Posts

Showing posts from April, 2024

ಪುತ್ತೂರು ಜಾತ್ರೆ ಸಂಪನ್ನ!

Image
 ಪುತ್ತೂರು ಜಾತ್ರೆ ಸಂಪನ್ನ! ಮಹಾಲಿಂಗೇಶ್ವರ...! ಈ ಹೆಸರು ಪುತ್ತೂರಿಗೆ ಕೇವಲ ದೇವರ ಹೆಸರು ಮಾತ್ರವಲ್ಲ,ಅದು ಒಂದು ಶಕ್ತಿ!  ತಮ್ಮ ಕಷ್ಟ,ಸುಖಗಳನ್ನು ಪುತ್ತೂರಿನ ಜನರು ಪ್ರಥಮವಾಗಿ ಹಂಚುವುದು ತಮ್ಮ ಒಡೆಯನ ಬಳಿಯೇ!  ಎಪ್ರಿಲ್ ಬಂತೆಂದರೆ ಅದು ಪುತ್ತೂರಿಗೆ ಹಬ್ಬದ ತಿಂಗಳು ಅಂತ ನಾನು ಈ ಮೊದಲು ಒಮ್ಮೆ ಹೇಳಿದ್ದೆ. ಕಾರಣ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ವಾರ್ಷಿಕ ಜಾತ್ರೋತ್ಸವ! ಎಪ್ರಿಲ್ 1ಕ್ಕೆ ಗೊನೆ ಮುಹೂರ್ತದೊಂದಿಗೆ ಜಾತ್ರೋತ್ಸವದ ಕ್ಷಣಗಣನೆ ಆರಂಭಗೊಂಡು ಎಪ್ರಿಲ್ 10ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೋತ್ಸವಕ್ಕೆ ಚಾಲನೆ ಸಿಗುತ್ತದೆ. ನಂತರ 6 ದಿನಗಳ ಕಾಲ ತನ್ನ ಭಕ್ತರನ್ನು ಕಾಣಲು ಪ್ರತಿದಿನ ಪುತ್ತೂರು ನಗರದ ವಿವಿಧ ದಿಕ್ಕಿನ ಕಡೆಗೆ ಹೋಗುವ ಮಹಾಲಿಂಗೇಶ್ವರ ದೇವರು ಜಾತ್ರೋತ್ಸವದ 7 ದಿನ ಅಂದರೆ ಎ.16ರಂದು ಬಲ್ನಾಡಿನಿಂದ ಬರುವ ಶ್ರೀ ದಂಡನಾಯಕ-ಉಳ್ಳಾಲ್ತಿ ಅಮ್ಮನವರನ್ನು ಭೇಟಿ ಮಾಡಿ,ಪಲ್ಲಕ್ಕಿಯಲ್ಲಿ ಸಂಗೀತವನ್ನು ಆಲಿಸುತ್ತಾ,ನಂತರ ವೇದಘೋಷ,ಭಜನೆಗಳಿಂದ ಪ್ರಸನ್ನಗೊಂಡು,ಶಂಖ,ಬ್ಯಾಂಡ್ ಸುತ್ತಿನಲ್ಲಿ ಉತ್ಸವವನ್ನು ಸ್ವೀಕರಿಸಿ,ಹೂತೇರಿನಲ್ಲಿ ಆರೂಢರಾಗಿ ರಥೋತ್ಸವವನ್ನು ಸ್ವೀಕರಿಸಿ,ತೆಪ್ಪದಲ್ಲಿ ಕೆರೆ ಆಯನ ನಡೆಸುವ ಮಹಾಲಿಂಗೇಶ್ವರ ದೇವರು,ಮರುದಿನ ಅಂದರೆ ಎ.17ಕ್ಕೆ ದೇವರ ದರ್ಶನ ಬಲಿ,ಬಟ್ಟಲು ಕಾಣಿಕೆ ನಡೆದು ರಾತ್ರಿ ದೇವರು ಬ್ರಹರಥದಲ್ಲಿ ಆರೂಢರಾಗಿ, ಬೆಡಿ ಸೇವೆಯನ್ನು ಸ್ವೀಕರಿಸಿ ದೇವರ ವೈಭವದ ಬ್ರಹ್ಮರಥೋತ್ಸವದಿಂದ ಪ್ರಸನ್ನಗೊ