ಕುದುರೆಮುಖ ಶಿಖರ ಹತ್ತಿದಾಗ...

ಕುದುರೆಮುಖ ಶಿಖರ ಹತ್ತಿದಾಗ... ಸದಾ ಪೇಟೆಯ ಜಂಜಾಟದ ಮಧ್ಯೆ ಬದುಕುವಾಗ ಅದರಿಂದ ಮುಕ್ತಿ ಪಡೆಯಲು ಸ್ವಲ್ಪ ಸಮಯ ಪ್ರಕೃತಿಯ ಮಧ್ಯೆ ಕಳೆಯಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಇದೇ ಇಚ್ಛೆಯಿಂದ ಕಳೆದ ವರ್ಷ ಗೆಳೆಯರೊಂದಿಗೆ ಬಿಸಿಲೆ,ಚಾರ್ಮಾಡಿ,ದೇವರಮನೆ ಕಡೆಗೆ ಪ್ರವಾಸ ಹೋದ ನನಗೆ ನಂತರ ಅದೇನೋ ಚಾರಣ ಮಾಡಬೇಕೆಂಬ ಆಸೆ ಹುಟ್ಟಿತು. ನನ್ನ ಊರು ಪಶ್ಚಿಮ ಘಟ್ಟದ ತಪ್ಪನಲ್ಲಿದ್ದರೂ ಗೆಳೆಯರೊಂದಿಗೆ ಪ್ರವಾಸ,ಚಾರಣಕ್ಕೆ ಹೋಗುವಾಗ ಸಿಗುವ ಅನುಭವವೇ ಬೇರೆ. ಬಹಳ ವರ್ಷಗಳಿಂದ ಕುಮಾರ ಪರ್ವತಕ್ಕೆ ಚಾರಣ ಹೋಗಬೇಕೆಂದು ಇದ್ದ ನನ್ನ ಆಸೆ ನವೆಬರ್ ತಿಂಗಳಲ್ಲಿ ಈಡೇರಿದ ನಂತರ ಮುಂದೆ ಮತ್ತೊಂದು ಶಿಖರಕ್ಕೆ ಚಾರಣ ಮಾಡಬೇಕೆಂಬ ಆಸೆ ಚಿಗುರಿತು. ಈ ಚಾರಣದ ಹುಚ್ಚು ಎಂದರೆ ಹಾಗೆ. ಒಮ್ಮೆ ಒಂದು ಕಡೆಗೆ ಚಾರಣ ಮಾಡಿದರೆ ಮತ್ತೆ ಇನ್ನೊಂದು ಶಿಖರ ಹತ್ತಬೇಕೆಂಬ ಹಂಬಲ ಹುಟ್ಟುತ್ತದೆ. ಕುಮಾರ ಪರ್ವತ ಚಾರಣ ಮುಗಿಸಿದ ಮೇಲೆ ಗೆಳೆಯರೊಂದಿಗೆ ಮಾತನಾಡುವಾಗ ನೇತ್ರಾವತಿ ಶಿಖರಕ್ಕೆ ಚಾರಣ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ನಂತರ ಕಳೆದ ತಿಂಗಳು ಚಾರಣದ ಯೋಜನೆ ರೂಪಿಸುತ್ತಿರುವಾಗ ನನ್ನ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ನೇತ್ರಾವತಿ ಶಿಖರದ ಬದಲು ಕುದುರೆಮುಖ ಶಿಖರ ಹತ್ತಿದರೆ ಹೇಗೆ ಎಂದು ನಾನು ನನ್ನಷ್ಟಕ್ಕೆ ಪ್ರಶ್ನಿಸಿಕೊಂಡೆ. ನಂತರ ಗೆಳೆಯರ ಅಭಿಪ್ರಾಯ ಪಡೆದೆ. ಎಲ್ಲರೂ ಕುದುರೆಮುಖ ಶಿಖರ ಹತ್ತುವ ಎಂದು ಹೇಳಿದರು. ಕುದುರೆಮುಖ ನಮ್ಮ ಕರ್ನಾಟಕದ ಎರಡನೆ...