ಐಪಿಎಲ್ ಪಂದ್ಯ ನೋಡುತ್ತಾ ಬಾಲ್ಯದ ಸುಂದರ ದಿನಗಳು ನೆನಪಾದಾಗ!
ಐಪಿಎಲ್ ಪಂದ್ಯ ನೋಡುತ್ತಾ ಬಾಲ್ಯದ ಸುಂದರ ದಿನಗಳು ನೆನಪಾದಾಗ! ಇಂದು ಐಪಿಎಲ್ ಪಂದ್ಯ ನೋಡುವಾಗ ಬಾಲ್ಯದ ದಿನಗಳು ನೆನಪು ಆಯಿತು. ಕಳೆದ ವಾರ ಐಪಿಎಲ್ ಆರಂಭ ಆಗುವಾಗಲೆ ಹಳೆಯ ದಿನಗಳು ನೆನಪಾಗ ರಜೆಯ ಆ ಸುಂದರ ದಿನಗಳ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತೆ! ಈ ಐಪಿಎಲ್ ಮತ್ತು ಶಾಲೆಯ ದಿನಗಳ ರಜಾ ದಿನಗಳು ದೋಸ್ತಿಗಳ ಹಾಗೆ! ಪರೀಕ್ಷೆ ಮುಗಿಯುವ ಹೊತ್ತಿಗೆ ಐಪಿಎಲ್ ಆರಂಭಗೊಳ್ಳುವ ದಿನಗಳು ಅಂದು ಇತ್ತು. ಈಗ ಪಂದ್ಯಗಳು ಜಾಸ್ತಿಯಾಗಿ ಮಾರ್ಚ್ 20-25ರ ಒಳಗೆ ಆರಂಭಿಸಲು ಶುರು ಮಾಡಿದರೆ ಅಂದು ಎಪ್ರಿಲ್ ಮೊದಲ ವಾರದಲ್ಲಿ ಆರಂಭಗೊಳ್ಳುವ ದಿನಗಳು ಇದ್ದವು. ಎಪ್ರಿಲ್ ಎಂದರೆ ಬಿಡಿ! ಮಕ್ಕಳಿಗೆ ಸ್ವರ್ಗ ಸುಖ ಸಿಗುವ ತಿಂಗಳು ಅದು! ಪರೀಕ್ಷೆ ಮುಗಿದು ತಮ್ಮ ಊರಿಗೆ,ಅಜ್ಜಿ ಮನೆಗೆ ಹೋಗುವುದೋ ಅಥವ ಪ್ರವಾಸಕ್ಕೆ ಹೋಗುವುದೊ ಅಥವ ತಮ್ಮ ಊರಿನ ಜಾತ್ರೆಯಲ್ಲಿ ಭಾಗವಹಿಸುವುದೋ ಅಥವ ತಮ್ಮ ಕುಟುಂಬದ ಶುಭ ಸಮಾರಂಭಗಳಲ್ಲಿ ಭಾಗಿಯಾಗಿ ರಜೆಯ ಮಜಾ ಪಡೆಯುವ ಕಾಲವದು. ನಮಗೆ ಪುತ್ತೂರಿನಲ್ಲಿ ಆದರೆ ಎಪ್ರಿಲ್ ಬರಲು ಪುರ್ಸೋತ್ತಿಲ್ಲ,ಹಬ್ಬದ ವಾತಾವರಣ ಎಲ್ಲೆಡೆ ಇರುತ್ತದೆ! ಎಪ್ರಿಲ್ 1ಕ್ಕೆ ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ನಡೆದು ಜಾತ್ರೆಯ ಸಂಭ್ರಮ ಆರಂಭಗೊಂಡರೆ ಎಪ್ರಿಲ್ 10ಕ್ಕೆ ಧ್ವಜಾರೋಹಣದೊಂದಿಗೆ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರಕಿ ದೇವರ ಉತ್ಸವಗಳು 9 ದಿನಗಳ ಕಾಲ ನಡೆಯುತ್ತದೆ. ಆ ದಿನಗಳು ಪುತ್ತೂರಿಗೆ ...