Posts

Showing posts from September, 2023

ಪ್ರೇಮ ಬಂಧನದ ಕಾವ್ಯ ಈ "ಸಪ್ತ ಸಾಗರದಾಚೆ ಎಲ್ಲೋ!"

Image
ಪ್ರೇಮ ಬಂಧನದ ಕಾವ್ಯ ಈ "ಸಪ್ತ ಸಾಗರದಾಚೆ ಎಲ್ಲೋ!" ಕನ್ನಡ ಚಿತ್ರರಂಗದಲ್ಲಿ ಈಗ ಕರಾವಳಿಯಲ್ಲಿ ಬೆಳೆದು ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ಸಿನಿಮಾ ನಟರದ್ದೇ ಹವಾ! ಅದರಲ್ಲೂ ನಮ್ಮ ಶೆಟ್ಟಿ ಗ್ಯಾಂಗ್ ಅವರ ಸಿನಿಮಾಗಳು ಬಿಡುಗಡೆಗೊಂಡರೇ ಕೇಳಬೇಕೆಂದೇ ಇಲ್ಲ! ಈಗ ಅದು ಒಂದು ತರಹ ನೋಡಲೇ ಬೇಕು ಎನ್ನುವ ನಿರ್ಧಾರಕ್ಕೆ ಬರುವ ಮಟ್ಟಿಗೆ ಶೆಟ್ಟಿ ಗ್ಯಾಂಗಿನ ಸಿನಿಮಾಗಳು ಇರುತ್ತದೆ. ಕಳೆದ ವಾರ ಬಿಡುಗಡೆಗೊಂಡ "ಸಪ್ತ ಸಾರದಾಚೆ ಎಲ್ಲೋ" ಸಿನಿಮಾ ಈ ಪಟ್ಟಿಗೆ ಸೇರುವುದರಲ್ಲಿ ಎರಡು ಮಾತಿಲ್ಲ! "777 ಚಾರ್ಲಿ" ಸಿನಿಮಾ ನೋಡಿ ಬಂದ ಬಳಿಕ ರಕ್ಷಿತ್ ಶೆಟ್ಟಿಯವರ ಮುಂದಿನ ಸಿನಿಮಾ "ಸಪ್ತ ಸಾಗರದಾಚೆ ಎಲ್ಲೋ" ಎಂದು ನನಗೆ ಗೊತ್ತಾಯಿತು. ಆದರೆ ಆಗ ನನಗೆ ಈ ಸಿನಿಮಾ ನೋಡಬೇಕೆಂದು ಅಷ್ಟು ಆಸಕ್ತಿ ಇರಲಿಲ್ಲ. ಆದರೆ ಸಿನಿಮಾ ಟ್ರೈಲರ್ ನೋಡಿದ ಮೇಲೆ ನೋಡುವ ಎಂದು ನನಗೆ ಅನ್ನಿಸಿತು. ಸಿನಿಮಾ ನೋಡಿದ ಮೇಲೆ ಈಗ ನಾನು ಥಿಯೇಟರಿನಲ್ಲಿ ನೋಡುವ ನಿರ್ಧಾರ ತೆಗೆದುಕೊಂಡದ್ದು ಬಹಳ ಒಳ್ಳೆಯದೇ ಆಯಿತು ಎಂಬ ಸಾರ್ಥಕತೆ ನನಗಾಗುತ್ತಿದೆ. ನೀವು ಕಥೆ,ಆಕ್ಷನ್,ಪದ್ಯಗಳ ನಿರೀಕ್ಷೆಯನ್ನು ಇಟ್ಟುಕೊಂಡು ಈ ಸಿನಿಮಾ ನೋಡಿದರೆ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಈ ಸಿನಿಮಾ ಬರಬಹುದು ಎಂದು ನಾನು ಹೇಳಲು ಅಸಾಧ್ಯ. ಈ ಸಿನಿಮಾ ಒಂದು ಕಾವ್ಯ ಇದ್ದ ಹಾಗೆ. ಮನು-ಪ್ರಿಯರ ಪ್ರೇಮ ಕಥೆಯನ್ನು ನೀವು ಇಲ್ಲಿ ಕಾಣಬಹುದಾಗಿದೆ ಹಾಗು ಅದನ್ನು ನೀವು