Posts

Showing posts from October, 2022

ನಾನು ಓದಿದ ಪುಸ್ತಕ "ಕಾರ್ಗಿಲ್ ಕದನ-ಕಥನ"

Image
 ಕಾರ್ಗಿಲ್ ಕದನ-ಕಥನ ಲೇಖಕರು: ಚಕ್ರವರ್ತಿ ಸುಲಿಬೆಲೆ 1999ರ ಇಸವಿಯಲ್ಲಿ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ನಡೆದ ಯುದ್ಧದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಪುಸ್ತಕದಲ್ಲಿ ಲೇಖಕರಾದ ಸುಲಿಬೆಲೆಯವರು ಬರೆದಿರುತ್ತಾರೆ. ಲೇಖಕರು ಬಿ.ಎಸ್ಸಿ ಓದುತ್ತಿದ್ದಾಗ ಕಾಲೇಜಿಗೆ ಭೌತಶಾಸ್ತ್ರ ವಿಷಯದ ಪಾಠ ಮಾಡಲು ಬರುವ ಹೊಸ ಉಪನ್ಯಾಸಕರು ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕಥೆ ಹೇಳುತ್ತಾರೆ. ಇದನ್ನು ಕೇಳಿ ಕುತೂಹಲಗೊಂಡ ವಿದ್ಯಾರ್ಥಿಗಳ ಆಸಕ್ತಿಯನ್ನು ಕಂಡ ಉಪನ್ಯಾಸಕರು ಮುಂದೆ ನಡೆದ ಘಟನೆಗಳ ಬಗ್ಗೆ ಇಂಚಿಂಚಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಾ ನಮ್ಮ ದೇಶದ ಅಂದಿನ ಪ್ರಧಾನಿ ಶ್ರೀ ವಾಜಪೇಯಿಯವರು ಪಾಕಿಸ್ತಾನಕ್ಕೆ ಹೋಗಿ ಸ್ನೇಹದ ಪ್ರಸ್ತಾವವನ್ನು ಅಲ್ಲಿನ ಪ್ರಧಾನಿಯಾಗಿದ್ದ ನವಾಜ್ ಶರೀಫರ ಮುಂದಿಟ್ಟು ಭಾರತದಿಂದ ಲಾಹೋರಿಗೆ ಬಸ್ ಮತ್ತು ರೈಲ ಸೇವೆ ಆರಂಭವಾದ ಬಗ್ಗೆ ಹೇಳುತ್ತಾರೆ.ಈ ಪ್ರಸ್ತಾಪದ ಬಗ್ಗೆ ಸ್ವಲ್ಪವು ಇಷ್ಟವಿಲ್ಲದ ಅಲ್ಲಿನ ಸೇನಾ ಮುಖ್ಯಸ್ಥನಾಗಿದ್ದ ಪರ್ವೇಜ್ ಮುಷಾರಫ್ ಅದೇ ಸಮಯದಲ್ಲಿ ಭಾರತದ ಮೇಲೆ ಆಕ್ರಮಣ ಮಾಡುವ ಬಗ್ಗೆ ಹುನ್ನಾರ ಹೂಡುತ್ತಾನೆ. ಮುಂದಿನ ಕಥೆ ಎಲ್ಲರಿಗೆ ತಿಳಿದಿರುವಂತೆ ಭಯೋತ್ಪಾದಕರ ವೇಷದಲ್ಲಿ ಭಾರತ ನುಸುಳವ ಪಾಕಿಸ್ತಾನದ ಸೈನಿಕರ(ಆರಂಭಲ್ಲಿ ಉಗ್ರಗಾಮಿಗಳು ಎಂದೇ ಊಹಿಸಲಾಗಿತ್ತು) ಚಲನವಲನಗಳನ್ನು ಗಮನಿಸಿದ ಕುರಿಗಾಹಿಗಳು ತಕ್ಷಣವೇ ಭಾರತೀಯ ಸೇನೆಗೆ ಮಾಹಿತಿ ನೀಡುತ್ತಾರೆ.ತಕ್ಷಣವೇ

"ಕಾಂತಾರ" ಇದು ನಿಜಕ್ಕೂ ಒಂದು ದಂತ ಕಥೆ!

Image
 "ಕಾಂತಾರ" ಇದು ನಿಜಕ್ಕೂ ಒಂದು ದಂತ ಕಥೆ! ಕರ್ನಾಟಕದ ಉದ್ದಗಲಕ್ಕೂ ಎಲ್ಲಿ ನೋಡಿದರು ಸದ್ಯ ಕೇಳಿಬರುತ್ತಿರುವ ಪದ ಕಾಂತಾರ! ಸೆಪ್ಟೆಂಬರ್ 30ಕ್ಕೆ ಬಿಡುಗಡೆಗೊಂಡ ಈ ಸಿನಿಮಾ ಇತಿಹಾಸವನ್ನೇ ಸೃಷ್ಟಿಸಿದೆ.  ತುಳುನಾಡು ಪರಶುರಾಮನ ಸೃಷ್ಟಿ. ಈ ಪವಿತ್ರ ಭೂಮಿಯ ಸಂಸ್ಕೃತಿ,ಪ್ರಸಿದ್ಧ ಕ್ರೀಡೆ ಕಂಬಳ,ದೈವಾರಾಧನೆ ವಿಷಯಗಳನ್ನು ಈ ಸಿನಿಮಾದಲ್ಲಿ ಕಾಣಬಹುದು. ಸಿನಿಮಾದ ಮುಖ್ಯ ಪಾತ್ರ/ನಾಯಕನಾದ ಶಿವನ ರೌದ್ರಾವತಾರ, ಅವನ ಗುಂಪಿನೊಂದಿಗೆ ಅವನು ಮಾಡುವ ಕೆಲಸಗಳು,ಕಾಡನ್ನು ರಕ್ಷಿತಾರಣ್ಯ ಎಂದು ಘೋಷಿಸಲು ಪ್ರಯತ್ನ ಪಡುವ ಅರಣ್ಯ ಅಧಿಕಾರಿ ಮುರಳಿ,ಮೋಸದಿಂದ ಇಡೀ ಊರಿನ ಜಾಗವನ್ನು ಕಬಳಿಸಲು ನೋಡುವ ಊರಿನ ಮುಖ್ಯಸ್ಥ ಹೀಗೆ ಹಲವಾರು ಸನ್ನಿವೇಶಗಳು ಈ ಸಿನಿಮಾದಲ್ಲಿ ಕಾಣಬಹುದು. ಪ್ರತಿ ಬಾರಿ ರಿಷಭ್ ಶೆಟ್ಟಿಯವರು ನಿರ್ದೇಶನ ಮಾಡಿ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರೆ, ಈ ಬಾರಿ ತಾನು ಒಬ್ಬ ಒಳ್ಳೆಯ ನಿರ್ದೇಶಕ ಮಾತ್ರವಲ್ಲದೆ ಒಳ್ಳೆಯ ನಟನು ಕೂಡ ಎಂದು ತೋರಿಸಿದ್ದಾರೆ. ಅವರ ನಟನೆ ನಾನು ತುಂಬಾ ನೆಚ್ಚಿಕೊಂಡೆ. ಅದರಲ್ಲೂ ಸಿನಿಮಾದ ಕೊನೆಯ ಭಾಗವನ್ನು ನೋಡಿ ಮೈ ಜುಮ್! ಎನಿಸಿತು. ಚಿತ್ರದ ನಾಯಕಿ ಸಪ್ತಮಿ ಗೌಡ ಅವರ ನಟನೆ ಕೂಡ ತುಂಬಾ ಚೆನ್ನಾಗಿತ್ತು. ರಿಷಭ್ ಶೆಟ್ಟಿಯವರ ನಟನೆ ಬಿಟ್ಟರೆ ನನಗೆ ಅತಿ ಹೆಚ್ಚು ಇಷ್ಟವಾದದ್ದು ದೀಪಕ್ ರೈ ಪಾಣಾಜೆ ಮತ್ತು ಪ್ರಕಾಶ್ ತುಮಿನಾಡು ಅವರ ನಟನೆ. ಆ ಸನ್ನಿವೇಶಕ್ಕೆ ತಕ್ಕದಾದ ಅವರ ಹಾಸ್ಯ ಸಂಭಾಷ