ಪುತ್ತೂರಿಗೂ ಬಂತು ಭಾರತ್ ಸಿನಿಮಾಸ್!

ಪುತ್ತೂರಿಗೂ ಬಂತು ಭಾರತ್ ಸಿನಿಮಾಸ್! ಕಳೆದ ಕೆಲವು ತಿಂಗಳುಗಳಿಂದ ಪುತ್ತೂರಿನಲ್ಲಿ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಕೇಳಿಬರುತ್ತಿರುವುದು ಒಂದೆ "ಪುತ್ತೂರಿಗೂ ಬಂತು ಭಾರತ್ ಸಿನಿಮಾಸ್!" ಹೌದು,ಸ್ನೇಹಿತರೇ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಮಳಿಗೆಯನ್ನು ನಡೆಸುತ್ತಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಇದರ ಮಾಲೀಕರಾದ ಶ್ರೀ ಬಲರಾಮ ಆಚಾರ್ಯ ಅವರ ಒಡೆತನದ ಜಿ.ಎಲ್ ಮಾಲಿನ ಎರಡನೆಯ ಮಹಡಿಯಲ್ಲಿ ಇದೇ ಡಿ.23ರಂದು ನಮ್ಮ ತುಳುನಾಡಿನ ಬ್ರ್ಯಾಂಡ್ "ಭಾರತ್ ಸಿನಿಮಾಸ್" ಅವರ 6ನೇ ಶಾಖೆ ಆರಂಭಗೊಂಡಿದೆ. ಇದು ಪುತ್ತೂರಿನ ಸಿನಿಪ್ರಿಯರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಸುಂದರ ವಿನ್ಯಾಸದೊಂದಿಗಿ ಕಂಗೊಳಿಸುತ್ತಿರುವ ಥಿಯೇಟರಿನ ಮಾಹಿತಿ,ನನ್ನ ಅನಿಸಿಕೆಯನ್ನು ಈ ಲೇಖನದಲ್ಲಿ ನೀವು ಓದಬಹುದಾಗಿದೆ. ಥಿಯೇಟರಿನ ಮಾಹಿತಿ: "ಭಾರತ್ ಸಿನಿಮಾಸ್ ಪುತ್ತೂರು" ಇದು ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಿಂದ ಪುತ್ತೂರು-ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದಂತೆ ಪ್ರತಿಷ್ಠಿತ ಮೊಬೈಲ್ ಅಂಗಡಿ "ಸಂಗೀತ ಮೊಬೈಲ್ಸ್" ಇದರ ಮುಂಭಾಗದಲ್ಲಿ ಪಾಂಗಳಾಯಿ ರಸ್ತೆ ಆರಂಭಗೊಳ್ಳುವ ಸ್ಥಳದಲ್ಲ ನೂತನವಾಗಿ ನಿರ್ಮಾಣಗೊಂಡು ಇನ್ನೇನು ಕೆಲವೇ ಸಮಯದಲ್ಲಿ ಲೋಕಾರ್ಪಣೆಗೊಳ್ಳಲು ಸಿದ್ಧಗೊಳ್ಳುತ್ತಿರುವ ಜಿ.ಎಲ್ ಮಾಲಿನ ಎರಡನೆಯ ಮಹಡಿಯಲ್ಲಿ ಇದೆ. ಸುಸಜ್ಜಿತ 3 ಪರೆದೆಗಳನ್ನುಳ್ಳ ಈ ಚಿತ್ರಮಂದಿರದ...