದಲು ಕುಮಾರ ಪರ್ವತ,ಕುದುರೆಮುಖ ಶಿಖರಗಳ ಚಾರಣ ಮಾಡಿದ್ದೆ. ಕುದುರೆಮುಖ ಶಿಖರದ ಚಾರಣಕ್ಕೆ ಹೋಗುವ ಮೊದಲು ನನಗೆ ಇದರ ಯೋಜನೆ ರೂಪಿಸುವ ಸಮಯದಲ್ಲಿ ನಾನು ಮೊದಲು ಹೋಗಲು ತೀರ್ಮಾನಿಸಿದ್ದು ನೇತ್ರಾವತಿ ಶಿಖರಕ್ಕೆ ಚಾರಣ ಎಂದು. ಆದರೆ ನಂತರ ನಮ್ಮ ಯೋಜನೆಯಲ್ಲಿ ಬದಲಾವಣೆ ತಂದು ಕುದುರೆಮುಖ ಶಿಖರಕ್ಕೆ ಚಾರಣ ಹೋದೆವು. ಈ ಬಾರಿ ಅನಿರೀಕ್ಷಿತವಾಗಿ ಒಂದು ಯೋಜನೆ ಮಾಡಿ ಎರಡು ದಿನಗಳ ಪ್ರವಾಸ ಆಯೋಜಿಸಿ ಮೊದಲ ದಿನ ಚಾರ್ಮಾಡಿ,ದೇವರಮನೆ,ರಾಣಿಝರಿ,ಕಳಸಕ್ಕೆ ಭೇಟಿ ನೀಡಿ ಎರಡನೆಯ ದಿನ ನೇತ್ರಾವತಿ ಶಿಖರಕ್ಕೆ ಚಾರಣ ಹೋದೆವು. ಈ ಲೇಖನದಲ್ಲಿ ಮೊದಲ ದಿನದ ಅನುಭವಕ್ಕಿಂತ ಮುಖ್ಯವಾಗಿ ನಾನು ನೇತ್ರಾವತಿ ಶಿಖರದ ಚಾರಣ ಮಾಹಿತಿ,ಅನುಭವದ ಬಗ್ಗೆ ಮಾಹಿತಿ ನೀಡುತ್ತೇನೆ. ನೇತ್ರಾವತಿ ಶಿಖರ ಕರ್ನಾಟಕದ ಸುಂದರ ಶಿಖರಗಳಲ್ಲಿ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ಉಗಮ ಸ್ಥಾನವು ಇಲ್ಲಿ ಹತ್ತಿರದಲ್ಲಿದೆ. ಹೀಗಾಗಿ ಈ ಶಿಖರಕ್ಕೆ ನೇತ್ರಾವತಿಯ ಹೆಸರು ಬಂತು. ಸಮುದ್ರ ಮಟ್ಟದಿಂದ 1520 ಮೀಟರ್ ಎತ್ತರದಲ್ಲಿರುವ ಈ ಶಿಖರ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒ...