ಪೋಸ್ಟ್ ಐಪಿಎಲ್ ಮಾತುಕತೆ! 2023ನೇ ಸಾಲಿನ ಐಪಿಎಲ್ ಮುಗಿಯಿತು,ನೆಚ್ಚಿನ ಚೆನ್ನೈ ಗೆದ್ದಾಯಿತು, ಆದರೆ ಕೆಲವು ವಿಷಯಗಳನ್ನು ಹಂಚಬೇಕೆಂದು ಈ ಪೋಸ್ಟ್ ಬರೆಯುತ್ತಿದ್ದೇನೆ. ಈ ಪೋಸ್ಟ್ ಅಲ್ಲಿ ಈ ವರ್ಷದ ಯಶಸ್ವಿ ತಂಡಗಳಲ್ಲಿ ಎರಡಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಗುಜರಾತ್ ಟೈಟನ್ಸ್ ಬಗ್ಗೆ ಮಾತ್ರ ಹೇಳುತ್ತೇನೆ. Pic credits: Chennai Super Kings ಈ ವರ್ಷ ಚೆನ್ನೈ ತಂಡದಲ್ಲಿ ನಾನು ಗಮನಿಸಿದ ಹಾಗೆ ಒಂದೇ ಲಯದಲ್ಲಿ ಉತ್ತಮ ಬ್ಯಾಚಿಂಗ್ ಮಾಡಿದವರು ಡೇವನ್ ಕಾನ್ವೇ ಅವರು. ಚೆನ್ನೈ ತಂಡದ ಆರಂಭಿಕ ಜೋಡಿಯಾಗಿದ್ದ ಡುಪ್ಲೇಸಿಸ್-ಗಾಯಕ್ವಾಡ್ ಜೋಡಿ 2021ರಲ್ಲಿ ಅದ್ಭುತ ಜೊತೆಯಾಟವಾಡಿ ತಂಡ ಚಾಂಪಿಯನ್ ಆಗುವಲ್ಲಿ ಕೊಡುಗೆ ನೀಡಿತ್ತು. ಕಳೆದ ವರ್ಷ ಡುಪ್ಲೇಸಿಸ್ ಅವರು ಆರ್.ಸಿ.ಬಿ ತಂಡದ ಸೇರಿದ ನಂತರ ಅವರ ಸ್ಥಾನ ತುಂಬಲು ಒಬ್ಬ ಉತ್ತಮ ಆಟಗಾರನ ಅವಶ್ಯಕತೆ ಚೆನ್ನೈಗೆ ಇತ್ತು. ಪ್ರಾಮಾಣಿಕನಾಗಿ ಹೇಳುವುದಾದರೆ ನನಗೆ ಕಳೆದ ವರ್ಷ ಆರಂಭದಲ್ಲಿ ಕಾನ್ವೇ ಅವರ ಕಳಪೆ ಪ್ರದರ್ಶನ ನೋಡಿ ಯಾಕಾಗಿ ಚೆನ್ನೈ ಕಾನ್ವೆ ಅವರನ್ನು ಖರೀದಿಸಿತು ಎಂದು ಅನಿಸಿತ್ತು. ಆದರೆ ನಂತರ ಉತ್ತಮ ಪ್ರದರ್ಶನ ನೀಡುತ್ತಾ ಬಂದ ಅವರು ಈ ವರ್ಷ ತಂಡದಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಬಾರಿಸಿ ತನ್ನ ಸಾಮರ್ಥ್ಯ ತೋರಿಸಿಯೇ ಬಿಟ್ಟರು. ಡುಪ್ಲೇಸಿಸ್ ಅವರ ಸ್ಥಾನ ತುಂಬಲು ಒರ್ವ ಅರ್ಹ ವ್ಯಕ್ತಿ ಕಾನ್ವೆ ಆದರು. ಈ ವರ್ಷ ಕಾನ್ವೆ-ಗಾಯಕ್ವಾಡ್ ಅವರ ಜೋಡಿ ಚೆನ...