Posts

Showing posts from October, 2023

Memorable One-Day Trip to Devaramane with Friends: Exploring Belur, Halebeedu, and Charmadi Ghat

Image
Memorable One-Day Trip to Devaramane with Friends: Exploring Belur, Halebeedu, and Charmadi Ghat October is a month that brings the joy of Dasara holidays when you are in school! The nine nights of Navaratri are here! During this time, we used to get a month-long holiday initially. Gradually, it was limited to a two-week vacation, and eventually, the summer vacation became just a one and half month holiday. During these two weeks, nine days were dedicated to Navaratri puja, visiting temples, and one day to visit grandparents' homes, and the rest was free time. However, after joining engineering college, long vacations became rare. Government holidays and holidays from college were the only opportunities, and if they didn't coincide, then there were holidays only during semester breaks or internships. So, the dream of longer vacations like before has become rare. Among the available holidays, it's either spending time at home with parents, visiting grandparents, or going to

ಗೆಳೆಯರೊಂದೆಗೆ ಒಂದು ದಿನದ ಪ್ರವಾಸ!

Image
  ಗೆಳೆಯರೊಂದೆಗೆ ಒಂದು ದಿನದ ಪ್ರವಾಸ!   ಒಕ್ಟೋಬರ್ ತಿಂಗಳು ಬಂತೆಂದರೆ ಶಾಲೆಯಲ್ಲಿರುವಾಗ ದಸರ ರಜೆಯ ಮಜಾ! ನವರಾತ್ರಿಯ ಕಾಲವು ಹೌದು! ಈ ಸಂದರ್ಭಲ್ಲಿ ಮೊದಲೆಲ್ಲ ಒಂದು ತಿಂಗಳ ರಜೆ ಸಿಗುತ್ತಿತ್ತು. ಕಾಲಕ್ರಮೇಣ ಎರಡು ವಾರಗಳ ರಜೆಗೆ ಸೀಮಿತವಾಗಿ ಬೇಸಿಗೆಯ ರಜೆ ಒಂದುವರೆ ತಿಂಗಳ ರಜೆ ಆಯಿತು. ಈ ಎರಡು ವಾರಗಳಲ್ಲಿ ಒಂಬತ್ತು ದಿನಗಳು ನವರಾತ್ರಿ ಪೂಜೆಗೆ,ದೇವಸ್ಥಾನಗಳಿಗೆ ಹೋಗಲು,ಒಂದು ದಿನ ಅಜ್ಜಿ ಮನೆಗೆಂದು ಎಲ್ಲ ಹೋಗುವಾಗ ಮುಗಿದೇ ಬಿಡುತ್ತಿತ್ತು. ಎಂಜಿನಿಯರಿಂಗ್ ಕಾಲೇಜಿಗೆ ಬಂದ ಮೇಲೆ ದೊಡ್ಠ ರಜೆಗಳು ಸಿಗುವುದು ಅಪರೂಪ. ಸರಕಾರಿ ರಜೆಗಳು,ಕಾಲೇಜಿನ ವತಿಯಿಂದ ಸಿಗುವ ರಜೆಗಳು ಬಿಟ್ಟರೆ ಉಳಿದ ರಜೆಗಳು ಪ್ರತಿ ಸೆಮಿಸ್ಟರ್ ಬಳಿಕೆ ಸಿಕ್ಕಿದರೆ ಆಯಿತು ಇಲ್ಲದಿದ್ದರೆ ಆಗ ಇಂಟರ್ನ್ಶಿಪ್ ಇರುತ್ತದೆ. ಹೀಗಾಗಿ ಹೆಚ್ಚು ದಿನಗಳ ರಜೆಯ ಕನಸು ಕಾಣುವ ಹಾಗೆ ಇಲ್ಲ. ಇರುವ ರಜೆಗಳಲ್ಲಿ ಮನೆಯಲ್ಲಿ ಅಪ್ಪ-ಅಮ್ಮನ ಜೊತೆಗೆ ಕಾಲ ಕಳೆಯುವುದೋ,ಅಜ್ಜಿ ಮನೆಗೆ ಹೋಗಿ ಬರುವುದೋ,ಊರಿಗೆ ಹೋಗಿ ಬರುವುದೋ ಹೀಗೆ ರಜೆ ಕಳೆದು ಹೋಗುತ್ತದೆ. ಆದರೆ ಈ ಬಾರಿ ಪರೀಕ್ಷೆ ಮುಗಿದ ಮೇಲೆ ಇಂಟರ್ನ್ಶಿಪ್ ಬರುವ ಮೊದಲು ಸಿಕ್ಕ ನಾಲ್ಕು ದಿನಗಳ ರಜೆಯನ್ನು ಸ್ವಲ್ಪ ಭಿನ್ನವಾಗಿ ಕಳೆದೆ.   ಕಳೆದ ಬಾರಿ ನಾನು ಕುಟುಂಬದ ಜೊತೆಗೆ ಬೇಲೂರು,ಹಳೆಬೀಡು ಪ್ರವಾಸಕ್ಕೆ ಹೋಗಿ ಮರಳಿ ಚಾರ್ಮಾಡಿ ಘಾಟಿಯಾಗಿ ಬರುತ್ತಿರುವಾಗ ನಮ್ಮ ಗಾಡಿಯ ಡ್ರೈವರ್ ಇಲ್ಲಿ ನೇರವಾಗಿ ಮೇಲೆ ಕಾಣುವ ಆ ಶಿಖರ ದೇವರಮನೆ ಎಂದ

ಎಂಜಿನಿಯರಿಂಗ್ ವ್ಯಾಸಂಗದ ಎರಡನೇಯ ಘಟ್ಟ ಸಂಪೂರ್ಣ!

Image
  ಎಂಜಿನಿಯರಿಂಗ್ ವ್ಯಾಸಂಗದ ಎರಡನೇಯ ಘಟ್ಟ ಸಂಪೂರ್ಣ!   ನಮ್ಮ ಬದುಕಿನಲ್ಲಿ ವೃತ್ತಿ ಜೀವನಕ್ಕೆ ನಮ್ಮನ್ನು ತಯಾರು ಮಾಡುವುದು ಪದವಿ ವಿದ್ಯಾಭ್ಯಾಸ! ಎಂಜಿನಿಯರಿಂಗ್ ಅನ್ನು ನನ್ನ ವೃತ್ತಿ ಜೀವನ ಎಂದು ಆರಿಸಿ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಎಂದು ಸಿಇಟಿ ಪರೀಕ್ಷೆ ಬರೆದು ಕರ್ನಾಟಕದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ದಾಖಲಾಗಬೇಕೆಂಬ ನನ್ನ ಆಸೆಯ ಒಂದು ಹಂತ ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಕಾಲೇಜು ಸೇರಿದಾಗ ಪೂರ್ಣಗೊಂಡಿತು. ಅಲ್ಲಿಂದ ಆರಂಭವಾದ ವೃತ್ತಿಪರ ಕೋರ್ಸಿನ ಅಧ್ಯಯನ ಇಂದು ಎರಡನೇ ಹಂತ ಪೂರ್ಣಗೊಳಿಸಿದೆ. ನಾಲ್ಕು ವರ್ಷಗಳ ಈ ಪಯಣದಲ್ಲಿ ಇಂದಿಗೆ ಎರಡು ವರ್ಷಗಳು ಪೂರ್ಣಗೊಂಡಿತು. ಅದು 2021ನೇ ಸಾಲಿನ ದಶಂಬರ್ ತಿಂಗಳು. ವೃತ್ತಿಪರ ಕಾಲೇಜು ಸೇರಲು ಸಿಇಟಿ ಕೌನ್ಸೆಲಿಂಗ್ ಅಲ್ಲಿ ಹಲವಾರು ಎಂಜಿನಿಯರಿಂಗ್ ಕಾಲೇಜುಗಳನ್ನು ಆರಿಸಿ ಅಣಕು ಸುತ್ತು ಹಾಗು ಪ್ರಥಮ ಸುತ್ತು ಪೂರೈಸಿ ಎರಡನೆಯ ಸುತ್ತಿನ ಫಲಿತಾಂಶವನ್ನು ಕಾಯುತ್ತಿದ್ದೆ. ಅದೇ ಸಮಯದಲ್ಲಿ ಊರಿನ ಆರಾಧ್ಯ ದೇವ,ಕುಕ್ಕೆಪುರನಾಥ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ಸುಬ್ರಹ್ಮಣ್ಯದಲ್ಲಿ ಅಕ್ಕನ ಮನೆಯಲ್ಲಿ ಇದ್ದೆ. ಇದ್ದಕ್ಕಿದ್ದಂತೆ ಮಧ್ಯರಾತ್ರಿ ಎರಡನೆಯ ಸುತ್ತಿನ ಕೌನ್ಸೆಲಿಂಗ್ ಫಲಿತಾಂಶ ಬಂತು. ನನಗೆ ಸಹ್ಯಾದ್ರಿ ಕಾಲೇಜಿನಲ್ಲಿ ಸೀಟು ದೊರಕಿತು. ಸರಿ ಎಂದು ಅಲ್ಲೇ ದಾಖಲಾಗುವುದು ಎಂದು ಮರುದಿನ ಮನೆಗೆ ಬಂದು ಬಳಿಕ ಸಹ್ಯಾದ್