Posts

Showing posts from April, 2023

ಪುತ್ತೂರು ಜಾತ್ರೆಯ ಸಂಭ್ರಮ!

Image
ಪುತ್ತೂರು ಜಾತ್ರೆಯ ಸಂಭ್ರಮ! ಎಪ್ರಿಲ್ 5,2022ರಂದು ನನ್ನ ಫೇಸ್ಬುಕ್ ಪುಟದಲ್ಲಿ ಬರೆದ ಲೇಖನ: ಎಪ್ರಿಲ್ ಬಂತೆಂದರೆ ಸಾಕು ಇಡೀ ಪುತ್ತೂರಿನಲ್ಲಿ ಚಟುವಟಿಕೆಗಳು ಗರಿಗೆದರುತ್ತದೆ. ಇಡೀ ಪುತ್ತೂರು ನಗರ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿರುವಂತೆ ಕಾಣುತ್ತದೆ. ಕಾರಣ ಪುತ್ತೂರು ಹಾಗು ಹತ್ತೂರ ಒಡೆಯ, ಪುತ್ತೂರಿಗರ ಆರಾಧ್ಯ ದೇವ ಶ್ರೀ ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೋತ್ಸವ! ಅದರೊಂದಿಗೆ ಶಾಲೆಗೆ ಹೋಗುವ ಮಕ್ಕಳಿಗೆ ಬೇಸಿಗೆ ರಜೆಯ ಸಂಭ್ರಮ! ಮಾರ್ಚ್ ತಿಂಗಳ ಕೊನೆಗೆ ಯುಗಾದಿ ಹಬ್ಬ ಬಂದರೆ ಅಲ್ಲಿಂದ ಪ್ರಾರಂಭಗೊಳ್ಳುವ ಪುತ್ತೂರಿಗರ ಹಬ್ಬ ಮುಗಿಯುವುದು ಎಪ್ರಿಲ್ 20ಕ್ಕೆ! ಪುತ್ತೂರು ಕೊಡಿಯೆರುವುದು,ಉತ್ಸವಗಳು ಆರಂಭಗೊಳ್ಳುವುದು ಎಪ್ರಿಲ್ 10ಕ್ಕೆ ಆದರು ಎಪ್ರಿಲ್ 1ಕ್ಕೆ ಗೊನೆ ಮುಹೂರ್ತದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುತ್ತದೆ. ವರ್ಷದ ಎಲ್ಲಾ ದಿನಗಳಂದು ಭಕ್ತರು ದೇವರನ್ನು ಕಾಣಲು ದೇವಸ್ಥಾನಕ್ಕೆ ಹೋದರೆ ಇಲ್ಲಿ ವರ್ಷದಲ್ಲಿ ಏಳು ದಿನ ದೇವರು ಭಕ್ತರನ್ನು ಕಾಣಲು ಭಕ್ತರ ಮನೆಗೆ ಹೋಗುತ್ತಾರೆ! ಇದೇ ಅಲ್ಲವೇ ದೇವರು-ಭಕ್ತರ ಸಂಬಂಧ. ಬಹುಶಃ ನನಗೆ ಗೊತ್ತಿರುವ ಹಾಗೆ ಇಂತಹ ಕ್ಷಣಗಳನ್ನು ಪುತ್ತೂರಿನಲ್ಲಿ ಮಾತ್ರ ಕಾಣಲು ಸಿಗುತ್ತದೆ ಎಂದು ಅನ್ನಿಸುತ್ತದೆ. ಬಾನಿನಲ್ಲಿ ಸೂರ್ಯ ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಂತೆ ಆರಾಧ್ಯ ದೇವ ಮಹಾಲಿಂಗೇಶ್ವರನ ಉತ್ಸವ ಪ್ರಾರಂಭಗೊಳ್ಳುತ್ತದೆ. ಆರಂಭದಲ್ಲಿ ದೇವಸ್ಥಾನದ ಒಳಾಂಗಣದಲ್ಲಿ ಬಲಿ ನಡೆದು ಹ