Posts

Showing posts from September, 2024

ಅಜ್ಜಿ ಎಂಬ ಯುಗದ ಅಂತ್ಯ!

Image
 ಅಜ್ಜಿ ಎಂಬ ಯುಗದ ಅಂತ್ಯ! ಅದೊಂದು ಕಾಲವಿತ್ತು. ದೇಶದಲ್ಲಿ ಕಿತ್ತು ತಿನ್ನುವ ಬಡತನದ ಕಾಲ! ಒಂದು ಸಾಮಾನ್ಯ ಕುಟುಂಬ ಹಳ್ಳಿಗಳಲ್ಲಿ ಸೋಗೆ ಮನೆಯಲ್ಲಿ ಜೀವಿಸುವ ಕಾಲ! ಹೆಚ್ಚಾಗಿ ಕೃಷಿ ಅಥವ ಸ್ವಂತ ವ್ಯಾಪಾರವನ್ನು ಅವಲಂಬಿಸಿ ಬದುಕನ್ನು ಸಾಗಿಸುತ್ತಿದ್ದ ಕಾಲವದು! ಆ ಕಾಲದಲ್ಲಿ ಸರ್ಕಾರಿ ಕೆಲಸ,ಜೀಪು,ಅಂಬಾಸಿಡರ್ ಕಾರು ಇರುವ ವ್ಯಕ್ತಿ ಬಹಳ ದೊಡ್ಡ ವ್ಯಕ್ತಿ! ಆ ವ್ಯಕ್ತಿಗೆ ಊರಿನಲ್ಲಿ ಸಿಗುತ್ತಿದ್ದ ಗೌರವ,ಸ್ಥಾನವೇ ಬೇರೆ! ಇಂತಹ ಕಾಲದಲ್ಲಿ ತನ್ನ ಗಂಡನ ನಿಧನದ ನಂತರ ಕುಟುಂಬದ ಹೊಣೆಹೊತ್ತು,ಒಂಬತ್ತು ಮಕ್ಕಳನ್ನು ಕಷ್ಟಪಟ್ಟು ಸಾಕಿ ಸಲುಹಿ,ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದ ಧೀಮಂತ ಮಹಿಳೆ ಇವರು. ನಾನು ಹೋಗಿ ಬರುತ್ತೇನೆ ಎಂದು ಹೇಳಿದರೆ ಹುಷಾರು ಆಗಿ ಬಾ! ಎಂದು ಪ್ರೀತಿಯಿಂದ ಆಶೀರ್ವಾದ ನೀಡುತ್ತಿದ್ದ ದೇವರು ಇವರು! ಇವರೇ ನನ್ನ ಪ್ರೀತಿಯ ಅಜ್ಜಿ! ಅದು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಭಾರತ ದೇಶದಾದ್ಯಂತ ಆವರಿಸಿದ ಕಾಲ! ಇಂತಹ ಸಮಯದಲ್ಲಿ ಜೂನ್ 17,1941ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಕೊಳಂಬಳ ಮನೆಯಲ್ಲಿ ಅರ್ನಾಡಿ ಕುಟುಂಬದ ಗಣಪತಿ ಭಟ್ ಅರ್ನಾಡಿ ಹಾಗು ಲಕ್ಷ್ಮಿ ಅವರ 11 ಜನ ಮಕ್ಕಳಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಪರಮೇಶ್ವರಿ ಅವರು ಬೆಳ್ಳಾರೆಯಲ್ಲಿ ಏಳನೆಯ ತರಗತಿ ತನಕ ಶಿಕ್ಷಣ ಮುಗಿಸಿ ನಂತರ ಮನೆಯಲ್ಲಿ ಮನೆ ಕೆಲಸಕ್ಕೆ ಸಹಾಯ ಮಾಡುತ್ತಾ ಇದ್ದರು. ತದನಂತರ 18ನೇ ವಯಸ್ಸಿನಲ್ಲಿ ಮಂಜನಕಾನ ಶಂಕರನಾರಾಯಣಯ್ಯ ಅ